ಮದುವೆ ಮನೆಯಲ್ಲಿ ತಮಾಷೆ, ನಗು, ಗಲಾಟೆ ಎಲ್ಲವೂ ಸಾಮಾನ್ಯ. ಕ್ಯಾಮರಾಮೆನ್ ಕೂಡ ಆಗಾಗ ಏಟು ತಿಂದ ಸುದ್ದಿಯನ್ನು ನಾವು ಕೇಳ್ತೇವೆ. ಕೆಲವೊಮ್ಮೆ ಗಂಭೀರವಾದ ವಿಷ್ಯ ತಮಾಷೆಯಾಗಿ ಕೊನೆಗೊಳ್ಳುತ್ತದೆ. ವೈರಲ್ ಆದ ವಿಡಿಯೋ ಕೂಡ ಹಾಗೇ ಇದೆ.
ಮದುವೆ ಮನೆಯಲ್ಲಿ ಏನೇನೆಲ್ಲ ನಡೆಯುತ್ತೆ. ವಧು – ವರರ ಮಧ್ಯೆ ಜಗಳ, ಸಂಬಂಧಿಕರ ಗಲಾಟೆ, ಊಟದ ವಿಷ್ಯಕ್ಕೆ ನಡೆಯುವ ಗಲಾಟೆ, ತಮಾಷೆ, ಮಾತುಕತೆ, ನಗು ಎಲ್ಲವನ್ನೂ ನಾವು ನೋಡ್ಬಹುದು. ಕೆಲವೊಂದು ವಿಡಿಯೋದಲ್ಲಿ ಸೆರೆಯಾಗೋದಲ್ಲದೆ ವೈರಲ್ ಆಗುತ್ತೆ. ಈಗ ಮದುವೆ ಸಮಾರಂಭದಲ್ಲಿ ನಡೆದ ಘಟನೆಯೊಂದು ಸಾಮಾಜಿಕ ಜಾಲತಾಣ ಬಳಕೆದಾರರ ಮುಖದಲ್ಲಿ ನಗು ಮೂಡಿಸಿದೆ.
ಕೆಲ ದಿನಗಳ ಹಿಂದೆ ಮದುವೆ (Marriage) ವರನೇ, ವಧುವಿನ ಫೋಟೋ ತೆಗೆಯಲು ಮುಂದಾಗಿದ್ದ ವಿಡಿಯೋ ವೈರಲ್ ಆಗಿತ್ತು. ಮದುವೆ ಅಂದ್ಮೇಲೆ ಅಲ್ಲಿ ಕ್ಯಾಮರಾ ಮೆನ್ (Cameramen) ಇರ್ತಾರೆ. ಅನೇಕ ಬಾರಿ, ಮದುವೆ ಸಂಪ್ರದಾಯಗಳನ್ನು ಪಾಲಿಸುವ ಬದಲು ಕ್ಯಾಮರಾ ಮೆನ್ ಹೇಳಿದಂತೆ ಕೇಳುವ ಸ್ಥಿತಿ ಬರುತ್ತದೆ. ಫೋಟೋ ಚೆನ್ನಾಗಿ ಬರಬೇಕು ಅಂದ್ರೆ ಅವರು ಹೇಳಿದಂತೆ ಕೇಳ್ಬೇಕು. ಮದುವೆ ಮನೆಯಲ್ಲಿ ಕ್ಯಾಮರಾ ಮೆನ್ ಗಳಿಗೆ ವಿಶೇಷ ಸ್ಥಾನಮಾನ. ಅವರು ಎಲ್ಲಿ ಹೋದ್ರೂ ಜಾಗ ಸಿಗುತ್ತೆ. ವಧು – ವರರ ಫೋಟೋ ಸರಿಯಾಗಿ ಬರಬೇಕು ಎನ್ನುವ ಕಾರಣಕ್ಕೆ ಅವರು ಕೂಡ ಸಾಕಷ್ಟು ಸಾಹಸ ಮಾಡ್ತಾರೆ. ನಿಲ್ಲಬಾರದ ಜಾಗದಲ್ಲೆಲ್ಲ ನಿಂತು ಫೋಟೋ ಸೆರೆ ಹಿಡಿತಾರೆ. ಫೋಟೋ (Photo) ಮತ್ತೆ ವಿಡಿಯೋ ಮಾಡುವಾಗ ಮುಖ ಎತ್ತಿ, ಸ್ಮೈಲ್ ಮಾಡಿ ಅನ್ನೋದು ಕಾಮನ್. ಕೆಲ ಬಾರಿ ಕ್ಯಾಮರಾ ಮೆನ್ ಗಳು ವಧು, ವರರ ಮುಖವನ್ನು ತಾವೇ ಎತ್ತಿ ಸರಿಪಡಿಸುವ ಪ್ರಯತ್ನ ನಡೆಸ್ತಾರೆ. ಆದ್ರೆ ಇದೇ ಇಲ್ಲೊಬ್ಬ ಕ್ಯಾಮರಾಮೆನ್ ಏಟು ತಿನ್ನಲು ಕಾರಣವಾಗಿದೆ. ಇಲ್ಲಿ ಏಟು ಬಿದ್ಮೇಲೆ ವಧುವಿನ ರಿಯಾಕ್ಷನ್ ಹೆಚ್ಚು ಗಮನ ಸೆಳೆದಿದೆ.
