ಬಿಸಿ ಕೆಂಡವನ್ನು ಸೆರಗಿನಲ್ಲಿ ಮುಚ್ಚಿಡುವುದು ಸುಲಭವಲ್ಲ. ಅದ್ರ ಉರಿ ಗೊತ್ತಿಲ್ಲದೆ ದೇಹ ಸುಟ್ಟಿರುತ್ತದೆ. ಹಾಗೆ ಅಕ್ರಮ ಸಂಬಂಧ ಬೆಳೆಸಿ ಅದನ್ನು ಸಂಗಾತಿಯಿಂದ ಮುಚ್ಚಿಡುವುದು ಸುಲಭವಲ್ಲ. ಸದಾ ಮನಸ್ಸಿಗೆ ಹಿಂಸೆ ನೀಡುವ ಈ ವಿಷ್ಯ ಕೊನೆಯಲ್ಲಿ ದುರಂತಕ್ಕೆ ಕಾರಣವಾಗಬಹುದು.
ಪತಿ (Husband )-ಪತ್ನಿ (Wife) ಮಧ್ಯೆ ಇನ್ನೊಬ್ಬ ವ್ಯಕ್ತಿಯ ಪ್ರವೇಶವಾದಾಗ ದಾಂಪತ್ಯ ಮುರಿದು ಬೀಳುತ್ತದೆ. ಅನೇಕ ಬಾರಿ ದಾಂಪತ್ಯ ಜೀವನ (Life)ದಲ್ಲಿ ಇನ್ನೊಬ್ಬ ವ್ಯಕ್ತಿ ಪ್ರವೇಶ ಮಾಡಿದ ವಿಷ್ಯ ಸಂಗಾತಿ (Partner)ಗೆ ತಿಳಿದೇ ಇರುವುದಿಲ್ಲ. ಆದ್ರೂ ಮೊದಲಿನ ಪ್ರೀತಿ, ಆರೈಕೆ, ಸ್ನೇಹ, ಗೌರವ ಸಂಗಾತಿಯಿಂದ ಸಿಗ್ತಿಲ್ಲ ಎಂಬುದು ಅವರ ಅರಿವಿಗೆ ಬಂದಿರುತ್ತದೆ. ಕೆಲವೊಮ್ಮೆ ಕೆಟ್ಟ ಗಳಿಗೆಯಲ್ಲಿ ಇನ್ನೊಬ್ಬರ ಜೊತೆ ಸಂಬಂಧ ಬೆಳೆದಿರುತ್ತದೆ. ಆ ಕ್ಷಣವನ್ನು ನೆನೆದು ದುಃಖಿಸುವ ಜೊತೆಗೆ ಪಶ್ಚಾತಾಪ ಜೀವನ ಪೂರ್ತಿ ಹಿಂಸೆ ನೀಡುತ್ತದೆ. ಸಂಗಾತಿಗೆ ಹೇಳಿ ಅವ್ರ ಪ್ರೀತಿ ಕಳೆದುಕೊಳ್ಳಲು ಇಷ್ಟವಿಲ್ಲದವರು ಅದನ್ನು ಮುಚ್ಚಿಟ್ಟು ಜೀವನ ನಡೆಸಲು ಹೆಣಗಾಡ್ತಾರೆ. ಅಕ್ರಮ ಸಂಬಂಧದ ಗುಟ್ಟು ಬಹಳ ದಿನ ಗುಟ್ಟಾಗಿ ಉಳಿಯುವುದಿಲ್ಲ. ಹಾಗಾಗಿ ದಾಂಪತ್ಯದಲ್ಲಿ ಎಚ್ಚರಿಕೆ ಹೆಜ್ಜೆ ಇಡುವುದು ಬಹಳ ಮುಖ್ಯ. ಮಹಿಳೆಯೊಬ್ಬಳು ಎರಡು ದೋಣಿ ಮೇಲೆ ಕಾಲಿಟ್ಟು ಈಗ ಪರಿತಪಿಸುತ್ತಿದ್ದಾಳೆ. ಸಾಮಾಜಿಕ ಜಾಲತಾಣದಲ್ಲಿ ಸಮಸ್ಯೆ ಹೇಳಿಕೊಂಡಿರುವ ಮಹಿಳೆ ಇಬ್ಬರನ್ನೂ ಬಿಡುವ ಮನಸ್ಥಿತಿಯಲ್ಲಿಲ್ಲ.
