ತಬ್ಬಲಿ ಹುಲಿಮರಿಗಳಿಗೆ ಹಾಲು ನೀಡುತ್ತಾ ಅಮ್ಮನಂತೆ ಆರೈಕೆ ಮಾಡ್ತಿದೆ ಚಿಂಪಾಂಜಿ

By Suvarna NewsFirst Published Aug 3, 2022, 6:11 PM IST
Highlights

ಚಿಂಪಾಂಜಿಯೊಂದು ಮೂರು ಹುಲಿ ಮರಿಗಳಿಗೆ ಬಾಟಲ್ ಹಾಲು ಕುಡಿಸುತ್ತಾ ಆರೈಕೆ ಮಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಕೆಲ ದಿನಗಳ ಹಿಂದೆ ಲ್ಯಾಬ್ರಡಾರ್‌ ತಳಿಯ ಶ್ವಾನವೊಂದು ತಬ್ಬಲಿ ಹುಲಿಮರಿಗಳಿಗೆ ಅಮ್ಮನಂತೆ ಪ್ರೀತಿ ತೋರಿ ಆರೈಕೆ ಮಾಡುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಅದೇ ರೀತಿ ಚಿಂಪಾಂಜಿಯೊಂದು ಮೂರು ಹುಲಿ ಮರಿಗಳಿಗೆ ಬಾಟಲ್ ಹಾಲು ಕುಡಿಸುತ್ತಾ ಆರೈಕೆ ಮಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಮೆರಿಕಾದ ದಕ್ಷಿಣ ಕೆರೊಲಿನಾದ ಮಿರ್ಟಲ್ ಬೀಚ್ ಸಫಾರಿಯಲ್ಲಿ ಕಂಡು ಬಂದ ದೃಶ್ಯ ಇದಾಗಿದ್ದು, ಚಿಂಪಾಜಿಯೊಂದು ತನ್ನದಲ್ಲದ ಹುಲಿಯ ಮರಿಗಳನ್ನು ತನ್ನ ಮಕ್ಕಳಂತೆ ಆರೈಕೆ ಮಾಡುತ್ತಿದೆ. ತಾಯಿ ತೊರೆದ ಮುದ್ದಾದ ಮರಿಗಳಿಗೆ ಈ ಚಿಂಪಾಜಿ ಬಾಟಲ್ ಹಾಲು ನೀಡುತ್ತ ಮಡಿಲಲ್ಲಿ ಮಲಗಿಸಿಕೊಂಡು ಎತ್ತಿ ಆಡಿಸುತ್ತಾ ಮುದ್ದಾಡುತ್ತಿದೆ. ಹುಲಿ ಮರಿಗಳು ಕೂಡ ಈ ಚಿಂಪಾಜಿಯಲ್ಲೇ ತಮ್ಮ ತಾಯಿಯನ್ನು ಕಾಣುತ್ತಿವೆ. 

ಮನುಷ್ಯರು ಮಾತ್ರವಲ್ಲ ಪ್ರಾಣಿಗಳು ಕೂಡ ಪರಸ್ಪರ ಸ್ನೇಹ ಬಾಂಧವ್ಯ ಬಯಸುತ್ತವೆ ಎಂಬುದಕ್ಕೆ ಈ ವಿಡಿಯೋ ಸಾಕ್ಷಿಯಾಗಿದೆ. ಮನುಷ್ಯನೇ ಕೆಲವೊಮ್ಮೆ ತನ್ನ ಮಕ್ಕಳ ಹೊರತಾಗಿ ಬೇರೆ ಮಕ್ಕಳನ್ನು ತನ್ನ ಮಕ್ಕಳಂತೆ ನೋಡಲಾರ ಅಂತಹದರಲ್ಲಿ ಪ್ರಾಣಿಯೊಂದು ತನ್ನದಲ್ಲದ ಮುದ್ದು ಹುಲಿ ಮರಿಗಳನ್ನು ತನ್ನ ಮರಿಗಳಿಗಿಂತ ಮಿಗಿಲಾಗಿ ಆರೈಕೆ ಮಾಡುತ್ತಿದೆ. ಎಲ್ಲರ ಹೃದಯವನ್ನು ಭಾವುಕವಾಗಿಸಿದೆ. ಈ ವಿಡಿಯೋ ನೋಡಿದ ಅನೇಕರು ಈ ತಾಯಿ ಪ್ರೀತಿ ತೋರುತ್ತಿರುವ ಚಿಂಪಾಜಿಯ ಗುಣಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಐಎಫ್ಎಸ್ ಅಧಿಕಾರಿ ಸಮರ್ಥ್‌ ಗೌಡ ಅವರು ಈ ವಿಡಿಯೋವನ್ನುತಮ್ಮ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಸುಂದರ ದೃಶ್ಯಕ್ಕೆ ಸೂಕ್ತವಾದ ಶೀರ್ಷಿಕೆ ನೀಡಬಹುದೇ ಎಂದು ಅವರು ಬರೆದುಕೊಂಡಿದ್ದಾರೆ.  ಯಾವುದೇ ಶರತ್ತುಗಳಿಲ್ಲದ ತುಂಬಾ ಶುದ್ಧವಾದ ಪ್ರೀತಿ ಇದು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.

