
ಮಕ್ಕಳ ಜೀವನ ಕಲರ್ ಫುಲ್ ಆಗಿರುತ್ತೆ. ಮಕ್ಕಳು ಕಲ್ಪನಾ ಜಗತ್ತಿನಲ್ಲಿ ವಿಹರಿಸ್ತಿರುತ್ತಾರೆ. ಮಕ್ಕಳಿಗೆ ವಾಸ್ತವ ಜೀವನ ಮತ್ತು ಕಾಲ್ಪನಿಕ ಜೀವನದ ವ್ಯತ್ಯಾಸ ತಿಳಿಯೋದಿಲ್ಲ. ಮಕ್ಕಳು ದೊಡ್ಡವರಾಗ್ತಿದ್ದಂತೆ ಇದ್ರ ವ್ಯತ್ಯಾಸ ಅವರಿಗೆ ಗೊತ್ತಾಗ್ತಾ ಹೋಗುತ್ತದೆ. ಪಾಲಕರು ಮಕ್ಕಳಿಗೆ ಇದ್ರ ಬಗ್ಗೆ ನಿಧಾನವಾಗಿ ತಿಳಿಸ್ತಾ ಹೋಗ್ತಾರೆ. ಪೋಷಕರಿಂದ, ಶಾಲೆಯಲ್ಲಿ ಕಲಿಸುವ ವಿಷಯಗಳಿಂದ ಮಕ್ಕಳು ಸಾಕಷ್ಟು ಸಂಗತಿ ತಿಳಿಯುತ್ತಾರೆ. ಸಾರ್ವಜನಿಕವಾಗಿ ಹೇಗೆ ವರ್ತಿಸಬೇಕು, ಹಿರಿಯರಿಗೆ ಹೇಗೆ ಗೌರವ ನೀಡಬೇಕು, ಆಟಿಕೆಗಳಿಂದ ಏನೇನು ಕಲಿಯಬಹುದು ಹೀಗೆ ಮಕ್ಕಳ ಸುತ್ತಮುತ್ತಲಿರುವ ಎಲ್ಲ ವಸ್ತುಗಳಿಂದ ಮಕ್ಕಳು ಕಲಿಯುತ್ತಾರೆ. ಹಿಂದಿನ ಕಾಲದಲ್ಲಿ ಮಕ್ಕಳಿಗೆ ಮೊಬೈಲ್, ಟಿವಿ ಸೇರಿದಂತೆ ಡಿಜಿಟಲ್ ಮಾಧ್ಯಮವಿರಲಿಲ್ಲ. ಆಗ ಮಕ್ಕಳು ಆಟದ ಜೊತೆಗೆ ಕಥೆ ಪುಸ್ತಕಗಳನ್ನು ಓದುತ್ತಿದ್ದರು. ಇದ್ರಿಂದ ಸಾಕಷ್ಟು ವಿಷ್ಯಗಳನ್ನು ತಿಳಿಯುತ್ತಿದ್ದರು. ಪೌರಾಣಿಕ ವಿಷ್ಯಗಳಿಂದ ಹಿಡಿದು ರಾಜಕೀಯ, ಬುದ್ಧಿವಂತಿಕೆ ಸೇರಿದಂತೆ ಸಾಕಷ್ಟು ಮಾಹಿತಿ ಸಂಗ್ರಹ ಪುಸ್ತಕದಿಂದ ಮಕ್ಕಳಿಗೆ ಆಗ್ತಾಯಿತ್ತು. ನಿಮ್ಮ ಮಕ್ಕಳು ಕೂಡ ಬರೀ ಶಾಲೆ, ಕುಟುಂಬ ಹಾಗೂ ಸುತ್ತಮುತ್ತಲ ಪರಿಸರದಿಂದ ಮಾತ್ರವಲ್ಲದೆ ಕಥೆ ಪುಸ್ತಕ (Story Book) ಹಾಗೂ ಕಥೆ ವಿಡಿಯೋಗಳಿಂದ ಅನೇಕ ಪಾಠ (Lesson) ಕಲಿಯುತ್ತಾರೆ ಎಂಬುದು ನಿಮಗೆ ಗೊತ್ತಾ? ನೀವು, ನಿಮ್ಮ ಮಕ್ಕಳಿಗೆ ಕೆಲ ಹಾಸ್ಯ (Comedy) ಕಥೆಗಳ ಮೂಲಕ ಜೀವನದ ಕೆಲವು ಒಳ್ಳೆಯ ವಿಷಯಗಳನ್ನು ಕಲಿಸಬಹುದು ಮತ್ತು ಸವಾಲುಗಳನ್ನು ಎದುರಿಸಲು ಅವರನ್ನು ಸಿದ್ಧಪಡಿಸಬಹುದು. ಮಕ್ಕಳಿಗೆ ನೆರವಾಗುವ ಕಥೆಗಳು ಯಾವುವು ಗೊತ್ತಾ?