ಫಿಟ್ನೆಸ್ ಗುರುವಿನ ಜೊತೆ ಪ್ರೀತಿ : ಮಹಿಳೆ ತುಂಬಾ ದಪ್ಪಗಿದ್ದಳಂತೆ. ಕೊರೊನಾ ಸಂದರ್ಭದಲ್ಲಿ ಆನ್ಲೈನ್ ಮೂಲಕ ವರ್ಕ್ ಔಟ್ ಮಾಡ್ತಿದ್ದಳಂತೆ. ಕೊರೊನಾ ನಂತ್ರ ರಿಸ್ಕ್ ತೆಗೆದುಕೊಳ್ಳಲು ಮನಸ್ಸು ಮಾಡದ ಮಹಿಳೆ ಜಿಮ್ ತರಬೇತಿದಾರನನ್ನು ಮನೆಗೆ ಕರೆಸಿಕೊಂಡಿದ್ದಾಳೆ. ಪ್ರತಿ ದಿನ ಮನೆಗೆ ಬರ್ತಿದ್ದ ತರಬೇತುದಾರನ ಜೊತೆ ಆರಂಭದಲ್ಲಿ ಸಂಬಂಧ ಸರಿಯಾಗಿಯೇ ಇತ್ತಂತೆ. ಆದ್ರೆ ಅದ್ಯಾವುದೋ ಕ್ಷಣದಲ್ಲಿ ಇಬ್ಬರು ಒಂದಾಗಿದ್ದಾರಂತೆ. ಇಬ್ಬರ ಮಧ್ಯೆ ಶಾರೀರಿಕ ಸಂಬಂಧ ಕೂಡ ಬೆಳೆದಿದೆಯಂತೆ.
ಪತಿಯನ್ನು ಹೆಚ್ಚು ಪ್ರೀತಿ ಮಾಡ್ತೇನೆ ಎನ್ನುವ ಮಹಿಳೆ ಈ ಸಂಬಂಧದ ಬಗ್ಗೆ ದುಃಖದಲ್ಲಿದ್ದಾಳೆ. ಪತಿಗೆ ನಮ್ಮಿಬ್ಬರ ವಿಷ್ಯ ತಿಳಿದ್ರೆ ಎಂಬ ಭಯ ಒಂದು ಕಡೆಯಾದ್ರೆ ಜಿಮ್ ತರಬೇತಿದಾರನನ್ನು ದೂರ ಮಾಡಲು ಇಷ್ಟವಿಲ್ಲವಂತೆ. ಇದಕ್ಕೆ ಮಹಿಳೆ ನೀಡುವ ಕಾರಣ ವಿಚಿತ್ರವಾಗಿಯೇ ಇದೆ. ಅನೇಕ ದಿನಗಳ ನಂತ್ರ ಮಹಿಳೆಯ ತೂಕ ಇಳಿದಿದೆಯಂತೆ. ಪ್ರತಿ ದಿನ ವರ್ಕ್ ಔಟ್ ಮಾಡ್ತಿರುವ ಕಾರಣ ದೇಹ ಫಿಟ್ ಆಗಿದೆ. ತರಬೇತುದಾರನ ಪ್ರೋತ್ಸಾಹದಿಂದಲೇ ನನ್ನ ತೂಕ ಇಳಿದಿದೆ. ನನ್ನ ಜೀವನದಲ್ಲಿ ಎಲ್ಲದಕ್ಕೂ ಒಂದು ಸಮಯ ನಿಗದಿ ಮಾಡಿಕೊಂಡಿದ್ದೇನೆ. ಈಗ ತರಬೇತದಾರನಿಗೆ ಮನೆಗೆ ಬರಬೇಡ ಅಂದ್ರೆ ಮತ್ತೆ ನನ್ನ ತೂಕ ಹೆಚ್ಚಾಗಬಹುದು. ನನಗೆ ಮೋಟಿವ್ ಮಾಡುವವರು ಯಾರೂ ಇಲ್ಲ ಎನ್ನುತ್ತಾಳೆ ಮಹಿಳೆ.
