
ಸೋಶಿಯಲ್ ಮೀಡಿಯಾದ ಈ ಯುಗದಲ್ಲಿ ನಿಜವಾದ ಪ್ರೀತಿಯನ್ನು ಹುಡುಕುವುದು ಪತ್ತೆ ಮಾಡುವುದು ಬಲು ಕಷ್ಟದ ಕೆಲಸ. ಜೋಡಿಗಳಿಬ್ಬರು ಪರಸ್ಪರ ಪ್ರೀತಿಸುತ್ತಿದ್ದು, ಇನ್ನೇನು ಮದ್ವೆಯಾಗಬೇಕು ಎಂಬಂತಿರಬೇಕಾದರೆ ಇನ್ನೇನೋ ಅನಾಹುತವಾಗಿ ಹುಡುಗಿಯೋ ಹುಡುಗನೋ ಕೈ ಕಾಲುಗಳನ್ನು ಕಳೆದುಕೊಂಡು ಮದುವೆ ಕ್ಯಾನ್ಸಲ್ ಆದಂತಹ ನಿದರ್ಶನಗಳು ಅನೇಕ, ಹೀಗೆ ಕೈಕಾಲುಗಳನ್ನು ಕಳೆದುಕೊಂಡರೂ ಪರವಾಗಿಲ್ಲ. ನನಗೆ ಆತನೇ/ಆಕೆಯೇ ಸರಿ, ಆಕೆಯೇ / ಆತನೇ ನನ್ನ ಜೀವನ ಸಂಗಾತಿ ಆಗಬೇಕು ಎಂದು ತ್ಯಾಗ ಮಾಡುವವರು, ಪ್ರೀತಿ ಉಳಿಸಿಕೊಳ್ಳುವವರು ಅನೇಕರು ನಮ್ಮ ಸಮಾಜದಲ್ಲಿ ಇದ್ದಾರೆ. ಅನೇಕರು ಈ ರೀತಿ ನಡೆದುಕೊಂಡು ನಿದರ್ಶನವಾಗಿದ್ದಾರೆ.
ಹಾಗೆಯೇ ಇಲ್ಲೊಬ್ಬರು ತಮ್ಮ ಬದುಕಿನಲ್ಲಿ ನಿರೀಕ್ಷಿಸದೇ ಎದುರಾದ ಆಘಾತದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ(Social Media) ವಿಡಿಯೋ ಸಮೇತ ಹಂಚಿಕೊಂಡಿದ್ದು, ಅವರ ಕತೆ ಈಗ ವೈರಲ್ ಆಗಿದೆ. ಇಲ್ಲೊಂದು ಜೋಡಿಗೆ ಮದುವೆ ನಿಗದಿಯಾಗಿತ್ತು. ಎರಡು ಕುಟುಂಬಗಳು ಮದ್ವೆಯ ಸಂಭ್ರಮದಲ್ಲಿದ್ದವು. ಮದ್ವೆಯ ಕೆಲಸ ಕಾರ್ಯಗಳ ಓಡಾಟದಲ್ಲಿ ತೊಡಗಿದ್ದರು. ಯುವಜೋಡಿಗಳು ಹೊಸ ಬದುಕಿನ ಬಗ್ಗೆ ಕನಸು ಕಾಣುತ್ತಿದ್ದರು. ಅಷ್ಟರಲ್ಲಿ ಮದುವೆ ಹೆಣ್ಣಿನ ಬಾಳಲ್ಲಿ ದುರಾದೃಷ್ಟವೊಂದು ಕಾದು ನಿಂತಿತ್ತು. ಭೀಕರವಾದ ಅಪಘಾತಕ್ಕೀಡಾಗಿ ಆಕೆ ಕಾಲಿನ ಸ್ವಾಧೀನವನ್ನು ಕಳೆದುಕೊಂಡಿದ್ದಳು. ಆದರೆ ಅದೃಷ್ಟವೆಂಬಂತೆ, ಆಕೆಗೆ ಅಪಘಾತವಾಗುವ ಮೊದಲು ಆಕೆಯನ್ನು ಮದುವೆಯಾಗಲು ಬಯಸಿದ್ದ ಹುಡುಗ ಮಾತ್ರ ಈ ಅಪಘಾತದಿಂದ ತನ್ನ ನಿರ್ಧಾರವನ್ನು ಬದಲಿಸಿರಲಿಲ್ಲ. ಇದ್ದರೂ ಆಕೆಯ ಜೊತೆಯೇ ಹೋದರು ಆಕೆಯ ಜೊತೆಯೇ ಎಂದು ಆತ ತಾಳಿ ಕಟ್ಟಿ ಆಕೆಯನ್ನು ಮದ್ವೆಯೂ ಆದ ಈ ವಿಚಾರವನ್ನು ಸ್ವತಃ ಅಪಘಾತಕ್ಕೀಡಾಗಿದ್ದ ವಧು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು, ಮಾನವೀಯತೆ ಇನ್ನು ಜೀವಂತವಾಗಿದೆ ಎಂಬುದನ್ನು ಸಾಬೀತುಪಡಿಸಿದೆ.