ತೆನಾಲಿ ರಾಮಕೃಷ್ಣ : ಮಕ್ಕಳ ಕಥೆ ಎಂದಾಗ ತಕ್ಷಣ ನೆನೆಪಿಗೆ ಬರುವುದು ತೆನಾಲಿ ರಾಮನ ಹೆಸರು. 16ನೇ ಶತಮಾನದಲ್ಲಿ ವಿಜಯನಗರ ಸಾಮ್ರಾಜ್ಯದ ಆಳ್ವಿಕೆಯಲ್ಲಿ ಹೆಸರಾಗಿದ್ದ ತೆನಾಲಿ ರಾಮ, ಬುದ್ಧಿವಂತ. ಅದ್ಭುತ ಹಾಸ್ಯಪ್ರಜ್ಞೆಯುಳ್ಳ ವ್ಯಕ್ತಿ. ಪ್ರತಿಯೊಂದು ಸಮಸ್ಯೆಯನ್ನೂ ಬುದ್ಧಿವಂತಿಕೆಯಿಂದ ತೆನಾಲಿ ರಾಮ ಪರಿಹರಿಸುತ್ತಾರೆ. ತೆನಾಲಿ ರಾಮನ ಕಥೆಗಳನ್ನು ಓದಿದ್ರೆ ಅಥವಾ ಕೇಳಿದ್ರೆ ಮಕ್ಕಳ ಬುದ್ಧಿ ಚುರುಕಾಗೋದ್ರಲ್ಲಿ ಎರಡು ಪ್ರಶ್ನೆಯಿಲ್ಲ. ಹಾಗೆಯೇ ಸವಾಲುಗಳನ್ನು ಹೇಗೆ ಎದುರಿಸಬೇಕು ಎಂಬುದನ್ನು ಮಕ್ಕಳು ಇವನಿಂದ ಕಲಿಯುತ್ತಾರೆ.
ಪಂಚತಂತ್ರದ ಕಥೆಗಳು : ಇದು ಕೂಡ ಹೆಚ್ಚು ಪ್ರಸಿದ್ಧಿ ಪಡೆದ ಕಥೆ ಪುಸ್ತಕವಾಗಿದೆ. ಇದ್ರಲ್ಲಿ ಮಕ್ಕಳು ತಿಳಿದುಕೊಳ್ಳಬಹುದಾದ ಅನೇಕ ಕಥೆಗಳಿವೆ. ಇದ್ರಲ್ಲಿ ಹಾಸ್ಯ ಕಥೆಗಳಿಂದ ಹಿಡಿದು ಗಂಭೀರ ಸಮಸ್ಯೆಗಳಿರುವ ಕಥೆಗಳಿವೆ. ಪಾಲಕರು ಮಕ್ಕಳಿಗೆ ಓದುವ ಹವ್ಯಾಸವನ್ನು ಬೆಳೆಸಿದ್ರೆ ಮಕ್ಕಳು ನಿಧಾನವಾಗಿ ಇಂಥ ಪುಸ್ತಕಗಳನ್ನು ಓದಲು ಶುರು ಮಾಡ್ತಾರೆ.
