Desirable Girl: ಎಂದೂ ಇಂಥ ಹುಡುಗಿಯರನ್ನು ಬಿಟ್ಟು ಹೋಗಲ್ಲ ಹುಡುಗ್ರು

Suvarna News   | Asianet News
Published : Mar 14, 2022, 05:12 PM IST
Desirable Girl:  ಎಂದೂ ಇಂಥ ಹುಡುಗಿಯರನ್ನು ಬಿಟ್ಟು ಹೋಗಲ್ಲ ಹುಡುಗ್ರು

ಸಾರಾಂಶ

ಯಾವ ಹುಡುಗಿ, ಹುಡುಗನಿಗೆ ಇಷ್ಟವಾಗುತ್ತಾಳೆ ಅಂತ ಕೇಳಿದ್ರೆ ನಾವು ತಕ್ಷಣ ಹೇಳೋದು, ಚೆಂದದ, ಆಕರ್ಷಣೆಯ, ಒಳ್ಳೆ ಕಲರ್ ಹುಡುಗಿ ಎಂದು. ಆದ್ರೆ ಇದು ತಪ್ಪು. ಹುಡುಗರು, ಹುಡುಗಿಯರ ಬಾಹ್ಯ ಸೌಂದರ್ಯ ಮಾತ್ರ ನೋಡುವುದಿಲ್ಲ. ಅವರನ್ನು ಮಹಿಳೆಯರ ಇನ್ನೂ ಕೆಲ ಗುಣಗಳು ಸೆಳೆಯುತ್ತವೆ.    

ಮೊದಲ ನೋಟದಲ್ಲೇ ಪ್ರೀತಿ (Love) ಯಾಗಿರಲಿ, ಇಲ್ಲ ಕನಸಿ (Dream) ನ ವ್ಯಕ್ತಿಯೇ ನಮಗೆ ಸಿಕ್ಕಿರಲಿ. ಸಂಬಂಧ (Relationship)ಕ್ಕೆ ವಯಸ್ಸಾಗ್ತಿದ್ದಂತೆ ಅದ್ರಲ್ಲಿ ಆಸಕ್ತಿ ಕಡಿಮೆಯಾಗುತ್ತದೆ. ಎಲ್ಲರಿಗೂ ಹೀಗೆ ಆಗ್ಬೇಕೆಂದೇನಿಲ್ಲ. ಆದ್ರೆ ಬಹುತೇಕರ ಬಾಳಿನಲ್ಲಿ ಇದು ಆಗುತ್ತದೆ. ಸಂಗಾತಿಯ ಬಗ್ಗೆ ಆಸಕ್ತಿ ನಿಧಾನವಾಗಿ ಕಡಿಮೆಯಾಗಲು ಶುರುವಾಗುತ್ತದೆ. ಇದರ ಹಿಂದೆ ಹಲವು ಕಾರಣಗಳಿರಬಹುದು. ಪುರುಷ ಮತ್ತು ಸ್ತ್ರೀ ಕಾರಣಗಳ ನಡುವೆ ದೊಡ್ಡ ವ್ಯತ್ಯಾಸವಿದೆ.

ಪುರುಷರ ಬಗ್ಗೆ ಮಾತನಾಡುವುದಾದ್ರೆ ಸಂಗಾತಿ ಮೇಲಿನ ಆಸಕ್ತಿಯನ್ನು ಪುರುಷರು ಅನೇಕ ಕಾರಣಕ್ಕೆ ಕಳೆದುಕೊಳ್ತಾರೆ. ಮಹಿಳೆಯ ಕೆಲ ಕೆಲಸಗಳು ಅವರಿಗೆ ಕಿರಿಕಿರಿಯುಂಟು ಮಾಡುತ್ತದೆ. ಇದರಿಂದ ಪರಸ್ಪರ ಆಕರ್ಷಣೆ ಕಡಿಮೆಯಾಗುತ್ತದೆ. ಹಾಗೆಯೇ ಮಹಿಳೆಯರಲ್ಲಿರುವ ಕೆಲವು ಗುಣಗಳಿಗೆ ಪುರುಷರು ಆಕರ್ಷಿತರಾಗದೆ ಇರಲು ಸಾಧ್ಯವೇ ಇಲ್ಲ. ಆ ಗುಣಗಳಿರುವ ಪತ್ನಿ ಅಥವಾ ಸಂಗಾತಿಯನ್ನು ಪತಿ ಎಂದೂ ದೂರ ಮಾಡಿಕೊಳ್ಳಲು ಇಚ್ಛಿಸುವುದಿಲ್ಲ. ಆಕೆ ಮೇಲೆ ಆಸಕ್ತಿ ಕೂಡ ಕಡಿಮೆಯಾಗುವುದಿಲ್ಲ. ಇಬ್ಬರ ಮಧ್ಯೆ ಸಂಬಂಧ ಬಲವಾಗುತ್ತದೆಯೇ ಹೊರತು ದುರ್ಬಲವಾಗುವುದಿಲ್ಲ.

