
ಸಾಮಾಜಿಕ ಜಾಲತಾಣಗಳ (Social Media) ಬಳಕೆ ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿದೆ. ಬಹುತೇಕ ಎಲ್ಲರೂ ಸಾಮಾಜಿಕ ಜಾಲತಾಣದಲ್ಲಿ ಖಾತೆ (Account)ಗಳನ್ನು ಹೊಂದಿರುತ್ತಾರೆ. ವಯಸ್ಕರು,ಮಕ್ಕಳು (Children) ಸೇರಿದಂತೆ ಎಲ್ಲ ವಯಸ್ಸಿನ ಮಕ್ಕಳು ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿದ್ದಾರೆ. ಫೇಸ್ಬುಕ್ (Facebook), ಟ್ವಿಟರ್ (Twitter), ಇನ್ಸ್ಟಾಗ್ರಾಮ್ (Instagram), ಸ್ನ್ಯಾಪ್ ಚಾಟ್ (Snapchat) ನಂಥ ಅನೇಕ ಆಯ್ಕೆಗಳ ಮೂಲಕ ಮಕ್ಕಳು ಜನರೊಂದಿಗೆ ಸಂಪರ್ಕ ಬೆಳೆಸುತ್ತಿದ್ದಾರೆ. ಆದ್ರೆ ಮಕ್ಕಳಲ್ಲಿ ಹೆಚ್ಚಾಗ್ತಿರುವ ಸಾಮಾಜಿಕ ಜಾಲತಾಣ ಬಳಕೆ ಪಾಲಕರ ಚಿಂತೆಗೆ ಕಾರಣವಾಗಿದೆ. ಆನ್ಲೈನ್ ನಲ್ಲಿ ನಡೆಯುವ ಮೋಸ, ಟ್ರೋಲ್, ಕಮೆಂಟ್ ಇದು ಅವರ ಆತಂಕಕ್ಕೆ ಮುಖ್ಯ ಕಾರಣ. ಚಿಕ್ಕಮಕ್ಕಳು ಸಾಮಾಜಿಕ ಜಾಲತಾಣ ಬಳಕೆ ಮಾಡುವಾಗ ಪಾಲಕರು ಎಚ್ಚರಿಕೆ ವಹಿಸುವ ಅಗತ್ಯವಿದೆ. ಇದ್ರ ಮಧ್ಯೆಯೇ ಸಾಮಾಜಿಕ ಜಾಲತಾಣವನ್ನು ಸರಿಯಾಗಿ ಬಳಕೆ ಮಾಡಿದಲ್ಲಿ ಅನೇಕ ಲಾಭವಿದೆ. ವ್ಯಕ್ತಿತ್ವ ರೂಪಕವಾಗಿ, ಕೌಶಲ್ಯ ವೃದ್ಧಿ ಸೇರಿದಂತೆ ಅನೇಕ ಪ್ರಯೋಜನಗಳನ್ನು ಇದ್ರಲ್ಲಿ ನೋಡಬಹುದು. ಸಾಮಾಜಿಕ ಜಾಲತಾಣಗಳು ಮಕ್ಕಳಲ್ಲಿ ಯಾವ ಪರಿಣಾಮ ಬೀರುತ್ತವೆ ಎಂಬುದನ್ನು ಹೇಳ್ತೆವೆ.
