ಮನೆ ಕೆಲಸವನ್ನು ಪತಿ – ಪತ್ನಿ ಹಂಚಿಕೊಂಡು ಮಾಡ್ಬೇಕು. ಪತ್ನಿ ಕೆಲಸ ಮಾಡುವಾಗ ಪತಿ ಸುಮ್ಮನೆ ಕುಳಿತ್ರೆ ಮೈ ಏನೋ ಉರಿಯುತ್ತೆ. ಕೋಪ ನೆತ್ತಿಗೇರುತ್ತೆ. ಆದ್ರೆ ಏನೂ ಮಾಡಕ್ಕಾಗಲ್ಲ ಅಂತಾ ಸುಮ್ಮನಿರೋ ಪತ್ನಿ ನೀವಾಗಿದ್ರೆ ಈ ಟ್ರಿಕ್ಸ್ ಫಾಲೋ ಮಾಡಿ.
ಭಾರತದಲ್ಲಿ ಲಿಂಗಕ್ಕೆ ತಕ್ಕಂತೆ ಕೆಲಸ, ಜವಾಬ್ದಾರಿಗಳನ್ನು ಹಂಚಲಾಗಿದೆ. ಮಹಿಳೆ ಹಾಗೂ ಪುರುಷರಿಗೆ ವಿಭಿನ್ನ ಜವಾಬ್ದಾರಿಯಿದೆ. ಪುರುಷರು ಮನೆ ಹೊರಗೆ ಕೆಲಸ ಮಾಡ್ಬೇಕು, ಮಹಿಳೆಯರು ಮನೆಯೊಳಗೆ ಕೆಲಸ ಮಾಡ್ಬೇಕು ಎಂಬ ನಿಯಮ ಅನಾದಿಕಾಲದಿಂದಲೂ ನಡೆದುಕೊಂಡು ಬಂದಿದೆ. ಈಗ್ಲೂ ಬಹುತೇಕರು ಇದನ್ನೇ ಪಾಲಿಸಿಕೊಂಡು ಬಂದಿದ್ದಾರೆ. ಕೆಲ ಕುಟುಂಬಗಳಲ್ಲಿ ಮಹಿಳೆಯರು ಮನೆ ಹೊರಗೆ ಹೋಗಿ ದುಡಿಯುವಂತಿಲ್ಲ. ಹಾಗೆಯೇ ಕೆಲ ಮನೆಗಳಲ್ಲಿ ಜಪ್ಪಯ್ಯ ಅಂದ್ರೂ ಪುರುಷರು ಸೌಟು ಹಿಡಿದು ಅಡುಗೆ ಮಾಡೋದಿಲ್ಲ.
ಇನ್ನು ಮನೆ (House) ಯಿಂದ ಹೊರಗೆ ಹೋಗಿ ಕೆಲಸ ಮಾಡುವ ಮಹಿಳೆ (Woman) ಯರ ಸ್ಥಿತಿ ಭಿನ್ನವಾಗೇನಿಲ್ಲ. ಅವರು ಮನೆಯ ಒಳಗೆ ಹಾಗೂ ಹೊರಗೆ ಎರಡೂ ಕಡೆ ಕೆಲಸ ಮಾಡ್ಬೇಕು. ಅಡುಗೆ ಮಾಡಿದ್ರೆ ಆತ ಹೆಂಡತಿ ಗುಲಾಮ ಎನ್ನುವ ಮಾತುಗಳು ಕೇಳಿಬರ್ತಿರುತ್ತದೆ.
Women Life: ಹೆಂಡತೀನ ರಿಪ್ಲೇಸ್ ಮಾಡೋದು ಅಷ್ಟು ಈಸಿನಾ!?
