ಸದಾ ಕನ್ಪ್ಯೂಸ್ ಆಗೋ ಗಂಡಂದಿರಿಗೆ ನೆರವಾಗುತ್ತೆ ಈ ತರಕಾರಿ ಪಟ್ಟಿ!

By Suvarna News  |  First Published Sep 6, 2023, 2:40 PM IST

ಮನೆಗೆ ದಿನಸಿ, ತರಕಾರಿ ತರೋದು ಪುರುಷರಿಗೆ ದೊಡ್ಡ ತಲೆಬಿಸಿ. ಏನೇ ತೆಗೆದುಕೊಂಡು ಹೋದ್ರು ಮನೆಯವರನ್ನು ಮೆಚ್ಚಿಸೋದು ಕಷ್ಟ. ಪಾಪದ ಗಂಡ ಕಷ್ಟಪಡಬಾರದು, ಏನೇನೋ ತರಬಾರದು ಎನ್ನುವ ಕಾರಣಕ್ಕೆ ಪತ್ನಿಯೊಬ್ಬಳು ಮಾಡಿದ ಪ್ಲಾನ್ ಮಸ್ತ್ ಆಗಿದೆ.
 


ಮತ್ತದೆ ಕೊಳೆತ ಟೊಮಾಟೊ, ಬಾಡಿದ ಬೀನ್ಸ್ ಮನೆಗೆ ಬಂದಿದೆ. ತರಕಾರಿ ಅಂಗಡಿ ಮುಂದೆ ನಿಂತು ಅದು ಕೊಡಿ, ಇದು ಕೊಡಿ ಅಂತಾ ಹೇಳಿ, ಅವನು ಕೊಟ್ಟಿದ್ದನ್ನು ಮನೆಗೆ ತಂದ್ರೆ ನಿಮ್ಮ ಕೆಲಸ ಮುಗೀತು.. ಹೀಗಂತ ಬಹುತೇಕ ಎಲ್ಲ ಮನೆಯ ಗಂಡಸರು, ಪತ್ನಿಯಿಂದ ಬೈಗುಳ ತಿನ್ನುತ್ತಾರೆ. ತರಕಾರಿ ಆರಿಸಿ, ಯಾವುದು ಸರಿ ಇದೆ, ಯಾವುದು ಬೆಳೆದಿದೆ, ಯಾವುದು ಸೂಕ್ತ ಎಂಬುದನ್ನ ನೋಡಿ ಒಂದೊಂದೇ ಎತ್ತಿ ಬುಟ್ಟಿಗೆ ಹಾಕಿಕೊಳ್ಳುವಷ್ಟು ತಾಳ್ಮೆ ಪುರುಷರಿಗಿಲ್ಲ. ತರಕಾರಿ ಇವೆಲ್ಲ ಬೇಕು, ದಿನದಿ ಇಷ್ಟು ಬೇಕು ಅಂತಾ ಪತ್ನಿ ಹೇಳಿ ಕಳಿಸಿದ್ರೆ ಮನೆಗೆ ಬಂದಾಗ ಬ್ಯಾಗ್ ನಲ್ಲಿರೋದೇ ಬೇರೆ. ಇದೇ ಕಾರಣಕ್ಕೆ ಕೆಲ ಮಹಿಳೆಯರು ಪಟ್ಟಿ ಮಾಡಿ ಕಳಿಸ್ತಾರೆ. ಚೀಟಿಯಲ್ಲಿ ವಸ್ತುಗಳು, ತರಕಾರಿ ಲೀಸ್ಟ್ ಇದ್ರೂ ತಪ್ಪಾಗಿ ತರುವ ಪುರುಷರಿಗೇನು ಕಡಿಮೆ ಇಲ್ಲ.

