Elon Musk - Amber Heard: ಜಗತ್ತಿನ ನಂಬರ್ 1 ಶ್ರೀಮಂತ ಎಲಾನ್ ಮಸ್ಕ್ ಒಂದಲ್ಲಾ ಒಂದು ಕಾರಣಕ್ಕೆ ಸುದ್ದಿಯಲ್ಲಿ ಇದ್ದೇ ಇರುತ್ತಾರೆ. ಮೊನ್ನೆಯಷ್ಟೇ ಟ್ವಿಟ್ಟರ್ ಖರೀದಿಸಿದ ಕಾರಣಕ್ಕಾಗಿ ಸುದ್ದಿಯಾದ ಖ್ಯಾತ ಉದ್ಯಮಿ ಎಲಾನ್ ಮಸ್ಕ್, ಬೇರೊಂದು ಕಾರಣಕ್ಕೂ ಈ ವಾರ ಸುದ್ದಿಯಾಗಿದ್ದಾರೆ. ಆದರೆ ಇದು ಮಾತ್ರ ಖಾಸಗಿ ಸಂಗತಿ.
ಪೈರೇಟ್ಸ್ ಆಫ್ ದಿ ಕೆರಿಬಿಯನ್ (Pirates of Carobbean) ಸಿನೆಮಾ ಸರಣಿಯ ನಾಯಕ ನಟ ಜಾನಿ ಡೆಪ್ (Johnny Depp) ಹಾಗೂ ಆತನ ಮಾಜಿ ಪತ್ನಿ ಆಂಬರ್ ಹರ್ಡ್ (Amber Heard) ಅವರ ಮಾನನಷ್ಟ ಮೊಕದ್ದಮೆಯ ವಿಚಾರಣೆಯ ವೇಳೆ ಖ್ಯಾತ ಉದ್ಯಮಿ ಎಲಾನ್ ಮಸ್ಕ್(Elon Musk) ಅವರ ಹೆಸರು ಕೂಡ ಜೋಡಿಕೊಂಡಿದೆ. ಮಸ್ಕ್ ಅವರು ತನ್ನ ಮಾಜಿ ಪತ್ನಿ ಆಂಬರ್ ಹರ್ಡ್ ಹಾಗೂ ಕಾರಾ ಎಂಬ ಇನ್ನೊಬ್ಬ ನಟಿಯ ಜೊತೆ ಥ್ರೀಸಮ್ ಮಾಡಿದ್ದರು ಎಂದು ಡೆಪ್ ಆರೋಪಿಸಿದ್ದಾರೆ.
ಈ ಆರೋಪ ಹಾಗೂ ಅವರಿಬ್ಬರ ಪ್ರಕರಣಕ್ಕೆ ದೊಡ್ಡ ಹಿನ್ನೆಲೆಯೇ ಇದೆ. ನಟಿ ಆಂಬರ್ ಹರ್ಡ್, ಜಾನಿ ಡೆಪ್‌ನ ಮಾಜಿ ಪತ್ನಿ. ಈ ಹರ್ಡ್, ಒಂದು ಕಾಲದ ಮಸ್ಕ್‌ನ ಪ್ರೇಯಸಿಯೂ ಹೌದು. ಜಾನಿ ಡೆಪ್ ಜೊತೆಗೆ ಮೂರು ವರ್ಷ ಸಂಸಾರ ನಡೆಸಿದ ಬಳಿಕ ಇಬ್ಬರಿಗೂ ವಿಚ್ಛೇದನವಾಗಿತ್ತು. ಇಬ್ಬರೂ ಪರಸ್ಪರ ದೌರ್ಜ್ಯನ್ಯದ ಕಾರಣ ನೀಡಿದ್ದರು. ಇದೇ ಸಂದರ್ಭದಲ್ಲಿ ಮಸ್ಕ್ ತನ್ನ ಹೆಂಡತಿಯ ಜೊತೆಗೆ ಡೇಟಿಂಗ್ ನಡೆಸುತ್ತಿದ್ದ ಎಂದು ಜಾನಿ ಡೆಪ್ ಆರೋಪಿಸುತ್ತಿದ್ದರು. ಆದರೆ ಇದು ನಿಜವಲ್ಲ ಎಂದು ಮಸ್ಕ್ ಸ್ಪಷ್ಟನೆ ನೀಡಿದ್ದಾರೆ.
