Parenting Tips : ಮಕ್ಕಳ ಬೇಸಿಗೆ ರಜೆ ಹೀಗಿರಲಿ

By Suvarna NewsFirst Published May 11, 2022, 5:31 PM IST
Highlights

ಮಕ್ಕಳಿಗೆ ರಜೆ ಯಾಕೆ ಬಂತಪ್ಪ ಅಂತಾ ಗೊಣಗೋ ಪಾಲಕರೇ ಜಾಸ್ತಿ. ಅದ್ರಲ್ಲೂ ಬೇಸಿಗೆ ರಜೆ ಬಂದ್ರೆ ಇಡೀ ದಿನ ಮಕ್ಕಳು ಮನೆಯಲ್ಲಿರ್ತಾರೆ. ಮಕ್ಕಳ ಬೇಸಿಗೆ ರಜೆ ಸದಾ ನೆನಪಿರಬೇಕೆಂದ್ರೆ ಪಾಲಕರು ಕೆಲ ಟಿಪ್ಸ್ ಫಾಲೋ ಮಾಡ್ಬೇಕು.
 

ಕೊರೊನಾ (Corona) ನಂತ್ರ ನಿಧಾನವಾಗಿ ಶಾಲೆ (School) ಗಳು ಶುರುವಾಗಿದ್ದವು. ಆದ್ರೆ ಪರೀಕ್ಷೆ (Exam) ಬರೆದ ಮಕ್ಕಳಿ (Children) ಗೆ ರಜೆ (Holiday) ಶುರುವಾಗಿದೆ. ಇನ್ನೂ ಸುಮಾರು ಒಂದು ತಿಂಗಳುಗಳ ಕಾಲ ಶಾಲೆ ರಜೆ. ಮಕ್ಕಳು ಮನೆಯಲ್ಲಿದ್ರೂ ಕಷ್ಟ, ಇರದೆ ಹೋದ್ರೂ ಕಷ್ಟ ಎನ್ನುವ ಪಾಲಕರಿದ್ದಾರೆ. ಮನೆಯಲ್ಲಿ ಮಕ್ಕಳಿದ್ರೆ ಅವರನ್ನು ಸಂಭಾಳಿಸುವುದು ದೊಡ್ಡ ತಲೆನೋವು. ಎರಡು- ಮೂರು ಮಕ್ಕಳಿದ್ರೆ ಅವರ ಗಲಾಟೆ, ಕಿರುಚಾಟ ಕಿರಿಕಿರಿ ಎನ್ನಿಸುತ್ತದೆ. ಒಂದು ಮಗುವಿದ್ರೆ ಅದಕ್ಕೆ ಟೈಂ ಪಾಸ್ ಮಾಡೋದೇ ದೊಡ್ಡ ತಲೆಬಿಸಿ. ಅದ್ರಲ್ಲೂ ಬೇಸಿಗೆಯ ದಿನಗಳು ದೀರ್ಘವಾಗಿರುತ್ತದೆ.  ಸೂರ್ಯನ ಬೆಳಕು ಹೆಚ್ಚಿರುವ ಕಾರಣ, ಸೆಕೆಗೆ ಮಕ್ಕಳನ್ನು ಹೊರಗೆ ಬಿಡುವುದು ಕಷ್ಟ.  ಮಕ್ಕಳು ಬೇಸಿಗೆ ರಜೆಯನ್ನು ಸಂತೋಷವಾಗಿ ಹಾಗೂ ಸೃಜನಾತ್ಮಕವಾಗಿ ಕಲಿಯಬೇಕೆಂದ್ರೆ ಪಾಲಕರು ಕೆಲ ಪ್ಲಾನ್ ಮಾಡ್ಬೇಕು. ಮಕ್ಕಳಿಗಾಗಿ ಕೆಲ ಸಮಯವನ್ನು ಮೀಸಲಿಡಬೇಕು. ಇಂದು ಬೇಸಿಗೆ ರಜೆಯಲ್ಲಿ ಮಕ್ಕಳ ಟೈಂ ಪಾಸ್ ಹೇಗೆ ಮಾಡ್ಬೇಕು ಎಂಬುದನ್ನು ನಾವಿಂದು ಹೇಳ್ತೇವೆ. 

