ಮಕ್ಕಳಿಗಾಗಿ ಈ ರೂಲ್ಸ್ ಮಾಡಿದ್ರು ನೀತಾ ಅಂಬಾನಿ.. ನೀವೂ ಟ್ರೈ ಮಾಡಿ

By Suvarna News  |  First Published Aug 10, 2023, 5:30 PM IST

ಮಕ್ಕಳ ಪಾಲನೆ ಪಾಲಕರಿಗೆ ಜವಾಬ್ದಾರಿ ಕೆಲಸ. ಶ್ರೀಮಂತರಿರಲಿ, ಬಡವರಿರಲಿ ಈ ಕೆಲಸವನ್ನು ಅಚ್ಚುಕಟ್ಟಾಗಿ ಮಾಡ್ಬೇಕು. ಆಗ್ಲೆ ಮಕ್ಕಳ ಭವಿಷ್ಯ ಚೆನ್ನಾಗಿರಲು ಸಾಧ್ಯ. ಇದನ್ನು ಅರಿತಿದ್ದ ನೀತಾ ಅಂಬಾನಿ, ಅದ್ರಲ್ಲೂ ಸೈ ಎನ್ನಿಸಿಕೊಂಡಿದ್ದಾರೆ.
 


ಬೆಳೆವ ಸಿರಿ ಮೊಳಕೆಯಲ್ಲಿ ಅನ್ನೋ ಹಾಗೆ ಮಕ್ಕಳಿಗೆ ನಾವು ಚಿಕ್ಕಂದಿನಲ್ಲಿ ಯಾವ ಸಂಸ್ಕಾರ, ಆಚಾರ ವಿಚಾರಗಳನ್ನು ಹೇಳಿ ಕೊಡುತ್ತೇವೆಯೋ ಅವರು ಅದನ್ನೇ ಮುಂದಿನ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುತ್ತಾರೆ. ಶ್ರೀಮಂತರೇ ಆಗಲಿ, ಬಡವರೇ ಆಗಲಿ ಎಲ್ಲರಿಗೂ ತಮ್ಮ ಮಕ್ಕಳ ವಿದ್ಯಾಭ್ಯಾಸ ಹಾಗೂ ಸ್ವಭಾವಗಳ ಬಗ್ಗೆ ಜವಾಬ್ದಾರಿ ಇದ್ದೇ ಇರುತ್ತೆ. 

ಆಗರ್ಭ ಶ್ರೀಮಂತರಾದ ರಿಲೈಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷರಾದ ಮುಖೇಶ್ ಅಂಬಾನಿಯವರ ಪತ್ನಿ ನೀತಾ ಅಂಬಾನಿ (Nita Ambani) ಯವರು ಕೂಡ ಇದಕ್ಕೆ ಹೊರತಾಗಿಲ್ಲ. ಅವರು ಸಾಮಾಜಿಕ ಕೆಲಸಗಳಲ್ಲಿ ಎಷ್ಟೇ ಬ್ಯುಸಿ ಇದ್ರು ಕೂಡ ತಮ್ಮ ಮಕ್ಕಳನ್ನು ಎಂದೂ ನಿರ್ಲಕ್ಷ ಮಾಡಿಲ್ಲ. ಅಂಬಾನಿ ಪತ್ನಿ ಎಂಬುದರ ಹೊರತಾಗಿಯೂ ತನ್ನದೇ ಆದ ವ್ಯಕ್ತಿತ್ವ ರೂಪಿಸಿಕೊಂಡಿರುವ ನೀತಾ ಅಂಬಾನಿಯವರು ಮಕ್ಕಳಿ (children) ಗೆ ಒಳ್ಳೆಯ ಮಾರ್ಗದರ್ಶಕಿಯಾಗಿದ್ದಾರೆ. ಇವರು ತಮ್ಮ ಮೂರು ಮಕ್ಕಳಿಗೂ ಒಳ್ಳೆಯ ಸಂಸ್ಕಾರ ಕಲಿಸಿದ್ದಾರೆ. ಶ್ರೀಮಂತಿಕೆಯಲ್ಲೇ ಹುಟ್ಟಿ ಬೆಳೆದ ಮಕ್ಕಳಿಗೆ ಸರಳವಾಗಿ ಜೀವನವನ್ನು ನಡೆಸುವುದನ್ನು ಹೇಳಿಕೊಟ್ಟಿದ್ದಾರೆ ನೀತಾ ಅಂಬಾನಿ. ಇದಕ್ಕಾಗಿ ಅವರು ಮನೆಯಲ್ಲಿ ಕೆಲವು ಸ್ಟ್ರಿಕ್ಟ್ ರೂಲ್ಸ್ ಗಳನ್ನು ಮಾಡಿದ್ದಾರೆ. ಇದು ಇಂದಿನ ಅನೇಕ ಮಕ್ಕಳಿಗೆ ದಾರಿದೀಪವಾಗಿದೆ.

