ಚಾರಿಟಿಗೆ ಹಣ ನೀಡಿದ್ರೆ ಅಭಿಮಾನಿಗಳಿಗೆ ನನ್ನ ಬೆತ್ತಲೆ ಚಿತ್ರವೇ ಗಿಫ್ಟ್‌: ನೀಲಿ ತಾರೆಯ ಆಫರ್‌!

By Santosh Naik  |  First Published Jul 13, 2023, 7:43 PM IST

ಮಾಜಿ ಟೀಚರ್‌ ಹಾಗೂ ಈಗ ಓನ್ಲಿಫ್ಯಾನ್ಸ್‌ ಮಾಡೆಲ್‌ ಆಗಿರುವ ಕರ್ಟ್ನಿ ಟಿಲಿಯಾ ತನ್ನ ಅಭಿಮಾನಿಗಳಿಗೆ ಹೊಸ ಆಫರ್‌ ನೀಡಿದ್ದಾರೆ. ನೀಲಿ ಚಿತ್ರ ತಾರೆಯಾಗಿರುವ ಟಿಲಿಯಾ ತನ್ನ ಮೆಚ್ಚಿನ ಚಾರಿಟಿಗೆ ಹಣ ದಾನ ಮಾಡಿದವರಿಗೆ ಬೆತ್ತಲೆ ಚಿತ್ರವನ್ನು ಉಡುಗೊರೆ ನೀಡುವುದಾಗಿ ಘೋಷಣೆ ಮಾಡಿದ್ದಾರೆ.
 


ನವದೆಹಲಿ (ಜು.13): ಅಮೇಜಾನ್‌, ಫ್ಲಿಫ್‌ಕಾರ್ಟ್‌ ರೀತಿಯ ಆಫರ್‌ ಇದಲ್ಲ. ಕೆಲವು ಮಾಲ್‌ಗಳು ಕೂಡ ತಮ್ಮಲ್ಲಿರುವ ವಸ್ತುಗಳು ಮಾರಾಟವಾಗಬೇಕು ಎನ್ನುವ ನಿಟ್ಟಿನಲ್ಲಿ ಹೊಸ ಹೊಸ ಆಫರ್‌ಗಳನ್ನು ನೀಡುತ್ತಾರೆ. ಅದೇ ರೀತಿಯಲ್ಲಿ ಅಮೆರಿಕಾದಲ್ಲಿ ನೀಲಿಚಿತ್ರ ತಾರೆಯೊಬ್ಬರು ಆಫರ್‌ ಅನ್ನು ನೀಡಿದ್ದಾರೆ.  ಮಾಜಿ ಕ್ಯಾಥೋಲಿಕ್ ಶಾಲಾ ಶಿಕ್ಷಕಿಯಾಗಿರುವ ಈಕೆ ಈಗ ಓನ್ಲಿ ಫ್ಯಾನ್ಸ್ ಮಾಡೆಲ್ ಆಗಿ ಮಾರ್ಪಟ್ಟಿದ್ದಾರೆ. ನೀಲಿ ತಾರೆಯಾಗಿ ಬದಲಾಗಿರುವ ಕರ್ಟ್ನಿ ಟಿಲಿಯಾ ಅವರು ತಮ್ಮ ಹೊಸ ವೃತ್ತಿಜೀವನದ ಯಶಸ್ಸನ್ನು ಒಳ್ಳೆಯ ಉದ್ದೇಶಕ್ಕಾಗಿ ಬಳಸುತ್ತಿದ್ದಾರೆ.  ಕ್ಯಾಲಿಫೋರ್ನಿಯಾದಲ್ಲಿ ವಾಸಿಸುತ್ತಿರುವ 36 ವರ್ಷ ಟಿಲಿಯಾ, ಈ ಹಿಂದೆ ದೇವರು ಹೇಳಿದ್ದ ಕಾರಣಕ್ಕೆ ತಾನು ಪೋರ್ನ್‌ ಸ್ಟಾರ್‌ ಆಗಿ ಬದಲಾದೆ ಎಂದು ಹೇಳಿದ್ದರು. ನೀಲಿ ತಾರೆ ಕರ್ಟ್ನಿ ಟಿಲಿಯಾ (Courtney Tillia) ಮರೀನ್‌ ಮಮ್ಮಲ್‌ ಕೇರ್ ಸೆಂಟರ್‌ಗೆ (ಅಂದರೆ ಸಾಗರ ಸಸ್ತನಿ ಆರೈಕೆ ಕೇಂದ್ರ) ದೇಣಿಗೆ ನೀಡಿದವರಿಗೆ ತನ್ನ ನಗ್ನ ಚಿತ್ರಗಳನ್ನ ಉಡುಗೊರೆಯಾಗಿ ನೀಡುವುದಾಗಿ ಘೋಷಣೆ ಮಾಡಿದ್ದಾಳೆ. 

