ತನ್ನ ಜೀವನದ ಕೊನೆ ಗಳಿಕೆಯಲ್ಲಿ ಜನರು ಕೊನೆ ಆಸೆಯನ್ನು ಆಪ್ತರ ಮುಂದೆ ಹೇಳ್ತಾರೆ. ಕೆಲ ಇಚ್ಛೆಗಳನ್ನು ನಾವು ಈಡೇರಿಸಬಹುದು. ಇಲ್ಲವೆ ಮುಂದೆ ಪೂರೈಸುವ ಭರವಸೆ ನೀಡ್ಬಹುದು. ಆದ್ರೆ ಪತಿ ಮುಂದೆಯೇ ಇಂಥ ಆಸೆ ವ್ಯಕ್ತಪಡಿಸಿದ್ರೆ ಪಾಪ ಅವನೇನು ಮಾಡ್ಬೇಕು?
ಅಚಾನಕ್ ಸಾವನ್ನಪ್ಪಿದಾಗ ಅವರ ಕೊನೆ ಆಸೆಯನ್ನು ಕೇಳಿ ಅದನ್ನು ಈಡೇರಿಸೋದು ಕಷ್ಟ. ಅದೇ ಯಾವುದೋ ಖಾಯಿಲೆಯಿಂದ ಬಳಲುತ್ತಿರುವ ವ್ಯಕ್ತಿಗೆ ಇಷ್ಟೇ ಆಯಸ್ಸು ಎಂದು ವೈದ್ಯರು ಹೇಳಿದಾಗ ನಾವು ಅವರನ್ನು ಹೆಚ್ಚು ಕಾಳಜಿಯಿಂದ ನೋಡಿಕೊಳ್ತೇವೆ. ಹಿಂದೆ ಅದೇನೇ ಗಲಾಟೆ, ಜಗಳವಾಗಿದ್ರೂ ಅದನ್ನೆಲ್ಲ ಮರೆತು ಅವರನ್ನು ಇದ್ದಷ್ಟು ದಿನ ಖುಷಿಯಿಂದ ಇಡಲು ಬಯಸ್ತಾವೆ. ಅವರು ಬಯಸಿದ್ದನ್ನೆಲ್ಲ ನೀಡ್ತೇವೆ. ಅವರ ಕೊನೆ ಆಸೆ ಏನೆಂಬುದನ್ನು ಕೇಳಿ, ಸಾಧ್ಯವಾದ ಮಟ್ಟಿದೆ ಅದನ್ನು ಪೂರೈಸುವ ಪ್ರಯತ್ನ ನಡೆಸ್ತೇವೆ. ಆದ್ರೆ ಇಲ್ಲೊಬ್ಬ ವ್ಯಕ್ತಿ ಪತ್ನಿ ಹೇಳಿದ ಕೊನೆ ಆಸೆ ದಂಗಾಗಿಸುವಂತಿದೆ. ಅದನ್ನು ಕೇಳಿದ ಪತಿ ಮನಸ್ಸಿನಲ್ಲಿ ಅನೇಕ ಪ್ರಶ್ನೆಗಳು ಹುಟ್ಟಿಕೊಂಡಿವೆ.
