ವರದಕ್ಷಿಣೆಗಾಗಿ ಮದ್ವೆ ಮನೆಯಾಯ್ತು ರಣಾಂಗಣ, ಚೇರ್, ಪಾತ್ರೆಯಲ್ಲಿ ಹೊಡೆದಾಟ

By Vinutha Perla  |  First Published Apr 23, 2023, 11:43 AM IST

ಮದ್ವೆ ಮನೆಯಲ್ಲಿ ಅವಾಂತರಗಳು ನಡೆಯೋದು ಹೊಸದೇನಲ್ಲ. ಡೆಕೊರೇಶನ್, ಊಟ, ವರದಕ್ಷಿಣೆ ಮೊದಲಾದ ವಿಚಾರಕ್ಕೆ ರಂಪಾಟ ನಡೆಯುತ್ತದೆ. ಹಾಗೆಯೇ ಇಲ್ಲೊಂದು ಮದ್ವೆ ಮನೆ ವರದಕ್ಷಿಣೆ ವಿಚಾರಕ್ಕೆ ರಣಾಂಗಣವಾಗಿ ಹೋಗಿದೆ. ಆ ಕುರಿತಾದ ವೀಡಿಯೋ ವೈರಲ್ ಆಗಿದೆ.


ಭಾರತದಲ್ಲಿ ವರದಕ್ಷಿಣ ನಿಷೇಧ. ಆದರೂ ಕದ್ದು ಮುಚ್ಚಿ ವರದಕ್ಷಿಣೆ, ಕೊಡು ಕೊಳ್ಳುವಿಕೆ ನಡೆಯುತ್ತಲೇ ಇದೆ. ಮತ್ತೆ ಕೆಲವರು ಗಿಫ್ಟ್ ಅನ್ನೋ ಹೆಸರಿನಲ್ಲೂ ವರದಕ್ಷಿಣೆ ಸಂಪ್ರದಾಯ ಮುಂದುವರಿಸಿದ್ದಾರೆ. ಧನದಾಹಿಗಳು ಬಂಗಲೆ, ಕಾರು ಅಂತ ವರದಕ್ಷಿಣೆ ಹೆಸರಲ್ಲಿ ನಾನಾ ಬೇಡಿಕೆ ಇಡುತ್ತಾರೆ. ಹಾಗೆಯೇ ಇಲ್ಲೊಂದು ಮದುವೆ ಮನೆ ವರದಕ್ಷಿಣೆ ವಿಚಾರಕ್ಕಾಗಿ ರಣಾಂಗಣವಾಗಿ ಬದಲಾಗಿ ಹೋಗಿದೆ. ಕೇಳಿದಷ್ಟು ವರದಕ್ಷಿಣೆ ಕೊಟ್ಟಿಲ್ಲಾಂತ ವರ ಹಾಗೂ ಆತನ ಮನೆಯ ಕಡೆಯವರು ಗಲಾಟೆ ಮಾಡಿದ್ದು, ಪ್ರತಿಯಾಗಿ ವಧುವಿನ ಕಡೆಯವರೂ ಜಗಳವಾಡಿದ್ದಾರೆ. 

ಪಂಜಾಬ್‌ನ ಫಾಜಿಲ್ಕಾ ಜಿಲ್ಲೆಯಲ್ಲಿ ವರದಕ್ಷಿಣೆ (Dowry) ಬೇಡಿಕೆಯ ಕುರಿತು ವಧು (Bride) ಮತ್ತು ವರನ (Groom) ಕುಟುಂಬಗಳ ನಡುವೆ ಜಗಳ ನಡೆಯಿತು. ಆರಂಭದಲ್ಲಿ ಮಾತಿನ ಚಕಮಕಿ ನಡೆದು ನಂತರ ಎರಡೂ ಕಡೆಯವರು ಪಾತ್ರೆ, ಚೇರ್ ಎಸೆದು ಕಿತ್ತಾಡಿಕೊಂಡರು. ಸ್ಪಲ್ಪ ಹೊತ್ತಿನಲ್ಲೇ ಮದುವೆ ಮನೆ ರಣಾಂಗಣವಾಗಿ ಬದಲಾಯಿತು. ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ (Social media) ವೈರಲ್ ಆಗಿದೆ. ಇದರಲ್ಲಿ ವಧು-ವರರ ಕುಟುಂಬಸ್ಥರು ಪರಸ್ಪರ ಹೊಡೆದಾಡಿಕೊಳ್ಳುವುದನ್ನು ನೋಡಬಹುದು.

