
ಗುಜರಾತ್ ಹೈಕೋರ್ಟ್ (Gujarat High Court)ನಲ್ಲಿ ಒಂದು ವಿಚಿತ್ರ ಪ್ರಕರಣ ಬೆಳಕಿಗೆ ಬಂದಿದೆ. ಬೀದಿ ನಾಯಿಗಳ ಮೇಲೆ ಪತ್ನಿಗಿರುವ ಅತಿಯಾದ ಪ್ರೀತಿಯಿಂದ ಬೇಸತ್ತಿರುವ 41 ವರ್ಷದ ವ್ಯಕ್ತಿ, ಡಿವೋರ್ಸ್ (Divorce) ಕೇಳಿದ್ದಾರೆ. ಬೀದಿ ನಾಯಿಗಳ ಮೇಲೆ ಪತ್ನಿಗಿರುವ ಅತಿಯಾದ ಪ್ರೀತಿ, ಒತ್ತಡ, ಮಾನಸಿಕ ನೋವು, ನಿಮಿರುವಿಕೆಯ ಅಪಸಾಮಾನ್ಯ ಕ್ರಿಯೆ ಸೇರಿದಂತೆ ದೈಹಿಕ ಸಮಸ್ಯೆಗಳನ್ನು ಉಂಟುಮಾಡಿದೆ ಎಂದು ಅವರು ಆರೋಪ ಮಾಡಿದ್ದಾರೆ.
ದಂಪತಿ 2006 ರಲ್ಲಿ ಮದುವೆಯಾಗಿದ್ದಾರೆ. ಮದುವೆಯಾದ ಕೆಲವೇ ದಿನಗಳ ನಂತ್ರ ತೊಂದ್ರೆ ಶುರುವಾಗಿದೆ. ಇವರು ವಾಸವಾಗಿರುವ ಅಪಾರ್ಟ್ ಮೆಂಟ್ ನಲ್ಲಿ ಸಾಕು ನಾಯಿಗಳಿಗೆ ಅನುಮತಿ ಇರ್ಲಿಲ್ಲ. ಆದ್ರೆ ಪತ್ನಿ ಬೀದಿ ನಾಯಿಯೊಂದನ್ನು ಮನೆಗೆ ತಂದಿದ್ದರು. ನಿಧಾನವಾಗಿ ಈ ಬೀದಿ ನಾಯಿಗಳ ಸಂಖ್ಯೆ ಮನೆಯಲ್ಲಿ ಹೆಚ್ಚಾಗ್ತಾ ಬಂತು. ನಾಯಿಗಳಿಗೆ ಆಹಾರ ತಯಾರಿಕೆ, ಅವರ ಸ್ವಚ್ಛತೆ, ಆರೈಕೆಯಲ್ಲೇ ಪತ್ನಿ ದಿನ ಕಳೆಯಲು ಶುರು ಮಾಡಿದ್ದರು ಎಂದು ಪತಿ ಆರೋಪ ಮಾಡಿದ್ದಾರೆ. ಅಷ್ಟೇ ಅಲ್ಲ ಬೆಡ್ ಮೇಲೆಯೇ ನಾಯಿಯನ್ನು ಮಲಗಿಸಲು ಪತ್ನಿ ಮುಂದಾಗಿದ್ದಾರೆ. ಒಂದು ಬಾರಿ ನಾಯಿಯಿಂದ ಪತಿ ಕಚ್ಚಿಸಿಕೊಂಡಿದ್ದಾರಂತೆ. 2008 ರಲ್ಲಿ, ಪರಿಸ್ಥಿತಿ ಪೊಲೀಸ ಠಾಣೆ ಮೆಟ್ಟಿಲೇರಿತ್ತು.
ಡಿವೋರ್ಸ್ ನಂತ್ರ Sania Mirzaಗೆ ಕಾಡಿತ್ತು ಪ್ಯಾನಿಕ್ ಅಟ್ಯಾಕ್ ! ಆ ದಿನ ನೆನಪು ಮಾಡ್ಕೊಂಡ ಟೆನಿಸ್ ತಾರೆ
ಪತ್ನಿ ಪ್ರಾಣಿ ಪ್ರೀತಿ ಹೆಚ್ಚಾಗ್ತಾ ಹೋಯ್ತು. ಪತ್ನಿ, ಪ್ರಾಣಿ ರಕ್ಷಣಾ ಗುಂಪನ್ನು ಸೇರಿದ್ದರು. ಬೀದಿ ನಾಯಿ ರಕ್ಷಣೆ ಹಿನ್ನೆಲೆಯಲ್ಲಿ ಅನೇಕರ ವಿರುದ್ಧ ದೂರು ದಾಖಲಿಸಿದ್ದರು. ಪದೇ ಪದೇ ಪೊಲೀಸ್ ಠಾಣೆಗೆ ಹೋಗ್ತಿದ್ದರು. ಬರೀ ತಾನು ಮಾತ್ರವಲ್ಲ ಪತಿಗೂ ಠಾಣೆಗೆ ಬರುವಂತೆ ಒತ್ತಾಯ ಮಾಡ್ತಿದ್ದರು. ಇದನ್ನು ನಿರಾಕರಿಸಿದ್ರೆ ಪತಿ ಜೊತೆ ಜಗಳ ಆಡ್ತಿದ್ದರು. ದಿನೇ ದಿನ ಒತ್ತಡ ಹೆಚ್ಚಾಗಿ, ಅಂತಿಮವಾಗಿ ನಿಮಿರುವಿಕೆಯ ಅಪಸಾಮಾನ್ಯ ಕ್ರಿಯೆಗೆ ಕಾರಣವಾಯಿತು ಎಂದು ಪತಿ ಆರೋಪ ಮಾಡಿದ್ದಾರೆ.
