ಬಡತನದಿಂದ ಎಲ್ಲರಿಗೂ ಒಂದೇ ಬುಕ್, ಒಡಹುಟ್ಟಿದವರು ಏಕಕಾಲಕ್ಕೆ ಸಿವಿಲ್ ಸರ್ವೀಸ್ ಎಕ್ಸಾಂ ಪಾಸ್!
ಒಂದೇ ರೂಮ್, ಯಾವುದೇ ಕೋಚಿಂಗ್ ಇಲ್ಲ, ಮೂವರು ಒಡಹುಟ್ಟಿದವರಿಗೆ ಬುಕ್ಸ್ ಕೂಡ ಒಂದೇ. ಆದರೆ ಛಲ ಬಿಡದ ಇವರು ಜಮ್ಮ ಮತ್ತು ಕಾಶ್ಮೀರ ಸಿವಿಲ್ ಸರ್ವೀಸ್ ಎಕ್ಸಾಂ ಪಾಸ್ ಮಾಡಿದ್ದಾರೆ. ಕೇವಲ ಪಾಸ್ ಅಷ್ಟೇ ಅಲ್ಲ, ರ‍್ಯಾಂಕ್ ಜೊತೆ ಪಾಸ್ಸಾಗಿದ್ದಾರೆ. ಈ ಒಡಹುಟ್ಟಿದವರ ಸಾಧನೆ ಎಲ್ಲರಿಗೂ ಮಾದರಿಯಾಗಿದೆ.
ಶ್ರೀನಗರ(ಜ.21): ಸಿವಿಲ್ ಸರ್ವೀಸ್ ಎಕ್ಸಾಮ್ ಕುರಿತು ಹೆಚ್ಚಿನವರಿಗೆ ಗೊತ್ತಿದೆ. ಈ ಪರೀಕ್ಷೆ ಪಾಸ್ ಮಾಡಲು ಪಡಬೇಕಾದ ಕಷ್ಟ ಅಷ್ಟಿಷ್ಟಲ್ಲ. ಇದಕ್ಕೆ ಉತ್ತಮ ಕೋಚಿಂಗ್ ಸೇರಿದಂತೆ ಹಲವು ಸೌಲಭ್ಯಗಳಿದ್ದರೆ ರ‍್ಯಾಂಕ್ ಪಡೆಯಬಹುದು. ಆದರ ಇದ್ಯಾವುದೇ ಸವಲತ್ತುಗಳಿಲ್ಲದೆ. ಒಂದೇ ಸಣ್ಣ ಕೋಣೆಯಲ್ಲಿ ಕುಳಿತು, ಒಂದೇ ಬುಕ್ಸ್ ಬಳಸಿ, ಯಾವುದೇ ಕೋಚಿಂಗ್ ಪಡೆಯದೆ ಮೂವರು ಒಡಹುಟ್ಟಿದವರು ಜಮ್ಮು ಮತ್ತು ಕಾಶ್ಮೀರ ಸವಿಲ್ ಸರ್ವೀಸ್ ಎಕ್ಸಾಂ ರ‍್ಯಾಂಕ್‌ನೊಂದಿಗೆ ಪಾಸ್ ಆಗಿದ್ದಾರೆ. ಮೂವರು ಪೈಕಿ ಸುಹೈಲ್ ಅಹಮ್ಮದ್ ವಾನಿ ಅತೀ ಕಿರಿಯನವಾಗಿದ್ದರೆ. ಹುಮಾ ಅಂಜುಮ್ ವಾನಿ ಹಾಗೂ ಇಫ್ರಾ ಅಂಜುಮ್ ವಾನಿ ಅಕ್ಕಂದಿರು.