Tap to resize

Latest Videos

ಅಮ್ಮನಿಗೆ ಇಂಗ್ಲಿಷ್ ಬರಲ್ಲಾಂದ್ರೆ ನಾಚಿಕೆ ವಿಷ್ಯಾನ? 'ಭಾಗ್ಯಲಕ್ಷ್ಮಿ'ಯಲ್ಲಿ ತನ್ವಿಯ ವರ್ತನೆ ಹೀಗ್ಯಾಕೆ?

ಸಮಯದ ಬೆಲೆ ತಿಳಿಸಿ (Time Management): ಇಂದಿನ ಮಕ್ಕಳು ಟಿವಿ, ಮೊಬೈಲ್ ನೋಡುತ್ತ ಊಟ, ತಿಂಡಿಯನ್ನು ಸಮಯಕ್ಕೆ ಸರಿಯಾಗಿ ಮಾಡುವುದನ್ನೇ ಮರೆಯುತ್ತಾರೆ. ಅವರಿಗೆ ಸಮಯದ ಮಹತ್ವದ ಬಗ್ಗೆ ತಿಳಿದಿರುವುದಿಲ್ಲ. ನೀತಾ ಅಂಬಾನಿಯವರು ಮಕ್ಕಳು ಸಮಯಕ್ಕೆ ಸರಿಯಾಗಿ ಆಹಾರ ಸೇವಿಸಬೇಕು, ಓದಬೇಕು ಹಾಗೂ ಅಭ್ಯಾಸ ಮಾಡಿಕೊಳ್ಳಬೇಕು ಮತ್ತು ಆಟವಾಡಬೇಕು ಎಂದು ಹೇಳುತ್ತಾರೆ. ಮಕ್ಕಳ ಜೊತೆ ಸ್ಟ್ರಿಕ್ಟ್ ಆಗಿದ್ದುಕೊಂಡೇ ಅವರಿಗೆ ಸಮಯದ ಮಹತ್ವವನ್ನು ತಿಳಿಸಿಕೊಡಬೇಕು ಎನ್ನುವುದು ನೀತಾ ಅಂಬಾನಿಯವರ ಸಲಹೆಯಾಗಿದೆ.

ಹಣದ ಮಹತ್ವ ತಿಳಿದಿರಲಿ (Money Value) :  ನೀತಾ ಅಂಬಾನಿಯವರು ಮಕ್ಕಳಿಗೆ ದುಡ್ಡಿನ ಮಹತ್ವದ ಬಗ್ಗೆ  ಪಾಠ ಮಾಡುತ್ತಿದ್ದರು. ಮಕ್ಕಳಿಗಾಗಿ ಕೆಲವು ಮೊತ್ತದ ಹಣವನ್ನು ಪಾಕೆಟ್ ಮನಿಯಾಗಿ ಕೊಡುತ್ತಿದ್ದರು. ಆ ಹಣದಲ್ಲಿಯೇ ಅವರು ತಮ್ಮ ಖರ್ಚುಗಳನ್ನು ನೋಡಿಕೊಳ್ಳಬೇಕಾಗಿತ್ತು. ಶ್ರೀಮಂತಿಕೆ ಇದೆ ಎನ್ನುವ ಕಾರಣಕ್ಕೆ ಮಕ್ಕಳು ಕೇಳಿದಷ್ಟು ಹಣ ಕೊಡಲಿಲ್ಲ. ಈ ಮೂಲಕ ಅವರು ತಮ್ಮ ಮಕ್ಕಳಿಗೆ ಹಣದ ಮೌಲ್ಯವನ್ನು ಕಲಿಸಿದ್ದಾರೆ. ತಮ್ಮ ಶ್ರೀಮಂತಿಕೆಯನ್ನು ಪ್ರದರ್ಶಿಸಲು ಅಥವಾ ಸಮಾಜದಲ್ಲಿ ತಮ್ಮ ಸ್ಟೇಟಸ್ ತೋರಿಸಲು ಮಕ್ಕಳ ಕೈಗೆ ಹಣ ನೀಡುವ ಪಾಲಕರಿಗೂ ಕೂಡ ಇದು ತಿಳಿಯಬೇಕಿದೆ.

