ಕಪ್ಪಗಿರುವ ಹುಡುಗ ಬೇಡ, ತಾಳಿ ಕಟ್ಟೋ ಕೊನೆಯ ಕ್ಷಣದಲ್ಲಿ ಮದ್ವೆ ಕ್ಯಾನ್ಸಲ್ ಮಾಡಿದ ವಧು!

By Vinutha PerlaFirst Published Jun 9, 2023, 9:31 AM IST
Highlights

ಇತ್ತೀಚಿನ ವರ್ಷಗಳಲ್ಲಿ ಸಣ್ಣಪುಟ್ಟ ಕಾರಣಕ್ಕೆ ವಧು-ವರರು ಮದ್ವೆ ಕ್ಯಾನ್ಸಲ್ ಮಾಡಿಕೊಳ್ಳೋದು ಸಾಮಾನ್ಯ. ಹಾಗೆಯೇ ಇಲ್ಲೊಬ್ಬ ವಧು ಮಂಟಪದಲ್ಲಿ ಇನ್ನೇನು ಹುಡುಗ ತಾಳಿ ಕಟ್ಟೋ ಕೊನೆಯ ಕ್ಷಣದಲ್ಲಿ  ಮದ್ವೆ ಕ್ಯಾನ್ಸಲ್ ಮಾಡ್ಕೊಂಡಿದ್ದಾಳೆ. ಅದ್ಕೆ ಕಾರಣ ಏನು ಅಂತ ಗೊತ್ತಾದ್ರೆ ನಿಮಗೂ ಸಹ ಗಾಬರಿಯಾಗೋದು ಖಂಡಿತ.

ಉತ್ತರಪ್ರದೇಶ: ಮದುವೆ ಅನ್ನೋದು ಎಲ್ಲರ ಜೀವನದಲ್ಲಿಯೂ ಸ್ಪೆಷಲ್ ಡೇ ಆಗಿರುತ್ತದೆ. ಕೇವಲ ಮದುಮಕ್ಕಳು ಮಾತ್ರವಲ್ಲ ಕುಟುಂಬ ಸದಸ್ಯರು, ಬಂಧು ಬಳಗದವರು, ಸ್ನೇಹಿತರು ಎಲ್ಲರೂ ಮದುವೆ ದಿನ ಅಂದ್ರೆ ಖುಷಿ ಪಡುತ್ತಾರೆ. ಆದ್ರೆ ಇತ್ತೀಚಿಗೆ ಕೆಲ ವರ್ಷಗಳಿಂದ ಮದುವೆ ಸುಸೂತ್ರವಾಗಿ ನಡೆಯೋದಕ್ಕಿಂತ ಹೆಚ್ಚಾಗಿ ಸಣ್ಣಪುಟ್ಟ ಕಾರಣಕ್ಕೆ ಕ್ಯಾನ್ಸಲ್ ಆಗೋದೆ ಜಾಸ್ತಿ. ಸಣ್ಣಪುಟ್ಟ ಕಾರಣಕ್ಕೆ ವರ, ವಧು ಮದುವೆ ಕ್ಯಾನ್ಸಲ್ ಮಾಡಿಕೊಳ್ಳುತ್ತಾರೆ. ಮದ್ವೆ ಊಟ ಚೆನ್ನಾಗಿಲ್ಲಾಂತ, ಬ್ಯಾಂಡ್ ಕರೆಸಿಲ್ಲಾಂತ, ಹುಡುಗನ ಕಡೆಯವರು ಬರೋಕೆ ಕಾರು ಕಳಿಸಿಕೊಟ್ಟಿಲ್ಲಾಂತ ಹೀಗೆ ನಾನಾ ಕಾರಣಕ್ಕೆ ಹುಡುಗರು ಮದ್ವೆ ಕ್ಯಾನ್ಸಲ್ ಮಾಡಿಕೊಳ್ತಾರೆ. ಇತ್ತ ಹುಡುಗಿಯರು ಹುಡುಗನ ಮನೆಯಿಂದ ಕೊಟ್ಟ ಸೀರೆ ಚೆನ್ನಾಗಿಲ್ಲ, ಹುಡುಗನ ಮನೆ ಚಿಕ್ಕದು ಅನ್ನೋ ಕಾರಣಕ್ಕೆಲ್ಲಾ ಮದ್ವೆ ಬೇಡ ಅನ್ನುತ್ತಾರೆ.

