ಮದ್ವೆ ಅಂದ್ಮೇಲೆ ಕೇವಲ ವಧು-ವರರು ಮಾತ್ರವಲ್ಲ ಎಲ್ಲರೂ ಈ ಸಮಾರಂಭವನ್ನು ಎಂಜಾಯ್ ಮಾಡೋಕೆ ಇಷ್ಟಪಡ್ತಾರೆ. ಆದ್ರೆ ಮದುವೆಯಲ್ಲಿ ಎಂಥೆಂಥಾ ಅನಾಹುತವಾಗುತ್ತೆ ನೋಡಿ. ಇಲ್ಲೊಂದು ರಿಸೆಪ್ಶನ್‌ಗೆ ವಧು-ವರರೇ ಅಟೆಂಡ್ ಆಗಿಲ್ಲ. ಲಿಫ್ಟ್‌ನಲ್ಲಿ ಸಿಕ್ಕಾಕೊಂಡಿದ್ದಾರೆ.
ಮದುವೆ ಮಾಡಿ ನೋಡು ಮನೆ ಕಟ್ಟಿ ನೋಡು ಎಂಬ ಗಾದೆ ಮಾತೊಂದು ನಮ್ಮ ಭಾರತದಲ್ಲಿ ಚಾಲ್ತಿಯಲ್ಲಿದೆ. ಮದುವೆ ಮಾಡುವುದು ಹಾಗೂ ಮನೆ ಕಟ್ಟುವುದು ಅಷ್ಟು ಕಷ್ಟದ ಕೆಲಸ ಅದಕ್ಕೆ ನೂರಂಟು ವಿಘ್ನಗಳಿರುತ್ತವೆ. ಮದುವೆ ದಿನ ಆಗುವ ಕೆಲ ಎಡವಟ್ಟುಗಳು ಜೀವನದ ಕೊನೆಯವರೆಗೂ ನೆನಪಿನಲ್ಲುಳಿದು ನಗು ಮೂಡಿಸುತ್ತದೆ. ಅದೇ ರೀತಿ ವಿದೇಶದಲ್ಲಿ ಮದುವೆ ದಿನವೇ ಜೋಡಿಯೊಂದು ಲಿಫ್ಟ್‌ನಲ್ಲಿ ಸಿಲುಕಿಕೊಂಡು ತಮ್ಮ ರಿಸೆಪ್ಷನ್ ಮಿಸ್ ಮಾಡಿಕೊಂಡಿದ್ದಾರೆ. ಈ ವಿಚಾರವನ್ನು ಅವರನ್ನು ರಕ್ಷಿಸಿದ ಅಗ್ನಿಶಾಮಕ ದಳ ತನ್ನ ಫೇಸ್‌ಬುಕ್‌ನಲ್ಲಿ ಪೇಜ್‌ನಲ್ಲಿ ಪೋಸ್ಟ್ ಮಾಡಿದ್ದು ಎಲ್ಲೆಡೆ ವೈರಲ್ ಆಗಿದೆ.
ಹೊಟೇಲ್ ಲಿಫ್ಟ್‌ನಲ್ಲಿ ಸಿಕ್ಕಾಕೊಂಡ ದಂಪತಿ, ತಮ್ಮದೇ ಆರತಕ್ಷತೆ ಮಿಸ್
ಯುಎಸ್‌ನಲ್ಲಿ ನವವಿವಾಹಿತ ದಂಪತಿಗಳ (New couple) ಮದುವೆಯ ಆರತಕ್ಷತೆಯನ್ನು ಹೊಟೇಲ್‌ವೊಂದರಲ್ಲಿ ಆಯೋಜಿಸಲಾಗಿತ್ತು. ಅದ್ಧೂರಿ ಡೆಕೊರೇಷನ್, ಮ್ಯೂಸಿಕ್, ಸ್ಟೈಲಿಶ್ ದಿರಿಸು ಧರಿಸಿ ಆಗಮಿಸಿದ ಸಂಬಂಧಿಕರಿಂದ ಆರತಕ್ಷತೆ (Reception) ಹಾಲ್ ತುಂಬಿತ್ತು. ಆದ್ರೆ ರಿಸೆಪ್ಶನ್‌ನಲ್ಲಿ ಕೊನೆಯ ಕ್ಷಣವರೆಗೂ ಮದುವೆ (Marriage)ಯಾದ ಕಪಲ್ ಹಾಜರಿರಲ್ಲಿಲ್ಲ. ಸಮಾರಂಭಕ್ಕೆ ಆಗಮಿಸಿದ ಮಂದಿ ಅದೆಷ್ಟು ಹೊತ್ತು ಕಾದು ನೋಡಿದರೂ ನವಜೋಡಿ ಬರಲ್ಲಿಲ್ಲ. ಕೊನೆಗೆ ನೂತನ ದಂಪತಿ ಹೊಟೇಲ್‌ನ ಲಿಫ್ಟ್‌ನಲ್ಲಿ ಸಿಲುಕಿ ಹಾಕಿಕೊಂಡಿದ್ದಾರೆ ಎಂಬ ವಿಚಾರ ಗೊತ್ತಾಯಿತು.
