Viral Video: ಗೆಳತಿ ಪರಿಚಯಿಸಲು ರೂಮಿನ ಬಾಗಿಲು ತೆಗೆದ ನಿವೃತ್ತ ವ್ಯಕ್ತಿಗೆ ಕಾದಿತ್ತು ಶಾಕ್!

By Suvarna News  |  First Published Jul 14, 2023, 2:15 PM IST

ನಾವು ಮಾಡೋಕೆ ಹೊರಟಿರೋದೇ ಒಂದು, ಆಗೋದೇ ಇನ್ನೊಂದು. ಧರಂಬೀರ್ ಸಿಂಗ್ ಕಥೆಯೂ ಇದೇ ಆಗಿದೆ. ಗರ್ಲ್ ಫ್ರೆಂಡ್ ತೋರಿಸೋಕೆ ಅಂತಾ ಬೆಡ್ ರೂಮಿಗೆ ಹೋದ್ರೆ ಅಲ್ಲಿ ಬೇರೇನೋ ಆಗಿದೆ. ಅದೇನು ಅಂತಾ ಅವರ ವಿಡಿಯೋದಲ್ಲಿದೆ ನೋಡಿ.
 


ಸಾಮಾಜಿಕ ಜಾಲತಾಣದ ಮೂಲಕ ಅನೇಕರು ಈಗ ಪ್ರಸಿದ್ಧಿಗೆ ಬರ್ತಿದ್ದಾರೆ. ಅದ್ರಲ್ಲಿ ಹರಿಯಾಣದ ಹಾಸ್ಯನಟ ಧರಂಬೀರ್ ಸಿಂಗ್ ಕೂಡ ಒಬ್ಬರು. ಹರ್ಯಾಣಿ ಭಾಷೆಯಲ್ಲಿ ಧರಂಬೀರ್ ಸಿಂಗ್ ಅನೇಕ ವಿಡಿಯೋಗಳನ್ನು ಹಾಕಿ ಪ್ರಸಿದ್ಧಿ ಪಡೆದಿದ್ದಾರೆ. ಅವರ ಹಾಸ್ಯದ ವಿಡಿಯೋಗಳು ಸಾಮಾಜಿಕ ಜಾಲತಾಣ ಬಳಕೆದಾರರನ್ನು ನಕ್ಕು ನಗಿಸುತ್ತಿವೆ. ಇತ್ತೀಚಿಗೆ ಧರಂಬೀರ್ ಸಿಂಗ್ ಮತ್ತೊಂದು ವಿಡಿಯೋವನ್ನು ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಅವರು ತಮ್ಮ ಗೆಳತಿಯನ್ನು ಪರಿಚಯ ಮಾಡಲು ಮುಂದಾಗ್ತಾರೆ. ಆದ್ರೆ ಅಲ್ಲಿ ನಡೆಯೋದೇ ಬೇರೆ. 

