ಡಿವೋರ್ಸ್‌ ಪ್ರಕರಣದಲ್ಲಿ ಪತ್ನಿಗೆ 664 ಕೋಟಿ ರೂ. ಪರಿಹಾರ ನೀಡುವಂತೆ ಉದ್ಯಮಿಗೆ ಕೋರ್ಟ್ ಆದೇಶ

Published : Nov 14, 2025, 06:58 PM IST
Divorce Case

ಸಾರಾಂಶ

15 ವರ್ಷಗಳ ಹಿಂದಿನ ವಿಚ್ಛೇದನ ಪ್ರಕರಣವೊಂದರಲ್ಲಿ ಪತ್ನಿಗೆ 664 ಕೋಟಿ ರೂಗಳ ಪರಿಹಾರ ನೀಡುವಂತೆ ನ್ಯಾಯಾಲಯ ಆದೇಶಿಸಿದೆ. ಚೀನಾದ ವಾರೆನ್ ಬಫೆಟ್ ಎಂದೇ ಖ್ಯಾತಿ ಪಡೆದಿದ್ದ ಶ್ರೀಮಂತ ಉದ್ಯಮಿ ಝಾವೋ ಬಿಂಗ್ಕ್ಸಿಯಾನ್ ಹಾಗೂ ಅವರ ಪತ್ನಿ ನಡುವಿನ ಡಿವೋರ್ಸ್ ಕೇಸ್ ಇದಾಗಿದೆ.

ಪತ್ನಿಗೆ 664 ಕೋಟಿ ರೂಪಾಯಿ ಪರಿಹಾರ ನೀಡುವಂತೆ ಆದೇಶಿಸಿದ ನ್ಯಾಯಾಲಯ

ಚೀನಾದ ವಾರೆನ್ ಬಫೆಟ್ ಎಂದೇ ಖ್ಯಾತಿ ಪಡೆದಿದ್ದ ಶ್ರೀಮಂತ ಉದ್ಯಮಿ ಝಾವೋ ಬಿಂಗ್ಕ್ಸಿಯಾನ್ ಹಾಗೂ ಅವರ ಪತ್ನಿ ನಡುವಿನ 15 ವರ್ಷಗಳ ವಿಚ್ಛೇದನ ಪ್ರಕರಣದಲ್ಲಿ ನ್ಯಾಯಾಲಯವೂ ಮಹತ್ವದ ತೀರ್ಪು ನೀಡಿದ್ದು, ಪತ್ನಿಗೆ 664 ಕೋಟಿ ರೂಗಳ ಪರಿಹಾರ ನೀಡುವಂತೆ ಆದೇಶಿಸಿದೆ.

ಚೀನಾದ ಬೀಜಿಂಗ್‌ನ ಕೋರ್ಟ್ ಚೀನಾದ ಶ್ರೀಮಂತ ಉದ್ಯಮಿ, ಹೂಡಿಕೆದಾರ ಝಾವೋ ಬಿಂಗ್ಕ್ಸಿಯಾನ್ ಅವರಿಗೆ ಅವರ ಮಾಜಿ ಪತ್ನಿ ಲೂ ಜುವಾನ್ ಅವರಿಗೆ 75 ಮಿಲಿಯನ್‌ ಡಾಲರ್ ಅಂದರೆ ಸುಮಾರು 664 ಕೋಟಿ ರೂಪಾಯಿ ಪರಿಹಾರ ನೀಡಿ ಡಿವೋರ್ಸ್‌ ಪ್ರಕರಣವನ್ನು ಅಂತಿಮಗೊಳಿಸುವಂತೆ ಸೂಚಿಸಿದೆ. ಜೊತೆಗೆ ಇವರು ಜೊತೆಗಿದ್ದಾಗ ಜೊತೆಯಾಗಿ ಸ್ಥಾಪಿಸಿದ ಬೀಜಿಂಗ್ ಝೊಂಗ್‌ಜೆಂಗ್ ವಾನ್ರಾಂಗ್ ಇನ್ವೆಸ್ಟ್‌ಮೆಂಟ್ ಗ್ರೂಪ್‌ನಲ್ಲಿರುವ ಷೇರುಗಳನ್ನು ಸಾಮಾನವಾಗಿ ಹಂಚಿಕೊಳ್ಳುವಂತೆ ಆದೇಶಿಸಿದೆ.

