ಸಂಬಂಧಗಳನ್ನು ನಿಭಾಯಿಸುವುದು ಸುಲಭವಲ್ಲ. ಆದರೆ, ಸದೃಢ ಚಿತ್ತದ ಮಹಿಳೆಯರು ಎಲ್ಲ ಸಂಬಂಧಗಳನ್ನು ತಮ್ಮದೇ ನಿಲುವು, ವ್ಯಕ್ತಿಗತ ಧೋರಣೆಯಿಂದ ನಿಭಾಯಿಸುತ್ತಾರೆ. ದಾಂಪತ್ಯವನ್ನೂ ಸಹ ಇವರು ವಿಭಿನ್ನವಾಗಿ ನಡೆಸುತ್ತಾರೆ.
ಸಂಬಂಧಗಳು ಯಾರಿಗೂ ಸಲೀಸಾದ ತುತ್ತಲ್ಲ. ಸಂಬಂಧಗಳನ್ನು ನಿಭಾಯಿಸುವುದು ಕೆಲವರಿಗಂತೂ ಕಷ್ಟ. ಆದರೆ, ಕೆಲವು ಮಹಿಳೆಯರು ಸಂಬಂಧಗಳನ್ನು ನಿಭಾಯಿಸುವಲ್ಲಿ ಚಾಣಾಕ್ಷರಾಗಿರುತ್ತಾರೆ. ಪ್ರೀತಿ ಮತ್ತು ಘನತೆಯಿಂದ ವರ್ತಿಸುತ್ತಾರೆ ಹಾಗೂ ಇಷ್ಟಿದ್ದರೂ ಎಂದಿಗೂ ತಮ್ಮ ಮೌಲ್ಯಗಳನ್ನು ಬಿಟ್ಟು ಕೊಡುವುದಿಲ್ಲ. ಹಾಗಿದ್ದರೆ ಅವರನ್ನು ವಿಶೇಷ ವ್ಯಕ್ತಿಯನ್ನಾಗಿಸಿರುವ ಆ ಗುಣ ಯಾವುದು ಎನ್ನುವ ಕುತೂಹಲ ಮೂಡುತ್ತದೆ. ಏಕೆಂದರೆ, ಅವರು ಅವರು ಸಾಮಾನ್ಯರಿಗಿಂತ ವಿಭಿನ್ನರಾಗಿ ಸಂಬಂಧಗಳನ್ನು ನಿಭಾಯಿಸುತ್ತಾರೆ. ಮಾನಸಿಕವಾಗಿ ಸದೃಢರಾಗಿರುವ ಮಹಿಳೆಯರಿಗೆ ತಾವ್ಯಾರು, ತಮ್ಮನ್ನು ಇತರರು ಹೇಗೆ ಟ್ರೀಟ್ ಮಾಡಬೇಕು ಎನ್ನುವುದು ತಿಳಿದಿರುತ್ತದೆ. ಹಾಗೆಂದು ಅಹಂಕಾರ ಇವರಲ್ಲಿ ಇರುವುದಿಲ್ಲ. ಸರಳ ವ್ಯಕ್ತಿತ್ವ ಹೊಂದಿದ್ದರೂ ಸದೃಢರಾಗಿರುತ್ತಾರೆ. ಸಂಬಂಧಗಳಲ್ಲಿ ಎಂದಿಗೂ ಬಲವಾದ ಗಡಿಗಳನ್ನು ಹೊಂದಿರುತ್ತಾರೆ. ಅದರಾಚೆಗೆ ಪ್ರವೇಶಿಸಲು ಯಾರಿಗೂ ಅನುಮತಿ ನೀಡುವುದಿಲ್ಲ. ಇವರು ಕೆಲವು ವಿಚಾರಗಳಲ್ಲಿ ಸಂಗಾತಿಯ ಅಭಿಪ್ರಾಯವನ್ನೂ ಲೆಕ್ಕಿಸದೆ ತಮ್ಮದೇ ನಿರ್ಧಾರ ಕೈಗೊಳ್ಳಬಲ್ಲರು. ಸ್ವ ಗೌರವ ಹಾಗೂ ತಮ್ಮ ಕ್ಷೇಮಕ್ಕೆ ಆದ್ಯತೆ ನೀಡುತ್ತಲೇ ಇತರರನ್ನೂ ಗೌರವಿಸುವ ಗುಣ ಹೊಂದಿರುವುದು ಇವರ ದೊಡ್ಡತನ. ನೀವು ಇವರನ್ನು ಎಷ್ಟೇ ಪ್ರೀತಿಸಿದರೂ ಇವರನ್ನು ನಿಮ್ಮ ಕಟ್ಟುನಿಟ್ಟಿಗೆ ಒಳಪಡಿಸಲು ಸಾಧ್ಯವಿಲ್ಲ. ನೀವು ಇವರನ್ನು ಅರ್ಥ ಮಾಡಿಕೊಂಡು ಗೌರವಿಸುವುದು ಉತ್ತಮ. ಇವರಿಗೆ ತಮಗೇನು ಬೇಕು ಎನ್ನುವ ಅರಿವು ಸ್ಪಷ್ಟವಾಗಿರುತ್ತದೆ. ಸ್ಟ್ರಾಂಗ್ ಮಹಿಳೆಯರಲ್ಲಿ ಇನ್ನೂ ಹಲವು ಸಹಜ ಗುಣಗಳನ್ನು ಕಾಣಬಹುದು.