Tap to resize

Latest Videos

Bengaluru: ವರದಕ್ಷಿಣೆ ತರದ್ದಕ್ಕೆ ಮಧ್ಯರಾತ್ರಿ ಪತ್ನಿಯನ್ನು ಬಿಟ್ಟು ಹೋದ ಪತಿ

ಪಂಜಾಬ್‌ನ ಫಾಜಿಲ್ಕಾದಲ್ಲಿ ನಡೆದ ವಿವಾಹ ಸಮಾರಂಭದಲ್ಲಿ ವರದಕ್ಷಿಣೆ ಬೇಡಿಕೆಗೆ ಸಂಬಂಧಿಸಿದಂತೆ ಘರ್ಷಣೆ (Fight) ನಡೆದಿದೆ ಎಂಬ ಶೀರ್ಷಿಕೆಯೊಂದಿಗೆ ಟ್ವಿಟ್ಟರ್‌ನಲ್ಲಿ ವೈರಲ್ ವೀಡಿಯೊವನ್ನು ಪೋಸ್ಟ್ ಮಾಡಲಾಗಿದೆ. ವೀಡಿಯೊದಲ್ಲಿ, ಮದುವೆಯ ಸ್ಥಳದಲ್ಲಿ ಜನರು ಕುರ್ಚಿಗಳಿಂದ ಪರಸ್ಪರ ಹೊಡೆದುಕೊಳ್ಳುವುದನ್ನು ಕಾಣಬಹುದು. ಮಾತ್ರವಲ್ಲ ಅಡುಗೆ ಪಾತ್ರೆಗಳು ಮತ್ತು ಪಾದರಕ್ಷೆಗಳಿಂದ ಪರಸ್ಪರ ಹೊಡೆದಾಡುತ್ತಾರೆ. ಪುರುಷರು, ಸ್ತ್ರೀಯರು ಸೇರಿದಂತೆ ಎಲ್ಲರೂ ಪರಸ್ಪರ ತಳ್ಳುವುದು ಮತ್ತು ಎಳೆದಾಡುವುದನ್ನು ವೀಡಿಯೊದಲ್ಲಿ ನೋಡಬಹುದು. ಕೆಲವೊಬ್ಬರು ಈ ಜಗಳವನ್ನು ನಿಲ್ಲಿಸಲು ಪ್ರಯತ್ನಿಸಿದರು. ಆದರೆ ಅದು ಸಾಧ್ಯವಾಗಲ್ಲಿಲ್ಲ. ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವೀಡಿಯೋ ಸುಮಾರು 160.5K ವೀವ್ಸ್‌, ಲೈಕ್ಸ್ ಮತ್ತು ಕಾಮೆಂಟ್‌ಗಳನ್ನು ಗಳಿಸಿದೆ.

ವರದಕ್ಷಿಣೆಯಾಗಿ ಕೊಟ್ಟ ಬೀರು ಕಳಪೆಯೆಂದು ಮದುವೆ ಕ್ಯಾನ್ಸಲ್ ಮಾಡಿದ ವರ!
ಹೈದರಾಬಾದ್‌ನಲ್ಲಿ ವಧುವಿನ ತಂದೆ ನೀಡಿದ ಬೀರು ಕಳಪೆಯಾಗಿದೆ ಎಂದು ವರ ಮದುವೆ ಕ್ಯಾನ್ಸಲ್ ಮಾಡಿದ ಘಟನೆ ಈ ಹಿಂದೆ ನಡೆದಿತ್ತು.  22 ವರ್ಷದ ಹೀನಾ ಫಾತಿಮಾ ಮದುವೆ 25 ವರ್ಷದ ಚಾಲಕ ಮೊಹಮ್ಮದ್ ಝಾಕೀರ್ ಜೊತೆ ನಿಗದಿಯಾಗಿತ್ತು. ಮದುವೆ ನಿಶ್ಚಯ ದಿನ ವರನ ಕಡೆಯವರು ಹಲವು ಡಿಮಾಂಡ್ ಮಾಡಿದ್ದಾರೆ. ವರದಕ್ಷಿಣೆ ರೂಪದಲ್ಲಿ ಹಣ, ಮನೆ ವಸ್ತುಗಳನ್ನು ಕೇಳಿದ್ದಾರೆ. ಮದುವೆ, ಮಗಳ ಒಡವೆಗೆ ಹಣ ಖರ್ಚಾಗಿತ್ತು. ಹೀಗಾಗಿ ಹುಡುಗನ ಪೋಷಕರು ಕೇಳಿದ ಎಲ್ಲಾ ವಸ್ತುಗಳನ್ನು ಕೊಡಲು ಸಾಧ್ಯವಾಗಿಲ್ಲ. ಬೀರು, ಮಿಕ್ಸಿ ಸೇರಿದಂತೆ ಕೆಲ ವಸ್ತುಗಳನ್ನು ನೀಡಿದ್ದಾರೆ. 