ONE LIFE ONE WIFE: ಅಸ್ಸಾಂನಲ್ಲಿ ಶೀಘ್ರದಲ್ಲೇ ಬಹುಪತ್ನಿತ್ವ ನಿಷೇಧ ಮಸೂದೆ
@Razarumi ಹೆಸರಿನ ಟ್ವಿಟರ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಈ ವಿಡಿಯೋವನ್ನು @Razarumi ರೀ ಟ್ವಿಟ್ ಮಾಡಿದ್ದಾರೆ. ಈ ವಿಡಿಯೋ ಹಿಂದೊಮ್ಮೆ ವೈರಲ್ ಆಗಿತ್ತು. ಅದೇನೇ ಇರಲಿ, ಈ ವಿಡಿಯೋವನ್ನು ಈವರೆಗೂ ನೋಡದೆ ಹೋದವರು ನೋಡಿ ಎಂಜಾಯ್ ಮಾಡ್ಬಹುದು.
ಮದುವೆ ಸಮಾರಂಭದ ವಿಡಿಯೋ ಇದಾಗಿದೆ. ವೇದಿಕೆಯಲ್ಲಿ ಕ್ಯಾಮರಾಮೆನ್ ವರನನ್ನು ಪಕ್ಕಕ್ಕೆ ಕಳುಹಿಸಿ ವಧುವಿನ ಫೋಟೋ ತೆಗೆಯುತ್ತಿದ್ದಾನೆ. ಒಂದೋ ಎರಡೋ ಫೋಟೋ ತೆಗೆದ ನಂತರ ಕ್ಯಾಮರಾಮನ್ ವಧುವಿನ ಬಳಿ ಹೋಗಿ ಅವಳ ಮುಖ ಹಿಡಿದು ಸ್ವಲ್ಪ ಮೇಲೆ ನೋಡುವಂತೆ ಹೇಳ್ತಾನೆ. ಮತ್ತೆ ಒಂದು ಫೋಟೋ ತೆಗೆದ ಕ್ಯಾಮರಾ ಮೆನ್ ಮತ್ತೆ ವಧು ಬಳಿ ಹೋಗಿ ಮುಖ ಮುಟ್ಟಿ, ಮುಖವನ್ನು ಎತ್ತುವ ಪ್ರಯತ್ನ ಮಾಡ್ತಾನೆ. ಕ್ಯಾಮರಾಮೆನ್ ವಧುವಿನ ಮುಖ ಮುಟ್ಟುತ್ತಿದ್ದಂತೆ ವರ, ಕ್ಯಾಮರಾಮೆನ್ ತಲೆಗೆ ಹೊಡೆಯುತ್ತಾನೆ. ಜೊತೆಗೆ ಕ್ಯಾಮರಾಮೆನ್ ಗೆ ಬೈಯ್ಯುತ್ತಿದ್ದಾನೆ. ಇದ್ರಿಂದ ಕ್ಯಾಮರಾ ಮೆನ್ ಶಾಕ್ ಆದ್ರೆ ಅತ್ತ ಕಡೆ ವಧು ರಿಯಾಕ್ಷನ್ ತಮಾಷೆಯಾಗಿದೆ.
ಇದೇನಿದು ಮದ್ವೆ ಬಗ್ಗೆ ಮಾತನಾಡ್ತಿದ್ದಾರೆ ದೇವರಕೊಂಡ, ಹುಡುಗಿ ಯಾರೋ?
ಕ್ಯಾಮರಾಮೆನ್‌ಗೆ ಹೊಡೆದ ತಕ್ಷಣ, ವಧು ತುಂಬಾ ಕೂಲ್ ಆಗಿ ನಗಲು ಪ್ರಾರಂಭಿಸುತ್ತಾಳೆ. ವಧು ಹೊಟ್ಟೆ ಹುಣ್ಣಾಗುವಂತೆ ನಗ್ತಾಳೆ. ನಗ್ತಾ ನಗ್ತಾ ನೆಲಕ್ಕೆ ಕುಳಿತುಕೊಳ್ಳುವ ವಧು, ನಗು ತಡೆಯೋಕೆ ಆಗದೆ ಅಲ್ಲೆ ಮಲಗ್ತಾಳೆ. ವಧು, ಆ ಕ್ಷಣವನ್ನು ಸಂಪೂರ್ಣವಾಗಿ ಆನಂದಿಸುತ್ತಿರುವುದನ್ನು ನಾವು ಕಾಣಬಹುದು. ವಧು ನಗಲು ಶುರು ಮಾಡ್ತಿದ್ದಂತೆ ವರ ಕೂಡ ನಗ್ತಾನೆ. ಶಾಕ್ ನಲ್ಲಿದ್ದ ಕ್ಯಾಮರಾಮೆನ್ ಅಲ್ಲಿ ಕಾಣಸಿಗೋದಿಲ್ಲ. ಸಾಮಾಜಿಕ ಜಾಲತಾಣ ಬಳಕೆದಾರರು ಇದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ಟ್ವಿಟರ್ ನಲ್ಲಿ ವಿಡಿಯೋ ಪೋಸ್ಟ್ ಮಾಡಿದ ರಾಜಾರುಮಿ ವಧು ತುಂಬಾ ಕೂಲ್ ಅಂತಾ ಶೀರ್ಷಿಕೆ ಹಾಕಿದ್ದಾರೆ. ಕೆಲವರು ಇದನ್ನು ತಮಾಷೆಯಾಗಿ ತೆಗೆದುಕೊಂಡ್ರೆ ಮತ್ತೆ ಕೆಲವರು ಇದು ಸ್ಕ್ರಿಪ್ಟ್ ಎಂದಿದ್ದಾರೆ.
🤣❤️👏🏽
The bride is too cool. pic.twitter.com/ehNlSxoTHW