
ನಮ್ಮ ಹೆತ್ತವರು ನಮ್ಮ ಬಗ್ಗೆ ನಿಜವಾಗಿಯೂ ಏನು ಯೋಚಿಸುತ್ತಾರೆ ಎಂಬುದರ ಬಗ್ಗೆ ನಮಗೆಲ್ಲರಿಗೂ ನಿರಂತರವಾದ ಆಶ್ಚರ್ಯವಿರುತ್ತದೆ. ನಾವು ಎಷ್ಟೇ ಯಶಸ್ವಿಯಾಗಿದ್ದರೂ, ನಾವು ನಿಜವಾಗಿಯೂ ನಮ್ಮ ಹೆತ್ತವರನ್ನು ಹೆಮ್ಮೆಪಡುವಂತೆ ಮಾಡಿದ್ದೇವೆಯೇ ಎಂದು ಗೊತ್ತಾಗುವುದಿಲ್ಲ. ಆ ಆಲೋಚನೆಯೇ ಪದೇ ಪದೇ ಬರುತ್ತಿರುತ್ತದೆ. ಏಕೆಂದರೆ ನಮ್ಮ ಮನಸ್ಸಿನಲ್ಲಿ ಅವರು ನಮ್ಮ ಶ್ರೇಷ್ಠ ನ್ಯಾಯಾಧೀಶರು. ಹಾಗಾದರೆ ಯಾವಾಗ ನಮ್ಮ ಹೆತ್ತವರು ನಮ್ಮನ್ನು ಕಂಡು ಹೆಮ್ಮೆ, ಸಂತೋಷಪಡುತ್ತಾರೆ? ಈ 11 ಸನ್ನಿವೇಶಗಳಲ್ಲಿ ಹಾಗಾಗುತ್ತದಂತೆ. ಆಚಾರ್ಯ ಚಾಣಕ್ಯ ಹೇಳುತ್ತಾರೆ ನೋಡಿ.
1) ನೀವು ಮಗುವಾಗಿದ್ದಾಗ ಅವರು ನಿಮ್ಮಲ್ಲಿ ಅಭ್ಯಾಸ ಮಾಡಿಸಿದ್ದನ್ನು ನೀವು ಅನುಸರಿಸುವುದನ್ನು ಮುಂದುವರಿಸಿದಾಗ. ಮಂಗಳವಾರ ಮಾಂಸಾಹಾರ ಸೇವಿಸದಿರುವುದು, ಪ್ರತಿ ವಾರಾಂತ್ಯದಲ್ಲಿ ನಿಮ್ಮ ಅಜ್ಜ- ಅಜ್ಜಿಯರ ಮನೆಗೆ ಭೇಟಿ ನೀಡುವುದು- ಇಂತಹ ಸರಳವಾದ ವಿಷಯವಾಗಿರಬಹುದು. ನೀವು ಅದನ್ನು ನಿಮ್ಮ ಪೂರ್ಣ ಹೃದಯದಿಂದ ಅನುಸರಿಸಿದರೆ ನೀವು ನಿಮ್ಮ ಹೆತ್ತವರನ್ನು ಹೆಮ್ಮೆಪಡುವಂತೆ ಮಾಡುತ್ತೀರಿ.
2) ನೀವು ಸ್ವಂತವಾಗಿ ನಿರ್ಧಾರ ತೆಗೆದುಕೊಂಡಾಗ. ನಿಮ್ಮ ಪೋಷಕರು ಇದನ್ನು ನೀವು ನಿಮ್ಮ ಜೀವನದ ಮೇಲೆ ನಿಯಂತ್ರಣ ಸಾಧಿಸಿರುವ ಸಂಕೇತವೆಂದು ಪರಿಗಣಿಸುತ್ತಾರೆ. ನೀವು ಅಂತಿಮವಾಗಿ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತಿದ್ದೀರಿ ಎಂದು ಅವರು ರೋಮಾಂಚನಗೊಳ್ಳುತ್ತಾರೆ.
