ಸೊಸೆ ಶ್ಲೋಕಾ ಇದ್ದಾಗಲೇ ಮಗಳಿಗೆ ನೀತಾ ಅಂಬಾನಿ ಆದ್ಯತೆ, ಎಲ್ಲ ಅತ್ತೆಯಂದಿರೂ ಒಂದೇ ಎಂದ ನೆಟ್ಟಿಗರು!

By Roopa Hegde  |  First Published Jul 3, 2024, 12:54 PM IST

ನೀತಾ ಅಂಬಾನಿ ಮೊದಲ ಸೊಸೆ ಶ್ಲೋಕಾ ಮೆಹ್ತಾ. ಈಗ ಎರಡನೇ ಮಗನ ಮದುವೆ ತಯಾರಿಯಲ್ಲಿ ಬ್ಯುಸಿ ಆಗಿರುವ ನೀತಾ, ಸೊಸೆ ಶ್ಲೋಕಾರನ್ನು ಇಗ್ನೋರ್ ಮಾಡ್ತಿದ್ದಾರಾ? ವಿಡಿಯೋ ನೋಡಿ ಅನುಮಾನ ವ್ಯಕ್ತಪಡಿಸಿದ ನೆಟ್ಟಿಗರು. 
 


ಮುಖೇಶ್ ಅಂಬಾನಿ ಕುಟುಂಬ (Mukesh Ambani Family) ಸದ್ಯ ಕೊನೆ ಮಗನ ಮದುವೆ ತಯಾರಿಯಲ್ಲಿ ಬ್ಯುಸಿಯಾಗಿದೆ. ಅನಂತ್ ಅಂಬಾನಿ ಮದುವೆಗೂ ಮುನ್ನ ಅಂಬಾನಿ ಫ್ಯಾಮಿಲಿ, ಬಡವರಿಗಾಗಿ ಸಾಮೂಹಿಕ ವಿವಾಹ ಸಮಾರಂಭವನ್ನು ಏರ್ಪಡಿಸಿತ್ತು. ಈ ಕಾರ್ಯಕ್ರಮದಲ್ಲಿ ಮುಖೇಶ್ ಅಂಬಾನಿ, ನೀತಾ ಅಂಬಾನಿ, ಮಗ ಆಕಾಶ್ ಅಂಬಾನಿ, ಸೊಸೆ ಶ್ಲೋಕ ಮೆಹ್ತಾ, ಮಗಳು ಇಶಾ ಅಂಬಾನಿ ಹಾಗೂ ಅಳಿಯ ಆನಂದ್ ಪಿರಮಲ್ ಪಾಲ್ಗೊಂಡಿದ್ದರು. ಈ ವೇಳೆ ನೀತಾ ಅಂಬಾನಿ ಮಗಳು ಇಶಾ ಅಂಬಾನಿ ಮೇಲೆ ತೋರಿಸಿದ ಪ್ರೀತಿ ವೈರಲ್ ಆಗಿದೆ. ಅಮ್ಮ, ಮಗಳು ಇಶಾ ಅಂಬಾನಿ ತಲೆ ಸವರಿ, ಹರಡಿದ್ದ ಕೂದಲನ್ನು ಸರಿ ಮಾಡ್ತಿದ್ರೆ ಪಕ್ಕದಲ್ಲಿ ಶ್ಲೋಕಾ ಸುಮ್ಮನೆ ನಿಂತಿತ್ರು. ಈ ವಿಡಿಯೋ ನೋಡಿದ ಅಭಿಮಾನಿಗಳಿಗೆ ನೀತಾ ವರ್ತನೆ ಯಾಕೋ ಸರಿ ಬಂದಂತೆ ಕಾಣ್ತಿಲ್ಲ.