'ನಾನು ಆಂಬರ್ ಹರ್ಡ್ ಜೊತೆ ಡೇಟಿಂಗ್ ಮಾಡುತ್ತಿದ್ದಾಗ ಅವರಿಬ್ಬರ ದಾಂಪತ್ಯ ಆಗಲೇ ವಿಚ್ಛೇದನದ ಕೋರ್ಟ್ ಹತ್ತಿತ್ತು. ಅವರು ಕೇಸು ಹಾಕಿದ ಒಂದು ತಿಂಗಳ ಬಳಿಕವೇ ನಾವಿಬ್ಬರೂ ಜೊತೆಯಾದದ್ದು' ಎಂದು ಮಸ್ಕ್ ಹೇಳಿದ್ದಾರೆ.
ಹಾಗಿದ್ದರೆ ಥ್ರೀಸಮ್? ಅದೂ ಜಾನಿ ಡೆಪ್ ಮಾಡಿದ ಆರೋಪ. ಕಾರಾ ಡೆಲೆವಿನೆ (Cara Devevingne) ಎಂಬ ನಟಿ ಹಾಗೂ ಆಂಬರ್ ಹರ್ಡ್ ಸೇರಿ ಮಸ್ಕ್‌ನ ಹಾಸಿಗೆ ಹಂಚಿಕೊಂಡಿದ್ದರು ಎಂಬುದು ಡೆಪ್ ಮಾಡಿದ ಗಂಭೀರ ಆರೋಪ. ಆದರೆ ಇದನ್ನೂ ಮಸ್ಕ್ ಅಲ್ಲಗಳೆದಿದ್ದಾರೆ. 'ಕಾರಾ ನನಗೆ ಸ್ನೇಹಿತೆ ಅಷ್ಟೇ. ನಾವಿಬ್ಬರೂ ದೈಹಿಕ ಸಂಪರ್ಕ ಹೊಂದಿಲ್ಲ. ಇದನ್ನು ಕಾರಾ ಕೂಡ ಸ್ಪಷ್ಟಪಡಿಸಬಹುದು' ಎಂದಿದ್ದಾರೆ. ಹೀಗಾಗಿ ಇದು ನಿಜವೋ ಅಲ್ಲವೋ ಕಾರಾ ಮತ್ತು ಹರ್ಡ್ ಹೇಳಬೇಕು.
ಜಾನಿ ಡೆಪ್ ಮತ್ತು ಹರ್ಡ್ ಜಗಳಕ್ಕೆ ಕಾರಣವಿದೆ. ಇವರಿಬ್ಬರೂ 2015ರಲ್ಲಿ ಮದುವೆಯಾಗಿದ್ದರು. ದಾಂಪತ್ಯ ಸುಖಮಯವಾಗಿರಲಿಲ್ಲ. ಇಬ್ಬರೂ ಕುಡಿದು, ಡ್ರಗ್ಸ್ ಸೇವಿಸಿ ಬಂದು ಬಡಿದಾಡಿಕೊಳ್ಳುತ್ತಿದ್ದರು. ಕಡೆಗೂ 2017ರಲ್ಲಿ ಇಬ್ಬರೂ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿ ಡೈವೋರ್ಸ್(Divorce) ಪಡೆದುಕೊಂಡರು. ಇದಾಗಿ ಒಂದು ವರ್ಷದಲ್ಲಿ 'ನಾನು ಮನೆಯೊಳಗಿನ ಹಿಂಸೆಯ ಸಂತ್ರಸ್ತೆ' ಎಂದು ಹರ್ಡ್ ಬರೆದುಕೊಂಡರು. ಇದು ಡೆಪ್ ಅವರನ್ನು ರೇಗಿಸಿತು. ಅವರು ಮಾನನಷ್ಟ ಕೇಸ್ ದಾಖಲಿಸಿದರು. ಪ್ರತಿಯಾಗಿ ಹರ್ಡ್ ಕೂಡ ಮಾನನಷ್ಟ ಕೇಸು (Defamation lawsuit) ದಾಖಲಿಸಿದರು. ಅದೇ ಈಗ ನಡೆಯುತ್ತಿದೆ. ಇದರಲ್ಲೇ ಮಸ್ಕ್ ಹೆಸರು ಕೆಡಿಸಿಕೊಂಡಿರುವುದು.
