ತಾವೇ ಮುಂದೆ ನಿಂತು ಗಂಡನಿಗೆ ಮೂರನೇ ಮದ್ವೆ ಮಾಡಿದ ಮೊದಲಿಬ್ಬರು ಪತ್ನಿಯರು

Published : Jul 03, 2024, 04:12 PM IST
ತಾವೇ ಮುಂದೆ ನಿಂತು ಗಂಡನಿಗೆ ಮೂರನೇ ಮದ್ವೆ ಮಾಡಿದ ಮೊದಲಿಬ್ಬರು ಪತ್ನಿಯರು

ಸಾರಾಂಶ

ಇಲ್ಲೊಂದು ಕಡೆ ವ್ಯಕ್ತಿಯೊಬ್ಬನ ಮೊದಲ ಪತ್ನಿಯರಿಬ್ಬರು ಸೇರಿ ಗಂಡನಿಗೆ ಮೂರನೇ ಮದ್ವೆ ಮಾಡಿದ್ದಾರೆ. ಆಂಧ್ರ ಪ್ರದೇಶದ ಅಲ್ಲೂರಿ ಜಿಲ್ಲೆಯ ಪೆದ್ದಬಯಾಲು ಮಂಡಲದಲ್ಲಿ ಈ ವಿಶೇಷ ಘಟನೆ ನಡೆದಿದೆ. 

ವಿಶಾಖಪಟ್ಟಣ: ಗಂಡ 2ನೇ ಮದ್ವೆಯಾದ, ತಾನಿದ್ದರೂ ಮತ್ತೊಬ್ಬಳೊಂದಿಗೆ ಅಕ್ರಮ ಸಂಬಂಧ ಇರಿಸಿಕೊಂಡ ಎಂದೆಲ್ಲಾ ಹೆಂಡಿರು ಜಗಳವಾಡಿ ಬೀದಿ ರಂಪಾಟ ಮಾಡುವುದನ್ನು ನೀವು ಕೇಳಿರಬಹುದು ನೋಡಿರಬಹುದು. ಆದರೆ ಇಲ್ಲೊಂದು ಕಡೆ ವ್ಯಕ್ತಿಯೊಬ್ಬನ ಮೊದಲ ಪತ್ನಿಯರಿಬ್ಬರು ಸೇರಿ ಗಂಡನಿಗೆ ಮೂರನೇ ಮದ್ವೆ ಮಾಡಿದ್ದಾರೆ. ಆಂಧ್ರ ಪ್ರದೇಶದ ಅಲ್ಲೂರಿ ಜಿಲ್ಲೆಯ ಪೆದ್ದಬಯಾಲು ಮಂಡಲದಲ್ಲಿ ಈ ವಿಶೇಷ ಘಟನೆ ನಡೆದಿದೆ. 

ಈಗಾಗಲೇ ಎರಡು ಮದ್ವೆಯಾಗಿದ್ದ ಪಂಡಣ್ಣ ಎಂಬಾತನಿಗೆ ಆತನ ಮೊದಲ ಪತ್ನಿ ಪಾರ್ವತಮ್ಮ ಹಾಗೂ 2ನೇ ಪತ್ನಿ ಅಪ್ಪಾಲಮ್ಮ ಸೇರಿ ಮೂರನೇ ಮದ್ವೆ ಮಾಡಿದ್ದಾರೆ. ಪಂಡಣ್ಣ ಮೊದಲ ಬಾರಿಗೆ ಪಾರ್ವತಮ್ಮ ಅವರನ್ನು ಮದುವೆಯಾಗಿದ್ದರು. ಅದರೆ ಇವರಿಗೆ ಮಕ್ಕಳಿರಲಿಲ್ಲ, ಈ ಹಿನ್ನೆಲೆಯಲ್ಲಿ ಪಂಡಣ್ಣ 2002ರಲ್ಲಿ ಅಪ್ಪಾಲಮ್ಮ ಎಂಬ ಮಹಿಳೆಯನ್ನು ಮದುವೆಯಾದರು.  ಇವರಿಗೆ 2007ರಲ್ಲಿ ಮಗನೋರ್ವ ಜನಿಸಿದ್ದಾನೆ. ಆದರೆ ತನ್ನ ಕುಟುಂಬ ಇನ್ನು ದೊಡ್ಡದಾಗಿರಬೇಕು ಎಂಬ ಆಸೆಯನ್ನು ಪಂಡಣ್ಣ ವ್ಯಕ್ತಪಡಿಸಿದ್ದು, ಈತನ ಆಸೆಗೆ ಮೊದಲ ಹಾಗೂ 2ನೇ ಪತ್ನಿಯರು ನೀರೆರೆದಿದ್ದಾರೆ. ಅಲ್ಲದೇ ಮೂರನೇ ಬಾರಿ ಮದ್ವೆಯಾಗುವಂತೆ ಆತನಿಗೆ ಬೆಂಬಲ ತುಂಬಿದ್ದಾರೆ. ಹಾಗೆಯೇ ಮೂರನೇ ಬಾರಿಗೆ ಮದುವೆಯಾಗಲು ಲಾವಣ್ಯ ಎಂಬ ಹುಡುಗಿಯನ್ನು ನೋಡಿ ವಿವಾಹ ನಿಗದಿ ಮಾಡಿದ್ದಾರೆ.