ಟಿಲಿಯಾ ಓನ್ಲಿ ಫ್ಯಾನ್ಸ್‌ ಅಕೌಂಟ್‌ನಿಂದ ತಿಂಗಳಿಗೆ 1 ಲಕ್ಷ ಡಾಲರ್‌ಗೂ ಅಧಿಕ ಹಣ ಸಂಪಾದನೆ ಮಾಡುತ್ತಿದ್ದಾಳೆ. ಅದರೊಂದಿಗೆ ವೃತ್ತಿಜೀವನಲ್ಲಿ ಬದಲಾಯಿಸಬೇಕು ಅನ್ನುವವರಿಗೆ ತನ್ನ ಸಹಾಯ ನೀಡುತ್ತಿದ್ದಾರೆ. ಇದು ಮಾತ್ರವೇ ಅಲ್ಲದೆ ತನ್ನ ಅಕೌಂಟ್‌ಗಳಿಂದ ದತ್ತಿ ಕೇಂದ್ರಗಳಿಗೆ ಹಣ ಸಂಪಾದನೆ ಮಾಡುವ ಕೆಲಸವನ್ನೂ ಮಾಡುತ್ತಿದ್ದಾರೆ.

'ಕ್ಯಾಲಿಫೋರ್ನಿಯಾದಲ್ಲಿ ಅನಾರೋಗ್ಯದಿಂದ ಬಳಲುತ್ತಿರುವ ಸಮುದ್ರ ಸಸ್ತನಿಗಳಿಗೆ ಸಹಾಯ ಮಾಡಲು ಇಚ್ಛಿಸಿ ಹಣ ಸಹಾಯ ಮಾಡುವ ಎಲ್ಲರಿಗೂ ನಾನು ನನ್ನ ಬೆತ್ತಲೆ ಚಿತ್ರವನ್ನು ಉಡುಗೊರೆಯಾಗಿ ನೀಡುತ್ತೇನೆ' ಎಂದು 36 ವರ್ಷದ ನೀಲಿ ಚಿತ್ರ ತಾರೆ ಬರೆದುಕೊಂಡಿದ್ದಾರೆ. ಅದರೊಂದಿಗೆ ನನ್ನ ಓನ್ಲಿ ಫ್ಯಾನ್ಸ್‌ ಅಕೌಂಟ್‌ನ ಲಿಂಕ್‌ಗಳನ್ನೂ ನಾನು ಹಂಚಿಕೊಳ್ಳುತ್ತೇನೆ. ಅದಕ್ಕಾಗಿ ಅವರು 50 ಡಾಲರ್‌ ಅಥವಾ ಅದಕ್ಕಿಂತ ಹೆಚ್ಚಿನ ಹಣವನ್ನು ದೇಣಿಗೆಯಾಗಿ ನೀಡಬೇಕಿರುತ್ತದೆ' ಎಂದು ಬರೆದುಕೊಂಡಿದ್ದಾರೆ.