ಡಿಂಗನ ಕಥೆಗಳು : ಬಾಲಮಂಗಳದಲ್ಲಿ ಬರ್ತಿದ್ದ ಡಿಂಗನ ಕಥೆಗಳು ಕೂಡ ಮಕ್ಕಳನ್ನು ಆಗಿನ ಕಾಲದಲ್ಲಿ ಹೆಚ್ಚು ಆಕರ್ಷಿಸಿದ್ದವು. ಅನೇಕರು ಈಗ್ಲೂ ಆ ಕಥೆಗಳನ್ನು ಸಂಗ್ರಹಿಸಿಟ್ಟುಕೊಂಡಿದ್ದಾರೆ. ಅದು ಕೂಡ ಮಕ್ಕಳ ಜ್ಞಾನ ಹೆಚ್ಚಿಸುವ ಜೊತೆಗೆ ಮಕ್ಕಳಿಗೆ ಮನರಂಜನೆ ನೀಡುತ್ತದೆ.
ಈ ಮಹಿಳೆ ಮಕ್ಕಳನ್ನು ಶಾಲೆಗೆ ಕಳಿಸೋದೆ ಇಲ್ಲ!
ಶಕ್ತಿಮಾನ್ (Shaktiman) : ಟಿವಿಯಲ್ಲಿ ಪ್ರಸಾರವಾಗ್ತಿದ್ದ ಪ್ರಸಿದ್ಧ ಧಾರಾವಾಹಿಗಳಲ್ಲಿ ಶಕ್ತಿಮಾನ್ ಕೂಡ ಒಂದು. 25 ವರ್ಷಗಳ ಹಿಂದೆ ಶಕ್ತಿಮಾನ್ ಹೆಸರು ಕೇಳ್ತಿದ್ದಂತೆ ಮಕ್ಕಳು ಉತ್ಸಾಹದಿಂದ ಕುಣಿಯುತ್ತಿದ್ದರು. ಇದು ಕೂಡ ಹಾಸ್ಯಬರಿತ ಸಾಹಸವನ್ನು ಹೊಂದಿರುವ ಕಥೆಯಾಗಿದೆ.
ಜಂಗಲ್ ಬುಕ್ (Jungle Book) : ಇದು ಕೂಡ ಟಿವಿಯಲ್ಲಿ ಪ್ರಸಾರವಾಗ್ತಿದ್ದ ಕಥೆಯಾಗಿದೆ. ಇದ್ರಲ್ಲಿ ಮೂಂಗ್ಲಿ ಎಲ್ಲರ ಗಮನ ಸೆಳೆದಿದ್ದ. ಜಂಗಲ್ ಬುಕ್ ಸಿನಿಮಾ ಕೂಡ ಬಂದಿದೆ. ಇದನ್ನು ನೀವು ಮಕ್ಕಳಿಗೆ ತೋರಿಸ್ಬಹುದು. ಕಾಡು, ಕಾಡು ಪ್ರಾಣಿಗಳು, ಅಲ್ಲಿ ಬರುವ ಸಂಕಷ್ಟವನ್ನು ಹೇಗೆ ಎದುರಿಸಬೇಕು ಎಂಬೆಲ್ಲ ವಿಷ್ಯ ಇದ್ರಲ್ಲಿದೆ.
Parenting Tips: ಸಮಯಕ್ಕೆ ಮೊದಲೇ ಯೌವನಕ್ಕೆ ಮಗ ಕಾಲಿಟ್ಟಿದ್ದಾನೆ ಎಂಬುದನ್ನು ಹೀಗೆ ಪತ್ತೆ ಹಚ್ಚಿ
ಮಕ್ಕಳ ಮುಂದೆ ಯಾವುದೇ ವಿಷ್ಯವನ್ನು ಕೂಡ ಕಥೆ ರೂಪದಲ್ಲಿ ಹೇಳ್ಬೇಕು. ಆಗ ಮಕ್ಕಳಿಗೆ ಅದು ಬೇಗ ಅರ್ಥವಾಗುತ್ತದೆ. ಸದಾ ನೆನಪಿನಲ್ಲಿರುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.