3) ನೀವು ಮತ್ತು ನಿಮ್ಮ ಸಹೋದರ/ಸಹೋದರಿ ಸದಾ ಆತ್ಮೀಯತೆ ಪ್ರೀತಿ ಉಳಿಸಿಕೊಂಡು ಇದ್ದಾಗ. ನೀವು ಮತ್ತು ನಿಮ್ಮ ಸಹೋದರ/ಸಹೋದರಿ ಒಟ್ಟಿಗೆ ಕೆಲಸಗಳನ್ನು ಮಾಡುವಾಗ ಪೋಷಕರು ಹೆಚ್ಚು ಸಂತೋಷಪಡುತ್ತಾರೆ.
4) ನೀವು ದೀರ್ಘಾವಧಿ ಪ್ಲಾನಿಂಗ್ ಮಾಡಿದಾಗ. ನೀವು ಈ ಬಗ್ಗೆ ಹೆಚ್ಚು ಸೆನ್ಸಿಬಲ್ ಆಗಿರುವುದನ್ನು ನೋಡಿ ನಿಮ್ಮ ತಾಯಿ ನಿಜವಾಗಿಯೂ ಹೆಮ್ಮೆಪಡುತ್ತಾರೆ. ಅವರನ್ನು ನೋಡಿಕೊಳ್ಳಿ. ಏಕೆಂದರೆ ನೀವು ನಿಮ್ಮ ಎಲ್ಲಾ ಅರಿವನ್ನು ಅವರಿಂದ ಪಡೆದುಕೊಂಡಿದ್ದೀರಿ!
5) ನೀವು ಕುಟುಂಬ ಕಾರ್ಯಕ್ರಮದ ಜವಾಬ್ದಾರಿ ನಿಭಾಯಿಸಿದಾಗ. ಅದು ಕುಟುಂಬ ಭೋಜನ ಆಗಿರಬಹುದು, ಮದುವೆಯಂಥ ದೊಡ್ಡ ಜವಾಬ್ದಾರಿ ಆಗಿರಬಹುದು. ನೀವು ನಿಮ್ಮ ತಂದೆ ತಾಯಿಗೆ ಇದರಲ್ಲಿ ಸಂಪೂರ್ಣವಾಗಿ ನೆರವಾದರೆ ಅವರು ತುಂಬಾ ಹೆಮ್ಮೆಪಡುತ್ತಾರೆ. ತುಂಬಾ ಹೆಮ್ಮೆ.
6) ಹಣ ಹೂಡಿಕೆ ಮತ್ತು ವಿಮೆಯಂತಹ ವಿಷಯಗಳಲ್ಲಿ ನೀವು ತೊಡಗಿಸಿಕೊಳ್ಳಲು ಪ್ರಾರಂಭಿಸಿದಾಗ. ನೀವು ನಿಜವಾಗಿಯೂ ಭವಿಷ್ಯದ ಬಗ್ಗೆ ಯೋಚಿಸಿದ್ದೀರಿ ಎಂದು ಅವರು ರೋಮಾಂಚನಗೊಳ್ಳುತ್ತಾರೆ. ನೀವು ಸರಿಯಾಗಿ ಬೆಳೆದಿದ್ದೀರಿ ಎಂದುಕೊಳ್ಳುತ್ತಾರೆ.
7) ನಿಮ್ಮ ಕುಟುಂಬ ಸದಸ್ಯರ ಬಗ್ಗೆ ನೀವು ಕಾಳಜಿಯನ್ನು ತೋರಿಸಿದಾಗ. ನೀವು ಅಜ್ಜ ಅಜ್ಜಿ ಚಿಕ್ಕಪ್ಪ ಚಿಕ್ಕಮ್ಮ ಅತ್ತೆ ಹೀಗೆ ಇವರಿಗೆಲ್ಲ ಕರೆ ಮಾಡಿ ಅವರ ಆರೋಗ್ಯ ಮತ್ತು ಅವರ ಜೀವನದ ಬಗ್ಗೆ ವಿಚಾರಿಸಿದಾಗ, ನಿಮ್ಮ ಪೋಷಕರು ನಿಮ್ಮ ಬಗ್ಗೆ ಒಳಗೊಳಗೇ ಆನಂದಪಡುತ್ತಾರೆ.
