ಹುಡುಗ ಹೆಬ್ಬೆಟ್ಟು ಎಂದು ಮದುವೆ ಕ್ಯಾನ್ಸಲ್ ಮಾಡಿದ ವಧು!

By Suvarna News  |  First Published Apr 29, 2022, 12:04 PM IST

ಮದುವೆ (Marriage)ಯ ಎಲ್ಲಾ ಸಿದ್ಧತೆಗಳೂ ಪೂರ್ಣಗೊಂಡಿವೆ. ಮಂಟಪ, ಅಲಂಕಾರ (Decoration), ಪುರೋಹಿತರು, ವಧು (Bride), ವರ (Groom) ಕುಟುಂಬಸ್ಥರು ಎಲ್ಲರೂ ಸಿದ್ಧವಾಗಿದ್ದಾರೆ. ಆದ್ರೆ ವಧು ಮಾತ್ರ ನನ್ಗೀಗ ಮದುವೆ ಬೇಡ ಅಂದಿದ್ದಾಳೆ. ಅಷ್ಟಕ್ಕೂ ಅಲ್ಲಾಗಿದ್ದೇನು ? ಮಂಟಪದ ವರೆಗೂ ಬಂದ ಹುಡ್ಗಿ ಮದ್ವೆ ಬೇಡ ಅಂದಿದ್ಯಾಕೆ ?


ಮದುವೆ (Marriage)ಯೆಂಬುದು ಒಂದು ಪವಿತ್ರ ಬಂಧನ. ಹೀಗಾಗಿಯೇ ಸಂಪ್ರದಾಯಿಕಬದ್ಧವಾಗಿ ಮದುವೆಯನ್ನು ನಡೆಸಲಾಗುತ್ತದೆ. ಮದುವೆಯೆಂದರೆ ಏಳೇಳು ಜನ್ಮದ ಅನುಬಂಧವೆಂದೇ ಪರಿಗಣಿಸಲಾಗುತ್ತದೆ. ಆದರೆ ಇತ್ತೀಚಿನ ಕೆಲ ಮದುವೆಗಳು ಒಂದು ಜನ್ಮ ಬಿಡಿ, ಒಂದು ವರ್ಷವೂ ಉಳಿಯುತ್ತಿಲ್ಲ. ಕ್ಷುಲ್ಲಕ ಕಾರಣದಿಂದ ಗಂಡ-ಹೆಂಡತಿ (Husband-wife) ದೂರವಾಗುತ್ತಾರೆ. ಕೆಲ ಮದುವೆಗಳು ಎಂಗೇಜ್‌ಮೆಂಟ್ (Engagement) ಆಗಿ ನಂತರ ಮುಂದುವರಿಯದ್ದೂ ಇದೆ. ಇವತ್ತಿನ ಕಾಲದ ಜನರು ಚಂಚಲ ಮನಸ್ಸಿನವರು. ಮದುವೆಯ ದಿನವೇ ಬೇರೆ ಹುಡುಗನ, ಹುಡುಗಿಯ ಜತೆ ವರ, ವಧು ಓಡಿ ಹೋಗುವ ವಿಚಾರಗಳು ಹೊಸದೇನಲ್ಲ. ಮದುವೆ ಕಾರ್ಯ ಸಂಪೂರ್ಣ ಮುಗಿಯುವ ವರೆಗೂ ಮದುವೆ ಆಯಿತೆಂದು ಹೇಳುವುದು ಕಷ್ಟ. ಯಾಕೆಂದರೆ ಯಾವ ಕ್ಷಣದಲ್ಲಿ ಮದುವೆ ಕ್ಯಾನ್ಸಲ್ ಆಗಬಹುದು. ಇಲ್ಲಾಗಿದ್ದೂ ಇದೆ.

