ಮಗನ ಹಾವಭಾವ ನೋಡಿಯೇ ಮಗನ ನಡೆ ಊಹಿಸ್ತಾರಂತೆ ಪ್ರಜ್ಞಾನಂದ ಅಮ್ಮ!

By Suvarna News  |  First Published Sep 6, 2023, 3:13 PM IST

ಅಮ್ಮನಿಗೆ ಸಮನಾದವರು ಯಾರಿಲ್ಲ. ಚೆಸ್ ಆಟಗಾರ ಪ್ರಜ್ಞಾನಂದರ ತಾಯಿ ನಾಗಲಕ್ಷ್ಮಿ ಇದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಹೆತ್ತಕರುಳಿಗೆ ಎಲ್ಲ ತಿಳಿಯುತ್ತೆ ಎಂಬುದಕ್ಕೆ ಇವರೇ ಉದಾಹರಣೆ. ಅಮ್ಮನ ಬಗ್ಗೆ ಪ್ರಜ್ಞಾ ನಂದ ಹೇಳಿದ್ದೇನು ಗೊತ್ತಾ?
 


ಅಮ್ಮನ ಸ್ಥಾನ ತುಂಬಲು ಮತ್ತ್ಯಾರಿಂದಲೂ ಸಾಧ್ಯವಿಲ್ಲ. ಸದಾ ಮಕ್ಕಳ ಒಳಿತನ್ನು ಬಯಸುವ ತಾಯಿ, ತನ್ನೆಲ್ಲ ಸ್ವಾರ್ಥವನ್ನು ತ್ಯಾಗ ಮಾಡಿ, ಮಕ್ಕಳ ಸೇವಗೆ ನಿಲ್ಲುತ್ತಾಳೆ. ಮಕ್ಕಳ ಸಾಧನೆಯನ್ನು ತನ್ನ ಸಾಧನೆ ಎನ್ನುವಂತೆ ಆನಂದಿಸುತ್ತಾಳೆ. ಎಷ್ಟೇ ಕಷ್ಟಗಳು ಬಂದ್ರೂ ಅದನ್ನು ಎದುರಿಸುವ ತಾಯಿ, ಮಕ್ಕಳಿಗೆ ನೋವಾಗದಂತೆ ನೋಡಿಕೊಳ್ತಾಳೆ. ಮಕ್ಕಳ ಹಿಂದೆ ತಾಯಿಯಿದ್ರೆ ಮಕ್ಕಳಿಗೆ ಆನೆ ಬಲ ಬಂದಂತೆ. ಇದಕ್ಕೆ ಚೆಸ್ ಆಟಗಾರ ಆರ್. ಪ್ರಜ್ಞಾನಂದ ಕೂಡ ಹೊರತಾಗಿಲ್ಲ.

ಬಾಕು (Baku) ದಲ್ಲಿ ನಡೆದ ಚೆಸ್ (Chess)  ವಿಶ್ವಕಪ್ ಫೈನಲ್ ಗೇರಿದ್ದ ಆರ್ ಪ್ರಜ್ಞಾನಂದ (R Praggananand) ಸದ್ಯ ಎಲ್ಲರ ಮೆಚ್ಚಿನ ಆಟಗಾರ. ವಿಶ್ವಕಪ್ ಫೈನಲ್ ನಲ್ಲಿ ಆಡಿದ ಭಾರತದ ಅತ್ಯಂತ ಕಿರಿಯ ಆಟಗಾರ ಪ್ರಜ್ಞಾನಂದ. ಚೆಸ್ ವಿಶ್ವಕಪ್ ನಲ್ಲಿ ಕೊನೆ ಕ್ಷಣದವರೆಗೂ ಅಧ್ಬುತ ಪ್ರದರ್ಶನ ತೋರಿದ ಪ್ರಜ್ಞಾನಂದ ಅವರಿಗೆ ಶುಭಾಷಯಗಳ ಮಳೆಯಾಗ್ತಿದೆ. ಪ್ರಧಾನಿ ನರೇಂದ್ರ ಮೋದಿ ಕೂಡ ಪ್ರಜ್ಞಾನಂದ ಸಾಧನೆಯನ್ನು ಶ್ಲಾಘಿಸಿದ್ದಾರೆ. ದೇಶ, ವಿದೇಶಗಳಲ್ಲಿ ಸುದ್ದಿಯಾಗಿರುವ ಪ್ರಜ್ಞಾನಂದ ಮಾತ್ರ ಪ್ರಸಿದ್ಧಿಯಾಗಿಲ್ಲ.  ತಾಯಿ ನಾಗಲಕ್ಷ್ಮಿ ಕೂಡ ಸೆಲೆಬ್ರಿಟಿಯಾಗಿದ್ದಾರೆ. ವಿಶ್ವಕಪ್ ಪಂದ್ಯಾವಳಿ ವೇಳೆ ಮಗ ಆಟವಾಡ್ತಿದ್ದಾಗ ಕೈಕಟ್ಟಿ ನಿಂತಿದ್ದ ನಾಗಲಕ್ಷ್ಮಿ ಫೋಟೋಗಳು ವೈರಲ್ ಆಗಿವೆ. ನಾಗಲಕ್ಷ್ಮಿ ಬಗ್ಗೆ ಮಗ ಪ್ರಜ್ಞಾನಂದ ಮಾತನಾಡಿದ್ದಾರೆ. ತಮ್ಮ ಸಾಧನೆ, ಜೀವನದಲ್ಲಿ ತಾಯಿ ಪಾತ್ರ ಎಷ್ಟು ಮುಖ್ಯ ಎಂಬುದನ್ನು ಹೇಳಿದ್ದಾರೆ.