ಇತ್ತೀಚಿನ ದಿನಗಳಲ್ಲಿ ಪುರುಷರು ಸ್ವಲ್ಪ ಬದಲಾಗ್ತಿದ್ದಾರೆ. ಪತ್ನಿಗೆ ಮನೆ ಕೆಲಸದಲ್ಲಿ ನೆರವಾಗುವ ಪತಿಯನ್ನು ನೀವು ನೋಡ್ಬಹುದು. ಆದ್ರೆ ಇವರ ಸಂಖ್ಯೆ ಬಹಳ ಕಡಿಮೆಯಿದೆ. ಮನೆಯಲ್ಲಿ ಗೃಹಿಣಿಗೆ ಕೆಲಸ ಕಡಿಮೆ ಇರೋದಿಲ್ಲ. ಟೀ ಕುಡಿದ ಲೋಟೋವನ್ನು ಕೂಡ ಅಲ್ಲಿಯೇ ಇಡುವ ಪತಿ, ಸ್ವಲ್ಪ ಮನೆ ಕೆಲಸದಲ್ಲಿ ಸಹಾಯ ಮಾಡ್ಲಿ ಎಂದು ಮಹಿಳೆಯರು ಬಯಸ್ತಾರೆ. ನೀವೂ ನಿಮ್ಮ ಪತಿ ಮನೆ ಕೆಲಸದಲ್ಲಿ ನೆರವಾಗ್ಬೇಕು ಎಂದು ಬಯಸುವವರಾಗಿದ್ದರೆ ಕೆಲ ಟಿಪ್ಸ್ (Tips) ಫಾಲೋ ಮಾಡಿ.
ಪತಿ ಕೂಡ ಮನೆ ಕೆಲಸ ಮಾಡ್ಬೇಕೆಂದ್ರೆ ಹೀಗ್ ಮಾಡಿ
ಸಹಾಯ ಕೇಳಲು ಮರೆಯಬೇಡಿ : ಮನೆ ಹೊರಗೆ ಹೆಚ್ಚು ಕೆಲಸವಿರುವ ಕಾರಣ ಇಲ್ಲವೆ ಬಾಲ್ಯದಿಂದಲೂ ಕೆಲಸ ಅಭ್ಯಾಸವಿಲ್ಲದ ಕಾರಣ, ಸೋಮಾರಿತನ, ಜವಾಬ್ದಾರಿಯಿಂದ ತಪ್ಪಿಸಿಕೊಳ್ಳುವುದು, ಪತ್ನಿ ಸಮಸ್ಯೆ ಅರ್ಥವಾಗದಿರುವುದು ಹೀಗೆ ನಾನಾ ಕಾರಣಕ್ಕೆ ಪುರುಷರು ಮನೆ ಕೆಲಸ ಮಾಡದೆ ಇರಬಹುದು. ಪತ್ನಿ (Wife) ಯಾದವಳು ಆತನನ್ನು ದಾರಿಗೆ ತರಬೇಕು. ಕೆಲವರು ಪತಿ ಕೆಲಸ ಮಾಡ್ತಿಲ್ಲ ಎನ್ನತ್ತಾರೆಯೇ ಹೊರತು ಯಾವ ಕೆಲಸ ಮಾಡ್ಬೇಕೆಂದು ಪತಿಗೆ ಹೇಳೋದಿಲ್ಲ. ಮತ್ತೆ ಕೆಲವರು ಆದೇಶ ಮಾಡ್ತಾರೆ. ಇವೆರಡರ ಬದಲು ನೀವು ಅವರ ನೆರವು ಕೇಳ್ಬಹುದು. ಬಲವಂತ ಮಾಡದೆ ಪ್ರೀತಿಯಿಂದ ಸಹಾಯ ಕೇಳಿದ್ರೆ ಅವರು ಮಾಡ್ತಾರೆ.