ಹಲವು ಜೋಡಿಗಳು ಮಂಟಪದಲ್ಲೇ ಮದುವೆ (Marriage) ಕ್ಯಾನ್ಸಲ್ ಮಾಡಿಕೊಂಡ ಹಲವಾರು ಘಟನೆಗಳು ನಡೆದಿವೆ. ಹಾಗೆಯೇ ಉತ್ತರ ಪ್ರದೇಶದ ಕೌಶಾಂಬಿ ಜಿಲ್ಲೆಯಲ್ಲಿ ನಡೆದ ಘಟನೆಯೊಂದರಲ್ಲಿ ವಧು (Bride), ಮಂಟಪದಲ್ಲೇ ಮದುವೆ ಕ್ಯಾನ್ಸಲ್ ಮಾಡ್ಕೊಂಡಿದ್ದಾಳೆ. ಆಕೆ ಮದ್ವೆ ಕ್ಯಾನ್ಸಲ್ ಮಾಡಿರೋ ಕಾರಣ ಮಾತ್ರ ಎಲ್ಲರೂ ಹೀಗೂ ಮಾಡ್ತಾರಾ ಅಂತ ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಂತೆ ಮಾಡಿದೆ.

 ಮದ್ವೆ ದಿನ ಓಡಿಹೋದ ವಧು, ಆಕೆಗಾಗಿ ಮಂಟಪದಲ್ಲೇ 13 ದಿನ ಕಾದು ಕುಳಿತ ವರ!

ವರನ ಮೈಬಣ್ಣ ತುಂಬಾ ಕಪ್ಪಾಗಿದೆ ಎಂದು ಮದುವೆಯಾಗಲು ನಿರಾಕರಿಸಿದ ವರ
ಹೌದು, ಇಲ್ಲೊಬ್ಬ ವಧು ಮಂಟಪದಲ್ಲಿ ಇನ್ನೇನು ಹುಡುಗ ತಾಳಿ ಕಟ್ಟೋ ಕೊನೆಯ ಕ್ಷಣದಲ್ಲಿ  ಮದ್ವೆ ಕ್ಯಾನ್ಸಲ್ ಮಾಡ್ಕೊಂಡಿದ್ದಾಳೆ. ಅದಕ್ಕೆ ಕಾರಣ ಹುಡುಗ ಕಪ್ಪಾಗಿದ್ದಾನೆ (Dark complexion) ಅನ್ನೋದು. ವರನ ಮೈಬಣ್ಣ ತುಂಬಾ ಕಪ್ಪಾಗಿದೆ ಎಂದು ಹೇಳಿ, ವಧು ಮದುವೆಯಾಗಲು ನಿರಾಕರಿಸಿದ್ದಾಳೆ. ವಿವಾಹವನ್ನು ಮೇ 29 ರಂದು ಪಿಪ್ರಿ ಪೊಲೀಸ್ ಠಾಣೆ ವ್ಯಾಪ್ತಿಯ ಶೇರ್ಪುರ್ ನಿವಾಸಿ ಯುವಕನೊಂದಿಗೆ ನಿಶ್ಚಯಿಸಲಾಗಿತ್ತು. ನಿಗದಿತ ದಿನದಂದು ವರನು ಅದ್ಧೂರಿಯಾಗಿ ಮದುವೆಯ ಮೆರವಣಿಗೆಯಲ್ಲಿ ಹುಡುಗಿಯ ಮನೆಗೆ ತಲುಪಿದನು. ವಧು ಮದುವೆಯ ವೇದಿಕೆಗೆ ವರಮಾಲೆಗೆ ಬರುವವರೆಗೆ ಎಲ್ಲವೂ ಸರಿಯಾಗಿ ನಡೆಯಿತು.ಹುಡುಗನಿಗೆ ಮಾಲೆ ಹಾಕಲು ಮದುವೆಯ ವೇದಿಕೆಯನ್ನು ತಲುಪಿದ ವಧು ತನ್ನ ವರನನ್ನು ನೋಡಿದ ತಕ್ಷಣ ಆತನಿಗೆ ಹಾರವನ್ನು ಹಾಕಲು ನಿರಾಕರಿಸಿದಳು.

ವಧುವಿನ ನಿರಾಕರಣೆ ಆಕೆಯ ಕುಟುಂಬ ಸೇರಿದಂತೆ ಎಲ್ಲರಿಗೂ ಆಘಾತವನ್ನುಂಟು ಮಾಡಿತು. ವಧುವಿನ ನಿರ್ಧಾರದ (Decision) ಬಗ್ಗೆ ಪ್ರಶ್ನಿಸಿದಾಗ, ಅವಳು ಇಷ್ಟು ಕಪ್ಪಾಗಿರುವ ಯುವಕನನ್ನು ಮದುವೆಯಾಗಲು ಬಯಸುವುದಿಲ್ಲ ಎಂದು ಉತ್ತರಿಸಿದಳು. ವರನಿಗೆ ಹೆಚ್ಚು ವಯಸ್ಸಾಗಿದೆ ಎಂದೂ ಸಹ ಹೇಳಿದ್ದಾಳೆ ಎಂದು ತಿಳಿದುಬಂದಿದೆ. ಮದುವೆಗೆ ವಧುವಿನ ನಿರಾಕರಣೆ ಮದುವೆ ಮನೆಯಲ್ಲಿ ಚರ್ಚೆಗೆ ಕಾರಣವಾಯಿತು. ಹಲವರು ಆಕೆಯ ಮನಬದಲಿಸಲು ಯತ್ನಿಸಿದರು. ಆದರೆ ವಧು ತನ್ನ ನಿರ್ಧಾರವನ್ನು ಬದಲಾಯಿಸಲಿಲ್ಲ.ಆಕೆಯ ಕುಟುಂಬ ಸದಸ್ಯರು ಆಕೆಯ ನಿರ್ಧಾರವನ್ನು ಬದಲಾಯಿಸುವಂತೆ ಮನವೊಲಿಸಲು ಪ್ರಯತ್ನಿಸಿದರೂ ಪ್ರಯೋಜನವಾಗಲ್ಲಿಲ್ಲ.