ಬೇಸಿಗೆ ರಜೆಯಲ್ಲಿ ಮಕ್ಕಳ ಆಟ – ಪಾಠ : 

ಮಕ್ಕಳಿಗಾಗಿ ವಿಶೇಷ ಚಟುವಟಿಕೆ : ಮಗುವಿನ ಆಸಕ್ತಿಯನ್ನು ಉತ್ತೇಜಿಸಲು ಬೇಸಿಗೆ ರಜೆಗಳು ಅತ್ಯುತ್ತಮ ಸಮಯ. ಶಾಲಾ ಸಮಯದಲ್ಲಿ ಮಕ್ಕಳಿಗೆ ಬಿಡುವು ಸಿಗುವುದಿಲ್ಲ. ಆದರೆ ಬೇಸಿಗೆ ರಜೆಯಲ್ಲಿ, ಅವರ ಹವ್ಯಾಸಕ್ಕೆ ಅನುಗುಣವಾಗಿ ಚಟುವಟಿಕೆಗಳನ್ನು ಮಾಡಿಸಬಹುದು. ಮಕ್ಕಳನ್ನು ನೃತ್ಯ, ಗಿಟಾರ್, ಜೂಡೋ, ಕರಾಟೆ, ಸ್ಕೇಟಿಂಗ್ ಅಥವಾ ಇತರ ಯಾವುದೇ ತರಬೇತಿಗೆ ಸೇರಿಸಬಹುದು. ಇಲ್ಲವೆ ಮನೆಯಲ್ಲಿಯೇ ನೀವು ಅವರಿಗೆ ಇದನ್ನು ಕಲಿಸಬಹುದು.

ಕುಟುಂಬದ ಜೊತೆ ಸಮಯ ಕಳೆಯುವುದನ್ನು ಕಲಿಸಿ : ಕುಟುಂಬ ಮತ್ತು ಸ್ನೇಹಿತರ ಜೊತೆ  ಬಾಂಧವ್ಯ ಗಟ್ಟಿಯಾಗಲು ಬೇಸಿಗೆ ರಜೆ ಅತ್ಯುತ್ತಮ ಸಮಯ. ಈ ಸಮಯದಲ್ಲಿ, ನೀವು ನಿಮ್ಮ ಮಕ್ಕಳೊಂದಿಗೆ ಸ್ನೇಹಿತರು ಅಥವಾ ಸಂಬಂಧಿಕರ ಮನೆಗೆ ಹೋಗಬಹುದು. ಇದರಿಂದ ಕುಟುಂಬದಲ್ಲಿ ಆಪ್ತತೆ ಹೆಚ್ಚುತ್ತದೆ. ನಿಮ್ಮ ಸ್ನೇಹಿತ ಅಥವಾ ಕುಟುಂಬದ ಸದಸ್ಯರ ಮಕ್ಕಳನ್ನು ನೀವು ನಿಮ್ಮ ಮನೆಗೆ ಆಹ್ವಾನಿಸಬಹುದು. ಮಕ್ಕಳ ಜೊತೆ ಮಕ್ಕಳು ಬೆರೆತು ಆಡುವುದ್ರಿಂದ ಒಂದಿಷ್ಟು ಹೊಸ ವಿಷ್ಯಗಳನ್ನು ಕಲಿಯುತ್ತಾರೆ.  

ಈಜು ಮತ್ತು ವಾಟರ್ ಪಾರ್ಕ್ : ಬೇಸಿಗೆಯಲ್ಲಿ  ಮಕ್ಕಳನ್ನು ನೀರು ಸೆಳೆಯುತ್ತದೆ. ಶೆಕೆಯ ಕಾರಣ ಮಕ್ಕಳು ನೀರಿನಲ್ಲಿರುವ ಹೆಚ್ಚು ಇಷ್ಟಪಡ್ತಾರೆ.  ನೀವು ವಾಸಿಸುವ ಸ್ಥಳದಲ್ಲಿ ಈಜುಕೊಳವಿದ್ದರೆ, ಮಕ್ಕಳಿಗೆ ಈಜಲು ಕಲಿಸಿ. ಅವರು ನೀರಿನಲ್ಲಿ ಆಡುವಂತೆ ಪ್ರೋತ್ಸಾಹಿಸಿ. ಅವರನ್ನು ನೀರಿನ ಬಳಿ ಬಿಡಿ. ಇದು ಅವರಿಗೆ ಮೋಜಿನ ಜೊತೆಗೆ ಮೋಜಿನ ವ್ಯಾಯಾಮ ನೀಡುತ್ತದೆ.  ನೀವು ಮಕ್ಕಳೊಂದಿಗೆ 2-4 ಬಾರಿ ವಾಟರ್ ಪಾರ್ಕ್‌ಗೆ ಹೋಗಬಹುದು. ಅಲ್ಲಿ ಸಾಕಷ್ಟು ಮೋಜಿನ ಆಟಗಳಿರುತ್ತವೆ. ಅದನ್ನು ನೀವು ಆನಂದಿಸಬಹುದು.

