
ಮದುವೆಯಾದ ಮೇಲೆ ಪತಿ ನಾನು ಹೇಳಿದಂತೆ ಕೇಳಬೇಕು, ಆತನ ಅಮ್ಮನಿಗಿಂತ ಹೆಚ್ಚು ನನಗೆ ಆತ ಆದ್ಯತೆ ನೀಡಬೇಕು ಎಂದು ಕೆಲ ಮಹಿಳೆಯರು ಬಯಸುತ್ತಾರೆ. ಆಗದೇ ಹೋದಾಗ ಜಗಳವಾಡುತ್ತಾರೆ. ಸಂಬಂಧದಲ್ಲಿ ಬಿರುಕುಗಳಾಗುತ್ತವೆ. ಆದರೆ ಬಹುತೇಕರ ಹೆಣ್ಣು ಮಕ್ಕಳು ಆಕೆ ಆತನ ಹೆತ್ತ ತಾಯಿ ಎಂದು ಹೊಂದಿಕೊಂಡು ಹೋಗುತ್ತಾರೆ. ಆದರೆ ಇಲ್ಲೊಂದು ಕಡೆ ಮಹಿಳೆಯೊಬ್ಬಳು, ಭಾವಿ ಪತಿ ತನಗೆ ತಿಳಿಯದಂತೆ ತಾಯಿ ಹೆಸರಲ್ಲಿ ಆಸ್ತಿ ಖರೀದಿ ಮಾಡಿದ ಎಂದು ತಿಳಿದು ಮದುವೆಯನ್ನೇ ರದ್ದುಗೊಳಿಸಿದಂತಹ ವಿಚಿತ್ರ ಘಟನೆ ಅಮೆರಿಕಾದಲ್ಲಿ ನಡೆದಿದೆ.
ಇದು ರೆಡ್‌ಫ್ಲ್ಯಾಗ್ ಎಂದ ಯುವತಿ
ತನ್ನ ಭಾವಿ ಪತಿಯ ಈ ಗುಣ ಸಂಬಂಧದ ವಿಚಾರದಲ್ಲಿ ಅತೀ ದೊಡ್ಡ ಕೆಂಪು ಧ್ವಜ ( red flag) ಅಂದರೆ ಅಪಾಯದ ಸೂಚನೆ ಎಂದು ಹೇಳಿ 28 ವರ್ಷದ ಯುವತಿ ಮದುವೆಯನ್ನೇ ರದ್ದು ಮಾಡಿಕೊಂಡಿದ್ದಾಳೆ. ಈ ವಿಚಾರವವನ್ನು ಆಕೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, ಈಗ ಸಾಕಷ್ಟು ವೈರಲ್ ಆಗಿದೆ. ಆಕೆ ಹಾಗೂ ಆಕೆಯ 30 ವರ್ಷದ ಭಾವಿ ಪತಿ ಐದು ವರ್ಷಗಳಿಂದ ಜೊತೆಯಾಗಿ ವಾಸ ಮಾಡುತ್ತಿದ್ದರಂತೆ 2025ರ ಅಂದರೆ ಈ ಬಾರಿಯ ಬೇಸಿಗೆ ಕಾಲದಲ್ಲಿ ಅವರು ಮದುವೆಯಾಗಲು ನಿರ್ಧರಿಸಿದ್ದರಂತೆ ಜೊತೆಗೆ ಇದಕ್ಕಾಗಿ ಅವರು ಸಾಕಷ್ಟು ಉಳಿಕೆಯ ಜೊತೆ ಹಲವು ಯೋಜನೆಗಳನ್ನು ಹಾಕಿಕೊಂಡಿದ್ದಾರಂತೆ. ಮಕ್ಕಳನ್ನು ಮಾಡಿಕೊಳ್ಳುವುದು, ಹಣಕಾಸು ಹಾಗೂ ಜೊತೆಯಾಗಿಯೇ ಮನೆಯನ್ನು ಖರೀದಿಸುವ ವಿಚಾರವೂ ಸೇರಿತ್ತು. ಆದರೆ ಅವನು ಈಗಾಗಲೇ ಮನೆ ಖರೀದಿಸಿದ್ದಾನೆ ಆದರೆ ಅದು ನನ್ನ ಜೊತೆ ಅಲ್ಲ ಆತನ ಅಮ್ಮನ ಜೊತೆ ಅದೂ ನನಗೆ ತಿಳಿಯದೇ ರಹಸ್ಯವಾಗಿ ಎಂದು ಮಹಿಳೆ ಬೇಸರ ವ್ಯಕ್ತಪಡಿಸಿದ್ದಾರೆ.
