ಮನೆ ಅಂದ್ಮೇಲೆ ಜಗಳ ಆಗೋದು ಕಾಮನ್, ಆದರಿವಳು ಅಪ್ಪನನ್ನೇ ಮಾರಾಟಕ್ಕಿಡೋದಾ?

Published : Oct 07, 2023, 01:08 PM IST
ಮನೆ ಅಂದ್ಮೇಲೆ ಜಗಳ ಆಗೋದು ಕಾಮನ್, ಆದರಿವಳು ಅಪ್ಪನನ್ನೇ ಮಾರಾಟಕ್ಕಿಡೋದಾ?

ಸಾರಾಂಶ

ಮನೆಯಲ್ಲಿ ತಂದೆ – ಮಕ್ಕಳ ಮಧ್ಯೆ ಗಲಾಟೆ ಸಾಮಾನ್ಯ. ಸಣ್ಣಪುಟ್ಟ ವಿಷ್ಯಕ್ಕೆ ಇಬ್ಬರ ಮಧ್ಯೆ ಕಚ್ಚಾಟ ನಡೆಯುತ್ತಿರುತ್ತೆ. ಕೆಲ ಮಕ್ಕಳು ಇದನ್ನು ಗಂಭೀರವಾಗಿ ತೆಗೆದುಕೊಂಡು, ಪಾಲಕರು ತಲೆ ತಗ್ಗಿಸುವ, ಅಚ್ಚರಿಗೊಳ್ಳುವ ಕೆಲಸ ಮಾಡ್ತಾರೆ.   

ಈಗಿನ ಮಕ್ಕಳು ತುಂಬಾ ಚುರುಕು. ಇದ್ರಲ್ಲಿ ಎರಡು ಮಾತಿಲ್ಲ. ನಮ್ಮ ಜನರೇಷನ್ ಗಿಂತ ಡಬಲ್ ಆಲೋಚನೆ ಮಾಡಲು ಶಕ್ತಿ ಅವರಿಗಿದೆ. ಮಕ್ಕಳ ಮುಂದೆ ಏನೇ ಮಾತನಾಡುವ ಮೊದಲು ನೂರು ಬಾರಿ ಆಲೋಚನೆ ಮಾಡ್ಬೇಕು. ಚಿಕ್ಕ ಮಕ್ಕಳನ್ನು ತಮಾಷೆಗೆ ಮಾತನಾಡಿಸಿದ್ರೂ ಮಕ್ಕಳಿಂದ ಬರುವ ಉತ್ತರ ಭಿನ್ನವಾಗಿರುತ್ತದೆ. ಕೆಲವೊಂದು ಮಕ್ಕಳು, ನಾಲ್ಕು ಜನರ ಮಧ್ಯೆ ದೊಡ್ಡವರು ತಲೆತಗ್ಗಿಸುವಂತಹ ಉತ್ತರ ನೀಡ್ತಾರೆ. ಹಾಗಾಗಿಯೇ ಮಕ್ಕಳ ಜೊತೆ ಮಾತನಾಡುವಾಗ, ಅವರ ಜೊತೆ ಚರ್ಚೆ ಮಾಡುವಾಗ ಎಚ್ಚರಿಕೆವಹಿಸಬೇಕು. 