ಮಗನ ಮಾರ್ಕ್‌ಶೀಟ್ ಹೆಮ್ಮೆಯಿಂದ ತೋರಿಸಿದ ಆಟೋ ಚಾಲಕ ಅಪ್ಪ
Shatakshi ಎಂಬುವರು ಇನ್ಸ್ಟಾಗ್ರಾಮ್‌ನಲ್ಲಿ (Instagram) ಈ ವಿಚಾರ ಹಂಚಿಕೊಂಡವರಾಗಿದ್ದಾರೆ. preganest ಎಂಬ ಪೇಜ್ ನಡೆಸುತ್ತಿರುವ ಇವರು ಇನ್ಸ್ಟಾಗ್ರಾಮ್‌ನಲ್ಲಿ ಗರ್ಭಿಣಿಯರಿಗೆ ಹಾಗೂ ಹೊಸ ತಾಯಂದಿರಿಗೆ ಫಿಟ್‌ನೆಸ್ ಹಾಗೂ ಆರೋಗ್ಯ ಸಲಹೆಗಳನ್ನು ನೀಡುತ್ತಾರೆ. ಅಂದಹಾಗೆ ಅವರು ತಮ್ಮ ಈ ಬದುಕಿನಲ್ಲಿ ಆದ ಅನಾಹುತದ ಬಗ್ಗೆ ವಿಡಿಯೋವೊಂದನ್ನು ಹರಿಬಿಟ್ಟಿದ್ದಾರೆ.
'ನಾವು ಇನ್ನೇನು ಮದ್ವೆಯಾಗಬೇಕು ಅನ್ನುವಷ್ಟರಲ್ಲಿ ನನಗೆ ಭೀಕರವಾದ ಅಪಘಾತವಾಯ್ತು. ಅಪಘಾತದಿಂದಾಗಿ ಹಲವು ದಿನಗಳನ್ನು ನಾನು ಐಸಿಯುನಲ್ಲಿ ಕಳೆಯಬೇಕಾಯಿತು. ನನಗೆ ಅಪಘಾತವಾದ ವಿಚಾರ ತಿಳಿದಾಗಿನಿಂದ ಆತ ಪ್ರತೀಕ್ (Prathik) ನನ್ನ ಜೊತೆಯೇ ಇದ್ದ. ಐಸಿಯುನಲ್ಲಿ ನನ್ನ ಜೊತೆಯೇ ಇದ್ದ ಆತ ನನಗೆ ರಕ್ತವನ್ನು ನೀಡಿದ್ದ. ಪ್ರತಿದಿನವೂ ಆಸ್ಪತ್ರೆಗೆ ಬಂದು ನನ್ನ ಕ್ಷೇಮ ವಿಚಾರಿಸುತ್ತಿದ್ದ. ಇದಾಗಿ 2 ತಿಂಗಳಿಗೆ ನನ್ನ ಕಾಲಿನ ಪ್ಲಾಸ್ಟರ್ (Plaster) ಅನ್ನು ಬಿಚ್ಚಲಾಯ್ತು. ಹಾಗೂ ನಮ್ಮಿಬ್ಬರ ವಿವಾಹ ನಿಶ್ಚಿತಾರ್ಥವಾಯ್ತು. ಅದಾಗಿ ಒಂದೂವರೆ ತಿಂಗಳ ನಂತರ ನಮ್ಮ ಮದ್ವೆ ಆಯ್ತು' ಎಂದು ಅವರು ಬರೆದುಕೊಂಡಿದ್ದಾರೆ.
ಪ್ರೀತಿಸಿದವರನೊಂದಿಗೆ ಮದುವೆಗೆ ಅಸ್ತು, ಪೋಷಕರ ತ್ಯಾಗದ ಬಗ್ಗೆ ಹೈಕೋರ್ಟ್ ಪಾಠ!
ಅಪಘಾತದಿಂದಾಗಿ ಕಾಲಿನ ಬಲ ಕಳೆದುಕೊಂಡಿದ್ದ ಶತಾಕ್ಷಿ(shatakshi) ಅವರನ್ನು ಆಕೆಯ ಪತಿ ಪ್ರತೀಕ್ ಎತ್ತಿಕೊಂಡೇ ಸಪ್ತಪದಿ ತುಳಿಯುತ್ತಿರುವುದನ್ನು ಅವರು ಹಾಕಿರುವ ವಿಡಿಯೋದಲ್ಲಿ ಕಾಣಬಹುದಾಗಿದೆ. ಈ ವಿಡಿಯೋ ನೋಡಿದ ಅನೇಕರು ಆಕೆಗೆ ನಿಮ್ಮಷ್ಟು ಅದೃಷ್ಟವಂತರು ಬೇರಿಲ್ಲ ಎಂದು ಕಾಮೆಂಟ್ ಮಾಡಿದ್ದಾರೆ. ಜೀವನದಲ್ಲಿ ಬರುವ ಕೆಲವು ಆಘಾತಗಳನ್ನು ಮೊದಲೇ ಊಹಿಸಲಾಗದು. ಸುಖದ ನಿರೀಕ್ಷೆಯಲ್ಲಿದ್ದವರಿಗೆ ಒಮ್ಮೆಲೇ ಕಷ್ಟ ಎದುರಾದಾಗ ಆಘಾತವಾಗುತ್ತದೆ. ಕಷ್ಟದ ಬೆನ್ನ ಹಿಂದೆ ಸುಖ. ಸುಖದ ಬೆನ್ನ ಹಿಂದೆ ಕಷ್ಟ ಇದು ಜೀವನದ ಭಾಗ. ಹಾಗೆಯೇ ಕಷ್ಟ ಸುಖದ ಸಮಯದಲ್ಲಿ ನಮ್ಮ ಜೊತೆ ಇರುವವರು ನಮ್ಮ ಬದುಕಿನ ಅವಿಭಾಜ್ಯ ಭಾಗವಾಗುತ್ತಾರೆ.
<
p>
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.