ಎಲ್ಲರೂ ದುಡ್ಡು ನೋಡಿ ಪ್ರೀತಿ ಮಾಡುವ ಕಾಲವಿದು. ಹೀಗಿರುವಾಗ ಇಲ್ಲೊಬ್ಬ ಯುವತಿ ತಾನು ಪ್ರೀತಿಸಿದ ಹುಡುಗನನ್ನು ಮದ್ವೆಯಾಗಲು ಕೋಟಿ ಕೋಟಿ ಆಸ್ತಿಯನ್ನೇ ಬಿಟ್ಟು ಬಂದಿದ್ದಾಳೆ. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.
ಪ್ರೀತಿಯಲ್ಲಿ ಬೀಳುವುದು ಸುಲಭ. ಆದರೆ ಆ ಸಂಬಂಧವನ್ನು ಕಾಪಾಡಿಕೊಳ್ಳುವುದು ಅಂದುಕೊಂಡಷ್ಟು ಸುಲಭವಲ್ಲ. ಸಾಕಷ್ಟು ತಾಳ್ಮೆ ಮತ್ತು ತ್ಯಾಗವನ್ನು ಮಾಡಬೇಕಾಗುತ್ತದೆ. ಭರವಸೆಗಳನ್ನು ನೀಡುವುದು ಸುಲಭ. ಆದರೆ ಅದನ್ನು ಈಡೇರಿಸಲು ಕೆಲವೊಮ್ಮೆ ಎಲ್ಲವನ್ನೂ ಕಳೆದುಕೊಳ್ಳಬೇಕಾಗುತ್ತದೆ. ನಾವು ಎಂಥೆಲ್ಲಾ ವಿವಾಹ, ಪ್ರೇಮ ಪ್ರಸಂಗ, ಪ್ರೇಮ ಕಥೆಗಳನ್ನು ನೋಡಿರುತ್ತೇವೆ. ಎಲ್ಲರೂ ದುಡ್ಡಿನ ಹಿಂದೆ ಬಿದ್ದು ವ್ಯಕ್ತಿಯನ್ನು ಪ್ರೀತಿಸುವುದನ್ನು ಮಾಡುತ್ತಾರೆ ಆದರೆ ಮಲೇಷ್ಯಾದ ಶ್ರೀಮಂತ ಉದ್ಯಮಿಯೊಬ್ಬರ ಮಗಳು ತಾನು ಪ್ರೀತಿಸಿದ ಗೆಳೆಯನ ವಿವಾಹವಾಗಲು ತಂದೆ ಮನೆಯ ಬರೋಬ್ಬರಿ 2484 ಕೋಟಿ ರೂ. ಆಸ್ತಿಯನ್ನು ಬಿಟ್ಟು ಬಂದಿದ್ದಾರೆ.
ಏಂಜಲೀನಾ ಫ್ರಾನ್ಸಿಸ್ ಎಂಬ ಯುವತಿಗೆ (Girl) ಕಾಲೇಜಿನಲ್ಲಿ ಜೆದ್ದಿಯಾಹ್ ಎಂಬವನ ಜೊತೆ ಪ್ರೀತಿಯಾಗಿತ್ತು. ಇದನ್ನು ಮನೆಯಲ್ಲಿ ಹೇಳಿದ್ದಕ್ಕೆ ಆತ ನಮ್ಮ ಅಂತಸ್ತಿಗೆ ಸಮಾನನಲ್ಲ ಎಂದು ಚೆನ್ನಾಗಿ ಬೈದಿದ್ದರಂತೆ. ಹೀಗಾಗಿ ಯುವತಿ ಮನೆ ಬಿಟ್ಟು ಬಂದು ತನ್ನ ಪ್ರಿಯರಕನನ್ನು ಮದುವೆ (Marriage)ಯಾಗಿದ್ದಾಳೆ. ಪ್ರಿಯತಮ (Lover)ನಿಗಾಗಿ ಮನೆಯವರನ್ನು ಎದುರು ಹಾಕಿಕೊಂಡು ಆಸ್ತ ಪಾಸ್ತಿಗಳನ್ನೆಲ್ಲಾ ಬಿಟ್ಟು ವಿವಾಹವಾಗಿ ಜೀವನ ನಡೆಸುತ್ತಿದ್ದಾಳೆ. ಬಾಯ್‌ಫ್ರೆಂಡ್‌ನೊಂದಿಗೆ ಮದುವೆಯಾಗಲು ಯುವತಿ ತನ್ನ ಕುಟುಂಬದ ಪಿತ್ರಾರ್ಜಿತ ಆಸ್ತಿಯಾದ ಸುಮಾರು 300 ಮಿಲಿಯನ್ ಡಾಲರ್ ಅಂದರೆ ಸುಮಾರು 2,484 ಕೋಟಿ ರೂ. ಬಿಟ್ಟು ಹೊರ ನಡೆದಿದ್ದಾಳೆ.