ಸಾಮಾನ್ಯವಾಗಿ ಸುಂದರವಾಗಿರುವ, ಫಿಟ್ನೆಸ್ ಕಾಯ್ದುಕೊಂಡಿರುವ ಹುಡುಗಿಯರಿಗೆ ಹುಡುಗ್ರು ಆಕರ್ಷಿತರಾಗ್ತಾರೆ ಎಂದುಕೊಳ್ಳುವುದು ಹೆಚ್ಚು. ಅವರ ಬಟ್ಟೆ, ಫ್ಯಾಷನ್ ಕೂಡ ಪುರುಷರನ್ನು ಆಕರ್ಷಿಸುತ್ತದೆ ಎಂದು ಅನೇಕರು ನಂಬಿದ್ದಾರೆ. ಆದ್ರೆ ಬಾಹ್ಯ ಸೌಂದರ್ಯಕ್ಕೂ ಸಂಬಂಧ ಗಟ್ಟಿಯಾಗಲು ಯಾವುದೇ ಸಂಬಂಧವಿಲ್ಲ. ಎಲ್ಲರೂ ಬರೀ ಸೌಂದರ್ಯವನ್ನು ನೋಡುವುದಿಲ್ಲ. ಪ್ರಬುದ್ಧ ಪುರುಷರು, ಮಹಿಳೆಯರ ವ್ಯಕ್ತಿತ್ವವನ್ನು ನೋಡ್ತಾರೆ. ಇಂದು ಮಹಿಳೆಯಲ್ಲಿ ಪುರುಷರು ಏನನ್ನು ನೋಡ್ತಾರೆ? ಪುರುಷರಿಗೆ ಇಷ್ಟವಾಗುವ ಮಹಿಳೆ ಗುಣ ಯಾವುದು ಎಂಬುದನ್ನು ಹೇಳ್ತೇವೆ.

ಪುರುಷರನ್ನು ಆಕರ್ಷಿಸುತ್ತೆ ಮಹಿಳೆಯರ ಈ ಗುಣ

ಪ್ರೇರಣೆ : ತಮ್ಮ ಯಶಸ್ಸು ಬಯಸುವ ಹಾಗೂ ಅದಕ್ಕೆ ಸದಾ ಪ್ರೋತ್ಸಾಹ ನೀಡುವ ಮಹಿಳೆಯರು ಪುರುಷರಿಗೆ ಇಷ್ಟವಾಗ್ತಾರೆ. ಪ್ರತಿಯೊಬ್ಬ ಪುರುಷನೂ ತನ್ನ ಜೀವನದಲ್ಲಿ ಈ ಗುಣವುಳ್ಳ ಮಹಿಳೆಯನ್ನು ಬಯಸುತ್ತಾನೆ. ಕಷ್ಟದ ಸಮಯದಲ್ಲಿಯೂ ಬಿಟ್ಟು ಹೋಗದ, ಯಶಸ್ವಿನ ಹಿಂದೆ ಸದಾ ನಿಲ್ಲುವ ಮಹಿಳೆಯನ್ನು ಪ್ರೀತಿಸುವುದಲ್ಲದೆ ಆಕೆಯನ್ನು ಯಾವುದೇ ಸಮಯದಲ್ಲೂ ಬಿಟ್ಟು ಹೋಗುವುದಿಲ್ಲ. 

EXTRAMARITAL AFFAIR: ಟೆರೆಸ್ ನಲ್ಲಿ ಜಿಮ್ ಮಾಡ್ತಾ ಟ್ರೇನರ್ ಜೊತೆ ಒಂದಾದ ವಿವಾಹಿತ ಮಹಿಳೆ

ಮುಕ್ತವಾಗಿ ಮಾತನಾಡುವ ಹುಡುಗಿ : ಪ್ರತಿಯೊಬ್ಬ ಹುಡುಗನು ತನ್ನ ಸಂಗಾತಿಯೊಂದಿಗೆ ಮುಕ್ತವಾಗಿ ಮಾತನಾಡಬೇಕೆಂದು ಬಯಸುತ್ತಾನೆ. ಆದ್ರೆ ಸದಾ ತನ್ನ ಬಗ್ಗೆ ಹಾಗೂ ತನ್ನ ಸುತ್ತಮುತ್ತಲಿನ ವಿಷ್ಯವನ್ನು ಮಾತ್ರ ಮಾತನಾಡುವ ಸ್ತ್ರೀ ಸಂಗಾತಿ ಜೊತೆ ಪುರುಷ ಎಂದೂ ಮುಕ್ತವಾಗಿ ಮಾತನಾಡಲು ಸಾಧ್ಯವಾಗುವುದಿಲ್ಲ. ಎಲ್ಲಾ ರೀತಿಯ ವಿಷಯಗಳ ಬಗ್ಗೆ ಆರಾಮವಾಗಿ ಮಾತನಾಡಬಹುದಾದ, ಎಲ್ಲ ವಿಷ್ಯವನ್ನು ಅಲ್ಪಸ್ವಲ್ಪವಾದ್ರೂ ತಿಳಿದ ಹುಡುಗಿ ಜೊತೆ ಆತ ಜೀವನ ನಡೆಸಲು ಇಷ್ಟಪಡ್ತಾನೆ. ಹಾಗೆ ಆಕೆಯನ್ನು ಎಂದೂ ದೂರಮಾಡಿಕೊಳ್ಳಲು ಬಯಸುವುದಿಲ್ಲ.