UNHEALTHY HABITS: ಪುರುಷರ ಇಂಥಾ ಕೆಟ್ಟ ಅಭ್ಯಾಸ ವೀರ್ಯದ ಗುಣಮಟ್ಟ ಕಡಿಮೆ ಮಾಡುತ್ತೆ !
ತಜ್ಞರು ಹೇಳೋದೇನು ? : ಮಹಿಳೆ ಸಮಸ್ಯೆ ಆಲಿಸಿದ ತಜ್ಞರು ಕೆಲವೊಂದು ಸಲಹೆ ನೀಡಿದ್ದಾರೆ. ಮಹಿಳೆ ಮೊದಲು ಏನು ಬಯಸುತ್ತಿದ್ದಾಳೆ ಎಂಬುದನ್ನು ತಿಳಿಯುವ ಅವಶ್ಯಕತೆಯಿದೆ. ಪತಿಯನ್ನು ಪ್ರೀತಿಸುತ್ತೇನೆ ಎನ್ನುವ ಪತ್ನಿ ಇನ್ನೊಬ್ಬ ಪುರುಷನಿಗೆ ಆಕರ್ಷಿತವಾಗಲು ಕಾರಣವೇನು? ಅನೇಕ ಬಾರಿ ತಿಳಿಯದೆ ಅನಾಹುತಗಳಾಗಿರುತ್ತವೆ ನಿಜ. ಆದ್ರೆ ಮಹಿಳೆ ಪರಪುರಷನಿಗೆ ಆಕರ್ಷಿತಳಾಗ್ಬೇಕೆಂದ್ರೆ ಪತಿ-ಪತ್ನಿ ಮಧ್ಯೆ ಯಾವುದೋ ಕೊರತೆಯಿದೆ ಎಂದರ್ಥ. ಅದನ್ನು ಮಹಿಳೆ ಮೊದಲು ಪತ್ತೆ ಮಾಡ್ಬೇಕು ಎನ್ನುತ್ತಾರೆ ತಜ್ಞರು.
ಇಷ್ಟು ಮಾತ್ರವಲ್ಲ ತರಬೇತುದಾರನಿಂದ ದೂರ ಸರಿಯಬೇಕೆಂಬ ನಿರ್ಧಾರ ಮಾಡಿದ್ರೆ ಅದು ದೊಡ್ಡ ವಿಷ್ಯವಲ್ಲ. ಪ್ರತಿ ದಿನ ವರ್ಕ್ ಔಟ್ ಗೆ ಪತಿಯನ್ನು ಸೇರಿಸಿಕೊಳ್ಳಬಹುದು. ಇಲ್ಲವೆ ಆನ್ಲೈನ್ ವರ್ಕ್ ಔಟ್ ಕ್ಲಾಸ್ ಮತ್ತೆ ಶುರು ಮಾಡಬಹುದು.
ಲವ್ ಮ್ಯಾರೇಜ್ ಆದ್ರೂ ದಾಪತ್ಯದಲ್ಲಿ ಕಲಹ ಮೂಡಲು ಕಾರಣ ಏನು?
ಸದ್ಯ ಪರಿಸ್ಥಿತಿ ಸಹಜವಾಗ್ತಿದೆ. ಹಾಗಾಗಿ ಜಿಮ್ ಗೆ ಹೋಗಿ ವರ್ಕ್ ಔಟ್ ಮಾಡ್ಬಹುದು. ಇದ್ರಲ್ಲಿ ಒಂದು ವಿಧಾನವನ್ನು ಆಯ್ಕೆ ಮಾಡಿಕೊಂಡು ಜಿಮ್ ತರಬೇತುದಾರನಿಂದ ದೂರವಿರಬಹುದು. ಆದ್ರೆ ಮೊದಲು ತನ್ನ ನಿರ್ಧಾರವೇನು ಎಂಬುದನ್ನು ಅರಿಯಬೇಕು. ಇಬ್ಬರ ಜೊತೆ ಸಂಬಂಧ ಬೆಳೆಸುವುದು ಸೂಕ್ತವಲ್ಲ. ಆರಂಭದಲ್ಲಿ ಇದು ಖುಷಿ ನೀಡಿದ್ರೂ ಅಂತ್ಯ ಚೆನ್ನಾಗಿರುವುದಿಲ್ಲವೆಂದು ತಜ್ಞರು ಹೇಳಿದ್ದಾರೆ.