ಸಾಮಾಜಿಕ ಜಾಲತಾಣದಿಂದ ಮಕ್ಕಳಿಗೆ ಲಾಭ
ಉತ್ತಮ ಸ್ನೇಹಿತರಾಗಲು ಕಲಿಸುತ್ತದೆ : ಬೆಳೆಯುತ್ತಿರುವ ಮಕ್ಕಳು ಸ್ನೇಹ ಮತ್ತು ಸಂಬಂಧಗಳ ಮಹತ್ವವನ್ನು ಅರ್ಥ ಮಾಡಿಕೊಳ್ಳುವುದು ಬಹಳ ಮುಖ್ಯ. ಆನ್‌ಲೈನ್ ಸಂಪರ್ಕವು ನಿಮ್ಮ ಮಗುವಿಗೆ, ಅವರ ಕ್ಷೇತ್ರವನ್ನು ಮೀರಿ ಸ್ನೇಹಿತರನ್ನು ಮಾಡಿಕೊಳ್ಳು ಉತ್ತಮ ಅವಕಾಶ ನೀಡುತ್ತದೆ. ವಿಶೇಷವಾಗಿ ನಿಮ್ಮ ಮಗು ಸಮಾಜದಲ್ಲಿ ಬೆರೆಯಲು ಹಿಂಜರಿಯುತ್ತಿದ್ದರೆ ಮತ್ತು ಕಡಿಮೆ ಸ್ನೇಹಿತರನ್ನು ಹೊಂದಿದ್ದರೆ,ಸಾಮಾಜಿಕ ಜಾಲತಾಣ ಇದನ್ನು ಕಲಿಸುತ್ತದೆ. ಜನರೊಂದಿಗೆ ಸಂಪರ್ಕ ಬೆಳೆಸಲು ಇದು ಉತ್ತಮ ಮಾರ್ಗವಾಗಿದೆ. ವಿವಿಧ ಸಂಸ್ಕೃತಿಗಳೊಂದಿಗೆ ಸಂಪರ್ಕ ಸಾಧಿಸಲು ಮತ್ತು ಕಲಿಯಲು ಇಲ್ಲಿ ಅವಕಾಶ ಸಿಗುತ್ತದೆ.
ಸಾಮಾಜಿಕ ಜಾಲತಾಣದಿಂದ ವಾಸ್ತವದ ಪರಿಚಯ : ಸಾಮಾಜಿಕ ಮಾಧ್ಯಮದಲ್ಲಿದ್ದರೆ, ನೈಜ ಸಮಸ್ಯೆಗಳು ಮತ್ತು ಸುದ್ದಿಗಳನ್ನು ಅದ್ರಿಂದ ತಿಳಿಯಬಹುದು. ಇದ್ರಿಂದ ಮಕ್ಕಳಿಗೆ ಉತ್ತಮ ಮಟ್ಟದ ಅರಿವು ಮತ್ತು ಜ್ಞಾನ ಸಿಗುತ್ತದೆ. ಡಿಜಿಟಲ್ ಜಗತ್ತಿನಲ್ಲಿ ಬೆಳೆಯುತ್ತಿರುವ ಮಕ್ಕಳಿಗೆ ಸಾಮಾಜಿಕ ಜಾಲತಾಣದ ಬಳಕೆಯ ಅರಿವಿರಬೇಕು.
Parenting Tips: ಹೊಟ್ಟೆಕಿಚ್ಚು ಪಡುವ ಮಕ್ಕಳ ಪಾಲಕರಿಗೆ ಕಿವಿಮಾತು
ಪ್ರತಿಭೆ ಪ್ರದರ್ಶನಕ್ಕೆ ವೇದಿಕೆ : ಹಿಂದಿನ ಕಾಲದಲ್ಲಿ, ಚರ್ಚೆಗಳು, ಭಾಷಣ ಕಾರ್ಯಕ್ರಮಗಳು ಮಗುವಿಗೆ ತಮ್ಮ ಆಂತರಿಕ ಪ್ರತಿಭೆಯನ್ನು ಪ್ರದರ್ಶಿಸಲು ಏಕೈಕ ವೇದಿಕೆಯಾಗಿತ್ತು. ಆದರೆ ಇಂದು ಸಾಮಾಜಿಕ ಮಾಧ್ಯಮಗಳ ಹೆಚ್ಚುತ್ತಿರುವ ಪ್ರವೃತ್ತಿಯೊಂದಿಗೆ ಮಕ್ಕಳು ತಮ್ಮ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಲು ಹಲವು ಆಯ್ಕೆಗಳನ್ನು ಹೊಂದಿದ್ದಾರೆ. ಪಾಡ್‌ಕ್ಯಾಸ್ಟ್ ಗಳು, ಫ್ಯಾಂಡಮ್‌ಗಳು ಮತ್ತು ಅನೇಕ ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳು ಮಕ್ಕಳಿಗೆ ಪ್ರತಿಭೆ ಅನಾವರಣಗೊಳಿಸುವ ಅವಕಾಶ ನೀಡುತ್ತವೆ.
