
ಹೆರಿಗೆ (Delivery) ನಂತ್ರ ನವಜಾತ ಶಿಶು (Newborn) ಹಾಗೂ ತಾಯಿ (Mother) ಇಬ್ಬರಿಗೂ ವಿಶ್ರಾಂತಿ (Relax) ಯ ಅಗತ್ಯವಿರುತ್ತದೆ. ಹಿಂದೆ ಸುಮಾರು ಆರು ತಿಂಗಳ ಕಾಲ ತಾಯಿ-ಮಗುವನ್ನು ಮನೆಯಿಂದ ಹೊರಗೆ ಹೋಗಲು ಬಿಡ್ತಿರಲಿಲ್ಲ. ಆದ್ರೀಗ ಮಗುವಿಗೆ ಒಂದೆರಡು ತಿಂಗಳಾಗ್ತಿದ್ದಂತೆ ತಾಯಂದಿರುವ ಮನೆಯಿಂದ ಹೊರಗೆ ಓಡಾಟ ಶುರು ಮಾಡ್ತಾರೆ. ಮನೆಯಲ್ಲಿಯೇ ಇದ್ದು ಬೋರ್ ಆಗುವ ತಾಯಂದಿರು ತಮ್ಮಿಷ್ಟದ ಕಲಾವಿದರ ಸಿನಿಮಾ ಬಂದ್ರೆ ಅದನ್ನು ನೋಡಲು ಥಿಯೇಟರ್ ಗೆ ಹೋಗ್ತಾರೆ. ಥಿಯೇಟರ್‌ನಲ್ಲಿ ನವಜಾತ ಶಿಶುಗಳೊಂದಿಗೆ ಚಲನಚಿತ್ರವನ್ನು ಆನಂದಿಸುತ್ತಿರುವ ತಾಯಂದಿರನ್ನು ನೀವು ನೋಡಿರಬಹುದು. ಇಲ್ಲವೆ ನೀವೇ ಈ ಬಗ್ಗೆ ಪ್ಲಾನ್ ಮಾಡ್ತಿರಬಹುದು. ಆದ್ರೆ ನವಜಾತ ಶಿಶು ಜೊತೆ ತಾಯಿ ಮನೆಯಲ್ಲಿರುವುದು ಇಬ್ಬರ ಆರೋಗ್ಯಕ್ಕೂ ಒಳ್ಳೆಯದು. ಎರಡರಿಂದ ಮೂರು ಗಂಟೆ ಮಗುವನ್ನು ಒಂದೇ ಸ್ಥಳದಲ್ಲಿ ಇಟ್ಟುಕೊಳ್ಳುವುದು ಸವಾಲಿನ ಕೆಲಸ. ಇದ್ರಿಂದ ಇಬ್ಬರಿಗೂ ತೊಂದರೆಯಾಗಬಹುದು. ಹಾಗಾಗಿ ನವಜಾತ ಶಿಶುವನ್ನು ಥಿಯೇಟರ್ ಗೆ ಕರೆದುಕೊಂಡು ಹೋಗುವ ಮೊದಲು ಕೆಲವೊಂದು ವಿಷ್ಯಗಳನ್ನು ತಿಳಿದಿರಬೇಕು. ಮೊದಲೇ ತಯಾರಿ ಮಾಡಿಕೊಂಡಿದ್ದರೆ ಸಿನಿಮಾ ವೀಕ್ಷಣೆಗೆ ತೊಂದರೆಯಾಗುವುದಿಲ್ಲ.