Dharambirharyana ಇನ್ಸ್ಟಾಗ್ರಾಮ್ ಖಾತೆಯಲ್ಲಿ ಧರಂಬೀರ್ ಸಿಂಗ್ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋ ಆರಂಭದಲ್ಲಿ ಧರಂಬೀರ್ ಸಿಂಗ್ ತನ್ನ ಗೆಳತಿ (Girlfriend) ಯನ್ನು ಪರಿಚಯಿಸುವುದಾಗಿ ಹೇಳ್ತಾರೆ. ಅದರಂತೆ ವಿಡಿಯೋ (Video) ಆನ್ ಮಾಡಿ, ಮಲಗುವ ಕೋಣೆಯ ಬಾಗಿಲು ತೆರೆಯುತ್ತಾರೆ. ಆದ್ರೆ ಅಲ್ಲಿ ಅವರಿಗೆ ಗೆಳತಿ ಪರಿಚಯ ಮಾಡಿಸೋಕೆ ಆಗೋದಿಲ್ಲ. ಯಾಕೆಂದ್ರೆ ಅಲ್ಲಿದ್ದ ಗೆಳತಿ ವರ್ತನೆ ಧರಂಬೀರ್ ಸಿಂಗ್ ಗೆ ಅನುಮಾನ ಹುಟ್ಟಿಸುತ್ತದೆ. ಧರಂಬೀರ್ ಸಿಂಗ್, ಬೆಡ್ ರೂಮಿನ ಬಾಗಿಲು ತೆರೆದು ಒಳಗೆ ಹೋಗ್ತಿದ್ದಂತೆ ಬೆಡ್ ಮೇಲೆ ಕುಳಿತಿದ್ದ ರಷ್ಯಾ (Russia) ದ ಗರ್ಲ್ ಫ್ರೆಂಡ್ ಅಲರ್ಟ್ ಆಗ್ತಾಳೆ. ಯಾರಿಗೋ ಫೋನ್ ಮಾಡ್ತಿದ್ದವಳು ಟಕ್ ಅಂತಾ ಕಟ್ ಮಾಡುತ್ತಾಳೆ. ಅಲ್ಲದೆ ಫೋನನ್ನು ಅಡಗಿಸಿಡುವ ಪ್ರಯತ್ನ ನಡೆಸ್ತಾಳೆ. ಇದು ಧರಂಬೀರ್ ಸಿಂಗ್ ಕೋಪಕ್ಕೆ ಕಾರಣವಾಗುತ್ತದೆ. ಯಾರಿಗೆ ಫೋನ್ ಮಾಡ್ತಿದ್ದೆ ಎಂದು ಸ್ವಲ್ಪ ಗಡುಸಾದ ಸ್ವರದಲ್ಲಿ ಪ್ರಶ್ನೆ ಮಾಡುತ್ತಾರೆ. ಆಗ ಆಕೆ ಅನುಮಾನದಲ್ಲೇ ಅಮ್ಮನಿಗೆ ಎನ್ನುತ್ತಾಳೆ. ಆದ್ರೆ ಇದನ್ನು ಒಪ್ಪದ ಧರಂಬೀರ್ ಸಿಂಗ್, ಕಾಲ್ ಲೀಸ್ಟ್ ತೋರಿಸುವಂತೆ ಹೇಳ್ತಾನೆ. ಇದನ್ನು ಒಪ್ಪದ ರಷ್ಯಾ ಗರ್ಲ್ ಫ್ರೆಂಡ್, ಅಳಲು ಶುರು ಮಾಡ್ತಾಳೆ. ಆಗ ಕ್ಯಾಮರಾವನ್ನು ತನ್ನ ಕಡೆ ತಿರುಗಿಸಿದ ಧರಂಬೀರ್ ಸಿಂಗ್, ಅವಳು ಅಮ್ಮನಿಗೆ ಕರೆ ಮಾಡಿದ್ದಳು ಎನ್ನಿಸುತ್ತದೆ. ನಾನು ಒತ್ತಾಯ ಮಾಡಬಾರದಿತ್ತು ಎನ್ನುತ್ತಾನೆ. ನಂತ್ರ ಅಳು ನಿಲ್ಲಿಸುವಂತೆ ರಷ್ಯಾ ಗರ್ಲ್ ಫ್ರೆಂಡ್ ಗೆ ಹೇಳೋದನ್ನು ನೀವು ಕೇಳ್ಬಹುದು. ಈ ವಿಡಿಯೋವನ್ನು ಹಂಚಿಕೊಂಡಿರುವ ಧರಂಬೀರ್ ಸಿಂಗ್, ಏನೋ ಅನುಮಾನವಿದೆ ಎನ್ನುವ ಶೀರ್ಷಿಕೆ ಹಾಕಿದ್ದಾರೆ.