ತರಕಾರಿ (Vegetables) , ದಿನಸಿ ಖರೀದಿ ಹಾಗೂ ಪುರುಷರು ತದ್ವಿರುದ್ಧ ಎನ್ನಬಹುದು. ಬಹಳ ಅಪರೂಪಕ್ಕೆ ಕೆಲ ಪುರಷರಿಗೆ ತರಕಾರಿ ಬಗ್ಗೆ ಸರಿಯಾದ ಮಾಹಿತಿ ಇರುತ್ತದೆ. ಇನ್ನು ಕೆಲವರಿಗೆ ತರಕಾರಿ ಹೆಸರು ಕೂಡ ಸರಿಯಾಗಿ ತಿಳಿದಿರೋದಿಲ್ಲ. ಅಂಥವರನ್ನು ತರಕಾರಿ ಖರೀದಿಗೆ ಕಳುಹಿಸಿದ್ರೆ ಏನೆಲ್ಲ ಕಷ್ಟವಾಗ್ಬಹುದು? ಮೋಸ್ಟ್ಲಿ ಈ ಮಹಿಳೆ ಕೂಡ ತನ್ನ ಪತಿ ನಾಲ್ಕೈದು ಬಾರಿ ತಪ್ಪು ತಪ್ಪಾಗಿ ತರಕಾರಿ ತಂದಿದ್ದನ್ನು ನೋಡಿ ಬೇಸತ್ತಿರಬೇಕು. ಅದೇ ಕಾರಣಕ್ಕೆ ಒಂದು ತರಕಾರಿ ಲೀಸ್ಟ್ (Least) ಮಾಡಿದ್ದಾಳೆ.

Latest Videos

undefined

ಅತಿಯಾದ ಸೆಕ್ಸ್ ಬಯಕೆಗೆ ಇದೇ ಕಾರಣ, ಇದೊಂದು ಮಾನಸಿಕ ಸಮಸ್ಯೆಯೇ?

ಮಹಿಳೆಯರು ತರಕಾರಿ ಲೀಸ್ಟ್ ಮಾಡೋವಾಗ ತರಕಾರಿ ಹೆಸರು, ಎಷ್ಟು ಕೆ.ಜಿ ಬೇಕು ಎಂಬುದನ್ನು ಬರೆಯುತ್ತಾರೆ. ಆದ್ರೆ ಈಕೆ ತರಕಾರಿ ಲೀಸ್ಟ್ ಸಂಪೂರ್ಣ ಭಿನ್ನವಾಗಿದೆ.
ಯಾವ ತರಕಾರಿ ಎಷ್ಟು ಬೇಕು ಎನ್ನುವುದನ್ನು ಮಾತ್ರ ಈಕೆ ಬರೆದಿಲ್ಲ.   ಕೆಲವು ತರಕಾರಿಗಳು ಮತ್ತು ದಿನಸಿ ವಸ್ತುಗಳ ಪ್ರಮಾಣ ಮತ್ತು ಸಂಖ್ಯೆಗಳ ಬಗ್ಗೆ ವಿವರವಾಗಿ ಬರೆದಿದ್ದಾಳೆ. ಈ ಪಟ್ಟಿಯನ್ನು ನೋಡಿದರೆ  ಶಾಲೆಯ ಪಠ್ಯಕ್ರಮದ ವಿವರವಾದ ಟಿಪ್ಪಣಿ ನೋಡಿದಂತಾಗುತ್ತದೆ.  ಪತಿಗೆ ಶಾಪಿಂಗ್‌ನಲ್ಲಿ ಯಾವುದೇ ತೊಂದರೆಯಾಗಬಾರದು ಎನ್ನುವ ಕಾರಣಕ್ಕೆ ಹಾಗೂ ಮಾರುಕಟ್ಟೆಯಿಂದ ಸರಿಯಾದ ವಸ್ತುಗಳನ್ನು ಮಾತ್ರ ಆತ ತರಬೇಕು ಎನ್ನುವ ಕಾರಣಕ್ಕೆ ಪತ್ನಿ ಯಾವ ವಸ್ತುಗಳನ್ನು ಯಾವ ಪ್ರಮಾಣದಲ್ಲಿ ಮತ್ತು ಯಾವ ಬಣ್ಣ ಮತ್ತು ವಿನ್ಯಾಸದಲ್ಲಿ ತರಬೇಕು ಎಂದು ಪಟ್ಟಿಯಲ್ಲಿ ನಮೂದಿಸಿದ್ದಾಳೆ.