ವರದಕ್ಷಿಣೆಯಾಗಿ ಏರ್‌ ಕಂಡೀಷನರ್ ಕೊಡದ್ದಕ್ಕೆ ಸಿಟ್ಟು, ವಧುವನ್ನು ಮಂಟಪದಿಂದ ಕೆಳಕ್ಕೆ ತಳ್ಳಿದ ವರ!

ಬಳಿಕ ಪಂಚಾಯತಿ ನಡೆಸಿ ಮತ್ತೆ ವಧುವಿನ ಮನವೊಲಿಸಲು ಸಾಕಷ್ಟು ಪ್ರಯತ್ನಗಳು ನಡೆದರೂ ಆಕೆ ತನ್ನ ನಿರ್ಧಾರಕ್ಕೆ ಬದ್ಧಳಾಗಿದ್ದಳು. ಕೊನೆಗೆ ವರನ ಕಡೆಯವರು ಮಂಟಪವನ್ನು ಬಿಟ್ಟು ಹೊರಡಬೇಕಾಯಿತು. ಹುಡುಗಿಯ ನಿರ್ಧಾರಕ್ಕೆ ಸಾಕಷ್ಟು ಟೀಕೆ ಕೇಳಿ ಬಂತು. ಕೆಲವರು ಆಕೆ ಮಾಡಿದ್ದು ಸರಿಯಾಗಿದೆ ಎಂದರೆ, ಇನ್ನು ಕೆಲವರು ಕೊನೆ ಕ್ಷಣದಲ್ಲಿ ಮದ್ವೆ ಕ್ಯಾನ್ಸಲ್ ಮಾಡಿಕೊಂಡಿದ್ದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ.

ವಧುವಿನ ನಿರ್ಧಾರಕ್ಕೆ ಜನರು ನಾನಾ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. ಕೆಲವರು ಯಾರನ್ನು ಮದುವೆಯಾಗಬೇಕು ಎಂಬುದು ಹುಡುಗಿಯ ಆಯ್ಕೆ ಎಂದು ವಧುವಿನ ನಿರ್ಧಾರಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ. ಮತ್ತೆ ಕೆಲವರು ತಾಳಿ ಕಟ್ಟುವ ಹಿಂದಿನ ಕ್ಷಣದ ವರೆಗೂ ಹುಡುಗಿ ಎಲ್ಲಿದ್ದಳು. ಆಕೆಗೆ ಇಲ್ಲಿಯವರೆಗೆ ಆಕೆಯ ಚರ್ಮದ ಬಣ್ಣ ಕಾಣಲಿಲ್ವಾ, ಮಂಟಪಕ್ಕೆ ಬಂದ ಮೇಲೆ ಕಂಡಿದ್ದಾ ಎಂದು ಟೀಕಿಸಿದ್ದಾರೆ. ಮತ್ತೊಬ್ಬರು ಚರ್ಮದ ಬಣ್ಣದಿಂದ ವ್ಯಕ್ತಿತ್ವವನ್ನು ಅಳೆಯುವುದು ಸರಿಯಲ್ಲ ಎಂದರು. ಮತ್ತೆ ಹಲವರು ಹಿಂದಿನ ಕಾಲದಂತೆ ಹುಡುಗಿಗೆ, ಹುಡುಗನ ಮುಖ ತೋರಿಸದೆ ಮದುವೆ ಮಾಡಲು ಹೊರಟರೆ ಹೀಗೆಯೇ ಆಗುವುದು ಎಂದಿದ್ದಾರೆ. ಒಟ್ಟಿನಲ್ಲಿ ವೈರಲ್ ಆಗಿರೋ ಸುದ್ದಿ ಎಲ್ಲೆಡೆ ಚರ್ಚೆಗೆ ಕಾರಣವಾಗಿರೋದಂತೂ ನಿಜ.

click me!