ಏಪ್ರಿಲ್ 1, 2007 ರಂದು, ಹೆಂಡತಿ ರೇಡಿಯೋ ಜಾಕಿ ಜೊತೆ ತಮಾಷೆ ಫೋನ್ ಕಾಲ್ ನಲ್ಲಿ ಪಾಲ್ಗೊಂಡು, ಪತಿ ವಿವಾಹೇತರ ಸಂಬಂಧ ಹೊಂದಿದ್ದಾರೆಂದು ಅಪಹಾಸ್ಯ ಮಾಡಿದ್ದರು. ಇದು ಸಾಮಾಜಿಕವಾಗಿ, ವಿಶೇಷವಾಗಿ ವೃತ್ತಿ ಸ್ಥಳದಲ್ಲಿ ಮುಜುಗರವನ್ನುಂಟು ಮಾಡಿತು ಎಂದು ಪತಿ ಆರೋಪಿಸಿದ್ದಾರೆ. ಸಹವಾಸ ಬೇಡ ಅಂತ ವ್ಯಕ್ತಿ ಬೆಂಗಳೂರಿಗೆ ಶಿಫ್ಟ್ ಆಗಿದ್ದಾರೆ. ಆದ್ರೆ ಹೆಂಡ್ತಿ ಬಿಡಲಿಲ್ಲ. ಫೋನ್ ಮಾಡ್ತಾ, ದೂರು ನೀಡ್ತಾ ಕಿರಿಕಿರಿ ಮಾಡಿದ್ದಾರೆ. ವ್ಯಕ್ತಿ 2017 ರಲ್ಲಿ ಡಿವೋರ್ಸ್ ಗೆ ಅರ್ಜಿ ಸಲ್ಲಿಸಿದ್ದಾರೆ. ಅಹಮದಾಬಾದ್ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದು, ಹೆಂಡ್ತಿ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಬೀದಿ ನಾಯಿ ರಕ್ಷಣೆಗೆ ಪ್ರೋತ್ಸಾಹ ನೀಡಿದ್ದೇ ಪತಿ ಅಂತ ಆರೋಪಿಸಿ ಒಂದಿಷ್ಟು ಫೋಟೋ ಸಾಕ್ಷ್ಯ ನೀಡಿದ್ದಾರೆ. ದೀರ್ಘ ವಿಚಾರಣೆ ನಂತ್ರ ಫೆಬ್ರವರಿ 2024 ರಲ್ಲಿ, ಕುಟುಂಬ ನ್ಯಾಯಾಲಯ ವಿಚ್ಛೇದನ ಅರ್ಜಿಯನ್ನು ವಜಾಗೊಳಿಸಿದೆ. ಪತ್ನಿ ವಿರುದ್ಧ ಪತಿ ಸಾಕ್ಷ್ಯ ನೀಡಲು ವಿಫಲವಾಗಿದ್ದಾನೆ, ತಮಾಷೆ ಕರೆಯನ್ನು ಸಾಕ್ಷ್ಯವಾಗಿ ಸ್ವೀಕರಿಸಲುಸ ಸಾಧ್ಯವಿಲ್ಲ ಎಂದು ಕೋರ್ಟ್ ಹೇಳಿದೆ.
ಡೆಮೋ ರೀತಿ ಲಿಂಗ ಬೇಕಾ? ವರ್ಕಿಂಗ್ ರೀತಿ ಬೇಕಾ? ಆಪರೇಷನ್ನ ಶಾಕಿಂಗ್ ಮಾಹಿತಿ ಕೊಟ್ಟ transgender
ಪತಿ ಈಗ ಹೈಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದಾರೆ. ಮದುವೆ ಈಗ ಸರಿಪಡಿಸಲಾರದಷ್ಟು ಹದಗೆಟ್ಟಿದೆ. ಪತ್ನಿಗೆ 15 ಲಕ್ಷ ಜೀವನಾಂಶ ನೀಡಲು ಸಿದ್ಧನಿದ್ದೇನೆ ಎಂದು ಅವರು ಅರ್ಜಿಯಲ್ಲಿ ಹೇಳಿದ್ದಾರೆ. ಪತ್ನಿ 2 ಕೋಟಿ ಜೀವನಾಂಶಕ್ಕೆ ಬೇಡಿಕೆ ಇಟ್ಟಿದ್ದಾರೆ. ಮುಂದಿನ ವಿಚಾರಣೆ ಡಿಸೆಂಬರ್ 1 ಕ್ಕೆ ನಡೆಯಲಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.