ಕಂಪೆನಿಯಲ್ಲಿ ಸಿಬ್ಬಂದಿಗೆ ರಾತ್ರಿ ಕೆಲಸ ಬ್ಯಾನ್‌, ಹೆಚ್ಚಾಯ್ತು ಮಹಿಳಾ ನೌಕರರು ಗರ್ಭಿಣಿಯಾಗುವ ಪ್ರಮಾಣ

By Suvarna News  |  First Published Jul 18, 2023, 8:51 AM IST

ಜಪಾನ್‌ನಲ್ಲಿ ಬೃಹತ್‌ ಕಂಪನಿಯೊಂದರ ಸಿಇಒ ಮಹಿಳೆಯರಲ್ಲಿ ಫಲವಂತಿಕೆಯ ದರ ಹೆಚ್ಚಿಸಲು ಹೊಸ ದಾರಿಯನ್ನು ಕಂಡುಹಿಡಿದಿದ್ದಾರೆ.  ಇದರಿಂದ ಮಹಿಳಾ ನೌಕರರು ಗರ್ಭಿಣಿಯಾಗುವ ಪ್ರಮಾಣ ಜಾಸ್ತಿಯಾಗಿದ್ದಷ್ಟೇ ಅಲ್ಲ, ಕಂಪನಿಯ ಲಾಭ ಕೂಡ ಗಣನೀಯವಾಗಿ ಏರಿಕೆಯಾಗಿದೆ.


ಟೋಕಿಯೋ: ಸಂತಾನೋತ್ಪತ್ತಿ ದರ ಇಳಿಕೆಯಿಂದ ಕಂಗಾಲಾಗಿರುವ ಜಪಾನ್‌ನಲ್ಲಿ ಬೃಹತ್‌ ಕಂಪನಿಯೊಂದರ ಸಿಇಒ ಹೇಗೆ ಮಹಿಳೆಯರಲ್ಲಿ ಫಲವಂತಿಕೆಯ ದರ ಹೆಚ್ಚಿಸಬಹುದು ಎಂಬುದನ್ನು ತೋರಿಸಿಕೊಟ್ಟು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಆ ಸಿಇಒ ಮಾಡಿದ ಏಕೈಕ ಕೆಲಸ- ಕಂಪನಿಯಲ್ಲಿ ರಾತ್ರಿ 8ರ ಬಳಿಕ ಯಾರೂ ಕೆಲಸ ಮಾಡಬಾರದು ಎಂಬ ನಿಯಮ ಜಾರಿಗೆ ತಂದಿದ್ದು. ಇದರಿಂದ ಮಹಿಳಾ ನೌಕರರು ಗರ್ಭಿಣಿಯಾಗುವ ಪ್ರಮಾಣ ಜಾಸ್ತಿಯಾಗಿದ್ದಷ್ಟೇ ಅಲ್ಲ, ಕಂಪನಿಯ ಲಾಭ ಕೂಡ ಗಣನೀಯವಾಗಿ ಏರಿಕೆಯಾಗಿದೆ.

ಜಪಾನ್‌ನಲ್ಲಿ ಮಹಿಳೆಯರ (Woman) ರಾಷ್ಟ್ರೀಯ ಫಲವಂತಿಕೆ ದರ 1.3ಕ್ಕೆ ಕುಸಿದಿದ್ದರೆ, ಈ ಕಂಪನಿಯಲ್ಲಿ ಫಲವಂತಿಕೆ ದರ 2ಕ್ಕೆ ಏರಿಕೆಯಾಗಿದೆ.ಇಟೋಚು ಕಾಪ್‌ರ್‍ ಎಂಬ ಬೃಹತ್‌ ಕಂಪನಿಗೆ 2010ರಲ್ಲಿ ಮಸಾಹಿರೋ ಒಕಾಫುಜಿ ಎಂಬುವರು ಸಿಇಒ ಆಗಿ ಬಂದರು. ಈ ಕಂಪನಿಯು ಫ್ಯಾಮಿಲಿ ಮಾರ್ಚ್‌ಗಳಿಂದ ಹಿಡಿದು ಲೋಹ ಮಾರಾಟದವರೆಗೆ ಹಲವಾರು ಕ್ಷೇತ್ರಗಳಲ್ಲಿ ಸರಣಿ ಸ್ಟೋರ್‌ಗಳನ್ನು ಹೊಂದಿದೆ.

Tap to resize

Latest Videos

Vastu tips for pregnancy: ಬಂಜೆತನ ಹೋಗಲಾಡಿಸಲು ಪರಿಣಾಮಕಾರಿ ಸಲಹೆಗಳು..

