ಸದಾ ಸಂತೋಷವಾಗಿಯೇ ಇರಬೇಕೆ? ಸಂತೋಷವಾಗಿಯೇ ಇರುತ್ತೇನೆ ಎಂದು ಸಂಕಲ್ಪ ಮಾಡಿ. ನಮ್ಮ ಸುಖ ಸಂತೋಷಗಳು ನಮ್ಮ ಕೈಯಲ್ಲೇ ಇವೆ. ಇನ್ನೊಬ್ಬರ ಕೈಯಲ್ಲಿ ಇಲ್ಲ.
ಮಕ್ಕಳು ಸದಾ ಸಂತೋಷವಾಗಿ ಆಟವಾಡಿಕೊಂಡಿರುತ್ತಾರೆ. ಅವರ ಜೊತೆಗೆ ಹತ್ತು ನಿಮಿಷ ಇದ್ದರೂ ಸಾಕು, ನಿಮ್ಮ ಮನಸ್ಸೆಲ್ಲ ಪ್ರಫುಲ್ಲವಾಗುತ್ತದೆ. ಇನ್ನು ಕೆಲವರಿದ್ದಾರೆ, ಸದಾ ಕಂಪ್ಲೇಂಟ್ ಮಾಡುವವರು. ಅವರ ಜೊತೆಗೆ ಐದು ನಿಮಿಷ ಇದ್ದರೂ, ಇಡೀ ದಿನ ಬೇಜಾರು ಪಡುತ್ತ ಇರುವಂಥ ವಿಷಯಗಳೇ ನಿಮಗೆ ಸಿಗುತ್ತವೆ. ಹೌದೋ ಅಲ್ಲವೋ ಪ್ರಯೋಗ ಮಾಡಿ ನೋಡಿ.
ಬಹಳ ದುಃಖಿತರಾದವರೊಡನೆ ಕೆಲಕ್ಷ ಣಗಳು ಇದ್ದರೂ ಸಾಕು, ನಿಮಗೂ ಖಿನ್ನತೆಯ ಅನುಭವವಾಗತೊಡಗುತ್ತದೆ. ಬಹಳ ಸಂತೋಷವಾಗಿರುವವರೊಡನೆ, ಬಹಳ ಸಂತೋಷ ಮತ್ತು ಉತ್ಸಾಹದಿಂದ ಪುಟಿಯುತ್ತಿರುವವರೊಡನೆ ಇದ್ದರೆ ನಿಮಗೂ ಸಂತೋಷವಾಗಲಾರಂಭಿಸುತ್ತದೆ. ಸಂತೋಷವಾಗಿರುವುದಕ್ಕೆ ಅಥವಾ ದುಃಖಿಯಾಗಿರುವುದಕ್ಕೆ ಮನಸ್ಸಿಗೆ ತರಬೇತಿಯನ್ನು ನೀಡಿರುತ್ತೇವೆ. ದುಃಖಿಯಾಗಿರುವುದನ್ನೆ ಅಭ್ಯಾಸ ಮಾಡಿಕೊಂಡುಬಿಟ್ಟಿದ್ದರೆ, ಅದು ನಿಮ್ಮ ಎರಡನೆಯ ಸ್ವಭಾವವಾಗಿಬಿಟ್ಟಿರುತ್ತದೆ.
ಮಗುವಿಗೆ ಈ ಹೆಸರು ಇಟ್ಟರೆ ನೀವು ಜೈಲಿಗೆ ಹೋಗಬೇಕಾದೀತು! ...