Latest Videos

undefined

ಮಗನ ಬೆನ್ನೆಲುಬಾಗಿ ನಿಂತಿರುವ ನಾಗಲಕ್ಷ್ಮಿಗೆ ಚೆಸ್ ನಲ್ಲಿ ಆಸಕ್ತಿ ಇಲ್ಲವಂತೆ. ಹಾಗಂತ ಅವರೇ ಹೇಳಿದ್ದಾರೆ. ಆದ್ರೆ, ನಾನು ಆಟ ಆಡುವಾಗ ನನ್ನ ಹಾವಭಾವ ನೋಡಿಯೇ ನನ್ನಮ್ಮನಿಗೆ ನಾನು ಹೇಗೆ ಆಟವಾಡ್ತಿದ್ದೇನೆ ಎಂಬುದು ಗೊತ್ತಾಗುತ್ತದೆ ಎಂದು ಪ್ರಜ್ಞಾನಂದ ಹೇಳಿದ್ದಾರೆ.

ನನ್ನ ಅಪ್ಪ-ಅಮ್ಮನೇ ಈ ಪ್ರಶ್ನೆ ಕೇಳಲ್ಲ, ಇನ್ನು ನಿಮ್ಮದೇನ್ರಿ? ತಮನ್ನಾ ಭಾಟಿಯಾ ಗರಂ ಆಗಿದ್ದೇಕೆ?

ಸಂದರ್ಶನವೊಂದಲ್ಲಿ ಮಾತನಾಡಿದ್ದ ಪ್ರಜ್ಞಾನಂದ, ಬೋರ್ಡ್‌ನಲ್ಲಿ ನನ್ನ ಸ್ಥಾನ ಒಳ್ಳೆಯದಾಗಿದ್ಯಾ ಅಥವಾ ಕೆಟ್ಟದ್ದಾಗಿದ್ಯಾ ಎಂದು ನನ್ನ ಮುಖ ಅಥವಾ ವರ್ತನೆ ನೋಡಿ ನನ್ನ ತಾಯಿ ಹೇಳಬಲ್ಲರು ಎಂದಿದ್ದಾರೆ. ನನ್ನ ಈವೆಂಟ್ ನಲ್ಲಿ ಅವರು ಇರುವುದು ನನಗೆ ದೊಡ್ಡ ಬೆಂಬಲ. ನನಗೆ ಮಾತ್ರವಲ್ಲ ನನ್ನ ತಂಗಿಗೂ ಕೂಡ ಎಂದ ಪ್ರಜ್ಞಾನಂದ, ತಾಯಿ ಪಂದ್ಯಾವಳಿಯಲ್ಲಿ ಬರೀ ನನ್ನ ಪ್ರತಿಯೊಂದು ವಿಷ್ಯದ ಬಗ್ಗೆ ಕಾಳಜಿ ವಹಿಸೋದು ಮಾತ್ರವಲ್ಲ ಭಾವನಾತ್ಮಕ ಬೆಂಬಲ ನೀಡ್ತಾರೆಂದು  ಹೇಳಿದ್ದಾರೆ.