ಅರ್ಧ ವಯಸ್ಸಿನವಳನ್ನು ಮದ್ವೆಯಾದ ತಂದೆ ಬೆಂಬಲಿಸಿದ ಬಾಬಿ ಡಿಯೋಲ್ ಪತ್ನಿಗೆ ಸಿಕ್ಕಿದ್ದು ಕೋಟಿ ಕೋಟಿ ಆಸ್ತಿ!

trolls_official ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ಪಟ್ಟಿಯ ಫೋಟೋವನ್ನು ಹಂಚಿಕೊಳ್ಳಲಾಗಿದೆ. ಪಟ್ಟಿಯಲ್ಲಿ ಈರುಳ್ಳಿ, ಮೆಣಸಿನಕಾಯಿ, ಪಾಲಕ್, ಆಲೂಗಡ್ಡೆ ಇತ್ಯಾದಿಗಳ ಸರಿಯಾದ ರೇಖಾಚಿತ್ರವನ್ನು ಸಹ ಬಿಡಿಸಲಾಗಿದೆ. ಯಾವ ಆಲೂಗೆಡ್ಡೆ ಬೇಕು, ಯಾವ ಟೊಮೆಟೊ ಬೇಕು, ಪಾಲಕ್ ಸೊಪ್ಪು, ಮೆಣಸಿನಕಾಯಿ ಹೇಗಿರಬೇಕು ಎಂಬುದನ್ನೆಲ್ಲ ರೇಖಾಚಿತ್ರ ಮಾಡಿ ಪತ್ನಿ ನೀಡಿದ್ದಾಳೆ. 
ಕೆಲವೊಂದು ಟೊಮೊಟೊ ಹಳದಿ ಮತ್ತು ಕೆಲವೊಂದು ಕೆಂಪು ಬಣ್ಣದಲ್ಲಿರಬೇಕು ಎಂದು ಪಟ್ಟಿಯಲ್ಲಿ ಬರೆದಿದ್ದಾಳೆ.  ಈರುಳ್ಳಿ ದುಂಡಗೆ ಸಣ್ಣಗಿರಬೇಕೆಂದು ಹೇಳಿದ್ದಾಳೆ. ಆಲೂಗಡ್ಡೆ ಚಿತ್ರವನ್ನು ಕೂಡ ಆಕೆ ಬಿಡಿಸಿದ್ದಾಳೆ. ಮೆಣಸಿನ ಕಾಯಿ ನೇರವಾಗಿರಬೇಕೆಂದು ಹೇಳಿದ ಪತ್ನಿ, ಉಚಿತವಾಗಿ ನೀಡುವಂತೆ ಕೇಳಿ ಎಂದೂ ಪಟ್ಟಿಯಲ್ಲಿ ಬರೆದಿದ್ದಾಳೆ.

ಇನ್ಸ್ಟಾದಲ್ಲಿ ಈ ಪೋಸ್ಟನ್ನು 84 ಸಾವಿರಕ್ಕೂ ಹೆಚ್ಚು ಮಂದಿ ಲೈಕ್ ಮಾಡಿದ್ದಾರೆ. ಅನೇಕ ಕಮೆಂಟ್ ಬಂದಿದೆ. ಜನರು ಮಹಿಳೆಯ ಚಾಲಾಕಿತನವನ್ನು ಮೆಚ್ಚಿದ್ದಾರೆ. ಆಕೆ ಯಾವ ಶಾಪ್ ನಿಂದ ವಸ್ತುಗಳನ್ನು ತರಬೇಕು ಎಂಬುದನ್ನು ಬರೆದಿದ್ದಲ್ಲದೆ ಕೊನೆಯಲ್ಲಿ ಹಾರ್ಟ್ ಚಿತ್ರ ಬಿಡಿಸಿದ್ದು ನೆಟ್ಟಿಗರ ಗಮನವನ್ನು ಸೆಳೆದಿದೆ. ಮಹಿಳೆ ಏನು ಬೇಕಾದ್ರೂ ಮಾಡಬಲ್ಲಳು ಎಂದು ಒಬ್ಬರು ಕಮೆಂಟ್ ಮಾಡಿದ್ರೆ, ಪುರುಷರಿಗೆ ಇದು ಸವಾಲಿನ ಕೆಲಸವೆಂದು ಇನ್ನೊಬ್ಬರು ಬರೆದಿದ್ದಾರೆ.
 

click me!