ಸದಾಕಾಲ ದೂರುವ ಮುಖವನ್ನೆ ಇಟ್ಟುಕೊಂಡರೆ ನಿಮಗೆ ಬೆಂಕಿಯ ಮೇಲೆ ಕುಳಿತಂತೆಯೇ ಅನಿಸುತ್ತದೆ. ಕೆಲವು ವೃದ್ಧರಿಗೆ ಸದಾ ದೂರುವ ಅಭ್ಯಾಸವಿರುತ್ತದೆ. ದೂರಲು ಏನೂ ಇಲ್ಲದಿದ್ದರೂ ದೂರುತ್ತಲೆ ಇರುತ್ತಾರೆ. ಸದಾ ದುಃಖಿಗಳಾಗಿರುತ್ತಾರೆ. ವಯಸ್ಸಾದ ಮೇಲಾದರೂ ಸ್ವಲ್ಪ ಸಂತೋಷದಿಂದೇಕೆ ಇರಬಾರದು ಎಂದು ಅವರನ್ನು ಕಂಡಾಗ ಅನಿಸುತ್ತದೆ. ತಮಗೆ ಕೆಲಸ ಮಾಡಲು ಸಾಧ್ಯವಿಲ್ಲವೆಂದು ಅನೇಕರು ದುಃಖಿಗಳಾಗಿರುತ್ತಾರೆ. ಆದರೆ ಅದು ದೇಹದ ಸ್ವಭಾವ. ಎಂಬತ್ತು ವರ್ಷಗಳಾದರೂ ಕೆಲಸ ಮಾಡಲು ಸಾಧ್ಯವಿಲ್ಲವೆಂದು ದುಃಖಿಗಳಾದರೆ ಅದು ಅಜ್ಞಾನ ಮತ್ತು ಮೂರ್ಖತನ. ತಮ್ಮ ದೇಹ ಸದಾ ಸುಸ್ಥಿತಿಯಲ್ಲಿ ಇರಬೇಕೆಂದು ಜನರು ಬಯಸುತ್ತರಾದರೂ, ದೇಹವು ಅವರ ಮಾತನ್ನು ಕೇಳುವುದಿಲ್ಲ. ‘‘ಕೆಲಸ ಮಾಡಲು ಏಕಾಗುತ್ತಿಲ್ಲ? ವಯಸ್ಸೇಕೆ ಆಗುತ್ತಿದೆ?’’ ಎಂದು ಮನಸ್ಸು ದಂಗೆಯೇಳುತ್ತದೆ. ವಯಸ್ಸಾಗುತ್ತಿದೆ ಅನಿಸಿದಾಗ ಬಹಳ ದುಃಖಿಯಾಗುತ್ತಾರೆ ಜನ. ಆ ದುಃಖವನ್ನು ಅವರೇ ತಮ್ಮ ಮೇಲೆ ತಂದುಕೊಂಡಿರುವುದರಿಂದ ಅವರಿಗೆ ಯಾರಿಂದಲೂ ಸಹಾಯ ಮಾಡಲು ಸಾಧ್ಯವಿಲ್ಲ. ಆ ದುಃಖದಿಂದ ವ್ಯಕ್ತಿ ಚಡಪಡಿಸುತ್ತಾರೆ, ಕೋಪಿಸಿಕೊಳ್ಳುತ್ತಾರೆ, ಒತ್ತಡದಲ್ಲಿರುತ್ತಾರೆ. ಇತರ ಎಲ್ಲಾ ನಕಾರಾತ್ಮಕತೆಗಳೂ ಮೇಲೇಳುತ್ತವೆ ಮತ್ತು ಅವುಗಳಲ್ಲೆ ಮುಳುಗಿ ಹೋಗಿ, ಆ ಸ್ಥಿತಿಯಲ್ಲೆ ಸಾಯುತ್ತಾರೆ.
ಮದುವೆಗೂ ಮೊದಲು ಕಾಡುವ ಆತಂಕ ನಿವಾರಿಸಿಕೊಳ್ಳಲು ಇಲ್ಲಿವೆ ಸಲಹೆ ...
ದುಃಖಿಯಾಗಿರುವುದು ನಿಮ್ಮ ಅಭ್ಯಾಸವಷ್ಟೆ. ನಿಮ್ಮ ಮನಸ್ಸನ್ನು ನೋಡಿದರೆ, ದುಃಖಕ್ಕೆ ಕಾರಣವೇ ಇರುವುದಿಲ್ಲ ಮತ್ತು ಅದು ನಿಮ್ಮಿಂದಲೇ ಹುಟ್ಟಿಕೊಂಡಿರುವುದು. ಅದು ಹೊರಟು ಹೋಗುತ್ತದೆ ಮತ್ತು ನೀವು ಅದರಿಂದ ಮುಕ್ತರಾಗುತ್ತೀರಿ. ಜನರು ನಿಮ್ಮನ್ನು ಗೌರವಿಸುವುದಿಲ್ಲ ಎಂಬ ತಪ್ಪಾದ ಯೋಚನೆಯಂತೆಯೆ ಇದೂ ಒಂದು ತಪ್ಪಾದ ಯೋಚನೆ.