ರೆಡ್ಡಿಟ್ (Reddit) ನಲ್ಲಿ ವ್ಯಕ್ತಿಯೊಬ್ಬ ತನ್ನ ಪತ್ನಿ ಕೊನೆಯ ಇಚ್ಛೆ ಏನೆಂಬುದನ್ನು ಹೇಳಿದ್ದಾನೆ. ನನ್ನ ಹೆಂಡತಿ (Wife) ಗೆ ಗುಣಪಡಿಸಲಾಗದ ಕಾಯಿಲೆ ಇದೆ. ಆಕೆ ಇನ್ನು ಕೇವಲ 9 ತಿಂಗಳು ಬದುಕಿರಬಹುದು ಎಂದು ವೈದ್ಯರು ಹೇಳಿದ್ದಾರಂತೆ. ನಾವಿಬ್ಬರೂ ಅನೇಕ ವರ್ಷಗಳಿಂದ ಒಟ್ಟಿಗೆ ಇದ್ದೇವೆ. ನನಗೆ ನನ್ನ ಪತ್ನಿ ಅಂದ್ರೆ ಪ್ರಾಣ. ಆಕೆಯಿಲ್ಲದೆ ನನ್ನ ಮುಂದಿನ ಜೀವನ (life) ಹೇಗೆ ಎನ್ನುವ ಪ್ರಶ್ನೆ ಮನೆ ಮಾಡಿದೆ. ಆಕೆಯನ್ನು ಕಳೆದುಕೊಳ್ಳುವ ನೋವು ನನ್ನನ್ನು ಕಾಡ್ತಿದೆ. ನನ್ನಾಕೆ ಜೀವನದ ಕೊನೆಯ ದಿನಗಳನ್ನು ಖುಷಿಯಿಂದ ಕಳೆಯಲಿ ಎಂದು ನಾನು ನನ್ನ ಕೈಲಾದಷ್ಟು ಪ್ರಯತ್ನಿಸುತ್ತಿದ್ದೇನೆ ಎಂದು ವ್ಯಕ್ತಿ ತನ್ನ ದುಃಖವನ್ನು ತೋಡಿಕೊಂಡಿದ್ದಾನೆ.
'ನೀನು ಬೆಂಕಿ ಇಡಮ್ಮ ಯಾಕೆ ಯೋಚ್ನೆ ಮಾಡ್ತೀಯಾ ನಾನಿದ್ದೇನೆ' ಶಾಸಕ ಪಪ್ಪಿ ಮತ್ತೊಂದು ಎಡವಟ್ಟು!
ಅಷ್ಟೇ ಅಲ್ಲದೆ ಬರವಣಿಗೆ ಮುಂದುವರೆಸಿದ ವ್ಯಕ್ತಿ, ಇನ್ನು 4-5 ತಿಂಗಳಲ್ಲಿ ಪತ್ನಿ ಗಾಲಿಕುರ್ಚಿಗೆ ಬರುತ್ತಾಳೆ. 8 ತಿಂಗಳ ನಂತರ ಕೆಲವು ವಾರಗಳ ಕಾಲ ಹಾಸಿಗೆಯಲ್ಲೇ ಮಲಗುತ್ತಾಳೆ ಎಂದು ವೈದ್ಯರು ಹೇಳಿದ್ದಾರೆ. ಪತ್ನಿ ಇಷ್ಟೆಲ್ಲ ನೋವನ್ನು ಅನುಭವಿಸ್ತಾಳೆ ಎಂಬುದನ್ನು ಕೇಳಿಯೇ ನನಗೆ ಸಂಕಟವಾಯ್ತು. ವೈದ್ಯರು ಈ ಮಾತು ಹೇಳಿದ ನಂತ್ರ, ನಾನು ಪತ್ನಿಯ ಕೊನೆಯ ಆಸೆ ಏನು ಎಂದು ಕೇಳಿದೆ. ಆದ್ರೆ ಆಕೆ ಹೇಳಿದ ಕೊನೆ ಆಸೆಯನ್ನು ಕೇಳಿ ನಾನು ಆಘಾತಕ್ಕೊಳಗಾಗಿದ್ದೇನೆ ಎನ್ನುತ್ತಾನೆ ಪತಿ.