ನಾನು ಪಂದ್ಯಾವಳಿಗೆ ತಯಾರಿ ನಡೆಸಬೇಕು ಮತ್ತು ಚೆಸ್ ಆಡಬೇಕು : ನನ್ನ ತಾಯಿ ಅವರು ನನಗೆ ಎಷ್ಟು ಮುಖ್ಯ ಎಂದು ನಾನು ಪದಗಳಲ್ಲಿ ಹೇಳಲಾರೆ. ಬಾಕುನಲ್ಲಿ ನಡೆದ ವಿಶ್ವಕಪ್‌ನಲ್ಲಿ, ನಾನು ತಯಾರಿ ನಡೆಸುವುದು  ಮತ್ತು ಆಡುವುದು ಮಾತ್ರ ನನ್ನ ಕೆಲಸವಾಗಿತ್ತು. ನಾನೊಬ್ಬನೇ ಅಲ್ಲಿಗೆ ಹೋಗಿದ್ದರೆ ಇನ್ನೂ ಅನೇಕ ಕೆಲಸಗಳನ್ನು ಮಾಡಬೇಕಾಗುತ್ತಿತ್ತು. ಇಷ್ಟು ಸುದೀರ್ಘ ಟೂರ್ನಿಯಲ್ಲಿ ಏಕಾಂಗಿಯಾಗಿ ಎಲ್ಲ ಕೆಲಸ ನಿರ್ವಹಣೆ ಮಾಡುವುದು ತುಂಬಾ ಕಷ್ಟ. ನನ್ನ ಕುಟುಂಬವಿಲ್ಲದೆ ಹೋದ್ರೆ ನಾನು ಇರ್ತಿರಲಿಲ್ಲವೆಂದು ಪ್ರಜ್ಞಾನಂದ ಹೇಳಿದ್ದಾರೆ.

ನನ್ನ ಅಪ್ಪ-ಅಮ್ಮನೇ ಈ ಪ್ರಶ್ನೆ ಕೇಳಲ್ಲ, ಇನ್ನು ನಿಮ್ಮದೇನ್ರಿ? ತಮನ್ನಾ ಭಾಟಿಯಾ ಗರಂ ಆಗಿದ್ದೇಕೆ?

ಮಗನಿಗಾಗಿ ಮನೆ ಅಡುಗೆ ಮಾಡ್ತಾರೆ ಅಮ್ಮ : ಪ್ರಜ್ಞಾನಂದ್ ಮನೆ ಅಡುಗೆಯನ್ನು ಹೆಚ್ಚು ಇಷ್ಟಪಡ್ತಾರೆ. ಅವರು ಭಾರತದ ಆಹಾರ ಅದರಲ್ಲೂ ಮನೆ ಅಡುಗೆಯನ್ನು ಪಂದ್ಯಾವಳಿಗಿಂತ ಮೊದಲು ತಿನ್ನಲು ಬಯಸ್ತಾರೆ. ಹಾಗಾಗಿಯೇ ಅವರ ತಾಯಿ ತಮ್ಮ ಜೊತೆ ಅಡುಗೆ ಮಾಡಲು ಅಗತ್ಯವಿರುವ ಸಾಮಾನುಗಳನ್ನು ವಿದೇಶಕ್ಕೆ ತೆಗೆದುಕೊಂಡು ಹೋಗ್ತಾರೆ. ವಿಶ್ವಕಪ್ ಪಂದ್ಯಾವಳಿ ಸಂದರ್ಭದಲ್ಲೂ ಮನೆ ಅಡುಗೆ ಮಾಡಿ ನೀಡುತ್ತಿದ್ದರು. ಅದು ನನ್ನ ಮೇಲೆ ಪರಿಣಾಮ ಬೀರಿದೆ. ನನ್ನ ಪ್ರಯಾಣದುದ್ದಕ್ಕೂ ಇದೇ ನನ್ನ ದಿನಚರಿಯಾಗಿತ್ತು ಎಂದು ಪ್ರಜ್ಞಾನಂದ ಹೇಳಿದ್ದಾರೆ.

click me!