ನಿದ್ರೆಯಲ್ಲಿದ್ದಾಗ ಪತಿ ಜೊತೆ ಸಂಬಂಧ ಬೆಳೆಸಿದ ಪತ್ನಿ.. ಎಚ್ಚರಗೊಂಡ ಪತಿ ಮಾಡಿದ್ದೇನು ?
ಅದಿರಲಿ. ಮಸ್ಕ್ ಇದುವರೆಗೂ ಮೂವರು ಪತ್ನಿಯರು, ನಾಲ್ಕು ಡೈವೋರ್ಸ್ ಹಿಸ್ಟರಿ ಹೊಂದಿದ್ದಾರೆ. ಮಸ್ಕ್ ತನ್ನ ಮೊದಲ ಪತ್ನಿ ಕೆನಡಾದ ಲೇಖಕಿ ಜಸ್ಟಿನ್ ವಿಲ್ಸನ್ (Justine Wilson) ಅವರನ್ನು ಕ್ವೀನ್ಸ್ ವಿಶ್ವವಿದ್ಯಾನಿಲಯದಲ್ಲಿ ವ್ಯಾಸಂಗ ಮಾಡುತ್ತಿರುವಾಗ ಭೇಟಿಯಾದರು ಮತ್ತು ಅವರು 2000ರಲ್ಲಿ ವಿವಾಹವಾದರು. ಅವರು 2000ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ರಜೆಯಲ್ಲಿದ್ದಾಗ ಗಂಭೀರ ಮಲೇರಿಯಾಕ್ಕೆ ತುತ್ತಾದರು. 2002ರಲ್ಲಿ ಅವರ ಮೊದಲ ಮಗು, ಮಗ ನೆವಾಡಾ ಅಲೆಕ್ಸಾಂಡರ್ ಮಸ್ಕ್, 10 ವಾರಗಳ ವಯಸ್ಸಿನಲ್ಲಿ ಹಠಾತ್ ಮರಣ ಹೊಂದಿದ. ಅವನ ಮರಣದ ನಂತರ, ದಂಪತಿಗಳು ತಮ್ಮ ಕುಟುಂಬವನ್ನು ಮುಂದುವರಿಸಲು IVF ಬಳಸಲು ನಿರ್ಧರಿಸಿದರು. ಅವಳಿಗಳಾದ ಕ್ಸೇವಿಯರ್ ಮತ್ತು ಗ್ರಿಫಿನ್ ಏಪ್ರಿಲ್ 2004ರಲ್ಲಿ ಜನಿಸಿದರು. ನಂತರ ತ್ರಿವಳಿಗಳಾದ ಕೈ, ಸ್ಯಾಕ್ಸನ್ ಮತ್ತು ಡಾಮಿಯನ್ 2006ರಲ್ಲಿ ಜನಿಸಿದರು. ದಂಪತಿಗಳು 2008ರಲ್ಲಿ ವಿಚ್ಛೇದನ ಪಡೆದರು ಮತ್ತು ಅವರ ಐವರು ಪುತ್ರರ ಪಾಲನೆಯನ್ನು ಹಂಚಿಕೊಂಡರು.
ಭಾವಿ ಹೆಂಡತಿಯ ವಿಚಿತ್ರ ಬೇಡಿಕೆ, ಅಪ್ಪ-ಅಮ್ಮನಿಗೂ ಹೇಳೋಕಾಗ್ತಿಲ್ಲ ಅಂತಿದ್ದಾನೆ ಹುಡುಗ !