ಪತ್ನಿಯ ಕೊನೆ ಆಸೆ: ಇನ್ನು 9 ತಿಂಗಳಲ್ಲಿ ಸಾವನ್ನಪ್ಪಲಿರುವ ಪತ್ನಿ ತನ್ನ ಮಾಜಿ ಪ್ರೇಮಿ ಜೊತೆ ಶಾರೀರಿಕ ಸಂಬಂಧ ಬೆಳೆಸಲು ಬಯಸಿದ್ದಾಳೆ. ಆಕೆ ಮಾತು ಕೇಳಿ ಪತಿ ದಂಗಾಗಿದ್ದಾನೆ. ಪತ್ನಿಗೆ ಯಾಕೆ ಈ ಆಸೆ ಎಂದು ಪತಿ ಪ್ರಶ್ನೆ ಮಾಡಿದ್ದಾನೆ. ಮಾಜಿ ಗೆಳೆಯನ ಜೊತೆ ಸಂಬಂಧ ಬೆಳೆಸಿದಾಗ ಈಕೆಗೆ ಹೆಚ್ಚು ನೆಮ್ಮದಿ ಸಿಕ್ಕಿತ್ತಂತೆ. ಆತ ದೈಹಿಕ ಹೊಂದಾಣಿಕೆಯುಲ್ಲಿ ಅತ್ಯುತ್ತಮ ಎಂದಿದ್ದಾಳೆ. ಈ ಬಗ್ಗೆ ದೊಡ್ಡ ಭಾಷಣ ಮಾಡಿದ ಪತ್ನಿ, ನಂತ್ರ ಪತಿ ಬಗ್ಗೆಯೂ ಹೊಗಳಿದ್ದಾಳೆ. ನಿನ್ನ ಜೊತೆ ಶಾರೀರಿಕ ಸಂಬಂದ ಬೆಳೆಸುವಾಗ ಸಿಗುವ ಭಾವನಾತ್ಮಕ ನೆಮ್ಮದಿಯೇ ಆತನ ಜೊತೆಯೂ ಸಿಗುತ್ತಿತ್ತು ಎಂದಿದ್ದಾಳೆ. ನಿನ್ನೊಂದಿಗೂ ಶಾರೀರಿಕ ಸಂಬಂಧ ಬೆಳೆಸಿದ್ದು ತುಂಬಾ ಚೆನ್ನಾಗಿತ್ತು ಎಂದಿದ್ದಾಳೆ. ಆದ್ರೆ ಪತ್ನಿಯ ಈ ಮಾತುಗಳು ಪತಿಯ ಕಿವಿಗೆ ಬೆಂಕಿ ಹಚ್ಚಿದ ಅನುಭವ ನೀಡಿದೆ.
ಉಡುಪಿ ಪ್ರಕರಣ ಮಾಸುವ ಮುನ್ನವೇ ಹುಬ್ಬಳೀಲಿ ವಿದ್ಯಾರ್ಥಿನಿ ಅಶ್ಲೀಲ ಫೋಟೊ ಅಪ್ಲೋಡ್!
ಮೋಸ ಹೋದ ಪತಿ : ಹೆಂಡತಿಯನ್ನು ಅತಿಯಾಗಿ ನಂಬಿದ್ದ, ಪ್ರೀತಿಸುತ್ತಿದ್ದ ಪತಿಗೆ ತಾನು ಮೋಸ ಹೋಗಿದ್ದೇನೆ ಎಂಬುದು ಗೊತ್ತಾಗಿದೆ. ಇಷ್ಟು ದಿನ ಪತ್ನಿ ನನ್ನನ್ನು ನಂಬಿಸುತ್ತಿದ್ದಳು ಎಂಬ ಅರಿವಾಗಿದೆ. ರೆಡ್ಡಿಟ್ ನಲ್ಲಿ ಪತಿ ಮುಂದೇನು ಮಾಡ್ಬೇಕು ಎಂದು ಪ್ರಶ್ನೆ ಕೂಡ ಕೇಳಿದ್ದಾನೆ. ಹೆಂಡತಿ ದ್ವೇಷ ಮಾಡ್ಬೇಕಾ ಅಥವಾ ಆಕೆ ಕೊನೆ ಇಚ್ಛೆಯನ್ನು ಈಡೇರಿಸಬೇಕಾ ಎಂದು ಕೇಳಿದ ಪತಿ ಪತ್ನಿ ಸಾಯ್ತಿರುವ ಕಾರಣ ಆಕೆ ಆಸೆಗೆ ಯಸ್ ಎನ್ನದೆ ಬೇರೆ ದಾರಿ ಇಲ್ಲ ಎಂದಿದ್ದಾನೆ.