
ಹುಡುಗಿಯೊಬ್ಬಳು (Girl) ಹುಡುಗ(Male)ನೊಂದಿಗೆ ಮಾತನಾಡುತ್ತಿದ್ದಾಳೆ ಎಂದರೆ, ಬರೀ ಅಷ್ಟೇ ಅಲ್ಲ. ಆಕೆ, ಆತನ ಹಾವಭಾವ (Attitude) ಸೇರಿದಂತೆ ಬಹಳಷ್ಟು ಗುಣಾವಗುಣಗಳನ್ನೂ (Habits) ಅವಲೋಕಿಸುತ್ತಿರುತ್ತಾಳೆ, ಗಮನಿಸುತ್ತಾಳೆ. ಕೆಲವು ಗುಣಗಳು ಹುಡುಗರಲ್ಲಿ ಕಂಡುಬಂದರೆ ಅವರಿಗೆ ಬಿಲ್ಕುಲ್ ಇಷ್ಟ(Like)ವಾಗುವುದಿಲ್ಲ. ಹೀಗಾಗಿ, ಮುಂದಿನ ಬಾರಿ ಹುಡುಗಿಯರೊಂದಿಗೆ ಮಾತನಾಡುವಾಗ ಸ್ವಲ್ಪ ಎಚ್ಚರಿಕೆಯಿಂದ ಇರಿ.
ಹಾಗಿದ್ರೆ, ಯಾವ ರೀತಿಯ ಹುಡುಗರು ಸಾಮಾನ್ಯವಾಗಿ ಹುಡುಗಿಯರಿಗೆ ಇಷ್ಟವಾಗೋದಿಲ್ಲ? ನೋಡ್ಕೊಳಿ.
• ತಮಗೆ ತಾವೇ ಗ್ರೇಟ್ (Great) ಎಂದುಕೊಳ್ಳುವ ಹುಡುಗರು
ಹುಡುಗಿಯರು ಈ ಮಾದರಿಯ ಹುಡುಗರನ್ನು ಕಂಡರೆ ಸಿಡಿದೇಳುತ್ತಾರೆ. ಮಹಿಳೆಯರನ್ನು ಕೆಳಭಾವನೆಯಲ್ಲಿ ನೋಡುವುದು, ಹುಡುಗರೆಂದರೆ ಗ್ರೇಟ್ ಎಂದುಕೊಳ್ಳುವ ಮನೋಭಾವ ಅವರಿಗೆ ಎಳ್ಳಷ್ಟೂ ಹಿಡಿಸುವುದಿಲ್ಲ. ಒಂದೊಮ್ಮೆ ನೀವೂ ಇಂಥ ವ್ಯಕ್ತಿಯಾಗಿದ್ದರೆ ಮೇಲ್ನೋಟಕ್ಕಷ್ಟೇ ಅಲ್ಲ, ಅಂತರಂಗದಿಂದ ಈ ನಿಲುವನ್ನು ಬದಲಿಸಿಕೊಳ್ಳಿ. ಏಕೆಂದರೆ, ಇಂದಿನ ದಿನಗಳಲ್ಲಿ ಪುರುಷ-ಮಹಿಳೆ ಎನ್ನುವ ಭೇದವಿಲ್ಲ. ನಿಮ್ಮ ಕುಟುಂಬದ (Family) ಹಳೆಯ ತಲೆಮಾರಿನವರಲ್ಲಿ ಆ ಭಾವನೆ ಇದ್ದಿರಬಹುದು, ಹೀಗಾಗಿ, ನಿಮ್ಮಲ್ಲೂ ಅದು ಮೂಡಿರಬಹುದು. ಇಂದಿನ ಮಹಿಳೆಯರು ನಿಮಗಿಂತ ಖಂಡಿತವಾಗಿ ಕಡಿಮೆಯಲ್ಲ (Low) ಹಾಗೂ ದುರ್ಬಲ (Weak)ರಲ್ಲ.
• ಹೇಳಿದ್ದಕ್ಕೆಲ್ಲ ಹೂಂ ಗುಡುವವರು
ಪ್ರತಿ ವಿಚಾರದಲ್ಲೂ ತಮ್ಮ ನಿಲುವನ್ನು (Stand) ಸ್ಪಷ್ಟವಾಗಿ ಪ್ರತಿಪಾದಿಸುವ ಹುಡುಗರು ಮಹಿಳೆಯರಿಗೆ ಸಾಮಾನ್ಯವಾಗಿ ಇಷ್ಟವಾಗುತ್ತಾರೆ. ಅದು ಸರಿಯಾದರೆ ಸರಿ, ತಪ್ಪಾದರೆ ತಪ್ಪು. ಆದರೆ, ಹೇಳಿದ್ದಕ್ಕೆಲ್ಲ ತಲೆ ಹಾಕುವ ಮಂದಿ ಅವರಿಗೆ ಇಷ್ಟವಾಗುವುದಿಲ್ಲ. ಹುಡುಗಿ ಹೇಳಿದ್ದಕ್ಕೆಲ್ಲ ತಲೆ ಹಾಕುತ್ತ ಕೆಲವು ದಿನಗಳ ಕಾಲ ಮಾತ್ರ ಅವಳನ್ನು ಖುಷಿ(Happy)ಯಾಗಿಡಬಹುದು. ಆದರೆ, ನಂತರ ಅವಳಿಗೆ ನೀವು ಬೋರೆನಿಸಲು ಶುರುವಾಗುತ್ತೀರಿ. ನಿಮಗೆ ಏನೂ ಗೊತ್ತೇ ಇಲ್ಲ ಎನಿಸಲು ಆರಂಭವಾಗುತ್ತದೆ.
• ಸಂಗಾತಿಯ ರೂಪದಲ್ಲಿ ಮಗು (Child)!