ಸಮಂತಾಗೆ ಕಾಯೋ ಟೈಮಲ್ಲಿ ಇಡ್ಲಿ ಹೊಟೇಲ್ ತೆಗೀಬೇಕು ಅಂದುಕೊಂಡಿದ್ರಂತೆ ವಿಜಯ ದೇವರಕೊಂಡ!

ಮಕ್ಕಳ ಬಗ್ಗೆ ಗಮನವಿರಲಿ : ತಂದೆ ತಾಯಿಯರಿಗೆ ಮಕ್ಕಳ ಬಗ್ಗೆ ಗಮನವಿರಬೇಕು. ಅವರು ಎಲ್ಲಿ ಹೋಗುತ್ತಿದ್ದಾರೆ, ಏನು ಮಾಡುತ್ತಿದ್ದಾರೆ, ಮನೆಯಿಂದ ಹೊರಗಡೆ ಅವರ ವರ್ತನೆ ಹೇಗಿರುತ್ತದೆ, ಅವರ ವಿದ್ಯಾಭ್ಯಾಸ (Studies) ಹೇಗೆ ನಡೆಯುತ್ತಿದೆ ಎನ್ನುವುದನ್ನು ಪಾಲಕರು ಸದಾ ಗಮನಿಸುತ್ತಿರಬೇಕು. ಮಕ್ಕಳ ಹೋದ ಕಡೆ ಸೇಫ್ ಆಗಿ ಇದ್ದಾರೋ ಇಲ್ಲವೋ ಎಂದು ತಿಳಿದುಕೊಳ್ಳುವುದು ತಂದೆ ತಾಯಿಯ ಕರ್ತವ್ಯ. ಮಕ್ಕಳಿಗೆ ತಿಳಿಯದಂತೆ ಅವರ ಮೇಲೆ ಗಮನವಿಡುವುದು ತಪ್ಪಾದರೂ ಎಲ್ಲ ಪಾಲಕರೂ ಇದನ್ನು ಮಾಡಲೇಬೇಕು ಎನ್ನುವುದು ನೀತಾ ಅಂಬಾನಿ ಕಿವಿ ಮಾತಾಗಿದೆ. 

ಮಕ್ಕಳನ್ನು ಬೆಂಬಲಿಸಿ : ಕೆಲವೊಮ್ಮೆ ಮಕ್ಕಳು ಹೊರಗಿನ ಪ್ರಪಂಚದಿಂದ ಕೆಟ್ಟ ಅಭ್ಯಾಸಗಳನ್ನು (Bad Habits) ಕಲಿಯುತ್ತಾರೆ ಅಥವಾ ಯಾವುದೋ ಒತ್ತಡಕ್ಕೆ (Stress) ಒಳಗಾಗಿ ಅಡ್ಡದಾರಿ ಹಿಡಿಯುತ್ತಾರೆ. ಅಂತಹ ಸಮಯದಲ್ಲಿ ಪಾಲಕರು ಮಕ್ಕಳೊಂದಿಗೆ ಸಹನೆಯಿಂದ ವರ್ತಿಸಿ ಅವರನ್ನು ಸರಿದಾರಿಗೆ ತರಬೇಕಾಗುತ್ತದೆ. ಮಕ್ಕಳ ಕಷ್ಟ ಸುಖಗಳಲ್ಲಿ ಅವರ ಜೊತೆಗಿದ್ದು ಅವರಿಗೆ ಪ್ರೋತ್ಸಾಹ (Encourage), ಧೈರ್ಯ ಕೊಡುವುದು ಕೂಡ ಪಾಲಕರ ಜವಾಬ್ದಾರಿಯಾಗಿದೆ. ನೀತಾ ಅಂಬಾನಿಯವರು ತಮ್ಮ ಮೂವರು ಮಕ್ಕಳ ಒಳಿತು ಕೆಡುಕಿನಲ್ಲಿ ಸದಾ ಜೊತೆಗಿದ್ದಾರೆ. ಅಮ್ಮನ ಅಗತ್ಯ ನಮಗೆ ಇದೆ ಎನಿಸಿದಾಗೆಲ್ಲ ಅಮ್ಮ ನಮ್ಮ ಜೊತೆ ಇರುತ್ತಾರೆ. ಅವರು ಕುಟುಂಬ ಮತ್ತು ಕರೀಯರ್ ಎರಡನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ ಎಂದು ನೀತಾ ಅಂಬಾನಿಯವರ ಮಗಳಾದ ಇಶಾ ಅಂಬಾನಿ ಹೆಮ್ಮೆಯಿಂದ ಹೇಳ್ತಾರೆ.
 

click me!