ಈಗಿನ ಮಕ್ಕಳು (Children) ಅವರು ಹೇಳಿದ ಕೆಲಸವನ್ನೇ ಮಾಡ್ತಾರೆ. ಅವರು ಹೇಳಿದ ವಸ್ತುಗಳನ್ನು ಪಾಲಕರು ಕೊಡಿಸ್ಲೇಬೇಕು. ಒಂದ್ವೇಳೆ ಅದನ್ನು ಪಾಲಕರು ನಿರಾಕರಿಸಿದ್ರೆ ಮಕ್ಕಳು ಏನು ಮಾಡಲೂ ಸಿದ್ಧವಿರ್ತಾರೆ. ಮಕ್ಕಳ ಮನಸ್ಸು ಬಹಳ ಸೂಕ್ಷ್ಮ. ನಾವು ತಪ್ಪು ಮಾಡ್ತಿದ್ದೇವೆ ಎಂಬ ಅರಿವಿಲ್ಲದಷ್ಟು ಮುಗ್ದರು. ಕೆಲ ಮಕ್ಕಳು ಸಣ್ಣ ವಯಸ್ಸಿನಲ್ಲಿಯೇ ಆತ್ಮಹತ್ಯೆ ಮಾಡಿಕೊಂಡಿದ್ದಿದೆ. ಪಾಲಕರಿಗೆ ಹೆದರಿಸಲು ಅಥವಾ ಆತ್ಮಹತ್ಯೆಯಿಂದ ಏನಾಗುತ್ತೆ ಎನ್ನುವ ಅರಿವೇ ಇಲ್ಲದೆ ಅವರು ಈ ಕೆಲಸ ಮಾಡಿರ್ತಾರೆ. ಇನ್ನು ಕೆಲ ಮಕ್ಕಳು ಮಾಡುವ ಕೆಲಸ ತಮಾಷೆಯಾಗಿರುತ್ತದೆ. ಟ್ವಿಟರ್ (Twitter) ನಲ್ಲೀಗ ಒಂದು ಪೋಸ್ಟ್ ವೈರಲ್ ಆಗಿದೆ. ತಂದೆಯೊಬ್ಬ ತನ್ನ ಮಗಳು ಮಾಡಿದ ಅಚ್ಚರಿಯ ಕೆಲಸದ ಬಗ್ಗೆ ಪೋಸ್ಟ್ (Post) ಮಾಡಿದ್ದಾನೆ.   ಎಂಟು ವರ್ಷದ ಮಗಳ ಮಾತನ್ನು ತಂದೆ ನಡೆಸಿಕೊಡಲಿಲ್ಲ. ಇದ್ರಿಂದ ಕೋಪಗೊಂಡ ಮಗಳು, ತಂದೆ ಮಾರಾಟಕ್ಕಿದ್ದಾರೆ ಎಂಬ ಪೋಸ್ಟ್ ಹಾಕಿದ್ದಾಳೆ.  ಅದನ್ನು ತನ್ನ ಮನೆ ಬಾಗಿಲ ಬಳಿ ಇಟ್ಟಿದ್ದಾಳೆ.

ಐಶ್ವರ್ಯ ಕಂಡ್ರೆ ಅಮಿತಾಭ್​ ಪುತ್ರಿ ಶ್ವೇತಾಗೆ ಹೊಟ್ಟೆ ಉರಿ: ಮೊಮ್ಮಗಳು ನವ್ಯಾ ನವೇಲಿನೂ ಇದೇ ಹಾದಿ ಹಿಡಿದ್ರಾ?

ಟ್ವಿಟರ್ ಪೋಸ್ಟ್ ವೈರಲ್ : @Malavtweets ಹೆಸರಿನ ಟ್ವಿಟರ್ ನಲ್ಲಿ ಎರಡು ಫೋಟೋವನ್ನು ಪೋಸ್ಟ್ ಮಾಡಲಾಗಿದೆ. ನಾನು ನನ್ನ ಮಗಳ ಮಾತು ಕೇಳಿಲ್ಲ ಎನ್ನುವ ಕಾರಣಕ್ಕೆ ಪೆನ್ಸಿಲ್ ನಲ್ಲಿ ನೋಟ್ ಬರೆದು ಅಪಾರ್ಟ್ಮೆಂಟ್ ಬಾಗಿಲ ಬಳಿ ಇಟ್ಟಿದ್ದಾಳೆ. ನನ್ನ ಬೆಲೆ ಇಷ್ಟು ಕಡಿಮೆಯಾ ಎಂದು ನಾನು ಆಲೋಚನೆಗೆ ಬಿದ್ದಿದ್ದೇನೆ ಎಂದು ಆತ ಶೀರ್ಷಿಕೆ ಹಾಕಿದ್ದಾನೆ. ಒಂದರಲ್ಲಿ ಮಗಳು ಬರೆದ ಪೋಸ್ಟ್ ಹಾಗೂ ಇನ್ನೊಂದರಲ್ಲಿ ಮನೆ ಕಿಟಕಿಯಲ್ಲಿರುವ ನೋಟನ್ನು ನೀವು ನೋಡ್ಬಹುದು. 