ಮೂವರು ಜಮ್ಮು ಮತ್ತು ಕಾಶ್ಮೀರ ಸಿವಿಲ್ ಸರ್ವೀಸ್ ಎಕ್ಸಾಂ(JKAS ) ಏಕಕಾಲದಲ್ಲಿ ಪಾಸ್ ಮಾಡಿರವುದು ವಾನಿ ಕುಟುಂಬದ ಸಂಸತ ಇಮ್ಮಡಿಗೊಳಿಸಿದೆ. ರ‍್ಯಾಂಕ್‌ನೊಂದಿಗೆ ಪಾಸ್ ಆದ ಬಳಿಕ ಮಾಧ್ಯಮದ ಜೊತೆ ಒಡಹುಟ್ಟಿದವರು ಸಂತಸ ಹಂಚಿಕೊಂಡಿದ್ದಾರೆ. ನಾವು ಒಂದೇ ಕೋಣೆಯಲ್ಲಿ ಓದುತ್ತಿದ್ದೇವೆ. ಇದಕ್ಕಾಗಿ ವೇಳಾಪಟ್ಟಿ ಮಾಡಿಕೊಂಡಿದ್ದೇವು. ಒಬ್ಬರ ಬಳಿಕ ಮತ್ತೊಬ್ಬರಿಗೆ ಪುಸ್ತಕ ಹಂಚುತ್ತಿದ್ದೆವು. ನಮ್ಮೊಳಗೆ ಚರ್ಚೆ ಮಾಡಿ ವಿಷಗಳನ್ನು ಮನವರಿಕೆ ಮಾಡುತ್ತಿದ್ದೇವು. ಹೀಗಾಗಿ ನಾವು ಯಾವುದೇ ಕೋಚಿಂಗ್ ತೆರಳಲಿಲ್ಲ. ಇದೀಗ ರ‍್ಯಾಂಕ್‌ನೊಂದಿಗೆ ಪರೀಕ್ಷೆ ಪಾಸ್ ಮಾಡಿದ್ದೇವೆ ಎಂದಿದ್ದಾರೆ.
ಈ ಮನೆ ಮಕ್ಕಳೆಲ್ಲಾ ಐಎಎಸ್, ಐಪಿಎಸ್ ಅಫೀಸರ್‌ಗಳು: ಒಂದೇ ಮನೆಯಲ್ಲಿ 4 ಅಧಿಕಾರಿಗಳು
ವಾನಿ ಕುಟುಂಬಕ್ಕೆ ಒಂದು ಪೇಪರ್ ಖರೀದಿಸಲು ಹಣ ಇರಲಿಲ್ಲ. ಒಡಹುಟ್ಟಿದವರ ತಂದೆ ವ್ಯಾಪರ, ಹೂಡಿಕೆಯಲ್ಲಿ ತೀವ್ರ ನಷ್ಟ ಅನುಭವಿಸಿದ್ದರು. ಹೀಗಾಗಿ ಒಂದು ಪುಸ್ತಕ ಖರೀದಿ ಕೂಡ ಕಷ್ಟವಾಗಿತ್ತು. ಆದರೆ ಪೋಷಕರು ಮಕ್ಕಳನ್ನು ಪ್ರೋತ್ಸಾಹಿಸುತ್ತಲೇ ಬಂದಿದ್ದಾರೆ. ಸಾಧಿಸಬೇಕೆಂಬ ಛಲ ತುಂಬಿದ್ದಾರೆ. 2021ರಲ್ಲಿ ಮೂವರು ಜೊತೆಯಾಗಿ ಪರೀಕ್ಷೆ ಬರೆಯುವ ನಿರ್ಧಾರಕ್ಕೆ ಬಂದಿದ್ದಾರೆ. ಬಳಿಕ ಸತತ ಪರಿಶ್ರಮ ಹಾಕಿದ್ದಾರೆ. ಇದರ ಫಲ ಇದೀಗ ಸಿಕ್ಕಿದೆ.