ರಾತ್ರಿ ವೇಳೆ ಓವರ್‌ಟೈಮ್‌ ಕೆಲಸ ಮಾಡುವುದಕ್ಕೆ ಜಪಾನೀಯರು ಪ್ರಸಿದ್ಧರಾಗಿದ್ದು, ಅದಕ್ಕೆ ವ್ಯಕ್ತಿರಿಕ್ತವಾಗಿ ಒಕಾಫುಜಿ ತಮ್ಮ ಕಂಪನಿಯಲ್ಲಿ ರಾತ್ರಿ 8ರೊಳಗೆ ಎಲ್ಲರೂ ಕಡ್ಡಾಯವಾಗಿ (Compulsory) ಮನೆಗೆ ಹೋಗಬೇಕು ಎಂದು ಆದೇಶಿಸಿದರು. ಅನಿವಾರ್ಯವಿದ್ದರೆ ಬೆಳಿಗ್ಗೆ ಬೇಗ ಬಂದು ಕೆಲಸ ಮಾಡಬಹುದು, ಅದಕ್ಕೆ ಹೆಚ್ಚುವರಿ ಸಂಬಳ ನೀಡಲಾಗುವುದು ಎಂದರು. ಅದರಿಂದಾಗಿ ಕಳೆದ 10 ವರ್ಷದಲ್ಲಿ ಕಂಪನಿಯ ಲಾಭ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ. ಜೊತೆಗೆ ಕಂಪನಿಯಲ್ಲಿ ತಾಯ್ತನದ ರಜೆ (Maternity leave) ತೆಗೆದುಕೊಳ್ಳುವ ನೌಕರರ ಸಂಖ್ಯೆ ಜಾಸ್ತಿಯಾಗಿದೆ.

ಜಪಾನ್‌ನಲ್ಲಿ ಬಾಡಿಗೆಗೆ ಸಿಗ್ತಾಳೆ ಗರ್ಲ್‌ಫ್ರೆಂಡ್‌
ಜಪಾನ್‌ ದೇಶದಲ್ಲಿ ಕಾನೂನುಬದ್ಧವಾಗಿ (Legally) ಬಾಡಿಗೆ ಗೆಳತಿಯನ್ನು (Girlfriend) ಪಡೆಯಲು ಸಹ ಅವಕಾಶವಿದೆ . ಯಾರೂ ಇದನ್ನು ನೋಡುವುದಿಲ್ಲ. ನಿಮ್ಮ ಅವಶ್ಯಕತೆಗಳ ಆಧಾರದ ಮೇಲೆ ಪಾಲುದಾರರನ್ನು ಬಾಡಿಗೆಗೆ ಪಡೆಯಬಹುದಾದ ಹಲವು ವೆಬ್‌ಸೈಟ್‌ಗಳು ಜಪಾನಿನ ಸರ್ಕಾರದಿಂದ (Japan government) ಅಂಗೀಕರಿಸಲ್ಪಟ್ಟಿವೆ. ಈ ವೆಬ್​ಸೈಟ್​ಗಳ ಮೂಲಕ ಕುಟುಂಬ ಸದಸ್ಯರನ್ನೂ ನೀವು ಬಾಡಿಗೆಗೆ ನೇಮಿಸಿಕೊಳ್ಳಬಹುದಾಗಿದೆ.  ಅವಿವಾಹಿತರಾಗಿರುವ ಅನೇಕ ಜಪಾನಿಯರು ಒಂಟಿತನವನ್ನು (Loneliness) ಅನುಭವಿಸುತ್ತಿರುವ ಕಾರಣ ಈ ಪರಿಕಲ್ಪನೆಯನ್ನು ಜಾರಿಗೆ ತರಲಾಗಿದೆ.

Fertility Food; ಗರ್ಭ ಧರಿಸಲು ಸಮಸ್ಯೆಯಿದ್ದರೆ ಅಂಡಾಣುವಿನ ಗುಣಮಟ್ಟ ಹೆಚ್ಚಿಸೋ ಈ ಆಹಾರ ಸೇವಿಸಿ