ಮಗಳು ನೋಟ್ ನಲ್ಲಿ ಬರೆದಿದ್ದು ಏನು? : ಮಗಳು ಪೆನ್ಸಿಲ್ ನಲ್ಲಿ ನೋಟ್ ಬರೆದಿರೋದನ್ನು ನೀವು ಫೋಟೋದಲ್ಲಿ ನೋಡ್ಬಹುದು. ಅದ್ರಲ್ಲಿ ಫಾದರ್ ಫಾರ್ ಸೇಲ್ ಒನ್ 2,00000. ಹೆಚ್ಚಿನ ಮಾಹಿತಿಗೆ ಬೆಲ್ ರಿಂಗ್ ಮಾಡಿ ಎಂದು ಆಕೆ ಬರೆದಿದ್ದಾಳೆ. 

ತಂಗಿ ಖುಷಿಗಾಗಿ ನಟನೆಯನ್ನೇ ಬಿಡಲು ರೆಡಿ ಯಾಗಿದ್ರಂತೆ ಜಾನ್ವಿ ಕಪೂರ್‌!

ಟ್ವಿಟರ್ ಬಳಕೆದಾರರು ಹೇಳಿದ್ದೇನು? : ಈ ಟ್ವಿಟರ್ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದಕ್ಕೆ ಸಾಕಷ್ಟು ಕಮೆಂಟ್ಸ್ ಕೂಡ ಬಂದಿದೆ. ಮಗಳ ಬುದ್ಧಿವಂತಿಕೆಯನ್ನು ಜನರು ಮೆಚ್ಚಿಕೊಂಡಿದ್ದಾರೆ. ಮಾತುಕೇಳಿಲ್ಲ ಅಂದ್ರೆ ತಂದೆಯನ್ನು ಮಾರಿಬಿಡಿ ಎಂದು ಇನ್ನೊಬ್ಬರು ಕಮೆಂಟ್ ಮಾಡಿದ್ದಾರೆ. ಮಗಳು ಒಳ್ಳೆ ಬ್ಯುಸಿನೆಸ್ ವುಮೆನ್ ಆಗ್ತಾಳೆ. ಯಾವುದು ಕೆಲಸಕ್ಕೆ ಬರಲ್ವೋ ಅದನ್ನು ಮಾರಾಟ ಮಾಡ್ತಾಳೆ ಎಂದು ಇನ್ನೊಬ್ಬರು ಬರೆದಿದ್ದಾರೆ.

ತಂದೆಯ ಮೆಸ್ಸೇಜ್ ವೈರಲ್ ಆಗಿತ್ತು : ಸಾಮಾಜಿಕ ಜಾಲತಾಣದಲ್ಲಿ ಇಂಥ ಪೋಸ್ಟ್ ವೈರಲ್ ಆಗ್ತಾನೇ ಇರುತ್ತದೆ. ಕೆಲ ದಿನಗಳ ಹಿಂದೆ ಮಗಳೊಬ್ಬಳು ತನ್ನ ತಂದೆಯ ಕೆಲಸವನ್ನು ಪೋಸ್ಟ್ ಮಾಡಿದ್ದಳು. ತಾನು ತನ್ನ ಬ್ಲಡ್ ಗ್ರೂಪ್ ಬಗ್ಗೆ ತಂದೆಗೆ ಕೇಳಿದ್ರೆ ಅವರು ಅದಕ್ಕೆ ನೀಡಿದ ಉತ್ತರ ಮಜವಾಗಿತ್ತು. ಬ್ಲಡ್ ಗ್ರೂಪ್ ಎ ಪ್ಲಸ್ ಆದ್ರೆ ನೀನು ಬಿ ಮೈನಸ್ ಎಂದು ತಂದೆ ಹೇಳಿದ್ದರು. ನನ್ನ ಮರ್ಯಾದೆ ತೆಗೆಯೋದ್ರಲ್ಲಿ ತಂದೆಗಿಂತ ಮುಂದೆ ಯಾರಿಲ್ಲ ಎಂದು ಆಕೆ ಬರೆದಿದ್ದಳು. 
 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಬೆಳಗೆದ್ದು .. ನಾಚುತ್ತಲೇ ಮಲಗುವ ಕೋಣೆಯ ರಹಸ್ಯ ಬಹಿರಂಗಪಡಿಸಿದ ಪಿಗ್ಗಿ
ಫೋಟೋ ಹಂಚಿಕೊಂಡು 'ಡಾರ್ಲಿಂಗ್‌..' ಎಂದು ಬರೆದ ಸಾರಾ ತೆಂಡುಲ್ಕರ್‌