ಈ ರೀತಿಯೆಲ್ಲಾ ಇದ್ರೆ…. ನಿಮ್ಮ ವೈವಾಹಿಕ ಜೀವನ ಪರ್ಫೆಕ್ಟ್ ಆಗಿದೆ ಎಂದರ್ಥ
ತಪ್ಪನ್ನು ಎತ್ತಿ ಹೇಳ್ಬೇಡಿ : ಅನೇಕ ಪುರುಷರು ಕೆಲಸ ಮಾಡಲು ಆಸಕ್ತಿ ತೋರುತ್ತಾರೆ. ಸಣ್ಣಪುಟ್ಟ ತಪ್ಪುಗಳಾಗಿರುತ್ತವೆ. ಅದಕ್ಕೆ ಪತ್ನಿ ಹೊಂದಿಕೊಳ್ಳಬೇಕು. ಆದ್ರೆ ಕೆಲ ಮಹಿಳೆಯರು ತಪ್ಪನ್ನು ಎತ್ತಿ ಹೇಳ್ತಿರುತ್ತಾರೆ. ಇದ್ರಿಂದ ಬೇಸರಗೊಳ್ಳುವ ಪುರುಷರು ಮತ್ತೆ ಕೆಲಸ ಮಾಡುವ ಸಹವಾಸಕ್ಕೆ ಹೋಗೋದಿಲ್ಲ.
ಸಹಾಯ ಪ್ರಶಂಸಿಸಿ : ಪತಿ ಯಾವುದೇ ಸಣ್ಣ ಕೆಲಸ ಮಾಡ್ಲಿ ಅದನ್ನು ಪ್ರಶಂಸಿಸಿ. ಮನೆ ಕೆಲಸ, ಅಡುಗೆ ಕೆಲಸ ಅಥವಾ ಬೇರೆ ಯಾವುದೇ ಕೆಲಸದಲ್ಲಿ ಅವರು ನೆರವಾದ್ರೂ ನೀವು ಅವರನ್ನು ಪ್ರಶಂಸಿಸಬೇಕು. ಅವರಿಗೆ ಧನ್ಯವಾದ ಹೇಳಬೇಕು.
ಸಾಮರ್ಥ್ಯಕ್ಕೆ ತಕ್ಕಂತೆ ಕೆಲಸ ಕೊಡಿ : ನಿಮ್ಮ ಪತಿ ಯಾವ ಕೆಲಸ ಮಾಡಬಲ್ಲ ಎಂಬುದು ನಿಮಗೆ ತಿಳಿದಿರುತ್ತದೆ. ಹಾಗಾಗಿ ಅವರಿಗೆ ಸಾಧ್ಯವಾಗುವ ಕೆಲಸ ಮಾತ್ರ ನೀಡಿ. ಆರಂಭದಲ್ಲಿ ಸಣ್ಣ ಸಣ್ಣ ಕೆಲಸ ನೀಡಿ, ಅವರನ್ನು ಕೆಲಸಕ್ಕೆ ಒಗ್ಗಿಸಿಕೊಂಡ ನಂತ್ರ ನೀವು ದೊಡ್ಡ ಕೆಲಸ ನೀಡಬಹುದು.
ಇತರರ ಮುಂದೆ ನಿಂದನೆ ಬೇಡ : ಕೆಲ ಮಹಿಳೆಯರು ಪತಿಯನ್ನು ನಿಂದಿಸುವ ಕೆಲಸದಲ್ಲಿ ನಿರತರಾಗಿರ್ತಾರೆ. ಎಲ್ಲರ ಮುಂದೆ ಅವರ ಮರ್ಯಾದೆ ತೆಗೆಯುತ್ತಾರೆ. ಆ ಕೆಲಸ ಮಾಡಿ, ಈ ಕೆಲಸ ಮಾಡಿ ಎಂದು ಬೈತಿರುತ್ತಾರೆ. ಮಕ್ಕಳನ್ನು ನೋಡಿಕೊಳ್ಳೋಕೆ ಬರಲ್ಲ ಅಂತಾ ಮಕ್ಕಳ ಮುಂದೆಯೇ ಹಿಯಾಳಿಸ್ತಾರೆ. ಇದರಿಂದ ಪತಿ ಅವಮಾನಕ್ಕೀಡಾಗ್ತಾರೆ. ಕೆಲಸ ಮಾಡುವ ಆಸಕ್ತಿ ಕಳೆದುಕೊಳ್ತಾರೆ. ಹಾಗಾಗಿ ಈ ತಪ್ಪು ಮಾಡಲು ಹೋಗ್ಬೇಡಿ.