ಆದರೆ ಬಾಡಿಗೆ ಗೆಳತಿಯ ಸೇವೆಯು ನೀವು ಯೋಚಿಸುವಷ್ಟು ಅಗ್ಗವಾಗಿಲ್ಲ. ಬದಲಿಗೆ ಸ್ಪಲ್ಪ ದುಬಾರಿ (Costly)ಯಾಗಿದೆ. ಜಪಾನ್ ಟುಡೆಯಲ್ಲಿನ ವರದಿಯ ಪ್ರಕಾರ, ಒಬ್ಬ ವ್ಯಕ್ತಿಯು ಗರ್ಲ್‌ಫ್ರೆಂಡ್‌ನ್ನು ಎರಡು ಗಂಟೆಗಳಿಗಾಗಿ ಬಾಡಿಗೆ (Rental) ಪಡೆಯಲು ಮೊದಲ ಸಲ ಕನಿಷ್ಟ ರೂ. 3,000ಯನ್ನು ಪಾವತಿಸಬೇಕು. ನಂತರ ಭೇಟಿಗಾಗಿ ಹೆಚ್ಚುವರಿಯಾಗಿ ರೂ. 1,200 ಪಾವತಿಸಬೇಕಾಗುತ್ತದೆ. ಆದರೆ ಬಾಡಿಗೆ ಸೇವೆಯನ್ನು ಪಡೆಯುವವರು ಕಂಪೆನಿಯು ನಿಗದಿ ಪಡಿಸಿದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಾಗುತ್ತದೆ. ಗ್ರಾಹಕರು ನೇರವಾಗಿ ಬಾಡಿಗೆ ಗೆಳತಿಯನ್ನು ಸಂಪರ್ಕಿಸುವ ಹಾಗಿಲ್ಲ. ಹಾಗೆಯೇ ಆಕೆಗೆ ಉಡುಗೊರೆಗಳನ್ನು ನೀಡುವ ಹಾಗಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಆಕೆಯನ್ನು ಮತ್ತು ಆಕೆಯ ವೃತ್ತಿಪರತೆಯನ್ನು ಗೌರವಿಸಬೇಕು ಎಂದು ಸೂಚಿಸಲಾಗಿದೆ.

ಏಷಿಯನ್​ ಬಾಸ್​ (Asian Boss) ಎಂಬ ಯೂಟ್ಯೂಬ್​ ಚಾನೆಲ್,​ ಶಿಹೋಮಿ ಎಂಬ ಬಾಡಿಗೆ ಗೆಳತಿಯನ್ನು ಸಂದರ್ಶಿಸಿ ಈ ಬಗ್ಗೆ ಮತ್ತಷ್ಟು ಮಾಹಿತಿಯನ್ನು ನೀಡಿದೆ. ‘ಈತನಕ ತಮ್ಮ ಬದುಕಿನಲ್ಲಿ ಗೆಳತಿಯರನ್ನೇ ಪಡೆಯದ, ಹುಡುಗಿಯರಿಂದ ದೂರವಿರುವ ಮತ್ತು ನಿಜವಾದ ಸಂಗಾತಿಯನ್ನು ಹೊಂದುವಲ್ಲಿ ವಿಫಲರಾದವರು ಬಾಡಿಗೆ ಗೆಳತಿಯನ್ನು ನಿರೀಕ್ಷಿಸುತ್ತಾರೆ. ಆದರೆ ಕೆಲವೊಮ್ಮೆ ಈ ಮೂಲಕ ಮೋಸ ಮಾಡುವವರೂ ಇರುತ್ತಾರೆ’ ಎಂದಿದ್ದಾಳೆ ಆಕೆ.

ಏಷ್ಯನ್ ಸಂಸ್ಕೃತಿಯ ವಿವಿಧ ಅಂಶಗಳನ್ನು ಅನ್ವೇಷಿಸಲು ಹೆಸರುವಾಸಿಯಾದ ಯೂಟ್ಯೂಬ್ ಚಾನೆಲ್, ಬಾಡಿಗೆ ಗೆಳತಿಯ ವಿದ್ಯಮಾನವನ್ನು ಪರಿಶೀಲಿಸುವ ವೀಡಿಯೊವನ್ನು ರಚಿಸಿದೆ. ಟೋಕಿಯೊದಲ್ಲಿ ಸುತ್ತಾಡುವಾಗ ಇಲ್ಲಿನ ಸುಂದರ ಪ್ರದೇಶ, ಊಟದ ಜೊತೆಗೆ ಬಾಡಿಗೆ ಗರ್ಲ್‌ಫ್ರೆಂಡ್ ಜೊತೆ ಸುತ್ತಾಡಿ ಎಂದು ಹೇಳಿದೆ. ಇತ್ತೀಚೆಗೆ, ಭಾರತೀಯ ಯೂಟ್ಯೂಬರ್, ವಿಷ್ಣು ಅವರು ದೇಶದಲ್ಲಿದ್ದಾಗ ಈ ಸೇವೆಯನ್ನು ಪ್ರಯತ್ನಿಸಿದರು.

click me!