Any suitable caption for this beautiful clip?.... pic.twitter.com/NBWQzXSnf7

— Dr.Samrat Gowda IFS (@IfsSamrat)

 

ಹೆಣ್ಣು ಹುಲಿ ತನ್ನ ಮರಿಗಳನ್ನು ತ್ಯಜಿಸುವುದು ಕೇಳರಿಯದ ಸಂಗತಿಯೇನಲ್ಲ. ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ (NTCA) ಎಲ್ಲಾ ಹುಲಿ ಸಂರಕ್ಷಿತ ಪ್ರದೇಶಗಳಿಗೆ ಅದರ ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್ (SOP) ಕಿರುಪುಸ್ತಕದಲ್ಲಿ ಪಟ್ಟಿ ಮಾಡಿರುವಂತೆ ಇದಕ್ಕೆ ಹಲವು ಕಾರಣಗಳಿವೆಯಂತೆ. ತಾಯಿ ಹುಲಿಯ ಸಾವಿನ ಹೊರತಾಗಿಯೂ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ (National Tiger Conservation Authority) ಮಾರ್ಗಸೂಚಿಗಳ ಪ್ರಕಾರ, ಮರಿಗಳು ದುರ್ಬಲವಾಗಿದ್ದರೆ, ಅಸಮರ್ಥವಾಗಿದ್ದರೆ, ಗಾಯಗೊಂಡರೆ ಅಥವಾ ಅನಾರೋಗ್ಯದಿಂದ ಕೂಡಿದ್ದರೆ ಕೂಡ ತಾಯಿ ಹುಲಿಗಳು ಅವುಗಳನ್ನು ಬಿಟ್ಟು ಹೊರಟು ಹೋಗುವುದಂತೆ. ಕೆಲವು ಹೆಣ್ಣು ಹುಲಿಗಳು ಗಾಯದಿಂದಾಗಿ ಮರಿಗಳಿಗೆ ಆಹಾರ ನೀಡಲು ತಮ್ಮ ಅಸಮರ್ಥತೆಯಿಂದಾಗಿ ತಮ್ಮ ಮರಿಗಳನ್ನು ಬಿಡುತ್ತವೆಯಂತೆ. 

ತಾಯಿಯನ್ನ ಹೆದರಿಸಿದ ಹುಲಿ ಮರಿ... ವಿಡಿಯೋ

ಇನ್ನು ಚಿಂಪಾಂಜಿಗಳು ಮನುಷ್ಯರಂತೆ ಪ್ರೀತಿ ಬಯಸುವ ಪ್ರಾಣಿಗಳಾಗಿದ್ದು, ನಿನ್ನೆಯಷ್ಟೇ ಚಿಂಪಾಂಜಿಯೊಂದು ಯುವಕನಂತೆ ಜೀನ್ಸ್‌ ಪ್ಯಾಂಟ್ ಧರಿಸಿ ಯುವತಿಯೊಬ್ಬಳಿಗೆ ಮುತ್ತಿಕ್ಕುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಯುವಕರಂತೆ ನೀಲಿ ಜೀನ್ಸ್ ಪ್ಯಾಂಟ್ ಧರಿಸಿರುವ ಚಿಂಪಾಂಜಿ ಉಯ್ಯಾಲೆಯಾಡುತ್ತಿರುತ್ತದೆ. ಉಯ್ಯಾಲೆಯ ಮೇಲೆ ನಿಂತು ಯುವತಿಗೆ ಪೋಸ್‌ ಕೊಡುವ ಈ ಚಿಂಪಾಜಿ ಅದರಲ್ಲೇ ಕುಳಿತು ಸಮೀಪದಲ್ಲಿ ಕುಳಿತ ಯುವತಿಗೆ ಮುತ್ತಿಕ್ಕುತ್ತದೆ. ಅಲ್ಲದೇ ಆಕೆಯನ್ನು ತಬ್ಬಿಕೊಳ್ಳುತ್ತದೆ. ಇದು ಥೈಲ್ಯಾಂಡ್‌ನ ಬ್ಯಾಂಕಾಕ್‌ನಲ್ಲಿ ಸೆರೆಯಾದ ದೃಶ್ಯವಾಗಿದ್ದು, ಸೌಮ್ಯ ಚಂದ್ರಶೇಖರ್ ಎಂಬುವವರು ಈ ವಿಡಿಯೋವನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋವನ್ನು 5.3 ಮಿಲಿಯನ್‌ಗೂ ಹೆಚ್ಚು ಜನ ವೀಕ್ಷಿಸಿದ್ದಾರೆ. ಚಿಂಪಾಜಿ ಜಂಟಲ್‌ ಮ್ಯಾನ್‌ ರೀತಿ ಯುವತಿಯ ಕೈಗೆ ಕಿಸ್ ಮಾಡುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ. 

ತಬ್ಬಲಿ ಹುಲಿಮರಿಗಳಿಗೆ ತಾಯಿ ಪ್ರೀತಿ ತೋರುವ ಶ್ವಾನ: ವಿಡಿಯೋ ವೈರಲ್‌

click me!