ಮಗುವಿಗೆ ನಷ್ಟ : ನವಜಾತ ಶಿಶುಗಳನ್ನು ಥಿಯೇಟರ್‌ಗೆ ಕರೆದೊಯ್ಯುವ ಬಗ್ಗೆ ಯಾವುದೇ ನಿಯಮವಿಲ್ಲ. ಯಾರು ಬೇಕಾದ್ರೂ ಯಾವ ವಯಸ್ಸಿನ ಮಗುವನ್ನು ಬೇಕಾದ್ರೂ ಕರೆದುಕೊಂಡು ಹೋಗಬಹುದು. ಆದರೆ ನವಜಾತ ಶಿಶುಗಳನ್ನು ಥಿಯೇಟರ್ ಗೆ ಕರೆದುಕೊಂಡು ಹೋದ್ರೆ ಮಕ್ಕಳ ಆರೋಗ್ಯ ಹದಗೆಡಬಹುದು. ತುಂಬಾ ಚಿಕ್ಕ ಮಕ್ಕಳ ಕಿವಿಗಳು ತುಂಬಾ ಸೂಕ್ಷ್ಮವಾಗಿರುತ್ತವೆ. ಚಿತ್ರಮಂದಿರದ ಸೌಂಡ್ ಮಕ್ಕಳ ಕಿವಿಗಳ ಮೇಲೆ ಪರಿಣಾಮ ಬೀರಬಹುದು. ಅಲ್ಲದೆ ವಿವಿಧ ರೀತಿಯ ಜನರು ಥಿಯೇಟರ್ ಗೆ ಬರ್ತಾರೆ. ಹಾಗಾಗಿ ಮಕ್ಕಳಿಗೆ ಸೋಂಕು ತಗಲುವ ಸಾಧ್ಯತೆಯಿರುತ್ತದೆ.
DESIRABLE GIRL: ಎಂದೂ ಇಂಥ ಹುಡುಗಿಯರನ್ನು ಬಿಟ್ಟು ಹೋಗಲ್ಲ ಹುಡುಗ್ರು
ಮಕ್ಕಳನ್ನು ಥಿಯೇಟರ್ ಗೆ ಕರೆದೊಯ್ಯಲು ಸರಿಯಾದ ಸಮಯ : ಎರಡು-ಮೂರು ತಿಂಗಳ ಶಿಶುವನ್ನು ಥಿಯೇಟರ್ ಗೆ ಕರೆದುಕೊಂಡು ಹೋಗುವುದು ಒಳ್ಳೆಯದಲ್ಲ. ಚಿತ್ರಮಂದಿರಕ್ಕೆ ಮಕ್ಕಳನ್ನು ಕರೆದುಕೊಂಡು ಹೋಗಲು ಸರಿಯಾದ ಸಮಯ 2 ವರ್ಷ. ನಿಮ್ಮ ಮಗುವಿನ ವಯಸ್ಸು ಎರಡು ವರ್ಷವಾದ್ಮೇಲೆ ನೀವು ಆರಾಮಾಗಿ ಚಿತ್ರಮಂದಿರಕ್ಕೆ ಕರೆದುಕೊಂಡು ಹೋಗಬಹುದು. 2 ವರ್ಷದ ಮಕ್ಕಳ ಮೆದುಳು ಸಂಗೀತವನ್ನು ಅರ್ಥ ಮಾಡಿಕೊಳ್ಳಲು, ಸಂಗೀತವನ್ನು ಕೇಳಲು ಮತ್ತು ಪರದೆಯ ಮೇಲೆ ತೋರಿಸಿರುವ ಚಿತ್ರಗಳನ್ನು ಆನಂದಿಸುವ ಸಾಮರ್ಥ್ಯ ಹೊಂದಿರುತ್ತದೆ. ಮಕ್ಕಳ ರೋಗನಿರೋಧಕ ಶಕ್ತಿಯೂ ಬೆಳೆದಿರುತ್ತದೆ. ಮಕ್ಕಳು ಚಿತ್ರಗಳನ್ನು ನೋಡಿ ಆನಂದಿಸುವುದ್ರಿಂದ ಅವರನ್ನು ಎರಡು ಗಂಟೆ ಅಲ್ಲಿಟ್ಟುಕೊಳ್ಳುವುದು ಕಷ್ಟವಾಗುವುದಿಲ್ಲ. ಕೆಲ ಮಕ್ಕಳು ಆಸಕ್ತಿಯಿಂದ ಸಿನಿಮಾ ನೋಡುತ್ತಾರೆ ಕೂಡ.
