ಪ್ರತಿದಿನ ಯಾರೋ ಒಬ್ಬರು ನಿಮ್ಮನ್ನು ನಿಂದಿಸುತ್ತಾರೆ ಅಂದರೆ ಅದನ್ನು ಎದುರಿಸುವುದು ಅಷ್ಟು ಸುಲಭವಲ್ಲ. ಕೆಲವೊಮ್ಮೆ ಇಂತಹ ನಿಂದನೆಗಳಿಂದ ಛಲ ಹೆಚ್ಚುತ್ತದೆ. ಆದರೆ, ಹೆಚ್ಚಿನ ಸಂದರ್ಭದಲ್ಲಿ ನಿಂದನೆ ನಮ್ಮ ಆತ್ಮಗೌರವಕ್ಕೆ ಧಕ್ಕೆ ಉಂಟುಮಾಡುತ್ತದೆ. ಇಂತಹ ಸಂದರ್ಭದಲ್ಲಿ ಎದುರಿಸುವುದು ಹೇಗೆ?
ನಿಮ್ಮ ಪ್ರೇಮಿ, ಜೀವನ ಸಂಗಾತಿ (Life partner) ನಿಮ್ಮನ್ನು ಪ್ರೀತಿಸುವುದಕ್ಕಿಂತ ಹೆಚ್ಚು ನಿಂದಿಸುತ್ತಾರೆ, ನಿಮಗೆ ಕೆಡಕು ಬಯಸುತ್ತಾರೆ ಅಂದರೆ ಅಂಥವರಿಂದ ದೂರವಿರುವುದು ಒಳ್ಳೆಯದು. ಯಾವುದೇ ಒಬ್ಬ ವ್ಯಕ್ತಿಗಿಂತಲೂ ನಿಮ್ಮ ಆತ್ಮಗೌರವವೇ ಹೆಚ್ಚು ಮುಖ್ಯ. ಇಂಥ ಜನರಿಂದ ದೂರ ಸರಿದು ಏನೂ ನಡೆದೇ ಇಲ್ಲ ಎಂಬಂತೆ ಬದುಕುವುದು ಸುಲಭವಲ್ಲ (Not easy). ಆದರೆ, ಅಸಾಧ್ಯವೂ ಅಲ್ಲ. ನೀವೂ ಇಂಥ ಸಂಬಂಧದಿಂದ ದೂರ ಬಂದಿದ್ದರೆ ಮೊದಲು ನಿಮಗೆ ನೀವೇ ಬೆನ್ನು ತಟ್ಟಿಕೊಳ್ಳಿ. ನಿಮ್ಮ ಹಳೆ ಪ್ರೇಮಿ (Ex lover) ನಿಮ್ಮನ್ನು ಸದಾ ಕಾಲ ಮಾನಸಿಕ ನಿಂದನೆಗೆ (Emotional abuse) ಒಳಪಡಿಸಿರಬಹುದು, ದೈಹಿಕ ಹಿಂಸಾಚಾರ (Physical violence) ಮಾಡಿರಬಹುದು, ಸದಾಕಾಲ ನಿಮ್ಮನ್ನು ಉಪಯೋಗಿಸಿಕೊಂಡಿರಬಹುದು. ಆದರೆ, ನೀವು ಇದನ್ನು ಮನಸ್ಸಿನಲ್ಲಿಟ್ಟುಕೊಂಡು ಕೊರಗಬೇಡಿ. ನೀವೂ ಒಳ್ಳೆಯ ಸಂಗಾತಿಯನ್ನು ಪಡೆಯಲು ಅರ್ಹರಿದ್ದೀರಿ, ನೆನಪಿನಲ್ಲಿಡಿ..
ಇಂಥ ಸನ್ನಿವೇಶದಿಂದ (Situation) ಹೊರಬಂದು ನೀವು ನಿಮ್ಮ ಆತ್ಮಗೌರವವನ್ನು ಹೆಚ್ಚಿಸಿಕೊಳ್ಳಬೇಕು. ಅದಕ್ಕಾಗಿ ಸ್ವಲ್ಪ ದಿನಗಳು ಬೇಕಾಗಬಹುದು. ಆದರೆ ನಿಧಾನವಾಗಿಯಾದರೂ ನೀವು ಇದರಿಂದ ಹೊರಬರುತ್ತೀರಿ. ನಿಮ್ಮ ಮೇಲೆ ನೀವು ನಂಬಿಕೆ ಇಟ್ಟುಕೊಳ್ಳಿ ಹಾಗೂ ಈ ಕೆಲವು ಅಂಶಗಳನ್ನು ಪಾಲಿಸಿ..
Parenting Tips: ಹದಿಹರೆಯದವರು ನಿಮ್ಮ ಮಾತು ಕೇಳಬೇಕು ಅಂದರೆ ಹೀಗೆ ಮಾಡಿ..
Relationshipi Status: ನೀವು ಸಿಂಗಲ್ ಆಗಿರೋದು ಇದೇ ಕಾರಣಕ್ಕೆ !
ಯಾವ ವಿಷಯವೂ ಒಂದೇ ದಿನದಲ್ಲಿ ಸರಿ ಹೋಗುವುದಿಲ್ಲ. ನಿಮ್ಮ ಮನಸ್ಸು ಸರಿ ಹೋಗಲು ನಿಮ್ಮ ಮೇಲೆ ಒತ್ತಡ ಹೇರಿಕೊಳ್ಳಬೇಡಿ. ನಿಮಗೆ ಬೇಕಾದಷ್ಟು ಸಮಯ ತೆಗೆದುಕೊಂಡು ನಿಧಾನವಾಗಿ ಅದರಿಂದ ಹೊರಬನ್ನಿ. ನಿಮ್ಮ ಆತ್ಮಗೌರವವನ್ನು (Self-esteem) ಹೆಚ್ಚಿಸಿಕೊಳ್ಳುವ ಜವಾಬ್ದಾರಿ ನಿಮ್ಮದೇ ಆಗಿರುತ್ತದೆ.