ನಾನು ಬಹಳ ಬುದ್ಧಿವಂತಳಲ್ಲ, ಯಾರೂ ನನ್ನನ್ನು ಗೌರವಿಸುವುದಿಲ್ಲ ಎಂದು ಭಾವಿಸುತ್ತೀರಿ. ಅದೆಲ್ಲವೂ ಆಧಾರರಹಿತವಾದದ್ದು. ಹಾಗೇಕೆ ಆಲೋಚಿಸುತ್ತೀರಿ? ನೀವು ಮೂರ್ಖರೆಂದು ನಿಮಗನಿಸಬಹುದು. ನೀವು ಮೂರ್ಖರಲ್ಲ. ಮೂರ್ಖತನವು ಒಂದು ಹೋಲಿಕೆಯಷ್ಟೆ. ನಿಮಗಿಂತಲೂ ಮೂರ್ಖರಾದವರಿಗೆ ಹೋಲಿಸಿದರೆ, ನೀವು ಬುದ್ಧಿವಂತರೇ. ಮೂರ್ಖತನದ ಒಂದು ಮಾಪನಯಂತ್ರವಿದೆ. ನಿಮಗಿಂತಲೂ ಮೂರ್ಖರಾದವರು ಖಂಡಿತವಾಗಿಯೂ ಇದ್ದಾರೆ. ನಿಮ್ಮ ಮೇಲೆ ನೀವೇ ಹೇರಿಕೊಂಡಿರುವ ಆಲೋಚನೆಗಳಿಂದ ನೀವು ಬಹಳ ದುಃಖಿಗಳಾಗುತ್ತೀರಿ. ಮಾಪನಯಂತ್ರವನ್ನೇ ನಿರಾಕರಿಸಿ. ಆಗ ನೀವು ಬಹಳ ಬುದ್ಧಿವಂತರು ಎಂದು ನಿಮಗೆ ಅನಿಸುತ್ತದೆ. ನಿಮ್ಮ ಹೋಲಿಕೆಯಿಂದ ನಿಮಗೆ ಗೊಂದಲವುಂಟಾಗುತ್ತದೆ ಮತ್ತು ನಿಮ್ಮನ್ನು ದುಃಖಿಯಾಗಿ ಮಾಡುತ್ತದೆ. ಯಾರೊಡನೆಯೂ ನಿಮ್ಮನ್ನು ಹೋಲಿಸಿಕೊಳ್ಳಬೇಡಿ.
ನೀವು ಸದಾ ಸಂತೋಷವಾಗಿ ಇರಬೇಕೆಂದು ನಿಮಗೆ ಅನಿಸಬೇಕು. ನಿಮಗೇ ಹಾಗೆ ಮೊದಲು ಅನ್ನಿಸದೇ ಇದ್ದರೆ ಇನ್ಯಾರಿಗೂ ನಿಮ್ಮನ್ನು ಸಂತೋಷವಾಗಿ ಇಡಲು ಸಾಧ್ಯವಿಲ್ಲ. ಬೇರ್ಯಾರೋ ಬಂದು ನನ್ನನ್ನು ಸಂತೋಷವಾಗಿ ಇಡುತ್ತಾರೆ ಎಂಬುದು ನಮ್ಮ ಭ್ರಮೆ ಅಷ್ಟೇ. ನಮಗೆ ನಮ್ಮದೇ ಸಂತೋಷ, ನಮ್ಮದೇ ದುಃಖ. ನಮ್ಮ ದೇಹ ಹಾಗೂ ಚಿಂತನೆಗಳೇ ನಮ್ಮ ಸಂತೋಷ ಹಾಗೂ ದುಃಖದ ತವರು. ದುಃಖದಿಂದ ವಿಮುಕ್ತ ಹೊಂದಬೇಕು ಎಂದು ಭಾವಿಸಬೇಡಿ. ದುಃಖ ಎಂಬುದು ಇಲ್ಲ. ಅದು ಮನಸ್ಸಿನ ಒಂದು ಭ್ರಮೆ. ಸಂತೋಷವಾಗಿದ್ದೇನೆಂದು ಕಲ್ಪಿಸಿಕೊಳ್ಳಿ. ಸಂತೋಷವಾಗಿ ಇರುತ್ತೀರಿ.
ಹುಡುಗನಿಗೆ ಗೊತ್ತಿರಲೇಬೇಕಾದ ಲೈಂಗಿಕ ಆರೋಗ್ಯದ ಈ ಗುಟ್ಟುಗಳು ...