ಮದ್ವೆ ಮನೆಯಲ್ಲಿ ಡಿಜೆ ಅಬ್ಬರಕ್ಕೆ ಪೊಲೀಸರ ತಡೆ, ಸಿಟ್ಟಿಗೆದ್ದ ವಧು-ವರ ಏನ್ ಮಾಡಿದ್ರು ನೋಡಿ!

By Vinutha Perla  |  First Published Apr 9, 2023, 10:14 AM IST

ಡಿಜೆ ಮ್ಯೂಸಿಕ್, ಸಾಂಗ್‌, ಡ್ಯಾನ್ಸ್‌ನಿಂದಾನೇ ಮದ್ವೆ ಮನೆ ಕಳೆ ಹೆಚ್ಚುತ್ತೆ. ಹೀಗಾಗಿಯೇ ಇತ್ತಿಚಿಗೆ ಎಲ್ಲರೂ ಮದುವೆ ಮನೆಯಲ್ಲಿ ಡಿಜೆ ಹಾಕ್ತಾರೆ. ಮಸ್ತಾಗಿ ಡ್ಯಾನ್ಸ್ ಮಾಡಿ ಎಂಜಾಯ್ ಮಾಡ್ತಾರೆ. ಆದ್ರೆ ಇಲ್ಲೊಂದು ಮದ್ವೆ ಮನೆಯಲ್ಲಿ ಮಾತ್ರ ಡಿಜೆ ಕಾರಣಕ್ಕೆ ವಧು-ವರರು ಠಾಣೆಯಲ್ಲಿ ಹೋಗಿ ಧರಣಿ ಕುಳಿತಿದ್ದಾರೆ.


ರತ್ಲಾಮ್: ಮದುವೆ ಅನ್ನೋದು ಒಂದು ಸುಂದರವಾದ ಸಂಬಂಧ. ಗಂಡು-ಹೆಣ್ಣನ್ನು ಒಂದುಗೂಡಿಸುವ ಪವಿತ್ರ ಬಂಧನ. ಕಷ್ಟಾನೂ ಸುಖಾನೋ ಇಬ್ಬರು ಜೀವನಪೂರ್ತಿ ಜೊತೆಯಾಗಿ ಸಾಗುವ ನಿರ್ಧಾರ ಮಾಡುತ್ತಾರೆ. ಗಂಡು-ಹೆಣ್ಣು ಇಬ್ಬರ ಜೀವನ ಆರಂಭವಾಗುವುದರ ಜೊತೆಗೆ ಎರಡು ಕುಟುಂಬಗಳು ಬೆರೆಯುತ್ತವೆ. ಮದುವೆಯನ್ನು ವಿಶೇಷವಾಗಿಸಲು ಪ್ರತಿಯೊಬ್ಬರೂ ಪ್ರಯತ್ನಿಸುತ್ತಾರೆ. ಸ್ಪೆಷಲ್ ಡೆಕೊರೇಶನ್, ಸಾಂಗ್ಸ್, ಡ್ರೆಸ್, ಪಾರ್ಟಿ ಎಲ್ಲವನ್ನೂ ಆರೇಂಜ್ ಮಾಡಿಕೊಳ್ತಾರೆ. ವೆಡ್ಡಿಂಗ್‌ ಡೇ ಎಂಬುದು ಎಲ್ಲರ ಪಾಲಿಗೆ ಜೀವನದಲ್ಲೇ ದಿ ಬಿಗ್ ಡೇ. ಹೀಗಾಗಿಯೇ ಈ ದಿನ ಯಾವಾಗ್ಲೂ ಮೆಮೊರೆಬಲ್ ಆಗಿರಬೇಕೆಂದು ಫೋಟೋ, ವೀಡಿಯೋ ಮಾಡಿಕೊಳ್ತಾರೆ. ಮಾತ್ರವಲ್ಲ ಮದುವೆ ದಿನವನ್ನು ವಿಶೇಷವಾಗಿಸಲು ಸ್ಪೆಷಲ್ ಥೀಮ್‌, ಕಾನ್ಸೆಪ್ಟ್‌ಗಳನ್ನು ಇಟ್ಟುಕೊಳ್ತಾರೆ. ಅದರಲ್ಲೂ ಮದ್ವೆ ಅಂದ್ರೆ ಅಬ್ಬರದ ಡಿಜೆ ಸೌಂಡ್ ಇಲ್ಲಾಂದ್ರೆ ಆಗುತ್ತಾ?

