ಅಣ್ಣನಿಗೆ ಅಸ್ಥಿಮಜ್ಜೆ ದಾನ ಮಾಡಿದ ತಮ್ಮ, ಸಹೋದರರ ಮಾತುಕತೆ ವೈರಲ್!

By Suvarna News  |  First Published Feb 23, 2023, 3:19 PM IST

ಸಾಮಾಜಿಕ ಜಾಲತಾಣಗಳಲ್ಲಿ ದಿನವೂ ನೂರಾರು ವಿಷಯಗಳು ವೈರಲ್ ಆಗುತ್ತಿರುತ್ತವೆ. ಅಲ್ಲಲ್ಲಿ ಮಾನವೀಯ ಸಂಗತಿಗಳೂ ಗಮನ ಸೆಳೆಯುತ್ತವೆ. ಇದೀಗ, ಅಣ್ಣ-ತಮ್ಮನ ಮಾತುಕತೆಯೊಂದು ನೆಟ್ಟಿಗರ ಮನ ಗೆದ್ದಿದೆ. ತಮ್ಮನಿಂದ ಅಸ್ಥಿ ಮಜ್ಜೆ ಪಡೆದಿರುವ ಅಣ್ಣ, ಈ ಸಂದರ್ಭ ತಮ್ಮನ ಪ್ರಶ್ನೆ ಹಾಗೂ ಅಣ್ಣನ ಉತ್ತರ ಇವರ ಬಾಂಧವ್ಯವನ್ನು ತೋರುತ್ತದೆ. 
 


ಒಡಹುಟ್ಟಿದವರ ಪ್ರೀತಿ, ಕಾಳಜಿ ಅನುಭವಿಸಿದವರಿಗಷ್ಟೇ ಗೊತ್ತು. ಜೀವನದ ಕಷ್ಟಕರ ಸನ್ನಿವೇಶಗಳಲ್ಲಿ ಒಡಹುಟ್ಟಿದವರು ಬೆಂಬಲಕ್ಕೆ ನಿಂತು ಸಹೋದರ/ ಸಹೋದರಿಯನ್ನು ರಕ್ಷಿಸುತ್ತಾರೆ. ಅದೆಷ್ಟೇ ಭಿನ್ನಾಭಿಪ್ರಾಯಗಳಿದ್ದರೂ ಕ್ಲಿಷ್ಟಕರ ಸಂದರ್ಭಗಳಲ್ಲಿ ಜತೆಯಾಗುತ್ತಾರೆ. ಯಾವುದೇ ರೀತಿ ಆತ್ಮೀಯತೆ, ಬಾಂಧವ್ಯ ಇಲ್ಲದೆ ಬದುಕುವವರೂ ಇದ್ದಾರೆ, ಆದರೆ ಸಾಮಾನ್ಯವಾಗಿ ಒಡಹುಟ್ಟಿದವರು ತಮ್ಮವರನ್ನು ಬಿಟ್ಟುಕೊಡುವುದು ಕಡಿಮೆ. ಇನ್ನು ಬಾಲ್ಯಕಾಲದಲ್ಲಂತೂ ಒಡಹುಟ್ಟಿದವರ ಜತೆಗಿನ ಬಾಂಧವ್ಯ ಅದ್ಭುತ ಅನುಭೂತಿ ನೀಡುತ್ತದೆ. ಮುಗ್ಧವಾದ ಮನಸ್ಥಿತಿಯಲ್ಲಿ ಪರಸ್ಪರ ಕಿತ್ತಾಟ ನಡೆಸುವುದೂ ಹಿತವೆನಿಸುತ್ತದೆ. ಎಷ್ಟೋ ಮಕ್ಕಳನ್ನು ನೋಡಿ. ಮನೆಯಲ್ಲಿ ಕಿತ್ತಾಡಿಕೊಂಡರೂ ಹೊರಗೆ ಬಂದಾಗ ಒಬ್ಬರಿಗೊಬ್ಬರು ಜತೆಯಾಗಿರುತ್ತಾರೆ. ಜತೆಯಾಗಿ ಇತರರನ್ನು ಎದುರಿಸುತ್ತಾರೆ. ಇಂತಹ ಸಹೋದರ ಪ್ರೇಮ ಆರೋಗ್ಯದ ವಿಚಾರದಲ್ಲಿ ಮತ್ತೊಂದು ಮಜಲಿಗೂ ಹೋಗಿ ತಲುಪಬಹುದು. ಆರೋಗ್ಯ ಸಮಸ್ಯೆ ಇರುವಾಗ ಒಬ್ಬರನ್ನೊಬ್ಬರು ರಕ್ಷಿಸಲು ಮುಂದಾಗಬಹುದು. ಅಂಥದ್ದೇ ಒಂದು ಘಟನೆ ಇದೀಗ ಜರುಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಮೆಚ್ಚುಗೆಗೆ ಪಾತ್ರವಾಗಿದೆ. ಮುಗ್ಧವಾದ ಮನದಲ್ಲೂ ಒಡಹುಟ್ಟಿದವರ ಬಗ್ಗೆ ಅಪಾರ ಕಾಳಜಿ ಇರುತ್ತದೆ. ಹುಟ್ಟಿದಾಗಿನಿಂದ ಜತೆಯಾಗಿ ಬೆಳೆದವರು ಚೆನ್ನಾಗಿರಬೇಕೆಂದು ಮನಸ್ಸು ಆಶಿಸುತ್ತದೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋವೊಂದು ಅಪರೂಪದ ಸಹೋದರ ಪ್ರೇಮವನ್ನು ವ್ಯಕ್ತಪಡಿಸುತ್ತಿದೆ. 

ಸಾಮಾನ್ಯವಾಗಿ ಅಣ್ಣನಾದರೆ ತಮ್ಮ ಹಾಗೂ ತಂಗಿಯರನ್ನು ರಕ್ಷಣೆ ಮಾಡುವವನು ಎನ್ನುವಂತೆ ಬೆಳೆಸಲಾಗುತ್ತದೆ. ಅದು ಹೇಗೋ ಮಕ್ಕಳಲ್ಲೂ (Chidlren) ಈ ಗುಣ ಕಂಡುಬರುತ್ತದೆ. ಆದರೆ, ಇಲ್ಲಿ ಅಣ್ಣನನ್ನು ತಮ್ಮ ರಕ್ಷಿಸಿದ್ದಾನೆ. ಅದೂ ಸಹ ಮಾರಕ ಕ್ಯಾನ್ಸರ್ (Cancer)ನಿಂದ. ಕಿರಿಯ ಹುಡುಗ (Younger Boy) ತನ್ನ ಅಣ್ಣನಿಗೆ ಅಸ್ಥಿಮಜ್ಜೆಯನ್ನು (Bone Marrow) ನೀಡಿದ್ದಾನೆ. ಅವರಿಬ್ಬರೂ ಈಗ ಆಸ್ಪತ್ರೆಯಲ್ಲಿ (Hospital) ಚೇತರಿಸಿಕೊಳ್ಳುತ್ತಿದ್ದಾರೆ. ಜತೆಗೆ, ತಮ್ಮದೇ ಮುಗ್ಧತೆಯಲ್ಲಿ ಮಾತನಾಡುತ್ತಿದ್ದಾರೆ. ಈ ಸ್ಥಳ, ಪ್ರದೇಶ ಯಾವುದೇ ಮಾಹಿತಿ ಇದರೊಂದಿಗೆ ಇಲ್ಲ. ಆದರೆ, ಅವರ ಮಾತುಕತೆಯ (Conversation) ರೀತಿ ಎಲ್ಲರ ಗಮನ ಸೆಳೆದಿದೆ. 

ನೀನು ಸೂಪರ್ ಹೀರೋ (Super Hero)
ಸಣ್ಣ ಹುಡುಗ ತನ್ನ ಅಣ್ಣನಿಗೆ, “ನನಗೆ ಗುಂಡು ಹಾರಿಸಿದ್ದರಿಂದ ನಿನ್ನನ್ನು ರಕ್ಷಿಸದೆ (Save) ಇರುತ್ತೇನೆ ಎಂದರ್ಥವಲ್ಲ’ ಎಂದು ಹೇಳುತ್ತಾನೆ. ಅದಕ್ಕೆ ಪ್ರತಿಯಾಗಿ ಅಣ್ಣ, “ಹೌದು, ನೀನು ನಿನ್ನ ಅಸ್ಥಿ ಮಜ್ಜೆಯನ್ನು ನನಗೆ ನೀಡುತ್ತಿರುವೆ. ಏಕೆಂದರೆ, ನನ್ನ ಅಸ್ಥಿ ಮಜ್ಜೆ ಹದಗೆಟ್ಟಿದೆ. ಅದಕ್ಕೆ ಕ್ಯಾನ್ಸರ್ ಬಂದಿದೆ. ರೈಟ್? ನಿನ್ನ ಅಸ್ಥಿಮಜ್ಜೆ ಚೆನ್ನಾಗಿದೆ. ನೀನು ನನ್ನನ್ನು ರಕ್ಷಿಸಿದೆ. ನಿನ್ನ ಎಲ್ಲ ಅಸ್ಥಿ ಮಜ್ಜೆಯ ಅಗತ್ಯ ಇಲ್ಲ, ಸಣ್ಣದೊಂದು ಭಾಗ ಮಾತ್ರ ಇದಕ್ಕೆ ಸಾಕು. ಇದರಿಂದ ನೀನೇನಾದೆ ಗೊತ್ತೇ? ನೀನು ನಿಜವಾದ ಬದುಕಿನಲ್ಲಿ ಸೂಪರ್ ಹೀರೋ ಆಗಿದ್ದೀಯ’ ಎಂದು ಹೇಳುತ್ತಾನೆ.

Latest Videos

undefined

ಬಡತನದಿಂದ ಎಲ್ಲರಿಗೂ ಒಂದೇ ಬುಕ್, ಒಡಹುಟ್ಟಿದವರು ಏಕಕಾಲಕ್ಕೆ ಸಿವಿಲ್ ಸರ್ವೀಸ್ ಎಕ್ಸಾಂ ಪಾಸ್!

ಮರೆಯಲಾಗದ ಸಂಭಾಷಣೆ
ಅಣ್ಣತಮ್ಮಂದಿರ ಈ ಸಂಭಾಷಣೆಯನ್ನು ಇನ್ ಸ್ಟಾಗ್ರಾಮ್ ಪೇಜ್ ನಲ್ಲಿ ಅಪ್ ಲೋಡ್ ಮಾಡಲಾಗಿದೆ. ಪ್ರಿಸ್ಟನ್ (Priston) ಎನ್ನುವ ಹುಡುಗನಿಗೆ ಫೆಬ್ರವರಿ 14ರಂದು ವ್ಯಾಲಂಟೈನ್ಸ್ ಡೇ ದಿನದಂದು ಅಸ್ಥಿ ಮಜ್ಜೆ ಕಸಿ ಮಾಡಲಾಗಿದೆ. ಇದನ್ನು ನೀಡಿದ್ದು ಆತನ ತಮ್ಮ. ಆತ ಇನ್ನೂ ಬಾಲಕ. ಅಣ್ಣನಿಗೆ (Brother) ಅಸ್ಥಿ ಮಜ್ಜೆ ನೀಡಿರುವುದಕ್ಕೆ, ಅಣ್ಣನನ್ನು ರಕ್ಷಿಸಿರುವುದಕ್ಕೆ ಆತನಲ್ಲಿ ಹೆಮ್ಮೆ ಇದೆ. ಹೀಗಾಗಿ, ಆತ ಕೇಳುವ ಪ್ರಶ್ನೆ (Question) ಮುಖದ ಮೇಲೆ ನಗು ಮೂಡಿಸುವಲ್ಲಿ ಯಶಸ್ವಿಯಾಗುತ್ತದೆ. ಅಲ್ಲದೆ, ಅವನ ಪ್ರಶ್ನೆಗೆ ಅಣ್ಣ ಸರಿಯಾಗಿ ತಿಳಿವಳಿಕೆ ನೀಡಿರುವ ವಿಧಾನ ಸಹ ಈ ಮಕ್ಕಳ ಬಗ್ಗೆ ಮೆಚ್ಚುಗೆ ಮೂಡಿಸುವಂತೆ ಮಾಡುತ್ತದೆ. 

ಮಂಜಿನಲ್ಲಿ ಮಕ್ಕಳಂತೆ ಆಡಿದ ರಾಹುಲ್ , ಪ್ರಿಯಾಂಕಾ: ವಿಡಿಯೋ ಸಖತ್ ವೈರಲ್

ಇದಕ್ಕೆ ಒಬ್ಬರು ಮಾಡಿರುವ ಕಮೆಂಟ್ (Comment) ಹೀಗಿದೆ, “ಇದು ಹೃದಯ ವಿದ್ರಾವಕ ಸನ್ನಿವೇಶ. ಪ್ರಿಸ್ಟನ್ ನಲ್ಲಿ ಎಷ್ಟು ಪ್ರಬುದ್ಧತೆ ಇದೆ, ಆತ ಸಾಕಷ್ಟು ಅನುಭವಿಸಿದ್ದಾನೆ’ ಎಂದು ಹೇಳಿದ್ದಾರೆ. 
“ಈ ಮಕ್ಕಳಿಗೆ ದೇವರು ದೀರ್ಘಾಯುಷ್ಯ (Long Life) ನೀಡಲಿ. ಇದು ಸುಂದರವಾಗಿದೆ’ ಎಂದೊಬ್ಬರು ಹೇಳಿದ್ದರೆ, ಮತ್ತೊಬ್ಬರು, “ಈ ಸಂಭಾಷಣೆಯನ್ನು ಅವರು ಎಂದಿಗೂ ಮರೆಯುವುದಿಲ್ಲ’ ಎಂದಿದ್ದಾರೆ.

 

click me!