ಮಕ್ಕಳಿಗೆ ಗ್ಯಾಜೆಟ್‌ಗಳನ್ನು ಯಾವಾಗ ನೀಡಬೇಕು ? : ಸಾಮಾಜಿಕ ಜಾಲತಾಣಗಳ ಬಳಕೆ ಒಳ್ಳೆಯದು ನಿಜ. ಆದ್ರೆ ಅದಕ್ಕೂ ಕೆಲವು ಮಿತಿಗಳಿವೆ. ಇತ್ತೀಚಿನ ದಿನಗಳಲ್ಲಿ ಎಲ್ಲ ಮಕ್ಕಳ ಕೈನಲ್ಲೂ ಫೋನ್ ಗಳಿರುತ್ತವೆ. ಅನೇಕ ಮಕ್ಕಳಿಗೆ ಅದನ್ನು ಬಳಸುವ ವಿಧಾನ ತಿಳಿದಿರುವುದಿಲ್ಲ. ಅದನ್ನು ತಪ್ಪಾಗಿ ಬಳಸಿ ಆಪತ್ತು ತಂದುಕೊಳ್ತಾರೆ. ಹಾಗಾಗಿ ಗ್ಯಾಜೆಟ್ ಬಳಕೆ ಹೇಗೆ ಎಂಬುದನ್ನು ಮಕ್ಕಳಿಗೆ ತಿಳಿಸಿ ಹೇಳಬೇಕು. ಜೊತೆಗೆ ಒಂದು ಸಮಯವನ್ನು ನಿಗದಿ ಮಾಡಬೇಕು. ದಿನಕ್ಕೆ ಅಥವಾ ವಾರಕ್ಕೆ ಇಷ್ಟು ಗಂಟೆ ಮಾತ್ರ ಗ್ಯಾಜೆಟ್ ನೀಡುವ ಪದ್ಧತಿ ಬೆಳೆಸಬೇಕು.
Parenting Tips: ಹದಿಹರೆಯದವರು ನಿಮ್ಮ ಮಾತು ಕೇಳಬೇಕು ಅಂದರೆ ಹೀಗೆ ಮಾಡಿ..
ಮಕ್ಕಳ ಮೇಲೆ ಕಣ್ಣಿಡಬೇಕೇ? : ಇದು ನಿಜವಾಗಿಯೂ ತುಂಬಾ ಕಷ್ಟಕರವಾದ ನಿರ್ಧಾರವಾಗಿದೆ. ಮಕ್ಕಳ ಫೋನ್ ಚೆಕ್ ಮಾಡುವುದು,ಅವರ ಮೇಲೆ ನಿಗಾ ಇಡುವುದು,ಅವರನ್ನು ಅನುಮಾನಿಸುವುದು ನಿಮ್ಮಿಬ್ಬರ ಸಂಬಂಧವನ್ನು ಹಾಳು ಮಾಡಬಹುದು. ಹಾಗಾಗಿ ಬುದ್ದಿವಂತಿಕೆಯ ಹೆಜ್ಜೆಯಿಡಬೇಕು. ಆನ್ಲೈನ್ ನಿಯಮಗಳನ್ನು ಪಾಲಿಸಬೇಕು. ಕೆಲ ಸೈಟ್ ಗಳನ್ನು ನೀವು ಬ್ಲಾಕ್ ಮಾಡಿ. ಹಾಗೆ ಅವರ ಆನ್ಲೈನ್ ಸ್ನೇಹಿತರ ಬಗ್ಗೆ ನೀವೂ ತಿಳಿದಿರಿ. ಮಕ್ಕಳಿಗೆ ಗೊತ್ತಾಗದಂತೆ ಅವರ ಫೋನ್ ಚೆಕ್ ಮಾಡಲು ಅನೇಕ ಅಪ್ಲಿಕೇಷನ್ ಲಭ್ಯವಿದೆ. ಮಕ್ಕಳು ಚಿಕ್ಕವರಾಗಿದ್ದರೆ ನೀವು ಇದನ್ನು ಅವಶ್ಯಕವಾಗಿ ಬಳಸಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.