ಡಿಜೆ ಮ್ಯೂಸಿಕ್, ಸಾಂಗ್‌, ಡ್ಯಾನ್ಸ್‌ನಿಂದಾನೇ ಮದ್ವೆ ಮನೆ ಕಳೆ ಹೆಚ್ಚುತ್ತೆ. ಹೀಗಾಗಿಯೇ ಇತ್ತಿಚಿಗೆ ಎಲ್ಲರೂ ಮದುವೆ ಮನೆಯಲ್ಲಿ ಡಿಜೆ ಹಾಕ್ತಾರೆ. ಮಸ್ತಾಗಿ ಡ್ಯಾನ್ಸ್ ಮಾಡಿ ಎಂಜಾಯ್ ಮಾಡ್ತಾರೆ. ಆದ್ರೆ ಇಲ್ಲೊಂದು ಮದ್ವೆ ಮನೆಯಲ್ಲಿ ಮಾತ್ರ ಡಿಜೆ ಕಾರಣಕ್ಕೆ ವಧು-ವರರು (Bride-groom) ಠಾಣೆಯಲ್ಲಿ ಹೋಗಿ ಧರಣಿ ಕುಳಿತಿದ್ದಾರೆ. ನಂಬೋಕೆ ಕಷ್ಟವೆನಿಸಿದರೂ ಇದು ನಿಜ. ಮಧ್ಯಪ್ರದೇಶದ ರತ್ಲಾಮ್ ಜಿಲ್ಲೆಯಲ್ಲಿ ಮದುವೆಯಲ್ಲಿ ಡಿಜೆ ಸಂಗೀತವನ್ನು ಪೊಲೀಸರು ತಡೆದಿದ್ದಕ್ಕಾಗಿ ದಂಪತಿಗಳು (Couples) ಠಾಣೆಯ ಎದುರು ಧರಣಿ (Protest) ನಡೆಸಿದ್ರು.

Latest Videos

undefined

!ಪತ್ನಿಯಾಗಿ ನಟಿಸಲು ಬಂದಿದ್ದವಳ ಮೇಲೇನೆ ಲವ್ವಾಯ್ತು, ಬಿಟ್ಹೋಗ್ಬೇಡ ಎಂದು ಗೋಳಾಡಿದ ಭೂಪ!

ಗುರುವಾರ ಮಧ್ಯರಾತ್ರಿ ಈ ಘಟನೆ ನಡೆದಿದ್ದು, ಇಬ್ಬರು ಪೊಲೀಸರು ಔದ್ಯೋಗಿಕ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮದುವೆ ಸ್ಥಳಕ್ಕೆ ಆಗಮಿಸಿ ಸಂಗೀತ ನುಡಿಸುವುದನ್ನು ನಿಲ್ಲಿಸುವಂತೆ ಡಿಜೆಗೆ ಕೇಳಿದರು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪ್ರತ್ಯಕ್ಷದರ್ಶಿಗಳ ಪ್ರಕಾರ, ಸ್ಥಳದಲ್ಲಿ ಪೊಲೀಸರು ಮಹಿಳೆಯರೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಿ ದಂಪತಿಗಳು ತಮ್ಮ ಕುಟುಂಬ ಸದಸ್ಯರೊಂದಿಗೆ ಪೊಲೀಸ್ ಠಾಣೆಗೆ ತಲುಪಿ ಸುಮಾರು ಮೂರು ಗಂಟೆಗಳ ಕಾಲ ಪ್ರತಿಭಟನೆ ನಡೆಸಿದರು. 

ಈ ಬಗ್ಗೆ ಮಾತನಾಡಿದ ವರ ಅಜಯ್ ಸೋಲಂಕಿ, ಪೊಲೀಸರು ತಮ್ಮ ಕುಟುಂಬದ ಮಹಿಳೆಯರೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಮತ್ತು ಅವರ ಮದುವೆಯನ್ನು ಹಾಳು ಮಾಡಿದ್ದಾರೆ ಎಂದು ಆರೋಪಿಸಿದರು. ಪೊಲೀಸ್ ಠಾಣೆಯಲ್ಲಿ ವಧು-ವರರು ಪ್ರತಿಭಟನೆಗೆ ಕುಳಿತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಪೊಲೀಸರ ವಿರುದ್ಧ ಕ್ರಮಕೈಗೊಳ್ಳುವವರೆಗೂ ದಂಪತಿಗಳು ಮದುವೆಯಾಗಲು ನಿರಾಕರಿಸಿದ್ದರು. ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ ನಂತರ ಮದುವೆ ಮಂಟಪಕ್ಕೆ ಮರಳಿದರು ಎಂದು ಪೊಲೀಸ್ ಠಾಣೆ ಪ್ರಭಾರಿ ರಾಜೇಂದ್ರ ವರ್ಮಾ ತಿಳಿಸಿದ್ದಾರೆ.