ಪಟಾಕಿ ಸದ್ದಿಗೆ ಬೆಚ್ಚಿಬಿದ್ದ ವರ, ಏನಪ್ಪಾ ನಿನ್ ಅವಸ್ಥೆ ಅಂತ ಬಿದ್ದೂ ಬಿದ್ದೂ ನಕ್ಕ ಮಂದಿ
ಸ್ಥಳಕ್ಕಾಗಮಿಸಿದ ಅಗ್ನಿಶಾಮಕದಳದಿಂದ ರಕ್ಷಣಾ ಕಾರ್ಯ
ಉತ್ತರ ಕೆರೊಲಿನಾದ ಚಾರ್ಲೊಟ್‌ನಲ್ಲಿರುವ ಗ್ರ್ಯಾಂಡ್ ಬೊಹೆಮಿಯನ್ ಹೋಟೆಲ್‌ನ 16 ನೇ ಮಹಡಿಯಲ್ಲಿ ಗ್ರ್ಯಾಂಡ್ ಯೂನಿಯನ್‌ನಲ್ಲಿ ಆರತಕ್ಷತೆ ಆಯೋಜಿಸಲಾಗಿತ್ತು. ಆದ್ರೆ ವಧು-ವರರಾದ ಪನಾವ್ ಮತ್ತು ವಿಕ್ಟೋರಿಯಾ ಝಾ ಲಿಫ್ಟ್‌ನಲ್ಲೇ ಸಿಲುಕಿ ಹಾಕಿಕೊಂಡರು. 'ನಾವು ರಿಸೆಪ್ಶನ್‌ನಲ್ಲಿ ಭಾಗವಹಿಸಲು ಹಾಲ್‌ನತ್ತ ಬರುತ್ತಿದ್ದೆವು. ಆದರೆ ಸಡನ್ ಆಗಿ ಲಿಫ್ಟ್ ಕೆಟ್ಟು ನಿಂತಿತು' ಎಂದು ಭಾರತೀಯ ಮೂಲದ ವರನಾಗಿರುವ ಪನವ್ ಝಾ ಹೇಳಿದರು. ನಂತರ ಅಗ್ನಿಶಾಮಕ ದಳದ ತಂಡ ಸ್ಥಳಕ್ಕಾಗಮಿಸಿ ವಧು-ವರರನ್ನು (Bride-groom) ಲಿಫ್ಟ್‌ನಿಂದ ಹೊರ ಕರೆತಂದರು.
ಆದರೆ ಈ ರಕ್ಷಣಾ ಕಾರ್ಯಾಚರಣೆ ಇತರ ಆಪರೇಷನ್‌ಗಳಂತೆ ಸುಲಭದ್ದಾಗಿರಲ್ಲಿಲ್ಲ. ಲಿಫ್ಟ್‌ನಲ್ಲಿ ವಧು ಮತ್ತು ವರನ ಜೊತೆಗೆ, ವಿಕ್ಟೋರಿಯಾಳ ಸಹೋದರಿ ಸೇರಿದಂತೆ ಇತರ ನಾಲ್ಕು ಅತಿಥಿಗಳು (Guest) ಸಿಕ್ಕಿಬಿದ್ದರು. ಹೀಗಾಗಿ ಎಲಿವೇಟರ್‌ನ ಮೇಲ್ಭಾಗವನ್ನು ತೆರೆದು ಒಬ್ಬೊಬ್ಬರನ್ನೇ ರಕ್ಷಿಸುವ ಕೆಲಸ ಮಾಡಲಾಯಿತು. ಷಾರ್ಲೆಟ್ ಅಗ್ನಿಶಾಮಕ ದಳ (Fire Department ) ರಕ್ಷಣಾ ಕಾರ್ಯಾಚರಣೆಯ ವಿವರವನ್ನು ಫೇಸ್‌ಬುಕ್ ಪುಟದಲ್ಲಿ ಪೋಸ್ಟ್ ಮಾಡಿದೆ. ನವವಿವಾಹಿತರೊಂದಿಗೆ ಕ್ಲಿಕ್ ಮಾಡಿದ ಫೋಟೋವನ್ನು ಸಹ ಇಲ್ಲಿ ಪೋಸ್ಟ್ ಮಾಡಲಾಗಿದೆ.
