ಯಾವುದೇ ಉನ್ನತ ಹುದ್ದೆಯಲ್ಲಿದ್ದರೂ ಪತಿಯ ಸ್ಥಾನಕ್ಕೆ ಅದರದ್ದೇ ಆದ ಜವಾಬ್ದಾರಿ, ಸಮಸ್ಯೆ ಇದೆ. ಇಂಥದ್ದೇ ಸ್ಥಿತಿಯಲ್ಲಿ ದೆಹಲಿ ಕಾಲೇಜಿನ ಡೀನ್ ಒಬ್ಬರು ತಮ್ಮ ಪತ್ನಿಯ ಸಂಗೀತರ ಯೂಟ್ಯೂಬ್ ಲಿಂಕನ್ನು ವಿದ್ಯಾರ್ಥಿಗಳಿಗೆ ಕಳುಹಿಸಿ ಅಪಹಾಸ್ಯಕ್ಕೆ ಗುರಿಯಾಗಿದ್ದಾರೆ.
ಸಂಗಾತಿಯ ಕನಸುಗಳಿಗೆ ಬೆನ್ನೆಲುಬಾಗಿ ನಿಲ್ಲುವುದು ಉತ್ತಮ ಗುಣ ಎನ್ನುವುದರಲ್ಲಿ ಎರಡು ಮಾತಿಲ್ಲ. ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ಮೌಲ್ಯಗಳಲ್ಲಿ ಇದೂ ಒಂದು. ಸಂಗಾತಿ ಮಾಡುವ ಕೆಲಸ ಕಾರ್ಯಗಳು ಜನರನ್ನು ತಲುಪಬೇಕಾಗಿದ್ದರೆ ಅದರ ಬಗ್ಗೆ ಗುರುತು ಪರಿಚಯವದವರಿಗೆ ತಿಳಿಸುವ ಮೂಲಕ ಒಂದು ರೀತಿಯ ಅಡ್ವರ್ ಟೈಸ್ ಮೆಂಟ್ ನೀಡುವುದು ಇಂದಿನ ದಿನಗಳಲ್ಲಿ ಅಗತ್ಯ. ಆದರೂ, ಈ ಕಾರ್ಯಕ್ಕಾಗಿ ನಾವು ಯಾರನ್ನು ಬಳಸಿಕೊಳ್ಳುತ್ತಿದ್ದೇವೆ ಅಥವಾ ಯಾವ ರೀತಿಯಲ್ಲಿ ನಾವು ಮಾಹಿತಿ ನೀಡುತ್ತಿದ್ದೇವೆ ಎನ್ನುವ ಬಗ್ಗೆ ಕೆಲವೊಮ್ಮೆ ಯೋಚಿಸುವುದು ಅಗತ್ಯ. ಏಕೆಂದರೆ, ದೆಹಲಿ ಕಾಲೇಜಿನ ಪ್ರೊಫೆಸರ್ ಒಬ್ಬರು ಇದೇ ಕೆಲಸ ಮಾಡಿ ನೆಟ್ಟಿಗರ ಟೀಕೆಗೆ ಪಾತ್ರರಾಗಿದ್ದಾರೆ.
ಅಸಲಿಗೆ, ಆಗಿದ್ದಿಷ್ಟು. ದೆಹಲಿ (Delhi) ಮೂಲದ ಬ್ಯುಸಿನೆಸ್ ಸ್ಕೂಲ್ ನ ಮ್ಯಾನೇಜ್ ಮೆಂಟ್ ಸ್ಟಡೀಸ್ (Management Studies) ವಿಭಾಗದ ಡೀನ್ (Dean) ತಮ್ಮ ವಿದ್ಯಾರ್ಥಿಗಳಿಗೆ ಇ-ಮೇಲ್ (E-Mail) ಕಳಿಸಿದ್ದಾರೆ. ಅದು ಯಾವುದೇ ರೀತಿಯ ಶೈಕ್ಷಣಿಕ (Educational) ಮಾಹಿತಿ ಒಳಗೊಂಡಿರಲಿಲ್ಲ. ಬದಲಿಗೆ, ತಮ್ಮ ಪತ್ನಿ (Wife) ನಡೆಸುತ್ತಿರುವ ಯೂಟ್ಯೂಬ್ ಚಾನೆಲ್ ಲಿಂಕನ್ನು ಒಳಗೊಂಡಿತ್ತು. ಸಂಗೀತದ ಕುರಿತಾಗಿರುವ ಯೂಟ್ಯೂಬ್ ಚಾನೆಲ್ ಅನ್ನು ವಿದ್ಯಾರ್ಥಿಗಳಿಗೆ (Students) ಪ್ರೊಮೋಟ್ ಮಾಡುವ ಅಗತ್ಯವೇನಿತ್ತು ಎನ್ನುವ ಪ್ರಶ್ನೆಯನ್ನು ಅವರೀಗ ಎದುರಿಸುತ್ತಿದ್ದಾರೆ.