ಲೈಂಗಿಕ ಕ್ರಿಯೆ ಮಾಡದಿದ್ದರೆ ಹೀಗೆಲ್ಲಾ ಆಗುತ್ತೆ ಅನ್ನೋದು ನಿಮ್ಗೆ ಗೊತ್ತಿತ್ತಾ ?

ಬೇಸಿಗೆ ಶಿಬಿರ : ಬೇಸಿಗೆ ಬಂತು, ರಜೆ ಶುರುವಾಯ್ತೆಂದ್ರೆ ಬೇಸಿಗೆ ಶಿಬಿರಗಳು ಶುರುವಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಬೇಸಿಗೆ ಶಿಬಿರಗಳ ಸಂಖ್ಯೆ ಹೆಚ್ಚಾಗಿದೆ.  ಶಿಬಿರದಲ್ಲಿ ಮಕ್ಕಳಿಗೆ ಸಾಕಷ್ಟು ವಿನೋದ ಮತ್ತು ಕಲಿಕೆಯ ಚಟುವಟಿಕೆಗಳಿರುತ್ತವೆ. ಈ ಬೇಸಿಗೆ ಶಿಬಿರಗಳಿಗೆ ಮಕ್ಕಳನ್ನು ಕಳುಹಿಸಬಹುದು. ಇದು ಒಂದು ವಾರದಿಂದ 15 ದಿನಗಳವರೆಗೆ ಇರುತ್ತದೆ.  ಅಲ್ಲಿ ಮಕ್ಕಳ ಜೊತೆ ನಿಮ್ಮ ಮಕ್ಕಳು ಸಾಕಷ್ಟು ಎಂಜಾಯ್ ಮಾಡುವ ಜೊತೆಗೆ ಅನೇಕ ವಿಷ್ಯಗಳನ್ನು ಕಲಿಯುತ್ತಾರೆ. 

ಅವನಾಗಿರಲಾ, ಅವಳಾಗಿರಲಾ ? ಸಿಕ್ಕಾಪಟ್ಟೆ ಕನ್‌ಫ್ಯೂಶನ್‌ !

ರಜೆಯಲ್ಲಿ ಅಜ್ಜಿ ಮನೆ ಬೆಸ್ಟ್ : ಅಜ್ಜ – ಅಜ್ಜಿ ಜೊತೆಯಲ್ಲಿದ್ದರೆ ಬೇರೆ ವಿಷ್ಯ. ಅನೇಕ ಕುಟುಂಬಗಳಲ್ಲಿ ಅಜ್ಜ – ಅಜ್ಜಿ ಮನೆ ಬೇರೆಯಿರುತ್ತದೆ. ಅನೇಕ ಪಾಲಕರ ತಾಯಿ – ತಂದೆ ಬೇರೆ ಊರಿನಲ್ಲಿರುತ್ತಾರೆ. ಹಳ್ಳಿಗಳಲ್ಲಿದ್ದರೆ ಅವಶ್ಯಕವಾಗಿ ನಿಮ್ಮ ಮಕ್ಕಳನ್ನು ಅಲ್ಲಿಗೆ ಕರೆದುಕೊಂಡು ಹೋಗಿ. ಸಾಧ್ಯವಾದ್ರೆ ಮಕ್ಕಳನ್ನು ಮಾತ್ರ ಅಲ್ಲಿಗೆ ಕಳುಹಿಸಿ. ಅಜ್ಜ – ಅಜ್ಜಿ ಜೊತೆಗಿರುವ ಮಕ್ಕಳು ಹಿರಿಯರ ಸಹವಾಸದಿಂದ ಕೆಲವು ಒಳ್ಳೆಯ ವಿಷಯಗಳನ್ನು ಕಲಿಯುತ್ತಾರೆ. ಹಾಗೆ ಹೊಸ ಪರಿಸರ, ಅಲ್ಲಿನ ಕೆಲಸಗಳನ್ನು ಅವರು ತಿಳಿಯುತ್ತಾರೆ. 

click me!