ಇದೆಂಥಾ ವಿಚಿತ್ರ... ಗಂಡನ ತಂಗಿಯನ್ನೇ ಮದ್ವೆಯಾದ 2 ಮಕ್ಕಳ ತಾಯಿ
ಈ ಪೋಸ್ಟ್‌ಗೆ ನೆಟ್ಟಿಗರು ನಾನಾ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ. ಕೆಲವೊಬ್ಬರು 'ಮದುವೆ ದಿನದಂದೇ ಲಿಫ್ಟ್‌ನಲ್ಲಿ ಸಿಲುಕಿಹಾಕಿಕೊಂಡಿದ್ದು ದುರದೃಷ್ಟಕರ' ಎಂದಿದ್ದಾರೆ. ಇನ್ನೊಬ್ಬರು 'ಲಿಫ್ಟ್‌ನಿಂದ ಹೊರಬಂದು ಬಚಾವ್ ಆದಿರಲ್ಲ' ಎಂದು ಸಂತರ ವ್ಯಕ್ತಪಡಿಸಿದ್ದಾರೆ. ಮತ್ತೊಬ್ಬ ಬಳಕೆದಾರರು ಅಗ್ನಿಶಾಮಕ ದಳದ ತಂಡದ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ.
ಫೋಟೋಗೆ ಪೋಸ್ ನೀಡಲು ಹೇಳಿದ್ದಕ್ಕೆ ವರಮಾಲೆ ಎಸೆದು ಹೊರನಡೆದ ವರ!
ಭಾರತೀಯ ವಿವಾಹಗಳಲ್ಲಿ ಎಷ್ಟು ಶಾಸ್ತ್ರಗಳು ನಡೆಯುತ್ತವೆಯೋ, ಅಷ್ಟೇ ಪ್ರಮಾಣದಲ್ಲಿ ಕ್ಯಾಮೆರಾಗೆ ಪೋಸ್ ನೀಡಬೇಕಾಗುತ್ತದೆ. ಮದುವೆಯ ಖುಷಿ ಕ್ಷಣವನ್ನು ಎಲ್ಲರೂ ಸೆರೆ ಹಿಡಿಯಬೇಕೆಂದು ಬಯಸುತ್ತಾರೆ. ಹೀಗಾಗಿ ವರ-ವಧು ಆಗಾಗ ಫೋಸ್ ನೀಡುತ್ತಲೇ ಇರಬೇಕಾಗುತ್ತದೆ. ಯಾವುದೇ ಕ್ಷಣ ಮಿಸ್ ಆದರೂ ಅದೇ ಫೋಸ್‌ನ್ನು ಮತ್ತೆ ಮತ್ತೆ ಮಾಡಿಸುತ್ತಾರೆ. ಈ ಮದುವೆ ಮನೆಯಲ್ಲೂ ಹಾಗೆಯೇ ಆಗಿದೆ. ವರ, ವಧುವಿಗೆ ಹಾರ ಹಾಕುವ ಫೋಸ್ ಸರಿಯಾಗಿ ಬಂದಿಲ್ಲ. ಹೀಗಾಗಿ ಫೋಟೋಗ್ರಾಫರ್ ಅದನ್ನೇ ಮತ್ತೆ ಮತ್ತೆ ಮಾಡುವಂತೆ ಹೇಳಿದ್ದಾನೆ. ಇದರಿಂದ ಸಿಟ್ಟಿಗೆದ್ದ ವರ, ವರಮಾಲೆಯನ್ನೇ ಎಸೆಯುವ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.