2008 ರಲ್ಲಿ ಮಸ್ಕ್ ಇಂಗ್ಲಿಷ್ ನಟಿ ತಾಲುಲಾ ರಿಲೆ (Talulah riley) ಯೊಂದಿಗೆ ಡೇಟಿಂಗ್ ಮಾಡಲು ಪ್ರಾರಂಭಿಸಿದರು ಮತ್ತು 2010ರಲ್ಲಿ ವಿವಾಹವಾದರು. 2012ರಲ್ಲಿ ಅವರು ರಿಲೇಯಿಂದ ವಿಚ್ಛೇದನ ಪಡೆದರು. 2013ರಲ್ಲಿ, ಮಸ್ಕ್ ಮತ್ತು ರಿಲೆ ಮರುಮದುವೆಯಾದರು. ಡಿಸೆಂಬರ್ 2014ರಲ್ಲಿ ಅವರು ರಿಲೇಯಿಂದ ಎರಡನೇ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದರು; ಅದನ್ನೂ ಹಿಂಪಡೆದರು! ಆದರೂ 2016ರಲ್ಲಿ ಮತ್ತೆ ಎರಡನೇ ವಿಚ್ಛೇದನ ನೀಡಿದರು!
ಮಸ್ಕ್ ನಂತರ 2017ರಲ್ಲಿ ಹಲವಾರು ತಿಂಗಳುಗಳ ಕಾಲ ಅಂಬರ್ ಹರ್ಡ್ ಜೊತೆ ಡೇಟಿಂಗ್ ಮಾಡಿದರು. ನಂತರ ಈಕೆ ನಟ ಜಾನಿ ಡೆಪ್ ಅವರನ್ನು ವಿವಾಹವಾದರು.
ಸಂಭೋಗದ ವೇಳೆ ಕಾಂಡೋಮ್ ಬಳಸುವಾಗ ಈ ತಪ್ಪನ್ನು ಮಾಡದಿರಿ
ಮೇ 2018ರಲ್ಲಿ, ಮಸ್ಕ್ ಮತ್ತು ಕೆನಡಾದ ಸಂಗೀತಗಾರ್ತಿ ಗ್ರಿಮ್ಸ್ ಅವರು ಡೇಟಿಂಗ್ ಮಾಡತೊಡಗಿದರು. ಗ್ರಿಮ್ಸ್ ಮೇ 2020ರಲ್ಲಿ ಮಗನಿಗೆ ಜನ್ಮ ನೀಡಿದರು. ಆತನಿಗೆ X Æ A-Xii ಎಂಬ ವಿಚಿತ್ರ ಹೆಸರನ್ನು ಇಟ್ಟಿದ್ದಾರೆ ಮಸ್ಕ್. 'ನಾವು ಅರೆ-ಬೇರ್ಪಟ್ಟಿದ್ದೇವೆ. ಆದರೆ ಇನ್ನೂ ಒಬ್ಬರನ್ನೊಬ್ಬರು ಪ್ರೀತಿಸುತ್ತೇವೆ, ಒಬ್ಬರನ್ನೊಬ್ಬರು ಆಗಾಗ್ಗೆ ಭೇಟಿಯಾಗುತ್ತೇವೆ ಮತ್ತು ಉತ್ತಮ ಸಂಬಂಧದಲ್ಲಿದ್ದೇವೆ' ಎಂದು ಮಸ್ಕ್ ಹೇಳಿದ್ದರು. ಕಳೆದ ವರ್ಷ, ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ, ಗ್ರಿಮ್ಸ್ ಅವರು ತಮ್ಮ ಡೈವೋರ್ಸ್ ಬಳಿಕ ಮಸ್ಕ್‌ನೊಂದಿಗೆ 'ಇನ್ನೂ ವಾಸಿಸುತ್ತಿದ್ದೇನೆ' ಎಂದು ಉಲ್ಲೇಖಿಸಿದ್ದರು.