Good Sleep: ಮಕ್ಕಳೇ… ಪರೀಕ್ಷೆ ಸಮಯದಲ್ಲಿ ನಿದ್ರೆಗೆಟ್ಟು ಯಡವಟ್ಟು ಮಾಡ್ಕೊಳ್ಬೇಡಿ
undefined
ಒನ್ ಮೂಮೆಂಟ್ ಇನ್ ಟೈಮ್
‘ವಿದ್ಯಾರ್ಥಿಗಳ ಪೈಕಿ ಸೌರಭ್ ಶರ್ಮಾ ಎನ್ನುವವರು ಈ ಇ-ಮೇಲ್ ನ ಸ್ಕ್ರೀನ್ ಶಾಟ್ ತೆಗೆದು ಸಾಮಾಜಿಕ ಜಾಲತಾಣದಲ್ಲಿ (Social Media) ಹಂಚಿಕೊಂಡಿದ್ದಾರೆ. ಇ-ಮೇಲ್ ಶೀರ್ಷಿಕೆಯೂ ಆಕರ್ಷಕವಾಗಿದೆ- “ಒನ್ ಮೂಮೆಂಟ್ ಇನ್ ಟೈಮ್’ (One Moment in Time) ಎನ್ನುವ ಶೀರ್ಷಿಕೆ ಹೊತ್ತಿರುವ ಇ-ಮೇಲ್ ಇತ್ತೀಚೆಗೆ ಡೀನ ಅವರ ಪತ್ನಿ ಹಾಡಿರುವ ಹಾಡಿನ ಲಿಂಕನ್ನು ಒಳಗೊಂಡಿದೆ. ಈ ಹಿಂದೆಯೂ ಅವರು ಪತ್ನಿಯ ಯೂಟ್ಯೂಬ್ ಚಾನೆಲ್ (YouTube Channel) ಅನ್ನು ಪ್ರೊಮೋಟ್ ಮಾಡಿದ್ದರು.
ಇದೀಗ, ಸೋಷಿಯಲ್ ಮೀಡಿಯಾದಲ್ಲಿ ಡೀನ್ ಕೃತ್ಯ ಬೆಳಕಿಗೆ ಬಂದ ನಂತರ ಬಹಳಷ್ಟು ನೆಟ್ಟಿಗರ ಗಮನ ಸೆಳೆದಿದೆ. ಹಲವರು ಇದನ್ನು ತಮಾಷೆಯಾಗಿ ಪರಿಗಣಿಸಿದ್ದರೆ, ಕೆಲವರು ಗಂಭೀರವಾಗಿ ಸಲಹೆ ನೀಡಿದ್ದಾರೆ. ಕೆಲವರು ಡೀನ್ ಕೆಲಸದ ಬಗ್ಗೆ, ಪತ್ನಿಯ ಮೇಲಿರುವ ಅಭಿಮಾನದ ಬಗ್ಗೆ ಶ್ಲಾಘಿಸಿದ್ದಾರೆ. “ಸಚ್ಚಾ ಪ್ಯಾರ್’ ಎಂದು ಒಬ್ಬಾತ ಹೇಳಿದ್ದರೆ, “ಇದು ನಿಯಮಕ್ಕೆ ವಿರುದ್ಧವಾಗಿದೆ. ನಿಮ್ಮ ಸ್ಥಾನವನ್ನು ಬಳಕೆ ಮಾಡಿಕೊಂಡು ಖಾಸಗಿ ಕಾರ್ಯವನ್ನು ಜಾಹೀರಾತು (Promotion) ಮಾಡಿಕೊಳ್ಳುವಂತಿಲ್ಲ’ ಎಂದು ಮತ್ತೊಬ್ಬಾತ ಹೇಳಿದ್ದಾರೆ.
ನೀತಾ ಅಂಬಾನಿ ಬಗ್ಗೆ ನಿಮಗೆ ತಿಳಿಯದೇ ಇರೋ ಇಂಟ್ರೆಸ್ಟಿಂಗ್ ಫ್ಯಾಕ್ಟ್ಸ್ ಇವು!
ವೃತ್ತಿಪರ ನಿಲುವಲ್ಲ
“ಇಂತಹ ಇ-ಮೇಲ್ ಗಳು ಎಷ್ಟು ಇರಿಟೇಟ್ (Irritate) ಮಾಡುತ್ತವೆ, ಇದನ್ನು ಇಗ್ನೋರ್ ಮಾಡಬೇಕು, ನಾಚಿಕೆ ಆಗಬೇಕಾದ ಸಂಗತಿ. ಇದು ನಿಜಕ್ಕೂ ಭ್ರಮನಿರಸನಗೊಳಿಸುವ ಕೆಲಸ’ ಎಂದೆಲ್ಲ ಕಮೆಂಟ್ ಮಾಡಿದವರೂ ಇದ್ದಾರೆ. ಒಟ್ಟಿನಲ್ಲಿ ಡೀನ್ ಕೆಲಸ ಸಾಕಷ್ಟು ಜನರ ಗಮನ ಸೆಳೆದಿದೆ ಎನ್ನುವುದಂತೂ ಸತ್ಯ. ಪತ್ನಿಯ ಮೇಲಿರುವ ಪ್ರೀತಿಗೋ, ಕಾಳಜಿಗೋ, ಅಭಿಮಾನಕ್ಕೋ ಏನೇ ಆಗಲಿ, ಆಕೆಯ ಹಾಡನ್ನು ಒಳಗೊಂಡಿರುವ ಯೂಟ್ಯೂಬ್ ಲಿಂಕನ್ನು ವಿದ್ಯಾರ್ಥಿಗಳಿಗೆ ಶೇರ್ ಮಾಡಿರುವುದು ವೃತ್ತಿಪರ (Professional) ನಿಲುವೇನೂ ಅಲ್ಲ ಎನ್ನುವ ಅಭಿಪ್ರಾಯವೂ ಇದೆ.