Tap to resize

Latest Videos

Family Planning: ನಾವಿಬ್ಬರು ನಮಗಿಬ್ಬರು ಅನ್ನೋ ಕಾನ್ಸೆಪ್ಟ್ ಎಷ್ಟು ಚೆಂದ ಅಲ್ವಾ?

ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋಗೆ 3 ಲಕ್ಷಕ್ಕೂ ಹೆಚ್ಚು ಲೈಕ್ಸ್ ಬಂದಿದೆ. ಅನೇಕರು ಕಮೆಂಟ್ ಮಾಡಿದ್ದಾರೆ. ಇದುವರೆಗೆ 65 ಲಕ್ಷಕ್ಕೂ ಹೆಚ್ಚು ಬಾರಿ ವಿಡಿಯೋ ವೀಕ್ಷಣೆ ಮಾಡಲಾಗಿದೆ. ಕೆಲವರು ವಿಡಿಯೋಗೆ ಮೆಚ್ಚುಗೆ ವ್ಯಕ್ತಪಡಿಸಿದ್ರೆ ಮತ್ತೆ ಕೆಲವರು ವಯಸ್ಸಿನ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ತನ್ನ ತಪ್ಪನ್ನು ಮುಚ್ಚಿಟ್ಟುಕೊಳ್ಳಲು ಮಹಿಳೆ ಅಳ್ತಾಳೆ ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ. ಹಣಕ್ಕೆ ಸಂಬಂಧಿಸಿದ ಚಕ್ಕರ್ ಇದೆ ಅಂತಾ ಇನ್ನೊಬ್ಬರು ಕಮೆಂಟ್ ಮಾಡಿದ್ದಾರೆ. ಇವರ ನಟನೆ ಹಾಗೂ ಕಂಟೆಂಟ್ ಭಿನ್ನವಾಗಿದೆ ಎಂದು ಇನ್ನೊಬ್ಬರು ಶ್ಲಾಘಿಸಿದ್ದಾರೆ.

ಚಾರಿಟಿಗೆ ಹಣ ನೀಡಿದ್ರೆ ಅಭಿಮಾನಿಗಳಿಗೆ ನನ್ನ ಬೆತ್ತಲೆ ಚಿತ್ರವೇ ಗಿಫ್ಟ್‌: ನೀಲಿ ತಾರೆಯ ಆಫರ್‌!

ಧರಂಬೀರ್ ಸಿಂಗ್ ಯಾರು ? : ವಿಡಿಯೋದಲ್ಲಿ ಕಾಣುತ್ತಿರುವ ಧರಂಬೀರ್ ಸಿಂಗ್ ವೃದ್ಧನಲ್ಲ ಅಂದ್ರೆ ನೀವು ನಂಬೋದು ಕಷ್ಟ. ಆದ್ರೆ ಇದು ವಾಸ್ತವ. ಧರಂಬೀರ್ ಸಿಂಗ್ ಅನ್ನೋದು ಒಂದು ಪಾತ್ರದ ಹೆಸರು. ಪಾತ್ರಕ್ಕೆ ಜೀವ ತುಂಬಿದ್ದು ಹರಿಯಾಣದ ಹಾಸ್ಯನಟ ಪಂಕಜ್ ರಾಠಿ. ತಮ್ಮ ಹಾಸ್ಯದ ಮೂಲಕ ಪಂಕಜ್ ಜನರನ್ನು ರಂಜಿಸುವ ಗುರಿಯನ್ನು ಹೊಂದಿದ್ದಾರೆ. ಪಂಕಜ್ ವಯಸ್ಸಾದ ನಿವೃತ್ತ ವ್ಯಕ್ತಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ. ಆದ್ರೆ ಪಂಕಜ್ ವಯಸ್ಸು ಕೇವಲ 25 ವರ್ಷ. ವಿಡಿಯೋಗಳನ್ನು ಫಿಲ್ಟರ್ ಮಾಡಿ ಹಾಕ್ತಾರೆ ಪಂಕಜ್.  

click me!