ಗಮನವಿರಲಿ : ಥಿಯೇಟರ್ ನಲ್ಲಿ ಸಿನಿಮಾ ಶುರುವಾಗ್ತಿದ್ದಂತೆ ಕತ್ತಲಾಗುತ್ತದೆ. ಹಾಗೆ ಎಸಿ ಇರುವುದ್ರಿಂದ ವಾತಾವರಣ ತಂಪಾಗಿರುತ್ತದೆ. ಇದಕ್ಕೆ ಮಕ್ಕಳನ್ನು ನೀವು ಮೊದಲೇ ಅಣಿಗೊಳಿಸಬೇಕು. ಒಂದೇ ಬಾರಿ ಲೈಟ್ ತೆಗೆದಾಗ ಮಕ್ಕಳು ಅಳಲು ಶುರು ಮಾಡಬಹುದು. ಹಾಗೆ ಸಣ್ಣ ಮಕ್ಕಳು ಎಲ್ಲರಿಗೂ ಇಷ್ಟ. ಅವರನ್ನು ಸ್ಪರ್ಶಿಸಲು ಥಿಯೇಟರ್ ಗೆ ಬಂದ ಜನರು ಯತ್ನಿಸಬಹುದು. ಅದನ್ನು ಪಾಲಕರಾದವರು ನಯವಾಗಿ ನಿರಾಕರಿಸಬೇಕು.
ಈ ವಿಷ್ಯವನ್ನು ನೆನಪಿಡಿ : ಸಿನಿಮಾದ ಟಿಕೆಟ್ ಕಾಯ್ದಿರಿಸುವಾಗ ನೀವು ಕಾರ್ನರ್ ಟಿಕೆಟ್ ಬುಕ್ ಮಾಡಿ. ಮಗು ಗಲಾಟೆ ಮಾಡಿದ್ರೆ ಸುಲಭವಾಗಿ ಹೊರಗೆ ಬರುವಂತಿರುವ ಜಾಗವನ್ನು ಆಯ್ದುಕೊಳ್ಳಿ. ಹಾಗೆ ಸಿನಿಮಾ ಟಿಕೆಟ್ ಬುಕ್ ಮಾಡುವ ಬದಲು ಸಿನಿಮಾ ಬಗ್ಗೆ ತಿಳಿದಿರಿ. ಸಿನಿಮಾ ರಿವ್ಯೂ ಕೆಟ್ಟದಾಗಿದ್ದರೆ ಸಮಯ ಹಾಳು ಮಾಡ್ಬೇಡಿ. ವೀಕೆಂಟ್ ಬದಲು ವೀಕ್ ಡೇಗಳಲ್ಲಿ ಸಿನಿಮಾ ವೀಕ್ಷಣೆ ಮಾಡಿ.
ವಿಚ್ಛೇದನಕ್ಕೆ ಮುಂದಾಗಿದ್ದ ಅಪ್ಪ ಅಮ್ಮನನ್ನು ಒಂದು ಮಾಡಿದ ಮಗ
ಮಕ್ಕಳನ್ನು ಥಿಯೇಟರ್ ಗೆ ಕರೆದೊಯ್ಯುವ ಮೊದಲು ತಯಾರಿ : ಮಗುವನ್ನು ಸಿನಿಮಾಕ್ಕೆ ಕರೆದುಕೊಂಡು ಹೋಗುವ ಮೊದಲು ಮಕ್ಕಳಿಗೆ ಅಗತ್ಯವಿರುವ ವಸ್ತುಗಳನ್ನು ತೆಗೆದುಕೊಳ್ಳಿ. ತಿಂಡಿ, ಸ್ಯಾನಿಟೈಸರ್,ನೀರಿನ ಬಾಟಲಿ,ಹೊದಿಕೆಗಳು, ಡೈಪರ್‌ನಂತಹ ಅಗತ್ಯ ವಸ್ತುಗಳನ್ನು ನಿಮ್ಮ ಬ್ಯಾಗ್‌ನಲ್ಲಿ ಇರಿಸಿ. ಹಾರರ್ ಚಿತ್ರಗಳನ್ನು ಮಕ್ಕಳ ಜೊತೆ ನೋಡಬೇಡಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.