ಮದುವೆ ಶಾಸ್ತ್ರ ನಡೀತಿದ್ದಾಗ 'ಕಪಿಚೇಷ್ಟೆ', ವಾನರನ ದಾಂಧಲೆಗೆ ವಧು-ವರರು ಸುಸ್ತೋ ಸುಸ್ತು!

ಪೊಲೀಸ್ ಠಾಣೆಯಲ್ಲಿ ನವವಧುವಿನ ಹೈಡ್ರಾಮ
ನವವಿವಾಹಿತೆಯೊಬ್ಬಳು ಮದುವೆ (Marriage)ಯಾದ ಕೆಲವೇ ಕ್ಷಣಗಳಲ್ಲಿ ತನ್ನ ಪ್ರಿಯಕರನೊಂದಿಗೆ ಮದುವೆ ಮಾಡುವಂತೆ ಒತ್ತಾಯಿಸಿ ಪೊಲೀಸ್ ಠಾಣೆಯಲ್ಲಿ ಹೈವೋಲ್ಟೇಜ್ ಡ್ರಾಮಾ ಸೃಷ್ಟಿಸಿದ್ದಾಳೆ. ಯುವತಿ ಮನೆಯವರ ಒತ್ತಾಯಕ್ಕೆ ಅವರು ತೋರಿಸಿದ ಹುಡುಗನನ್ನು ಮದುವೆಯಾಗಿದ್ದಳು. ಮದುವೆಯಾದ ತಕ್ಷಣವೇ ಪೊಲೀಸ್ ಸ್ಟೇಷನ್‌ಗೆ ಬಂದು ಲವರ್ ಜೊತೆ ಮದುವೆ ಮಾಡಿ ಕೊಡಿ ಎಂದು ಪೊಲೀಸರಿಗೆ ದುಂಬಾಲು ಬಿದ್ದಿದ್ದಾಳೆ. ಮಾತ್ರವಲ್ಲ ಠಾಣೆಯಲ್ಲಿ ರಂಪಾಟ ನಡೆಸಿದ್ದಾಳೆ. ಸದ್ಯ ಈ ವೀಡಿಯೋ ಎಲ್ಲೆಡೆ ಹರಿದಾಡ್ತಿದೆ.

ವಧು ಕೆಂಪು ಮತ್ತು ಚಿನ್ನದ ಬಣ್ಣದ ಸೀರೆಯನ್ನು ಧರಿಸಿ ಪೊಲೀಸ್ ಠಾಣೆಯಲ್ಲಿ ಗಲಾಟೆ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ (Social media) ವೈರಲ್ ಆಗಿದೆ. ವೀಡಿಯೋದಲ್ಲಿ ವಧು 'ಎರಡು ಮದುವೆಯಾಗ್ತೇನೆ. ಎರಡು ಮದುವೆಯಾದರೆ ಏನಾಗುತ್ತದೆ' ಎಂದು ಕಿರುಚಾಡುವುದನ್ನು ಕೇಳಬಹುದು. ವಧುವನ್ನು (Bride) ನಿಯಂತ್ರಿಸಲು ಮಹಿಳಾ ಕಾನ್‌ಸ್ಟೆಬಲ್‌ಗಳು ಪ್ರಯತ್ನಿಸುತ್ತಾರೆ. ಆದರೆ ಆಕೆ ಪೇಪರ್‌, ಮೊಬೈಲ್ ಫೋನ್ ಎಸೆದು ಗಲಾಟೆ ಮಾಡುತ್ತಾಳೆ. ವಿಡಿಯೋ ಮುಗಿಯುವ ಮುನ್ನವೇ ಮಹಿಳಾ ಪೇದೆಯೊಬ್ಬರು ಆಕೆಯನ್ನು ಕೋಣೆಗೆ ಎಳೆದೊಯ್ಯುವುದನ್ನು ನೋಡಬಹುದು. ವಧು ಮದ್ಯದ ಅಮಲಿನಲ್ಲಿದ್ದಂತೆ ತೋರುತ್ತದೆ

click me!