ಮದುವೆಯ ಎಲ್ಲಾ ಸಿದ್ಧತೆಗಳೂ ಪೂರ್ಣಗೊಂಡಿವೆ. ಮಂಟಪ, ಅಲಂಕಾರ, ಪುರೋಹಿತರು, ವಧು, ವರ ಕುಟುಂಬಸ್ಥರು ಎಲ್ಲರೂ ಸಿದ್ಧವಾಗಿದ್ದಾರೆ. ಆದ್ರೆ ವಧು ಮಾತ್ರ ನನ್ಗೀಗ ಮದುವೆ ಬೇಡ ಅಂದಿದ್ದಾಳೆ. 

Tap to resize

Latest Videos

Marriage Tips : ನಿಶ್ಚಿತಾರ್ಥಕ್ಕೆ ಮುನ್ನವೇ ಹುಡುಗಿ ಇಟ್ಟ ಡಿಮ್ಯಾಂಡ್ ಕೇಳಿ ಕಂಗಾಲಾದ ಹುಡುಗ

ಕೆಲವೊಮ್ಮೆ ಮದುವೆಗಳು ಸೀರಿಯಲ್‌ಗಳಂತೆ ತಿರುವು ಪಡೆದುಕೊಳ್ಳುವುದು ಇತ್ತೀಚಿಗೆ ಸಾಮಾನ್ಯವಾಗಿ ಹೋಗಿದೆ. ಕೆಲವು ಅಪರಿಚಿತ ಕಾರಣಕ್ಕಾಗಿ ವಧು ತನ್ನ ಮದುವೆಯನ್ನು ವೇದಿಕೆಯ ಮೇಲೆ ಕ್ಯಾನ್ಸಲ್‌ ಮಾಡಿಬಿಡುತ್ತಾಳೆ. ಇದರಲ್ಲಿ ಬಹು ಗಂಭೀರ ಕಾರಣಗಳಿಂದ ತೊಡಗಿ, ಸಿಲ್ಲಿ ಕಾರಣಗಳೂ ಇರುತ್ತವೆ. ಹುಡುಗ ತಂದ ಸೀರೆ ಚೆನ್ನಾಗಿಲ್ಲ, ಹುಡುಗ ಬೀಡಾ ಜಗಿಯುತ್ತಾನೆ ಹೀಗೆ ಹಲವು ಕಾರಣಗಳಿಂದ ಹುಡುಗಿ ಮದ್ವೆ ಕ್ಯಾನ್ಸಲ್ ಮಾಡಿಬಿಡುತ್ತಾಳೆ. ಇಲ್ಲೊಂದೆಡೆ ವರನಿಗೆ ವಿದ್ಯಾಭ್ಯಾಸವಿಲ್ಲ ಎಂದು ವಧು ತನ್ನ ಮದುವೆಯನ್ನು ನಿಲ್ಲಿಸಿದ್ದಾಳೆ.  ವರನು ವಧುವಿನ ಕೊರಳಿಗೆ ಹೂವಿನ ಮಾಲೆಯನ್ನು ಹಾಕಿದ ನಂತರ, ವಧು ತಾನು ವರನಿಗೆ ಹೂವಿನ ಮಾಲೆಯನ್ನು ಹಾಕಲು ನಿರಾಕರಿಸುತ್ತಾಳೆ. ಈ ವಿಡಿಯೋ ಸಾಮಾಜಿಕ ಜಾಲತಾಣ (Sociam Media) ಗಳಲ್ಲಿ ವೈರಲ್ (Viral) ಆಗಿದೆ.

ವೀಡಿಯೊ (Video)ವನ್ನು ಇನ್‌ಸ್ಟಾಗ್ರಾಂನಲ್ಲಿ ಬ್ರೈಡಲ್ ಲೆಹಂಗಾ ಡಿಸೈನ್‌ ಪುಟದಿಂದ ಅಪ್‌ಲೋಡ್ ಮಾಡಲಾಗಿದೆ. ಇದು 40,000 ವೀಕ್ಷಣೆಗಳು ಮತ್ತು 1,700 ಲೈಕ್‌ಗಳನ್ನು ಪಡೆದುಕೊಂಡಿದೆ.