8) ನಿಮ್ಮ ಕೋಣೆ ಅಚ್ಚುಕಟ್ಟಾಗಿ ಇದ್ದರೆ. ಕಸದ ಬುಟ್ಟಿಯಲ್ಲಿ ಕಾಗದದ ತುಂಡುಗಳು, ಕಪಾಟಿನಲ್ಲಿ ಬಟ್ಟೆಗಳನ್ನು ಅಚ್ಚುಕಟ್ಟಾಗಿ ಇರಿಸಿದಾಗ, ಲಾಂಡ್ರಿಯಲ್ಲಿ ಸಾಕ್ಸ್, ರ್ಯಾಕ್‌ನಲ್ಲಿ ಬೂಟುಗಳು ಮತ್ತು ಉಳಿದೆಲ್ಲವೂ ವ್ಯವಸ್ಥಿತವಾಗಿದ್ದಾಗ, ನಿಮ್ಮ ಪೋಷಕರು ನಿಮ್ಮನ್ನು ಸರಿಯಾಗಿ ಬೆಳೆಸಿದ್ದೇವೆಂದು ಭಾವಿಸುತ್ತಾರೆ.
Chanakya Niti: ಈ ಸಂದರ್ಭಗಳಲ್ಲಿ ಮಾತಿಗಿಂತ ಮೌನವೇ ಪವರ್‌ಫುಲ್ ಅಂತಾರೆ ಚಾಣಕ್ಯ!
9) ನೀವು ಯಾವುದೇ ಬಿಲ್ ಪಾವತಿಸಲು ಮುಂದಾದಾಗ. ಅದು ನಿಮ್ಮ ತಾಯಿಗೆ ಒಂದು ಕಪ್ ಕಾಫಿ ಅಥವಾ ಸೀರೆಯಾಗಿರಬಹುದು. ಆದರೆ ನೀವು ನಿಮ್ಮ ಹೆತ್ತವರ ಯಾವುದೇ ಬಿಲ್ ತೀರಿಸಲು ಮುಂದಾದಾಗ, ನೀವು ಅವರು ಬಯಸಿದ ರೀತಿಯಲ್ಲಿ ಬೆಳೆದಿದ್ದೀರಿ ಎಂದು ಅವರು ಭಾವಿಸುತ್ತಾರೆ.
10) ನೀವು ಅವರಿಗೆ ಥ್ಯಾಂಕ್ಸ್ ಹೇಳಿದಾಗ. ಅದು ಚಿಕ್ಕ ವಿಷಯಕ್ಕೇ ಆಗಿರಲಿ, ಅವರು ಸುಖದ ಭಾವನೆ ಹೊಂದುತ್ತಾರೆ.
11) ನೀವು ಜವಾಬ್ದಾರಿಯನ್ನು ಹಂಚಿಕೊಳ್ಳಲು ಮುಂದಾದಾಗ. ನಿಮ್ಮ ತಾಯಿಗೆ ಅಡುಗೆ ಮಾಡಲು ಸಹಾಯ ಮಾಡುವುದರಿರಬಹುದು, ಅಥವಾ ನಿಮ್ಮ ಮನೆಯ ನವೀಕರಣದಲ್ಲಿ ತಂದೆಗೆ ಸಹಾಯ ಮಾಡುವುದರಿಬಹುದು. ನೀವು ಅವರಿಗೆ ಸಹಾಯ ಹಸ್ತ ನೀಡಿದಾಗಲೆಲ್ಲಾ, ನೀವು ಅವರ ಹೃದಯವನ್ನು ಮುಟ್ಟುತ್ತೀರಿ.
ಹೆಂಡತಿಗೆ ಈ ಗುಣ ಇದ್ರೆ ಗಂಡ ಅದೃಷ್ಟವಂತ!
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.