ವರನ ಗೆಳತಿ ಅಲ್ಲ ವಧುವಿನ ಗರ್ಲ್‌ಫ್ರೆಂಡ್ ಎಂಟ್ರಿಯಿಂದ ಮುರಿದು ಬಿತ್ತು ಮದುವೆ
ನನ್ನ ಜೊತೆ ಆತ ಪ್ಲಾನ್ ಮಾಡುವ ಬದಲು ಆತ ಸಂಪೂರ್ಣವಾಗಿ ಆರ್ಥಿಕವಾಗಿ ತಾಯಿಯ ಜೊತೆ ಒಪ್ಪಂದ ಮಾಡಿಕೊಂಡಿದ್ದಾನೆ. ಈ ವೇಳೆ ಹಾಗಿದ್ರೆ ನಾನು ಎಲ್ಲಿ ವಾಸ ಮಾಡಲ್ಲಿ ಎಂದು ಕೇಳಿದ್ದಕ್ಕೆ ನೀನು ಕೂಡ ಆ ಮನೆಗೆ ಬರಬಹುದು ಎಂದು ಆತ ಹೇಳಿದನಂತೆ ಆದರೆ ಆತನ ತಾಯಿಯ ಸಂಪೂರ್ಣ ಮಾಲೀಕತ್ವ ಇರುವ ಮನೆಯಲ್ಲಿ ವಾಸ ಮಾಡಬಹುದಕ್ಕೆ ನಾನು ಥ್ರಿಲ್ ಆಗಬಹುದು ಎಂದು ಆತ ಭಾವಿಸಿದ್ದ ಎಂದು ಮಹಿಳೆ ದೂರಿದ್ದಾಳೆ. ಯುರೋಪ್‌ನ ಹಲವು ದೇಶಗಳಲ್ಲಿ ಭಾರತದಂತೆ ಕೂಡು ಕುಟುಂಬ ಜೊತೆಯಾಗಿ ಇರುವ ಸಂಪ್ರದಾಯ ಇಲ್ಲ, ಮದುವೆಯಾದ ಕೂಡಲೇ ನವ ಜೋಡಿ ಜೊತೆಗಿದ್ದರೆ, ಅವರ ಪೋಷಕರು ಮತ್ತೊಂದೆಡೆ ಇರುತ್ತಾರೆ. ಪೋಷಕರನ್ನು ವೃದ್ಧಾಶ್ರಮಗಳು ನೋಡಿಕೊಳ್ಳುತ್ತವೆ. ಹೀಗಾಗಿ ಮಹಿಳೆಗೆ ಇದು ಹೊಸ ವಿಚಾರ ಎನಿಸಿದೆ.
ಕುಡಿದ ಮತ್ತಿನಲ್ಲಿ ವಧುವಿನ ಬದಲು ಸ್ನೇಹಿತನ ಕೊರಳಿಗೆ ಹಾರ ಹಾಕಿದ ವರ..!
ಇತ್ತ ಭಾವಿ ಪತಿಯ ಈ ನಿರ್ಧಾರಗಳಿಂದ ಮಹಿಳೆಗೆ ಕೋಪ ಮತ್ತು ಆಘಾತವಾಗಿದೆ. ಹೀಗಾಗಿ ಸ್ವಲ್ಪ ಸಮಯ ನೀಡಿ ಯೋಚನೆ ಮಾಡಿದ ಆಕೆ ಈ ವಿಚಾರವನ್ನು ಸಾಮಾನ್ಯ ಎಂದು ಭಾವಿಸುವ ವ್ಯಕ್ತಿಯನ್ನು ನಾನು ಮದುವೆಯಾಗಲು ಸಾಧ್ಯವಿಲ್ಲ ಎಂದು ನನಗೆ ಅರಿವಾಯಿತು. ಆದ್ದರಿಂದ, ನಾನು ಮದುವೆಯನ್ನು ರದ್ದುಗೊಳಿಸಿದೆ ಎಂದು ಅವರು ಬರೆದುಕೊಂಡಿದ್ದಾರೆ. ಮಹಿಳೆಯ ಈ ಸ್ಥಿತಿಗೆ ಅನೇಕರು ಅನುಕಂಪ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ನಿಮಗೇನನಿಸುತ್ತಿದೆ ಕಾಮೆಂಟ್ ಮಾಡಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.