ಚೀನಾದ ವಾರೆನ್ ಬಫೆಟ್ ಖ್ಯಾತಿಯ ಉದ್ಯಮಿ ಝಾವೋ ಬಿಂಗ್ಕ್ಸಿಯಾನ್

1986ರಲ್ಲಿ ಭೇಟಿಯಾದ ಈ ಜೋಡಿ ಎರಡು ವರ್ಷಗಳ ಒಡನಾಟದ ನಂತರ ಮದುವೆಯಾಗಿದ್ದರು. ಆದರೆ 2010ರಲ್ಲಿ ಲೂ ಜುವಾನ್ ಅವರು ಕೌಂಟುಂಬಿಕ ಹಿಂಸಾಚಾರದ ಆರೋಪ ಮಾಡಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದು, ಇಬ್ಬರ ನಡುವಿನ ಆಸ್ತಿಯನ್ನು ಸಮಾನವಾಗಿ ಹಂಚಿಕೆ ಮಾಡುವಂತೆ ಆಗ್ರಹಿಸಿದ್ದರು. ಭಾರಿ ಮೊತ್ತದ ಪರಿಹಾರದ ಕಾರಣಕ್ಕೆ ಇವರ ಈ ಹೈ ಪ್ರೊಫೈಲ್ ವಿಚ್ಚೇದನ ಪ್ರಕರಣವೂ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸುದ್ದಿಯಲ್ಲಿದೆ.

15 ವರ್ಷಗಳ ಹಿಂದಿನ ಡಿವೋರ್ಸ್‌ ಪ್ರಕರಣದಲ್ಲಿ ಮಹತ್ವದ ತೀರ್ಪು

ಬೀಜಿಂಗ್ ಝೊಂಗ್‌ಜೆಂಗ್ ವಾನ್ರಾಂಗ್ ಇನ್ವೆಸ್ಟ್‌ಮೆಂಟ್ ಗ್ರೂಪ್‌ನಲ್ಲಿ ಜಂಟಿಯಾಗಿ ಹೊಂದಿರುವ ಷೇರುಗಳ ಮೌಲ್ಯವನ್ನು ಆಧರಿಸಿ ಬೀಜಿಂಗ್‌ನ ನ್ಯಾಯಾಲಯ ಈ ತೀರ್ಪು ನೀಡಿದೆ. ಬಿಂಗ್ಕ್ಸಿಯಾನ್ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿರುವ ಶೆನ್‌ಜೆನ್‌ನ ಶಾಂಡೊಂಗ್ ವೊಹುವಾ ಫಾರ್ಮಾಸ್ಯುಟಿಕಲ್ ಕಂಪನಿ ನವೆಂಬರ್ 4 ರಂದು ಈ ಡಿವೋರ್ಸ್‌ ಪ್ರಕರಣದಲ್ಲಿನ ಈ ತೀರ್ಪನ್ನು ಬಹಿರಂಗಪಡಿಸಿದೆ.

ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾಗ ಭೇಟಿ

ಚೀನಾದ ವಾರೆನ್ ಬಫೆಟ್ ಎಂದೇ ಕರೆಯಲ್ಪಡುವ 63 ವರ್ಷದ ಝಾವೋ ಬಿಂಗ್ಕ್ಸಿಯಾನ್, ಶಾಂಘೈ ಜಿಯಾವೋ ಟಾಂಗ್ ವಿಶ್ವವಿದ್ಯಾಲಯದಿಂದ ಹಣಕಾಸಿನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಅವರು 1986 ರಲ್ಲಿ ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾಗ ತಮ್ಮ ಭಾವಿ ಪತ್ನಿ ಲು ಜುವಾನ್ ಅವರನ್ನು ಭೇಟಿಯಾದರು ಮತ್ತು 1988 ರಲ್ಲಿ ಇಬ್ಬರೂ ವಿವಾಹವಾದರು. ಝಾವೋ ಪತ್ನಿ ಲು ಜುವಾನ್ ಅವರ ಕುಟುಂಬವು ಮೊದಲಿನಿಂದಲೂ ಹೂಡಿಕೆ ಮಾಡುವ ಇತಿಹಾಸವನ್ನು ಹೊಂದಿತ್ತು. ಮತ್ತು ಅವರ ಅಜ್ಜನ ಮಾರ್ಗದರ್ಶನದಿಂದಾಗಿ ದಂಪತಿಗಳು 1990 ರ ದಶಕದಲ್ಲಿ ಷೇರುಗಳ ವ್ಯಾಪಾರವನ್ನು ಪ್ರಾರಂಭಿಸಿದರು.

ಜೊತೆಯಾಗಿ ಝಾಂಗ್‌ಜೆಂಗ್ ವಾನ್ರಾಂಗ್ ಎಂಬ ಸಂಸ್ಥೆ ಸ್ಥಾಪಿಸಿದ್ದ ದಂಪತಿ

ಇಬ್ಬರು ಸೇರಿ ನಂತರ ಝಾಂಗ್‌ಜೆಂಗ್ ವಾನ್ರಾಂಗ್ ಎಂಬ ಸಂಸ್ಥೆಯನ್ನು ಸ್ಥಾಪಿಸಿದ್ದರು. ಇಲ್ಲಿ ಲು ಜುವಾನ್‌ ಹಣಕಾಸು ವ್ಯವಹಾರಗಳನ್ನು ನಿರ್ವಹಿಸುತ್ತಿದ್ದರೆ, ಝಾವೋ ಬಂಡವಾಳ ಕಾರ್ಯಾಚರಣೆಗಳನ್ನು ನೋಡಿಕೊಳ್ಳುತ್ತಿದ್ದರು ಮತ್ತು ಅವರ ಆರಂಭಿಕ ಹೂಡಿಕೆಗಳಲ್ಲಿ ಯಶಸ್ಸನ್ನು ಸಾಧಿಸಿದ್ದರು. ಝಾವೋ ಬಿಂಗ್ಕ್ಸಿಯಾನ್ ಅವರ ಹೂಡಿಕೆ ಸಂಸ್ಥೆಯಾದ ಬೀಜಿಂಗ್ ಝೊಂಗ್‌ಜೆಂಗ್ ವಾನ್ರಾಂಗ್ ಇನ್ವೆಸ್ಟ್‌ಮೆಂಟ್ ಗ್ರೂಪ್, ಹಾಂಗ್ ಕಾಂಗ್, ಶಾಂಘೈ ಮತ್ತು ಶೆನ್‌ಜೆನ್‌ನಲ್ಲಿನ ಹಲವಾರು ಸ್ಥಳಗಳಲ್ಲಿ ಇರುವ ಚೀನೀ ಕಂಪನಿಗಳನ್ನು ಷೇರು ವಿನಿಮಯ ಕೇಂದ್ರಗಳಲ್ಲಿ ಪಟ್ಟಿ ಮಾಡಲು ಸಹಾಯ ಮಾಡಿದೆ. ಇದರ ಜೊತೆಗೆ ಅವರು 1997ರಲ್ಲಿ ಬಂಡವಾಳ ಕಾರ್ಯಾಚರಣೆಗಳ ಕುರಿತಾದ ಪುಸ್ತಕವನ್ನು ಕೂಡ ಬರೆದಿದ್ದು, ಈ ಪುಸ್ತಕವು ಚೀನಾದಲ್ಲಿ ಅತ್ಯುತ್ತಮ ಮಾರಾಟವಾದ ಟಾಪ್ 10 ಪುಸ್ತಕಗಳಲ್ಲಿ ಒಂದಾಗಿದೆ. ಇದರಿಂದಲೇ ಅವರಿಗೆ ಚೀನಾದ ವಾರೆನ್ ಬಫೆಟ್ ಎಂಬ ಅಡ್ಡಹೆಸರು ಕೂಡ ಬಂತು.

