ಮದ್ವೆ ಮನೆ ಅಂದ್ರೆ ಸಾಕು ಎಲ್ಲರಿಗೂ ಎಂಜಾಯ್ ಮಾಡೋ ಟೈಂ. ಆದ್ರೆ ವಧು-ವರರು ಸಾಮಾನ್ಯವಾಗಿ ಆ ಶಾಸ್ತ್ರ ಈ ಶಾಸ್ತ್ರ ಅಂತ ಬಿಝಿಯಾಗಿ ಬಿಡ್ತಾರೆ. ಆದ್ರೆ ಈ ಮದ್ವೇಲಿ ಮಾತ್ರ ಮದುಮಕ್ಕಳು ಸಖತ್ ಡ್ಯಾನ್ಸ್ ಮಾಡಿದ್ದಾರೆ. ಸ್ಟೇಜ್‌ನಲ್ಲಿ ಸಖತ್ ಡ್ಯಾನ್ಸ್ ಮಾಡಿ ಎಲ್ಲರ ಗಮನ ಸೆಳೆದಿದ್ದಾರೆ.
ಇತ್ತೀಚಿನ ಮದ್ವೆಗಳು ಸಖತ್ ಅದ್ದೂರಿಯಾಗಿ ನಡೆಯುತ್ತವೆ. ಡೆಕೊರೇಶನ್, ಹಾಡು, ಡ್ಯಾನ್ಸ್ ಎಲ್ಲವೂ ಮಸ್ತ್ ಮಸ್ತ್ ಆಗಿರುತ್ತೆ. ಅದರಲ್ಲೂ ಇತ್ತೀಚಿಗೆ ನಡೆಯೋ ಮದುವೆ ಕಾರ್ಯಕ್ರಮಗಳು ಡ್ಯಾನ್ಸ್ ಪರ್ಫಾಮೆನ್ಸ್ ಇಲ್ದೆ ಇನ್‌ಕಂಪ್ಲೀಟ್ ಅಂತಾನೇ ಹೇಳ್ಬಹುದು. ವಧು-ವರರ ಕಸಿನ್ಸ್ ಹಲವು ಸಾಂಗ್‌ಗಳನ್ನು ಮರ್ಜ್ ಮಾಡಿ ಸಖತ್ ಆಗಿ ಸ್ಟೆಪ್ ಹಾಕಿ ವಧುವರರನ್ನು ವೆಲ್‌ಕಂ ಮಾಡುತ್ತಾರೆ. ಎಲ್ಲಾ ಮದುವೆ ಕಾರ್ಯಕ್ರಮಗಳಲ್ಲಿ ಈ ಡ್ಯಾನ್ಸ್ ಪ್ರೋಗ್ರಾಂ ಹೈಲೈಟ್ ಆಗುತ್ತದೆ. ಇದನ್ನು ಸಖತ್ ಆಗಿ ವಿಡಿಯೋ ಮಾಡಿ ಸೋಷಿಯಲ್ ಮಿಡಿಯಾದಲ್ಲಿ ಪೋಸ್ಟ್ ಮಾಡೋದ್ರಿಂದ ಮದ್ವೆ ಮನೆಯ ಈ ಡ್ಯಾನ್ಸ್ ಬಹುಬೇಗನೇ ವೈರಲ್ ಆಗಿ ಬಿಡುತ್ತದೆ.
ಸದ್ಯ ಅದೇ ರೀತಿ ಉತ್ತರಭಾರತ ಮದ್ವೆ (Marriage) ಮನೆಯೊಂದರಲ್ಲಿ ಜೋಡಿಯೊಂದು ಮಾಡಿರೋ ಡ್ಯಾನ್ಸ್ ಸಖತ್ ವೈರಲ್ ಆಗಿದೆ. ಇಲ್ಲಿ ಮದುಮಕ್ಕಳು 'ಊ ಅಂಟಾವ' ಹಾಡಿಗೆ ಸಖತ್ತಾಗಿ ಹೆಜ್ಜೆ ಹಾಕಿದ್ದಾರೆ. ಮಾತ್ರವಲ್ಲ ಡ್ಯಾನ್ಸ್‌ನ ವಿಡಿಯೋವನ್ನುಇನ್‌ಸ್ಟಾಗ್ರಾಂ ನಲ್ಲಿ ಹಂಚಿಕೊಂಡಿದ್ದಾರೆ. ನಿಶಾ ಶಾ (@nisha.dhadkangroup) ಎಂಬ ಬಳಕೆದಾರರು (User) ಹಂಚಿಕೊಂಡ ಪೋಸ್ಟ್ ಸದ್ಯ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗ್ತಿದೆ. ಈ ಪೋಸ್ಟ್‌ಗೆ 'ನಿಮ್ಮ ಜೀವನ ಸಂಗಾತಿಯು (Partner) ನಿಮ್ಮ ಅತ್ಯುತ್ತಮ ಡ್ಯಾನ್ಸ್ ಪಾರ್ಟನರ್ ಆದಾಗ' ಎಂಬ ಶೀರ್ಷಿಕೆಯನ್ನು ನೀಡಲಾಗಿದೆ.
Viral Video : ಇಷ್ಟೊಂದು ವೀವ್ಸ್ ಪಡೆದಿರೋ ಈ ವಿಡಿಯೋದಲ್ಲಿ ಅಂಥದ್ದೇನಿದೆ?
ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್
ಅಲ್ಲು ಅರ್ಜುನ್ ನಟನೆಯ ಪುಷ್ಪ ಸಿನಿಮಾ ಸಕ್ಕಾಪಟ್ಟೆ ಸದ್ದು ಮಾಡಿತ್ತು. ಹಾಡುಗಳು ಸಹ ಅಭಿಮಾನಿಗಳ ಹೃದಯ ಗೆದ್ದಿದ್ದವು. ಅದರಲ್ಲೂ ಸಮಂತಾ ಹೆಜ್ಜೆ ಹಾಕಿದ್ದ ಹೂ...ಅಂಟಾವ ಹಾಡಂತು ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಈ ಹಾಡಿಗೆ ಎಷ್ಟು ಕ್ರೇಜ್ ಇದೆ ಎಂದರೆ ಇವತ್ತಿಗೂ ಹಲವೆಡೆ ಕಾರ್ಯಕ್ರಮಗಳಲ್ಲಿ ಈ ಹಾಡನ್ನು ಪ್ಲೇ ಮಾಡುವುದನ್ನು ನೋಡಬಹುದು. ಇದೇ ಹಾಡಿಗೆ ಜೋಡಿ ಸ್ಟೆಪ್ಸ್ ಹಾಕಿದ್ದಾರೆ.
ಹುಡುಗಿ ಬಿಳಿ ಶರ್ಟ್‌ನೊಂದಿಗೆ ಕಲರ್‌ಫುಲ್ ಸ್ಕರ್ಟ್ ಧರಿಸಿದ್ದರೆ, ಹುಡುಗ ಬಿಳಿ ಶರ್ಟ್‌ನೊಂದಿಗೆ ನೀಲಿ ಸೂಟ್ ಧರಿಸಿದ್ದಾನೆ. ಕಲರ್‌ಫುಲ್ ಸ್ಟೇಜ್‌ನಲ್ಲಿ ಜೋಡಿ ತೆಲುಗು ಪುಷ್ಪಾ ಸಿನಿಮಾದ ಊ ಅಂಟಾವ ಹಾಡಿಗೆ ಡ್ಯಾನ್ಸ್ ಮಾಡಿದ್ದಾರೆ. ಇಬ್ಬರ ಮೂವ್‌ಮೆಂಟ್ ಒಂದೇ ಆಗಿದ್ದು ಡ್ಯಾನ್ಸ್ ಸಖತ್ತಾಗಿ ಮೂಡಿಬಂದಿದೆ. ನೋಡುಗರು ಇದನ್ನು ನೋಡಿ ಬೆರಗಾಗಿದ್ದಾರೆ. ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸಿದ್ದಾರೆ.
ಕಿಚನ್‌ನಲ್ಲಿ ಮೈ ಚಳಿ ಬಿಟ್ಟು ಡ್ಯಾನ್ಸ್ ಮಾಡಿದ ಗೃಹಿಣಿ, ಸೆರಗು ಮುಚ್ಕೊಳಮ್ಮಾ ಎಂದ ನೆಟ್ಟಿಗರು
ಆನ್‌ಲೈನ್‌ನಲ್ಲಿ ಹಂಚಿಕೊಂಡ ನಂತರ ವೀಡಿಯೊ 871K ವೀಕ್ಷಣೆಗಳನ್ನು ಸಂಗ್ರಹಿಸಿದೆ. ನೆಟಿಜನ್‌ಗಳು ಕ್ಲಿಪ್ ಅನ್ನು ವೀಕ್ಷಿಸುವುದನ್ನು ಸಂಪೂರ್ಣವಾಗಿ ಇಷ್ಟಪಟ್ಟಿದ್ದಾರೆ ಮತ್ತು ಕಾಮೆಂಟ್‌ಗಳ ವಿಭಾಗದಲ್ಲಿ ತಮ್ಮ ಪ್ರೀತಿಯನ್ನು ಸುರಿಸಿದ್ದಾರೆ. ಹಲವಾರು ಬಳಕೆದಾರರು 'ಇದು ಅದ್ಭುತವಾದ ಡ್ಯಾನ್ಸ್' ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರರು, 'ರಾಕ್ಡ್ ಇಟ್' ಎಂದು ಕಮೆಂಟಿಸಿ ಫೈರ್ ಎಮೋಜಿ ಕಳುಹಿಸಿದ್ದಾರೆ.
ಮೂರನೇ ಬಳಕೆದಾರರು ಬರೆದಿದ್ದಾರೆ, 'ಇಬ್ಬರೂ ಅತ್ಯುತ್ತಮ ಪ್ರದರ್ಶನ ನೀಡಿ, ಸ್ಟೇಜ್‌ಗೆ ಬೆಂಕಿ ಹಚ್ಚಿದ್ದೀರಿ' ಎಂದು ಹೊಗಳಿದ್ದಾರೆ. ಮತ್ತೆ ಕೆಲವರು ಎಕ್ಸ್‌ಲೆಂಟ್ ಪರ್ಫಾಮೆನ್ಸ್, ಲವ್ಲೀ ಕಪಲ್, ಔಟ್ ಸ್ಟ್ಯಾಡಿಂಗ್ ಎಂದೆಲ್ಲಾ ಕಮೆಂಟಿಸಿದ್ದಾರೆ. ಒಟ್ನಲ್ಲಿ ಮದುವೆ ಮನೆಯ ಈ ಅದ್ಭುತ ಡ್ಯಾನ್ಸ್ ಪರ್ಫಾಮೆನ್ಸ್ ಎಲ್ಲರ ಮನಸೂರೆಗೊಳಿಸಿರೋದಂತೂ ನಿಜ.
Instagramನಲ್ಲಿ ಈ ಪೋಸ್ಟ್ ಅನ್ನು ವೀಕ್ಷಿಸಿ: