ಜೈಲಿನಲ್ಲಿರುವ ಅಪರಾಧಿಗಳಿಗೂ ಅನೇಕ ಅಧಿಕಾರ ಮತ್ತು ಹಕ್ಕುಗಳಿರುತ್ತವೆ. ಅದ್ರಲ್ಲಿ ಸಂಗಾತಿ ಜೊತೆ ಸಮಯ ಕಳೆಯುವುದೊಂದು. ಕೋರ್ಟ್ ಆದೇಶದ ನಂತ್ರ ಕೈದಿಗೆ ಸಂಗಾತಿ ಜೊತೆ ಒಂದಾಗಲು ವ್ಯವಸ್ಥೆ ಮಾಡಲಾಗುತ್ತದೆ.
ಜೈಲಿನಲ್ಲಿ ಸಂಗಾತಿ ಜೊತೆ ಸೆಕ್ಸ್ ಗೆ ಅವಕಾಶ..ಹೆಡ್ ಲೈನ್ ನೋಡಿ ಶಾಕ್ ಆಗಿರ್ತೀರಾ ಅಲ್ವಾ? ಅನೇಕರಿಗೆ ಜೈಲಿನಲ್ಲಿ ಕೈದಿಗಳಿಗೆ ಸಿಗೋ ಸೌಲಭ್ಯಗಳ ಬಗ್ಗೆ ಸರಿಯಾದ ಮಾಹಿತಿ ಇಲ್ಲ. ಜೈಲಿನಲ್ಲಿ ಕೈದಿಗಳ ಅವಶ್ಯಕತೆ ಹಾಗೂ ಅಧಿಕಾರಕ್ಕೆ ಮಹತ್ವ ನೀಡಲಾಗುತ್ತೆ. ಜೈಲಿನಲ್ಲಿರುವ ಕೈದಿ ತನ್ನ ಸಂಗಾತಿ ಜೊತೆ ವಿಶೇಷ ಸಮಯ ಕಳೆಯಬಹುದು. ಶಾರೀರಿಕ ಸಂಬಂದ ಕೂಡ ಬೆಳೆಸಬಹುದು. ಅದಕ್ಕೆ ವಿಶೇಷ ರೂಮ್ ವ್ಯವಸ್ಥೆ ಕೂಡ ಇರುತ್ತೆ. ವಿದೇಶದಲ್ಲಿ ಮಾತ್ರವಲ್ಲ ಭಾರತದ ಜೈಲಿನಲ್ಲೂ ಇದಕ್ಕೆ ಪ್ರತ್ಯೇಕ ವ್ಯವಸ್ಥೆ ಇದೆ. ರೂಮಿನಲ್ಲಿ ಅನೇಕ ಸೌಲಭ್ಯ ಕೂಡ ಇರುತ್ತೆ. ಅದ್ರ ಫುಲ್ ಡಿಟೇಲ್ ಇಲ್ಲಿದೆ.
ಸಂಗಾತಿಗಾಗಿ ಪ್ರತ್ಯೇಕ ಸಮಯ – ಏನಿದೆ ಕಾನೂನು (Law)? : ದೆಹಲಿ ವಕೀಲರ ಪ್ರಕಾರ, ಕೈದಿ (Prisoner) ಗಳಿಗೆ ವೈವಾಹಿಕ ಭೇಟಿಗೆ ಅವಕಾಶ ನೀಡುವಂತಹ ಯಾವುದೇ ವಿಶೇಷ ಕಾನೂನಿಲ್ಲ. ಆದ್ರೆ ಕೈದಿಗಳಿಗೆ ವಿಶೇಷ ಅಧಿಕಾರದ ಮೇಲೆ ಈ ಅವಕಾಶ ನೀಡಲಾಗುತ್ತದೆ. ಇಲ್ಲಿ ಖೈದಿಯೊಬ್ಬ ತನ್ನ ಸಂಗಾತಿಯೊಂದಿಗೆ ಕೆಲ ಸಮಯ ಕಳೆಯಲು ಅವಕಾಶ ನೀಡಲಾಗುತ್ತದೆ. ಆ ಸಮಯದಲ್ಲಿ ಆತ ಶಾರೀರಕ (Physical) ಸಂಬಂಧ ಕೂಡ ಬೆಳೆಸಬಹುದು. ಭಾರತದಲ್ಲೂ ಕೋರ್ಟ್ ಕೆಲವರಿಗೆ ಈ ಅವಕಾಶವನ್ನು ನೀಡಿದೆ. ಹಾಗಂತ ಈ ಅವಕಾಶವನ್ನು ಎಲ್ಲರೂ ನಮ್ಮ ಹಕ್ಕು ಅಂತ ಬಳಸಿಕೊಳ್ಳಲು ಸಾಧ್ಯವಿಲ್ಲ. ಕೆಲ ದೇಶದಲ್ಲಿ ಇದಕ್ಕೆ ಕಾನೂನಿದೆ. ಕೆನಡಾ, ಜರ್ಮನಿ, ರಷ್ಯಾ, ಬೆಲ್ಜಿಯಂ, ಸ್ಪೇನ್, ಸೌದಿ ಅರಬ್, ಡೆನ್ಮಾರ್ಕ್, ಅಮೆರಿಕಾದಲ್ಲಿ ಕೈದಿಗಳು ಸಂಗಾತಿ ಜೊತೆ ಒಂದಾಗಬಹುದು.
undefined
ಎದೆಹಾಲಿಗಾಗಿ ಹಠ ಮಾಡಿದ್ದಕ್ಕೆ ನಾಲ್ಕು ದಿನದ ಶಿಶುವನ್ನು ಸಾಯಿಸಲು ಹೋಗಿದ್ದೆ! ನಟಿಯ ಶಾಕಿಂಗ್ ಹೇಳಿಕೆ
ಭಾರತ ಕೋರ್ಟ್ ಏನು ಆದೇಶ ನೀಡಿದೆ? : 2015ರಲ್ಲಿ ಹರ್ಯಾಣ – ಪಂಜಾಬ್ ಹೈಕೋರ್ಟ್, ಕೈದಿಗಳು ಪ್ರೇಮಿಗಳ ಜೊತೆ ಪ್ರತ್ಯೇಕ ಸಮಯ ಕಳೆಯಲು ಹಾಗೂ ಗರ್ಭಧರಿಸಲು ವಿಶೇಷ ಅವಕಾಶ ನೀಡಿದೆ. , ಜೈಲಿನಲ್ಲಿದ್ದಾಗ ಗರ್ಭಿಣಿಯಾಗುವ ಹಕ್ಕು ಖೈದಿಗಳಿಗೆ ಇದೆ ಮತ್ತು ಅದು ಮೂಲಭೂತ ಹಕ್ಕು ಎಂದು ನ್ಯಾಯಾಲಯ ಹೇಳಿತ್ತು. ಮದ್ರಾಸ್ ಹೈಕೋರ್ಟ್ ಕೂಡ ಕೈದಿಗೆ ಈ ವಿಶೇಷ ಅಧಿಕಾರವನ್ನು ನೀಡಿತ್ತು. ಆತ ಜೀವಾವದಿ ಶಿಕ್ಷೆಗೆ ಗುರಿಯಾಗಿದ್ದ. ಆದ್ರೆ ಜೈಲಿನ ಕೈಪಿಡಿಯಲ್ಲಿ ಅಂತಹ ಯಾವುದೇ ಅವಕಾಶವಿಲ್ಲದ ಕಾರಣ, ಜೈಲು ಅಧಿಕಾರಿಗಳು ಇದಕ್ಕೆ ವಿರುದ್ಧವಾಗಿ ವಾದಿಸಿದ್ದರು. ಆರ್ಟಿಕಲ್ 21 ರ ಆಧಾರದ ಮೇಲೆ ಪತ್ನಿಯ ಅರ್ಜಿಯ ಮೇಲೆ ಅನುಮತಿ ನೀಡಲಾಗಿತ್ತು.
ಸಂಗಾತಿ ಜೊತೆ ಸಂಬಂಧ ಬೆಳೆಸಲು ಕೈದಿಗೆ ಹೇಗೆ ಸಿಗುತ್ತೆ ಅನುಮತಿ : ಜೈಲಿನ ಅಧಿಕಾರಿಗಳು ಈ ಬಗ್ಗೆ ಯಾವುದೇ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಿಲ್ಲ. ಕೋರ್ಟ್ ಈ ಬಗ್ಗೆ ತೀರ್ಪು ನೀಡಬೇಕಾಗುತ್ತದೆ. ಕೋರ್ಟ್, ಸಮಯ ಹಾಗೂ ಜಾಗವನ್ನು ನಿಗದಿಪಡಿಸುತ್ತದೆ.
ತಾವೇ ಮುಂದೆ ನಿಂತು ಗಂಡನಿಗೆ ಮೂರನೇ ಮದ್ವೆ ಮಾಡಿದ ಮೊದಲಿಬ್ಬರು ಪತ್ನಿಯರು
ಹೇಗಿರುತ್ತೆ ಜೈಲಿನಲ್ಲಿರುವ ಈ ವಿಶೇಷ ರೂಮ್ ? : ಕೈದಿಗಳು ಸಂಗಾತಿ ಜೊತೆ ಪ್ರತ್ಯೇಕವಾಗಿ ಮಾತನಾಡಲು ಅಥವಾ ಸಂಬಂಧ ಬೆಳೆಸಲು ಜೈಲಿನಲ್ಲಿ ವಿಶೇಷ ರೂಮ್ ವ್ಯವಸ್ಥೆ ಮಾಡಲಾಗುತ್ತದೆ. ಎಲ್ಲ ಜೈಲಿನಲ್ಲಿ ಇಂಥ ವ್ಯವಸ್ಥೆ ಇರೋದಿಲ್ಲ. ಪಂಜಾಬಿನ ಕೆಲ ಜೈಲಿನಲ್ಲಿ ಪ್ರೈವೇಟ್ ಟೈಂಗಾಗಿ ರೂಮ್ ಇದೆ. ಈ ರೂಮಿನಲ್ಲಿ ಡಬಲ್ ಬೆಡ್ ಇದೆ. ಹಾಗೆಯೇ ವಾಶ್ ರೂಮ್ ವ್ಯವಸ್ಥೆ ಮಾಡಲಾಗಿದೆ. ಇದಲ್ಲದೆ ಒಂದು ಟೇಬಲ್, ಎರಡು ಕುರ್ಚಿ, ಮೇಜು ಹಾಗೂ ನೀರಿನ ವ್ಯವಸ್ಥೆ ಇದೆ. ಕೋರ್ಟ್ ಒಪ್ಪಿಗೆ ನಂತ್ರ ಪತಿ – ಪತ್ನಿಯನ್ನು ರೂಮ್ ಒಳಗೆ ಬಿಡಲಾಗುತ್ತದೆ. ಹೊರಗಿನಿಂದ ಬೀಗ ಹಾಕಲಾಗುತ್ತದೆ. ಪತಿ – ಪತ್ನಿ ಎರಡು ಗಂಟೆ ಒಟ್ಟಿಗೆ ಸಮಯ ಕಳೆಯುವ ಅವಕಾಶ ಸಿಗುತ್ತದೆ.