ಈ ನಡುವೆ ಏಪ್ರಿಲ್ 2010 ರಲ್ಲಿ ಝಾವೋ ಮಾಡಿದ ಹಲವಾರು ಕೌಟುಂಬಿಕ ಹಿಂಸಾಚಾರದ ಪ್ರಕರಣಗಳನ್ನು ಉಲ್ಲೇಖಿಸಿ ಲು ಜುವಾನ್ ಅವರು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದರು. ನಾನು ವಿಚ್ಛೇದನ ಪಡೆಯುವ ಬಯಕೆಯನ್ನು ವ್ಯಕ್ತಪಡಿಸಿದ ನಂತರ, ವಿಚ್ಛೇದನವು ಷೇರು ಬೆಲೆಗಳಲ್ಲಿ ಗಮನಾರ್ಹ ಕುಸಿತಕ್ಕೆ ಕಾರಣವಾಗುತ್ತದೆ, ಇದು ಅವನ ಮತ್ತು ಅವನ ಸಹಚರರ ಮೇಲೆ ಪರಿಣಾಮ ಬೀರುತ್ತದೆ ಎಂದು ಝಾವೋ ಬಿಂಗ್ಕ್ಸಿಯಾನ್ ಅವರು ನನಗೆ ಬೆದರಿಕೆ ಹಾಕಿದರು ಎಂದು ಲು ಜುವಾನ್ ಆ ಸಮಯದಲ್ಲಿ ಬೀಜಿಂಗ್ ಮಾರ್ನಿಂಗ್ ಪೋಸ್ಟ್‌ಗೆ ಹೇಳಿಕೊಂಡಿದ್ದರು.

ವಿಚ್ಛೇದನ ಪ್ರಕರಣವನ್ನು 15 ವರ್ಷ ಮುಂದೆ ತಳ್ಳಿದ ಉದ್ಯಮಿ

ಆದರೆ ಅನಾರೋಗ್ಯ ಅಥವಾ ವ್ಯವಹಾರ ಬದ್ಧತೆಗಳನ್ನು ಉಲ್ಲೇಖಿಸಿ ಝಾವೋ ಬಿಂಗ್ಕ್ಸಿಯಾನ್ ಪದೇ ಪದೇ ನ್ಯಾಯಾಲಯಕ್ಕೆ ಹಾಜರಾಗಲು ವಿಫಲರಾಗುವ ಮೂಲಕ ವಿಚ್ಛೇದನ ಪ್ರಕ್ರಿಯೆಯನ್ನು ಬಹಳ ವಿಳಂಬಗೊಳಿಸಿದರು ಎಂದು ವರದಿಯಾಗಿದೆ. ಈ ಮಧ್ಯೆ ಲು ಜುವಾನ್ ಕಂಪನಿಯ ಆಸ್ತಿಗಳನ್ನು ಹೊಂದಿರುವ ಸ್ಟೀಲ್ ಲಾಕರ್‌ನ್ನು ತೆರೆದಾದಗ ಘಟನೆ ವಿಕೋಪಕ್ಕೆ ಹೋಯ್ತು. ಇದರಿಂದಾಗಿ ಝಾವೋ ಬಿಂಗ್ಕ್ಸಿಯಾನ್ ಅವರು ಲು ಜವಾನ್ ಮೇಲೆ ಕಳ್ಳತನದ ಆರೋಪ ಹೊರಿಸಿದ್ದರು. ಇದರ ಪರಿಣಾಮವಾಗಿ ಅವರು 37 ದಿನಗಳ ಬಂಧನಕ್ಕೆ ಒಳಗಾಗಬೇಕಾಯ್ತು. ಆ ಸಮಯದಲ್ಲಿ ಲು ತನ್ನ ವಿಚ್ಛೇದನ ಅರ್ಜಿಯನ್ನು ಹಿಂತೆಗೆದುಕೊಂಡರು ಆದರೆ ನಡೆಯುತ್ತಿರುವ ಸಮಸ್ಯೆಗಳನ್ನು ಉಲ್ಲೇಖಿಸಿ ಆಗಸ್ಟ್ 2011 ರಲ್ಲಿ ಮತ್ತೆ ಅರ್ಜಿ ಸಲ್ಲಿಸಿದರು ಎಂದು ವರದಿಯಾಗಿದೆ.