ಇನ್ಸ್ಟಾಗ್ರಾಮ್ (Instagram) ನಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. Voompla ಇನ್ಸ್ಟಾ ಖಾತೆಯಲ್ಲಿ ಹಂಚಿಕೊಂಡ ವಿಡಿಯೋದಲ್ಲಿ ಫೈನಲ್ ಟಚ್ (Final Touch) ನೀಡಿದ ಅಮ್ಮ ಎಂದು ಶೀರ್ಷಿಕೆ ಹಾಕಲಾಗಿದೆ. ಸಾಮೂಹಿಕ ವಿವಾಹ ಸಮಾರಂಭದಲ್ಲಿ ಅಂಬಾನಿ (Ambani) ಕುಟುಂಬ ಅಂತ ಬರೆಯಲಾಗಿದೆ. ಈ ವಿಡಿಯೋದ ಆರಂಭದಲ್ಲಿ ನೀತಾ ಅಂಬಾನಿ, ಇಶಾ, ಶ್ಲೋಕಾ ಮತ್ತು ಆಕಾಶ್ ಮಾತನಾಡ್ತಾ ನಿಂತಿದ್ದ ಜಾಗಕ್ಕೆ ಬರ್ತಾರೆ. ಮಾತನಾಡ್ತಾ ಅಲ್ಲಿಗೆ ಬರುವ ಅವರು ಇಶಾ ಕೂದಲನ್ನು ಸರಿ ಮಾಡಿ, ಅಪ್ಪ ಮುಕೇಶ್ ಅಂಬಾನಿ ಬಳಿ ಕಳುಹಿಸ್ತಾರೆ. ಇಶಾ ಜೊತೆ ಪತಿ ಆನಂದ್ ಹೋಗೋದನ್ನು ನೀವು ನೋಡ್ಬಹುದು. ಆದ್ರೆ ಒಮ್ಮೆಯೂ ನೀತಾ, ಅಲ್ಲೇ ಇದ್ದ ಸೊಸೆಯನ್ನು ತಿರುಗಿ ನೋಡೋದಿಲ್ಲ. ನಂತ್ರ ಮಗನ ಬಳಿ ಬಂದು ನಿಲ್ಲುವ ನೀತಾ, ಅವರ ಬಳಿ ಮಾತನಾಡೋದನ್ನು ನೀವು ನೋಡ್ಬಹುದು. ಇದನ್ನು ನೋಡಿದ ಬಳಕೆದಾರರು, ನೀತಾ, ಸೊಸೆ ಶ್ಲೋಕಾರನ್ನು ಇಗ್ನೋರ್ ಮಾಡ್ತಿದ್ದಾರೆಂದು ವಾದ ಮುಂದಿಟ್ಟಿದ್ದಾರೆ.

Tap to resize

Latest Videos

ಸೀರಿಯಲ್‌ನ ಈ ಜೋಡಿ ನೋಡಿದ್ರೆ , ಆದ್ರೆ ಇವ್ರ ಥರ ಅರೇಂಜ್ ಮ್ಯಾರೇಜ್ ಆಗ್ಬೇಕು, ಲವ್ವು ಗಿವ್ವು ಬೇಡ ಅಂತೀರಿ!

ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್ ಆಗ್ತಿದ್ದಂತೆ ಒಬ್ಬೊಬ್ಬರು ಒಂದೊಂದು ಕಮೆಂಟ್ ಹಾಕಲು ಶುರು ಮಾಡಿದ್ದಾರೆ. ವಿಡಿಯೋಕ್ಕೆ 72 ಸಾವಿರಕ್ಕಿಂತಲೂ ಹೆಚ್ಚು ಲೈಕ್ಸ್ ಬಂದಿದೆ. ನೀತಾ ಅಂಬಾನಿ, ಸೀರಿಯಲ್ ನಲ್ಲಿ ಬರುವ ಅತ್ತೆಯಂತೆ ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ. ಸೊಸೆ ಕಡೆ ತಿರುಗಿಯೂ ನೋಡಿಲ್ಲ, ಆದ್ರೆ ಮಗಳ ಮೇಲೆ ಇಷ್ಟೊಂದು ಪ್ರೀತಿ ಎಂದು ಮತ್ತೊಬ್ಬರು ಕಮೆಂಟ್ ಹಾಕಿದ್ದಾರೆ. ಅತ್ತೆ – ಸೊಸೆ ಮಧ್ಯೆ ಏನೋ ಸರಿ ಇಲ್ಲ.. ನೀತಾ ಮುಖದಲ್ಲೇ ಅದನ್ನು ಮುಚ್ಚಿಡ್ತಿದ್ದಾರೆ ಅಂತಾ ಇನ್ನೊಬ್ಬ ಬಳಕೆದಾರರು ಅನುಮಾನ ವ್ಯಕ್ತಪಡಿಸಿದ್ದಾರೆ. ಇಲ್ಲೂ ಅತ್ತೆ ಸೊಸೆ ಜಗಳವಾ ಅಂತಾ ಕಾಲೆಳೆದ ಬಳಕೆದಾರರ ಸಂಖ್ಯೆ ಕೂಡ ಸಾಕಷ್ಟಿದೆ. 