• ಸಂಗಾತಿಯ ಮಿತಿಗೂ (Limit) ಗೌರವ (Respect)
ತಮ್ಮದೇ ಬಲವಾದ ಗಡಿಯನ್ನು ಹೊಂದಿರುವ ಮಹಿಳೆಯರು ಸಂಗಾತಿಯ (Partner) ಮಿತಿಗಳನ್ನೂ ಗೌರವಿಸುತ್ತಾರೆ. ಸಂಬಂಧಗಳಲ್ಲಿರುವ ಮಿತಿಯನ್ನು ಸ್ಪಷ್ಟವಾಗಿ ಗುರುತಿಸುತ್ತಾರೆ. ಖಾಸಗಿ ಮಿತಿಯನ್ನು ಮೀರಿದರೆ ಆಗುವ ಅಪಾಯದ ಅರಿವೂ ಇವರಿಗೆ ಇರುತ್ತದೆ. ಹೀಗಾಗಿ, ಸಂಗಾತಿಗೆ ಸ್ವಾತಂತ್ರ್ಯ (Independence) ನೀಡುತ್ತಾರೆ, ತಮ್ಮ ಅಭಿಪ್ರಾಯಗಳನ್ನು (Opinions) ಅವರ ಮೇಲೆ ಹೇರುವುದಿಲ್ಲ. ಸಂಬಂಧಗಳಲ್ಲಿ ಮಿತಿಯೇ ಇಲ್ಲದಂತೆ ವರ್ತಿಸುವ ಸಂಗಾತಿಗಳೊಂದಿಗೆ ಇಂಥವರು ಸಮಸ್ಯೆ ಎದುರಿಸುತ್ತಾರೆ. ಸ್ವಾಭಿಮಾನ ಹೊಂದಿರುವ ಸಂಗಾತಿ ಇವರಿಗೆ ಅಗತ್ಯ.
undefined
ಸಿಚುಯೇಶನ್ಶಿಪ್ ಎಂಬ ಹೊಸ ಸಂಬಂಧದಲ್ಲಿ ಕಳೆದು ಹೋಗ್ತಿದ್ಯಾ ಯುವಜನತೆ?
• ತಮಗೇನು ಬೇಕು ಅನ್ನೋದು ಗೊತ್ತಿದೆ
ಸದೃಢ (Strong) ಮನಸ್ಸಿನ ಮಹಿಳೆಯರಿಗೆ (Women) ತಮಗೇನು ಬೇಕು ಎನ್ನುವ ಸ್ಪಷ್ಟತೆ ಇರುತ್ತದೆ. ಸಾಮಾನ್ಯ ಮಹಿಳೆಯರು ಸೀರೆ, ಚಿನ್ನಗಳಲ್ಲಿ ಮುಳುಗಿದ್ದರೆ ಇವರು ಅವ್ಯಾವುದೂ ಇಲ್ಲದೆಯೂ ಆರಾಮಾಗಿ ಇರಬಲ್ಲರು. ಸಂಬಂಧದಲ್ಲಿ ಏನು ಅಗತ್ಯ, ಖಾಸಗಿ ಜೀವನಕ್ಕೆ ಏನು ಬೇಕು, ವೃತ್ತಿ (Profession) ಯಾವ ರೀತಿಯಲ್ಲಿರಬೇಕು ಹಾಗೂ ತಮ್ಮ ಭವಿಷ್ಯದ (Future) ಬಗ್ಗೆ ತಿಳಿವಳಿಕೆ ಹೊಂದಿರುತ್ತಾರೆ. ಯಾವುದಾದರೂ ವಿಚಾರದ ಬಗ್ಗೆ ಮನಸ್ಸು ಮಾಡಿದರೆ ಅದನ್ನು ಬೆನ್ನತ್ತುವ ಸಾಮರ್ಥ್ಯ (Capacity) ಹಾಗೂ ದೃಢ ಚಿತ್ತ ಹೊಂದಿರುತ್ತಾರೆ.