ಇದು ರೀಲ್ ಅಲ್ಲ ರಿಯಲ್ ಸೀತಾರಾಮಂ; ಪ್ರೀತಿಗಾಗಿ ಅರಮನೆ ತೊರೆದ ಜಪಾನ್ ರಾಜಕುಮಾರಿ
ಕೋಟಿ ಆಸ್ತಿ ತೊರೆದ ಮಲೇಷ್ಯಾದ 50 ಶ್ರೀಮಂತ ಉದ್ಯಮಿಯ ಮಗಳು
78 ವರ್ಷದ ಖೂ ಕೇ ಪೆಂಗ್ ಅವರು ಮಲಯನ್ ಯುನೈಟೆಡ್ ಇಂಡಸ್ಟ್ರೀಸ್‌ನ ಅಧ್ಯಕ್ಷರಾಗಿದ್ದಾರೆ, ಇದು ಉನ್ನತ ಮಟ್ಟದ ಐಷಾರಾಮಿ ಬ್ರಾಂಡ್‌ಗಳು ಮತ್ತು ಹೋಟೆಲ್‌ಗಳಲ್ಲಿ ಪ್ರಮುಖ ಪಾಲನ್ನು ಹೊಂದಿರುವ ಹೂಡಿಕೆ (Investment) ಹಿಡುವಳಿ ಸಂಸ್ಥೆಯಾಗಿದೆ. 2015 ರಲ್ಲಿ, ಅವರು ಫೋರ್ಬ್ಸ್ ಮಲೇಷ್ಯಾದ 50 ಶ್ರೀಮಂತರ ಪಟ್ಟಿಯಲ್ಲಿ 44 ನೇ ಸ್ಥಾನದಲ್ಲಿದ್ದರು. ಅವರ ನಿವ್ವಳ ಮೌಲ್ಯ US$300 ಮಿಲಿಯನ್ ಎಂದು ಅಂದಾಜಿಸಲಾಗಿದೆ. ಖೂ ಅವರ ಐದು ಮಕ್ಕಳಲ್ಲಿ ನಾಲ್ಕನೆಯವರಾದ ಏಂಜಲೀನ್ ಫ್ರಾನ್ಸಿಸ್ ಖೂ ವ್ಯಕ್ತಿಯೊಬ್ಬನನ್ನು ಪ್ರೀತಿಸುತ್ತಿದ್ದು, ಮನೆ ಮಂದಿಗೆ ಇದು ಇಷ್ಟವಿರಲ್ಲಿಲ್ಲ. ಮನೆ ಅಥವಾ ಹುಡುಗ ಯಾರನ್ನಾದರೂ ಒಬ್ಬನನ್ನು ಆಯ್ದುಕೊಳ್ಳುವಂತೆ ಸೂಚಿಸಿದ್ದರು. ಯುವತಿ ಕೋಟಿ ಕೋಟಿ ಆಸ್ತಿಯ (Asset) ಎದುರು ತಾನು ಪ್ರೀತಿಸಿದಾತನನ್ನೇ ಆಯ್ಕೆ ಮಾಡಿಕೊಂಡಳು.