ವರದಕ್ಷಿಣೆಯಾಗಿ ಫಾರ್ಚೂನರ್ ಕಾರೇ ಬೇಕಂತೆ, ಮಂಟಪದಿಂದ್ಲೇ ಎದ್ದು ಹೋದ ವರ !

Clash broke out over dowry demand at a wedding ceremony in Punjab's Fazilka. pic.twitter.com/DAcollFj1p

— Nikhil Choudhary (@NikhilCh_)

ಮಸೀದಿಯಲ್ಲಿ ಮದುವೆ ಆಯೋಜಿಸಲಾಗಿದೆ. ಇತ್ತ ಹುಡುಗಿ ಪೋಷಕರು ಮದುವೆಗೆ ಎಲ್ಲಾ ತಯಾರಿ ಮಾಡಿದ್ದಾರೆ. ಮದುವೆ ಸಂಪೂರ್ಣ ಖರ್ಚು ಕೂಡ ಹುಡುಗಿ ಪೋಷಕರೇ ಹಾಕಿದ್ದಾರೆ. ಮದುವೆ ದಿನ ಬಂದೇ ಬಿಟ್ಟಿದೆ. ಎಲ್ಲಾ ತಯಾರಿ ಮಾಡಿಕೊಂಡು ಮಸೀದಿಗೆ ಆಗಮಿಸಿದ ಹುಡುಗಿ ಕಡೆಯವರು ಅದೆಷ್ಟು ಹೊತ್ತು ಕಾದರೂ ವರನ ಕಡೆಯವರ ಪತ್ತೆ ಇಲ್ಲ. ಸಮಯ ಮೀರುತ್ತಿದ್ದರೂ ವರ ಯಾವುದೇ ಸುಳಿವಿಲ್ಲ.

ಫೋನ್ ಮಾಡಿದರೂ ಕೆಲವರ ಫೋನ್ ಸ್ವಿಚ್ ಆಫ್ ಆಗಿದ್ದರೆ, ಇತ್ತ ಹಲವರು ಫೋನ್ ಸ್ವೀಕರಿಸಿಲ್ಲ. ಇತ್ತ ಆತಿಥಿಗಳು ಆಗಮಿಸಿದ್ದಾರೆ. ಆದರೆ ವರನ ಪತ್ತೆ ಇಲ್ಲ. ಆತಂಕಗೊಂಡ ಹುಡಿಗಿಯ ತಂದೆ ನೇರವಾಗಿ ವರನ ಮನಗೆ ತೆರಳಿದ್ದಾರೆ. ಮದುವೆ ಇದ್ದರೂ ನೀವು ಬಂದಿಲ್ಲ ಯಾಕೆ? ಎಂದು ಪ್ರಶ್ನಿಸಿದ್ದಾರೆ. ಈ ವೇಳೆ ನೀವು ವರದಕ್ಷಿಣೆಯಾಗಿ ಕೊಟ್ಟ ಬೀರು ತೀರಾ ಕಳಪೆಯಾಗಿದೆ. ಇದು ಸೆಕೆಂಡ್ ಹ್ಯಾಂಡ್ ಬೀರು. ಇನ್ನು ಕೊಟ್ಟಿರುವ ವಸ್ತುಗಳು ಸರಿಯಿಲ್ಲ. ನಾವು ಕೇಳಿದ ವಸ್ತುಗಳನ್ನು ತಲುಪಿಸಿಲ್ಲ. ಹಣ ಕೈಸೇರಿಲ್ಲ. ಹೀಗಾಗಿ ನಿಮ್ಮ ಮಗಳನ್ನು ಮದುವೆಯಾಗಲು ಸಾಧ್ಯವಿಲ್ಲ ಎಂದಿದ್ದಾರೆ..

click me!