ಸಂಪ್ರದಾಯವಾದಿ ಕ್ರಿಶ್ಚಿಯನ್‌ ಕುಟುಂಬದಲ್ಲಿ ಜನಿಸಿದ್ದ ಟಿಲಿಯಾ, ತೀರಾ ಇತ್ತೀಚಿನವರೆಗೂ ಕ್ಯಾಥೋಲಿಕ್‌ ಶಾಲೆಯಲ್ಲಿ ಶಿಕ್ಷಕಿಯಾ ಕಾರ್ಯ ನಿರ್ವಹಿಸುತ್ತಿದ್ದರು. ಆದರೆ, ಒಂದು ದಿನ ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿದ ಆಕೆ, ವಯಸ್ಕರ ಚಿತ್ರದ ಉದ್ಯಮಗಳಿಗೆ ಕಾಲಿಟ್ಟಿದ್ದರು. ದೇವರು ನನಗೆ ಈ ಕೆಲಸ ಮಾಡಲು ಹೇಳಿದ್ದಾನೆ. ಅದಕ್ಕಾಗಿ ಪೋರ್ನ್‌ ಇಂಡಸ್ಟ್ರಿ ಪ್ರವೇಶಿಸಿದ್ದೇನೆ ಎಂದು ಟಿಲಿಯಾ ತಿಳಿಸಿದ್ದರು. ವಯಸ್ಕ ಚಿತ್ರಗಳ ಉದ್ಯಮಕ್ಕೆ ಬರುವ ವ್ಯಕ್ತಿಗಳಿಗೆ ಆಕೆ ತನ್ನ ಕೈಲಾದಷ್ಟು ಸಹಾಯ ಮಾಡುತ್ತೇನೆ ಎಂದೂ ಬರೆದುಕೊಂಡಿದ್ದಾರೆ.

Tap to resize

Latest Videos

'ಸೊಂಟದ ವಿಷ್ಯ' ಮಾತಿಗೆ ಫುಲ್‌ ಟ್ರೋಲ್‌, ಕವಿತೆ ಬರೆದು ಸೈಲೆಂಟ್‌ ಮಾಡಿದ ಬಿಗ್‌ ಬಾಸ್‌ ಸ್ಪರ್ಧಿ!

ಪ್ರಾಣಿಗಳನ್ನು ಅತಿಯಾಗಿ ಪ್ರೀತಿ ಮಾಡುವ ಟಿಲಿಯಾ ತನ್ನಿಂದ ಕೈಲಾದಷ್ಟು ಚಾರಿಟಿಗೆ ಸಹಾಯ ಮಾಡುವ ಉದ್ದೇಶ ಹೊಂದಿದ್ದಾರೆ. ಓನ್ಲಿ ಫ್ಯಾನ್ಸ್‌ನಲ್ಲಿರುವ ತನ್ನ ಅಭಿಮಾನಿಗಳಿಂದ ಚಾರಿಟಿಗೆ ಹಣ ಸಹಾಯವನ್ನೂ ಈಕೆ ಪಡೆದುಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ.

ಹುಡುಗ್ರು ಸೊಂಟದ ಮೇಲೆ ಕೈಯಿಟ್ಟರೆ ಕಂಪ್ಲೇಟ್‌ ಕೊಡಬೇಡಿ, ಎಂಜಾಯ್‌ ಮಾಡಿ: ನಟಿ ರೇಖಾ ನಾಯರ್‌ ಮಾತು!

'ಪ್ರತಿ ದೇಣಿಗೆಗೂ ನಾನು ಒಂದು ಬೆತ್ತಲೆ ಚಿತ್ರವನ್ನು ಗಿಫ್ಟ್‌ ಆಗಿ ಕಳಿಸುತ್ತೇನೆ. ನೀವು ದೇಣಿಗೆ ಮಾಡಿರುವ ಖಾತರಿಯ ಸಂದೇಶದ ಸ್ಕ್ರೀನ್‌ಶಾಟ್‌ ನನಗೆ ನೇರವಾಗಿ ಮೆಸೇಜ್‌ ಮಾಡಿದರೆ, ನಿಮ್ಮ ಡಿಎಂಗೆ ನನ್ನ ಬೆತ್ತಲೆ ಚಿತ್ರ ಬರುತ್ತದೆ' ಎಂದು ಬರೆದಿದ್ದಾರೆ. ಅಮೆರಿಕಾ, ಕೆನಡಾ ಹಾಗೂ ಬ್ರೆಜಿಲ್‌ನಲ್ಲಿ ಹೆಚ್ಚಿನ ಶಾಲಾ ಶಿಕ್ಷಕಿಯರು ಓನ್ಲಿ ಫ್ಯಾನ್ಸ್‌ ಅಕೌಂಟ್‌ನತ್ತ ಮುಖ ಮಾಡಿದ್ದಾರೆ. ಇಲ್ಲಿನ ಶಾಲೆಗಳಲ್ಲಿ ವೇತನಗಳಿ ಬಹಳ ಕಡಿಮೆ ಇದ್ದು, ಜೀವನೋಪಾಯಕ್ಕಾಗಿ ಇಂಥ ಕೆಲಸಗಳು ಮಾಡುತ್ತಾರೆ.

click me!