ಲು ಜುವಾನ್‌ಗೆ 664 ಕೋಟಿ ಪರಿಹಾರ ನೀಡುವಂತೆ ಆದೇಶ

ಈ ವಿಚ್ಛೇದನ ಪ್ರಕರಣವನ್ನು ಮೊದಲು ಜೂನ್ 2023 ರಲ್ಲಿ ಬೀಜಿಂಗ್‌ನ ಟೊಂಗ್‌ಝೌ ಜಿಲ್ಲಾ ಪೀಪಲ್ಸ್ ಕೋರ್ಟ್‌ನಲ್ಲಿ ವಿಚಾರಣೆ ನಡೆಸಲಾಯಿತು. ಆಗ ದಂಪತಿಗಳ ಸಾಮಾನ್ಯ ಆಸ್ತಿಯನ್ನು ಸಮಾನವಾಗಿ ಹಂಚಿಕೊಳ್ಳಬೇಕೆಂದು ನ್ಯಾಯಾಲಯ ತೀರ್ಪು ನೀಡಿತು,ಅಲ್ಲದೇ 2010 ರಲ್ಲಿ ಝಾವೊ ನಕಲಿ ಮಾಡಿದ ವಿವಾದಿತ ಷೇರು ಹಸ್ತಾಂತರದ ದಾಖಲೆಯನ್ನು ಅಮಾನ್ಯವೆಂದು ಕೋರ್ಟ್‌ ಘೋಷಿಸಿತು. ಜೊತೆಗೆ ಬೀಜಿಂಗ್ ನಂ. 3 ಇಂಟರ್ಮೀಡಿಯೇಟ್ ಪೀಪಲ್ಸ್ ಕೋರ್ಟ್ ಮೂಲ ತೀರ್ಪನ್ನು ಎತ್ತಿಹಿಡಿದು ಲು ಜುವಾನ್‌ಗೆ 664 ಕೋಟಿ ಪರಿಹಾರ ನೀಡುವಂತೆ ಆದೇಶಿಸಿದೆ.

ಇದನ್ನೂ ಓದಿ: ವಿಂಡ್‌ಶೀಲ್ಡ್‌ನಲ್ಲಿ ಬಿರುಕು: ರನ್‌ವೇಯಾಗಿ ಬದಲಾದ ಹೈವೇ: ಹೆದ್ದಾರಿಯಲ್ಲೇ ವಿಮಾನ ತುರ್ತು ಲ್ಯಾಂಡಿಂಗ್

ಇದನ್ನೂ ಓದಿ: ನಾಯಿ ಕಚ್ಚಿದ್ದಕ್ಕೆ ಚಿಕಿತ್ಸೆ ಪಡೆಯದೇ ನಿರ್ಲಕ್ಷ್ಯ: 3 ತಿಂಗಳ ಬಳಿಕ ರೇಬೀಸ್‌ಗೆ ಯುವಕ ಬಲಿ

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಪುರುಷರ ಈ ವರ್ತನೆ ಬಗ್ಗೆ ಹೆಣ್ಣಿಗೆ ಮಾತ್ರವಲ್ಲ ಮನೆಯ ಸಾಕು ಬೆಕ್ಕಿಗೂ ಗೊತ್ತು....!
ಹೊಸ ವರ್ಷಕ್ಕೆ ಈ ರಾಶಿಗೆ ಹೊಸ ಪ್ರೀತಿ, ಸಂಗಾತಿ ಭಾಗ್ಯ