ವೈದ್ಯೆಯಾಗಿಯೇ ಯುಪಿಎಸ್‌ಸಿ ಪಾಸ್! IAS ಅಧಿಕಾರಿಯನ್ನೇ 2ನೇ ಮದ್ವೆಯಾದ ರೇಣು!

ಅದರಂತೆ ಮೊದಲಿಬ್ಬರು ಪತ್ನಿಯರು ಸೇರಿ ಮದ್ವೆ ಕಾಗದವನ್ನು ಮಾಡಿ ತಮ್ಮ ಪತಿಯ ಮೂರನೇ ಮದುವೆಗೆ ಊರವರನ್ನೆಲ್ಲಾ ಅಮಂತ್ರಿಸಿದ್ದಾರೆ. ಜೂನ್ 25 ರಂದು ಈ ಅಪರೂಪದ ಮದ್ವೆ ನಡೆದಿದ್ದು, ಲಾವಣ್ಯ ಜೊತೆ ಪಂಡಣ್ಣ ಮೂರನೇ ಬಾರಿ ಹಸೆಮಣೆ ಏರಿದ್ದಾರೆ. ಗಂಡನ ಮೂರನೇ ಮದುವೆಯಲ್ಲಿ ಮೊದಲ ಪತ್ನಿ ಪಾರ್ವತಮ್ಮ 2ನೇ ಪತ್ನಿ ಅಪ್ಪಾಲಮ್ಮ ಖುಷಿ ಖುಷಿಯಿಂದಲೇ ಓಡಾಡಿದ್ದಾರೆ. ಬರೀ ಇಷ್ಟೇ ಅಲ್ಲ ವಿವಾಹದ ಆಮಂತ್ರನ ಪತ್ರಿಕೆಯಲ್ಲಿ ವಧು ವರರ ಫೋಟೋದ ಜೊತೆ ಕೆಳಗೆ ತಮ್ಮ ಆಗಮನಾಭಿಲಾಶಿಗಳು ಎಂದು ತಮ್ಮ ಫೋಟೋಗಳನ್ನು ಹಾಕಿಸಿಕೊಂಡಿದ್ದಾರೆ. 

2ನೇ ಮದ್ವೆಯಾಗಿದ್ಕೆ ಸತ್ತ ಮೇಲೂ ಸವತಿ ಕಾಡಿದ ಮೊದಲ ಹೆಂಡ್ತಿ: ‘ಆತ್ಮ’ದ ಕಿರುಕುಳಕ್ಕೆ ಬೇಸತ್ತ ಮಹಿಳೆ ಆತ್ಮಹತ್ಯೆ

ಜೂನ್ 25 ರಂದು ನಡೆದ ಈ ವಿಶೇಷ ವಿವಾಹ ಮಹೋತ್ಸವದಲ್ಲಿ ವಧು ಲಾವಣ್ಯ ಕುಟುಂಬದವರು ಸೇರಿದಂತೆ ಮೊದಲ ಪತ್ನಿಯರು ಮಕ್ಕಳು ನೆಂಟರು ಬಂಧುಗಳು ಸೇರಿದಂತೆ ಎಲ್ಲರೂ ಭಾಗವಹಿಸಿದ್ದು, ಇವರ ಮದುವೆಯ ಆಹ್ವಾನ ಪತ್ರಿಕೆ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುವುದರ ಜೊತೆ ಟಾಕ್ ಆಫ್ ದಿ ಟೌನ್ ಆಗಿದೆ. ನೆಟ್ಟಿಗರನೇಕರು ಈ ಮದುವೆಯ ಬಗ್ಗೆ, ಹೆಂಡತಿಯ ಸಹಬಾಳ್ವೆಯ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದ್ದರೆ, ಮತ್ತೆ ಕೆಲವರು ಪಂಡಣ್ಣ ತುಂಬಾ ಅದೃಷ್ಟವಂತ ಎಂದು ಕಾಮೆಂಟ್ ಮಾಡಿದ್ದಾರೆ. 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಮೆಹೆಂದಿಯಾಗಿತ್ತು, ಆದರೆ ಮದುವೆಯಾಗಲ್ಲ: ಕೊನೆಗೂ Palash Muchhal ಜೊತೆಗಿನ ಸಂಬಂಧಕ್ಕೆ ತೆರೆ ಎಳೆದ Smriti Mandhana
ಡಾರ್ಲಿಂಗ್.. ಆ ಪ್ರೀತಿಯನ್ನು ಕಂಡು ನಿನಗೆ ಆನಂದಬಾಷ್ಪ ಬಂದಿರುತ್ತದೆ; ರಾಜಮೌಳಿ ಪತ್ರದ ಮರ್ಮವೇನು?