ಸ್ನೇಹ ವರ್ತನೆ : ಸಾಮಾನ್ಯವಾಗಿ ಎಲ್ಲ ಹುಡುಗರೂ ತಾವು ಇಷ್ಟಪಡುವ ಹುಡುಗಿಯನ್ನು ಮನೆಯವರು ಇಷ್ಟಪಡಬೇಕೆಂದು ಬಯಸ್ತಾರೆ. ಹಾಗೆ ಹುಡುಗಿ ಸ್ನೇಹದಿಂದಿರಬೇಕೆಂದು ಬಯಸ್ತಾರೆ. ಪ್ರೀತಿಗೆ ಬಿದ್ದ ಮೇಲೆ ಸ್ನೇಹಿತರನ್ನು ದೂರ ಮಾಡುವ,ಸ್ನೇಹಿತ ಭೇಟಿಗೆ ಅವಕಾಶ ನೀಡದ ಹುಡುಗಿ ಅವರಿಗೆ ಇಷ್ಟವಾಗುವುದಿಲ್ಲ. ಇದ್ರಿಂದ ಪುರುಷರು ಒತ್ತಡಕ್ಕೊಳಗಾಗ್ತಾರೆ. ತಮ್ಮ ಸ್ನೇಹಿತರನ್ನು ತನ್ನ ಸ್ನೇಹಿತರಂತೆ ನೋಡುವ ಹಾಗೂ ಅವರ ಜೊತೆ ಅರಾಮವಾಗಿರುವ ಹುಡುಗಿ,ಪುರುಷರಿಗೆ ಹೆಚ್ಚು ಇಷ್ಟವಾಗ್ತಾಳೆ.  

EXTRAMARITAL AFFAIR: ಟೆರೆಸ್ ನಲ್ಲಿ ಜಿಮ್ ಮಾಡ್ತಾ ಟ್ರೇನರ್ ಜೊತೆ ಒಂದಾದ ವಿವಾಹಿತ ಮಹಿಳೆ

ಜವಾಬ್ದಾರಿಯುತ-ಆತ್ಮವಿಶ್ವಾಸದ ಹುಡುಗಿ : ಪುರುಷರು ಸ್ವತಂತ್ರವಾಗಿರುವ ಮತ್ತು ಜವಾಬ್ದಾರಿಗಳನ್ನು ತೆಗೆದುಕೊಳ್ಳುವ ಮಹಿಳೆಯರತ್ತ ಹೆಚ್ಚು ಆಕರ್ಷಿತರಾಗುತ್ತಾರೆ.  ಮಾತು ಕೇಳುವ ಮತ್ತು ಅವಲಂಬಿಸುವ ಹುಡುಗಿಯರನ್ನು ಹುಡುಗರು ಇಷ್ಟಪಡುತ್ತಾರೆ ಎಂದು ಭಾವಿಸುವುದು ತಪ್ಪು. ಇಂದಿನ ಸಮಯದಲ್ಲಿ  ಹುಡುಗರು ಸ್ವತಂತ್ರ ಮತ್ತು ಆತ್ಮವಿಶ್ವಾಸದ ಸ್ತ್ರೀಯನ್ನು ತಮ್ಮ ಜೀವನ ಸಂಗಾತಿಯನ್ನಾಗಿ ಮಾಡಲು ಇಷ್ಟಪಡುತ್ತಾರೆ.

ಪರಿಶುದ್ಧ ಹುಡುಗಿ :  ಅಂದ್ರೆ ಶುದ್ಧ ಮನಸ್ಸಿನ ಹುಡುಗಿ,ಹುಡುಗರಿಗೆ ಇಷ್ಟವಾಗ್ತಾಳೆ. ಬೇರೆಯವರಿಂದ ಲಾಭ ಪಡೆಯುವ ಅಥವಾ ಸೊಕ್ಕಿನ ಹುಡುಗಿಗಿಂತ ಎಲ್ಲರನ್ನೂ ಪ್ರೀತಿಯಿಂದ ಕಾಣುವ ಹುಡುಗಿ ಅವರನ್ನು ಆಕರ್ಷಿಸುತ್ತಾಳೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಈ ಸುಂದರ ದೇಶದಲ್ಲಿ ಬಾಡಿಗೆಗೆ ಸಿಗ್ತಾನೆ ಗಂಡ, ಗಂಟೆಗೆ ಇಷ್ಟಿದೆ ಸಂಬಳ!
ಮದುವೆ ಮುಂದೂಡಿಕೆ ಆದ 12 ದಿನಗಳ ಬಳಿಕ ಸೋಶಿಯಲ್‌ ಮೀಡಿಯಾದಲ್ಲಿ ಮೊದಲ ಪೋಸ್ಟ್‌ ಮಾಡಿದ ಸ್ಮೃತಿ, ಕೈಯಲ್ಲಿದ್ದ ರಿಂಗ್‌ ಮಾಯ!