ಏಂಜಲೀನ್ ತಂದೆ ತನ್ನ ಪ್ರೀತಿಯ ಮೌಲ್ಯವನ್ನು ಅರ್ಥಮಾಡಿಕೊಳ್ಳುವುದಿಲ್ಲ ಎಂದು ಅರಿತುಕೊಂಡಳು. ಹೀಗಾಗಿ ಆಸ್ತಿಯನ್ನು ಬಿಟ್ಟಾದರೂ ಪ್ರಿಯಕರನನ್ನು ಮದುವೆಯಾಗುವ ನಿರ್ಧಾರ ಮಾಡಿದಳು. ಸಣ್ಣ ಸಮಾರಂಭದಲ್ಲಿ ಇಬ್ಬರೂ ವಿವಾಹವಾದರು. ತನ್ನ ಕುಟುಂಬದಿಂದ ಯಾರೂ ತನ್ನ ಮದುವೆಗೆ ಹಾಜರಾಗದಿದ್ದರೂ ಸಹ ಏಂಜಲೀನ್ ಮಧ್ಯಮ ವರ್ಗದ ಹೊಸ ಕುಟುಂಬದಲ್ಲಿ ಜೀವನ ಮಾಡಲು ನಿರ್ಧರಿಸಿದಳು.
ಕ್ಯಾನ್ಸರ್ ಪೀಡಿತ 10 ವರ್ಷದ ಬಾಲಕಿಗೆ ಕೊನೆಯ ಆಸೆಯಂತೆ ಬಾಯ್‌ಫ್ರೆಂಡ್ ಜೊತೆ ಅದ್ದೂರಿ ಮದುವೆ!
ಆಸ್ತಿ ಮತ್ತು ಪ್ರೀತಿಯ ಮಧ್ಯೆ, ಪ್ರೀತಿಯನ್ನು ಆಯ್ಕೆ ಮಾಡಿಕೊಂಡಿರುವುದರ ಬಗ್ಗೆ ಪ್ರತಿಕ್ರಿಯಿಸಿದ ಏಂಜಲೀನ್ ಖೂ, 'ನಾವು ಹಣವನ್ನು ಯಾವಾಗಲೂ ಬೇಕಾದರೂ ಸಂಪಾದಿಸಬಹುದು. ಆದರೆ ಪ್ರೀತಿ ಅನ್ನೋದು ಅಮೂಲ್ಯ. ಅದನ್ನು ಯಾವಾಗಲೂ ಸಂಪಾದಿಸಲು ಸಾಧ್ಯವಿಲ್ಲ. ಹಣ ಹಲವು ನಕಾರಾತ್ಮಕ ಗುಣಗಳೊಂದಿಗೆ ಬರುತ್ತದೆ. ಸಮಸ್ಯೆ, ಗೊಂದಲವನ್ನು ತರುತ್ತದೆ. ಆದರೆ ಪ್ರೀತಿ ಖುಷಿಯನ್ನಷ್ಟೇ ತರುತ್ತದೆ ಎಂದು ಹೇಳಿದರು.
ಅದೇನೆ ಇರ್ಲಿ, ಎಲ್ಲರೂ ದುಡ್ಡು ನೋಡಿ ಪ್ರೀತಿ ಮಾಡುವ ಈ ಕಾಲದಲ್ಲಿ ಪ್ರೀತಿಗಾಗಿ ದುಡ್ಡನ್ನೇ ಬಿಟ್ಟು ಬಂದ ಯುವತಿಯ ಅಪ್ಪಟ ಪ್ರೀತಿಗೆ ಮೆಚ್ಚುಗೆ ಸೂಚಿಸಲೇಬೇಕು.