ನಿಖಿಲ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ರಶ್ಮಿ ಪ್ರಭಾಕರ್; ಇಲ್ಲಿವೆ ಸುಂದರ ಫೋಟೋಗಳು

ವೀಡಿಯೋದಲ್ಲಿ ವಧುವರರು ಮಂಟಪದಲ್ಲಿ ಹೂಮಾಲೆಗಳೊಂದಿಗೆ ನಿಂತಿರುವುದನ್ನು ತೋರಿಸುತ್ತದೆ. ಜಯಮಾಲಾ ಸಮಾರಂಭದಲ್ಲಿ, ವರನು ತನ್ನ ಜಯಮಾಲಾವನ್ನು ವಧುವಿನ ಕುತ್ತಿಗೆಯ ಮೇಲೆ ಹಾಕಿದ ನಂತರ, ಅವಳು ತನ್ನ ಜಯಮಾಲಾವನ್ನು ಹಿಡಿದಿಟ್ಟುಕೊಳ್ಳುತ್ತಾಳೆ. ನಂತರ ಅವಳು ವರನಿಗೆ ಅನಕ್ಷರಸ್ಥ ಮತ್ತು ಅವಳು ಬಿ.ಎಡ್ ವ್ಯಾಸಂಗ ಮಾಡುತ್ತಿರುವುದರಿಂದ ತಾನು ಮದುವೆಯಾಗುವುದಿಲ್ಲ ಎಂದು ವೇದಿಕೆಯಿಂದಲೇ 
ಹೇಳುತ್ತಾಳೆ.

ಆತನನ್ನು ಯಾಕೆ ಮದುವೆಯಾಗುವುದಿಲ್ಲ ಎಂದು ವ್ಯಕ್ತಿಯೊಬ್ಬ ಕೇಳಿದ್ದಕ್ಕೆ ವಧು, ನಾನು ವಿದ್ಯಾವಂತೆ. ಬಿಎಡ್ ಮಾಡಿದ್ದೇನೆ. ಅವನು ಸಂಪೂರ್ಣ ಅನಕ್ಷರಸ್ಥ. ನಾನು ಅವನೊಂದಿಗೆ ಸಂತೋಷವಾಗಿರಬಹುದೇ ? ಇಬ್ಬರ ನಡುವೆ ಹೊಂದಾಣಿಕೆ ಬರಬಹುದೇ ಎಂದು ಪ್ರಶ್ನಿಸಿದ್ದಾಳೆ.  ಇದಕ್ಕೆ ಪ್ರತಿಯಾಗಿ ಮದುವೆಯಲ್ಲಿ ಭಾಗವಹಿಸಲು ಬಂದವರಲ್ಲಿ ಒಬ್ಬ ವ್ಯಕ್ತಿ ಮೊದಲೇ ಮದುವೆಯನ್ನು ಯಾಕೆ ನಿರಾಕರಿಸಲ್ಲಿಲ್ಲ ಎಂದು ಪ್ರಶ್ನಿಸಿದ್ದಾನೆ. ಅದಕ್ಕೆ ವಧು, ತಂದೆ ತನ್ನನ್ನು ಮದುವೆಯಾಗುವಂತೆ ಒತ್ತಾಯಿಸುತ್ತಿದ್ದರು ಎಂದಿದ್ದಾಳೆ.. ತನಗೆ ಸಮಾನನಾದ ಮತ್ತು ತನ್ನೊಂದಿಗೆ ಇಂಗ್ಲಿಷ್‌ನಲ್ಲಿ ಮಾತನಾಡಬಲ್ಲ ಪುರುಷನನ್ನು ಮದುವೆಯಾಗಲು ಬಯಸುತ್ತೇನೆಂದು ಆಕೆ ಹೇಳಿದಳು.

click me!