• ಟಾಕ್ಸಿಕ್ ಬಿಹೇವಿಯರ್ (Toxic Behavior) ಸಲ್ಲದು
ಸದೃಢ ಮಹಿಳೆಯರ ಬಳಿ ಕೆಟ್ಟಕೆಟ್ಟ ವರ್ತನೆಗಳು ಸಲ್ಲದು. ಕ್ಷುಲ್ಲಕ ಕಾರಣಕ್ಕೆ ಜಗಳ (Fight) ಮಾಡುವುದು, ರೇಗುವುದು, ಪದೇ ಪದೆ ಕೋಪಿಸಿಕೊಳ್ಳುವುದು, ಎಲ್ಲದಕ್ಕೂ ಇತರರನ್ನು ದೂರುವುದು (Blame) ಇವರಿಗೆ ಆಗಿಬರುವುದಿಲ್ಲ. ಇಂಥವರನ್ನು ಇವರು ಸಂಗಾತಿಯನ್ನಾಗಿ ಮಾಡಿಕೊಳ್ಳುವುದೂ ಇಲ್ಲ. ಆರಂಭದಲ್ಲೇ ನಡತೆ ಗುರುತಿಸಿ ದೂರವಾಗುತ್ತಾರೆ. ಅತ್ಯಂತ ಸ್ವತಂತ್ರ ನಿಲುವು ಹೊಂದಿರುತ್ತಾರೆ.
• ಭಾವನೆ (Feelings) ಯದ್ವಾತದ್ವಾ ಇರೋದಿಲ್ಲ
ಕೆಲವು ಮಹಿಳೆಯರು ಚಿಕ್ಕಪುಟ್ಟದಕ್ಕೆಲ್ಲ ಅಳುತ್ತ, ಸಂಗಾತಿಯನ್ನು ಇನ್ನಿಲ್ಲದಂತೆ ಕಾಡಿಸುತ್ತ ವಿಚಿತ್ರವಾದ ತೃಪ್ತಿ ಹೊಂದುತ್ತಾರೆ. ಆದರೆ, ಇಂಥ ವರ್ತನೆಗಳಿಂದ ಈ ಮಹಿಳೆಯರು ದೂರವಿರುತ್ತಾರೆ. ಭಾವನೆಗಳ ಮೇಲೆ ಸಾಕಷ್ಟು ನಿಯಂತ್ರಣ (Control) ಹೊಂದಿರುತ್ತಾರೆ. ಯಾವುದೇ ಕಾರಣಕ್ಕೂ ಇತರರನ್ನು ಅವಲಂಬಿಸುವುದಿಲ್ಲ. ನೋವಾದಾಗಲೂ ನಿಯಂತ್ರಣದಲ್ಲಿರುತ್ತಾರೆ, ಸಂತಸವಿದ್ದಾಗಲೂ ನೆಲದ ಮೇಲೆಯೇ ಇರುತ್ತಾರೆ. ತಮ್ಮ ಕೆಲಸದ ಬಗ್ಗೆ ಇತರರ ಮೆಚ್ಚುಗೆ ಬಯಸುವುದೂ ಇಲ್ಲ.
ಮದ್ವೆಯ ಮೊದಲ ಆರು ತಿಂಗಳು ಇಂಥಾ ಜಗಳ ಸಾಮಾನ್ಯ, ಸೀರಿಯಸ್ ಆಗಿ ತಗೋಬೇಡಿ
ಮೆಚ್ಚುಗೆಯ ಅಂಶಗಳು
• ಉತ್ತಮ ಸಂವಹನ (Communication) ಮಾಡುವ ಸಾಮರ್ಥ್ಯ ಇರುತ್ತದೆ.
• ಸಂಘರ್ಷಗಳನ್ನು (Conflicts) ಎದುರಿಸಲು ಭಯ ಪಡುವುದಿಲ್ಲ.
• ಸುಲಭವಾಗಿ ಅಸೂಯೆಗೆ (Jealousy) ಒಳಗಾಗುವುದಿಲ್ಲ.
• ಸ್ವತಂತ್ರ್ಯ ಧೋರಣೆ ಬಲವಾಗಿರುತ್ತದೆ.
• ದಾಂಪತ್ಯದಲ್ಲಿ ಸಮವಾದ ಸಹಭಾಗಿತ್ವ (Partnership) ಬಯಸುತ್ತಾರೆ.
• ಕಷ್ಟಕರ (Tough) ಸನ್ನಿವೇಶಗಳಲ್ಲಿ ದೃಢವಾಗಿ ನಿಲ್ಲುತ್ತಾರೆ.
• ಸಂಬಂಧದಿಂದ (Relation) ದೂರವಾಗಲು ಹೆದರುವುದಿಲ್ಲ.