ಬಡವರಾಗಿರ್ಲಿ, ಶ್ರೀಮಂತರಾಗಿರ್ಲಿ ಮಗಳಿಗೆ ಸಿಕ್ಕ ಪ್ರೀತಿ ಸೊಸೆಗೆ ಸಿಗೋಕೆ ಸಾಧ್ಯವೇ ಇಲ್ಲ ಎಂದ ಬಳಕೆದಾರರು, ಸೊಸೆ ಮಗಳಾಗಲು ಸಾಧ್ಯವೇ ಇಲ್ಲ. ಅತ್ತೆ ಯಾವಾಗ್ಲೂ ಅತ್ತೆಯೇ ಎಂದಿದ್ದಾರೆ. ಮತ್ತೆ ಕೆಲ ಬಳಕೆದಾರರು ನೀತಾ ಪರ ಬ್ಯಾಟ್ ಬೀಸಿದ್ದಾರೆ. ಸೊಸೆ ಕಡೆ ತಿರುಗಿ ನೋಡಿಲ್ಲ ಅಂದ್ರೆ ಪ್ರೀತಿ ಇಲ್ಲ ಎಂದಲ್ಲ. ಎಲ್ಲವನ್ನೂ ನೆಗೆಟಿವ್ ಆಗಿ ನೋಡ್ಬೇಡಿ ಎಂದು ಸಲಹೆ ನೀಡಿದವರೂ ಇಲ್ಲಿದ್ದಾರೆ.

ದೆಹಲಿ ಪ್ರವಾಹ; ಮೆಟ್ರೋ ಸವಾರಿಯಲ್ಲಿ ಕಚೇರಿಗೆ ತೆರಳಿದ ಶಾರ್ಕ್ ಟ್ಯಾಂಕ್‌‌ನ ರಾಧಿಕಾ ಗುಪ್ತಾಗೆ ಮೆಚ್ಚುಗೆ

ಈ ವಿಡಿಯೋ ನೋಡಿದ ಕೆಲ ಬಳಕೆದಾರರು ಮುಖೇಶ್ ಅಂಬಾನಿಗೆ ಸೆಲ್ಯೂಟ್ ಮಾಡಿದ್ದಾರೆ. ಸಾಮಾನ್ಯರಂತೆ ಇರುವ ಮುಖೇಶ್ ಅಂಬಾನಿ, ಮಾತಿಗಿಂತ ಪೂಜೆಗೆ ಮಹತ್ವ ನೀಡಿದ್ರು. ಮಾತು ನಿಲ್ಲಿಸಿ ಕೈ ಮುಗಿಯುವಂತೆ ನೀತಾ ಅಂಬಾನಿಗೆ ಸಲಹೆ ನೀಡ್ತಿದ್ದರು. ಆದ್ರೆ ನೀತಾ ಮಾತಿನಲ್ಲಿ ಮುಳುಗಿ ಹೋಗಿದ್ರು ಅಂತಾ ಕೆಲವರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.  

 
 
 
 
 
 
 
 
 
 
 
 
 
 
 

A post shared by Voompla (@voompla)

click me!