ನೀವು ಹೊರಗಿಂದ ಎಷ್ಟೇ ಆಕರ್ಷಕವಾಗಿರಿ (Attractive), ಅದರಿಂದ ಏನೂ ವ್ಯತ್ಯಾಸವಾಗುವುದಿಲ್ಲ. ಆದರೆ, ಒಂದೊಮ್ಮೆ ಮನಸ್ಥಿತಿ ಮಕ್ಕಳ ಹೊಂದಿದ್ದರೆ ಹೆಚ್ಚಿನ ಮಹಿಳೆಯರಿಗೆ ಇಷ್ಟವಾಗುವುದಿಲ್ಲ. ಮಹಿಳೆಯರಿಗೆ ತಾವು ಪುರುಷರ ಮೇಲೆ ಅವಲಂಬಿತರಾಗುವುದು ಇಷ್ಟವಾಗುವುದಿಲ್ಲ. ಆದರೆ, ಅದಕ್ಕಿಂತ ಹೆಚ್ಚಾಗಿ, ತನ್ನ ಮೇಲೆ ಅವಲಂಬಿತರಾಗುವ ಪುರುಷರಂತೂ ಇಷ್ಟವಾಗುವುದೇ ಇಲ್ಲ. ಮಕ್ಕಳಂತೆ ಮಾತನಾಡುವವರು, ತಮ್ಮ ಕೆಲಸಗಳನ್ನು ತಾವು ಮಾಡಿಕೊಳ್ಳದಿರುವವರು, ತಮ್ಮ ಬಟ್ಟೆಬರೆಗಳನ್ನು (Cloth) ನೀಟಾಗಿ ಇಟ್ಟುಕೊಳ್ಳದ ಮಂದಿಯನ್ನು ಮಹಿಳೆಯರು ದೂರವೇ ಇಡುತ್ತಾರೆ. ಸರಿಯಾದ ನೌಕರಿ ಮಾಡದೇ ಮನೆಯಲ್ಲೇ ಇರುವ ಪುರುಷರನ್ನು ಸಹ ಯಾವುದೇ ಮಹಿಳೆಯರು ಹತ್ತಿರ ಸೇರಿಸುವುದಿಲ್ಲ.
Abusive Relationship ನಿಂದ ಹೊರ ಬಂದು ಆತ್ಮಗೌರವ ಹೆಚ್ಚಿಸಿಕೊಳ್ಳಿ..
• ಸದಾ ಉಪದೇಶ (Preach) ನೀಡುವವರು
ಸದಾಕಾಲ ಉಪದೇಶ ನೀಡುವವರು ಮಹಿಳೆಯರಾಗಲೀ ಪುರುಷರಾಗಲೀ ಯಾರೂ ಅವರನ್ನು ಇಷ್ಟಪಡುವುದಿಲ್ಲ. ಹಾಗೆಯೇ ಹುಡುಗಿಯರು ಸಹ ಅಂತಹ ಹುಡುಗರನ್ನು ಪ್ರೀತಿಸುವುದಿಲ್ಲ. ಯಾವುದೇ ವಿಚಾರದ ಬಗ್ಗೆ ಗಂಭೀರವಾದ ಆಸಕ್ತಿಯಿಲ್ಲದೆ ಕೇವಲ ಎಂಜಾಯ್ ಮಾಡುವ ಗುಣದವರು ತಮ್ಮ ನಡತೆಗೆ ಅನುಗುಣವಾಗಿ ವಾದ ಮಾಡುತ್ತಾರೆ, ಉಪದೇಶ ನೀಡುತ್ತಾರೆ. ಅಂಥವರನ್ನು ಕಂಡರೆ ಮಹಿಳೆಯರಿಗೆ ತಲೆ ಸಿಡಿಯಲು ಆರಂಭವಾಗುತ್ತದೆ.
Relationship Tips : 30ರ ಹರೆಯದಲ್ಲೂ ಒಂಟಿಯಾಗಿರುವವರಿಗೆ ಕಿವಿಮಾತು
• ಡಾಮಿನೇಟ್ (Dominate) ಮಾಡುವವರು
ಡಾಮಿನೇಟ್ ಮಾಡುವುದು ಕೆಲವು ಹುಡುಗರ ಅಭ್ಯಾಸ. ಎಲ್ಲ ಸಂಗತಿಗಳಲ್ಲೂ ಅವರು ತಮ್ಮ ಮಾತೇ ನಡೆಯಬೇಕು ಎನ್ನುತ್ತಾರೆ. ಸಂಗಾತಿಯನ್ನು ನಿಯಂತ್ರಿಸಲು ಯತ್ನಿಸುತ್ತಾರೆ. ಅದಕ್ಕಾಗಿ ಸಾಕಷ್ಟು ಕಸರತ್ತುಗಳನ್ನೂ ಮಾಡುತ್ತಾರೆ. ಇಂದಿನ ಹುಡುಗಿಯರು ಸಾಕಷ್ಟು ತಿಳಿವಳಿಕೆ ಹೊಂದಿರುತ್ತಾರೆ. ತಮ್ಮ ಬದುಕು, ಇಷ್ಟಾನಿಷ್ಟಗಳ ಕುರಿತು ಸ್ಪಷ್ಟತೆ ಹೊಂದಿರುತ್ತಾರೆ. ಅವರಿಗೆ ಈ ಥರದ ಗುಣ ಇಷ್ಟವಾಗುವುದಿಲ್ಲ. ಇನ್ನೊಬ್ಬರ ಶರತ್ತಿನಂತೆ, ಅವರ ನಿಯಂತ್ರಣದಲ್ಲಿ ಬದುಕುವುದು ಅವರಿಂದ ಸಾಧ್ಯವಿಲ್ಲ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.