ನಮ್ಮ ತಾಯಿ ಮೂವರು ಶಿಕ್ಷಣಕ್ಕಾಗಿ ಎಲ್ಲಾ ಒಡವೆಯನ್ನು ಮಾರಿ ನಮಗೆ ಹಣ ನೀಡಿದ್ದಾರೆ. ತಂದೆ ಹೂಡಿಕೆ ನಷ್ಟವಾಗಿತ್ತು. ಹೀಗಾಗಿ ಆರ್ಥಿಕ ಸಂಕಷ್ಟದಲ್ಲೂ ನಮ್ಮ ಶಿಕ್ಷಣಕ್ಕೆ ಬೆಂಬಲ ನೀಡಿದ್ದಾರೆ. ಇದರ ಪರಿಣಾಮದಿಂದ ನಾವಿಂದು ಪರೀಕ್ಷೆ ಪಾಸ್ ಮಾಡಿದ್ದೇವೆ ಎಂದು ಸುಹೈಲ್ ಅಹಮ್ಮದ್ ಹೇಳಿದ್ದಾರೆ.
11 ಅಂಕದಿಂದ 10 ವರ್ಷದ ಶ್ರಮ ಬೂದಿಯಾಯ್ತು.. ವೈರಲ್ ಆದ ಐಎಎಸ್ ಆಕಾಂಕ್ಷಿಯ ಟ್ವೀಟ್ !
ಮತ್ತೊಂದು ವಿಶೇಷ ಅಂದರೆ ಈ ಬಾರಿ ಪರೀಕ್ಷೆ ಬರೆದು ತೇರ್ಗಡೆಯಾದ 187 ಅಭ್ಯರ್ಥಿಗಳು ಹಾಗೂ ಈ ಹಿಂದೆ ಪಾಸ್ ಆಗಿರುವ ಅಭ್ಯರ್ಥಿಗಳ ಪೈಕಿ ಸುಹೈಲ್ ಅತೀ ಕಿರಿಯ ಸಾಧಕ ಅನ್ನೋ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಸುಹೈಲ್ 23ನೇ ವಯಸ್ಸಿಗೆ ಜಮ್ಮು ಮತ್ತು ಕಾಶ್ಮೀರ ಸಿವಿಲ್ ಸರ್ವೀಸ್ ಪರೀಕ್ಷೆ ಪಾಸ್ ಮಾಡಿದ್ದಾರೆ.
ಮೂವರು ಒಡಹುಟ್ಟಿದವರಲ್ಲಿ ಮೊಬೈಲ್ ಫೋನ್ ಇಲ್ಲ. ಮನೆಯಲ್ಲಿರುವುದು ಒಂದೇ ಸ್ಮಾರ್ಟ್‌ಫೋನ್ ಅದು ತಾಯಿಯ ಬಳಿ ಇದೆ. ಅದೇ ಫೋನ್ ಬಳಸಿ ಕೆಲ ಮಾಹಿತಿಗಳನ್ನು ಜಾಲಾಡಿ ಕಲಿತಿದ್ದಾರೆ. ಕಷ್ಟದ ದಿನಗಳನ್ನು ನೆನೆದ ಹುಮಾ ಅಂಜುಮ್ ವಾನಿ, ಸ್ಪಷ್ಟ ಸಂದೇಶ ನೀಡಿದ್ದಾರೆ. ನಾವು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದಾಗ ಸಂಬಂಧಿಕರು, ಆಪ್ತರು, ಗೆಳೆಯರ ಬಳಿ ತಂದೆ ಶಿಕ್ಷಣಕ್ಕಾಗಿ ಹಣ ಕೇಳಿದ್ದರು. ಆದರೆ ಬಹುತೇಕರು ಹೆಣ್ಣು ಮಕ್ಕಳಿಗೆ ಶಿಕ್ಷಣ ಬೇಕಿಲ್ಲ. ಹುಡುಗನ ಓದಿಸು ಸಾಕು ಎಂದು ಸಲಹೆ ನೀಡಿದ್ದರು. ಆದರೆ ತಂದೆ ನಮಗೆ ಶಿಕ್ಷಣ ಕೊಡಿಸಿ ಇದೀಗ ಉನ್ನತ್ತ ಸ್ಥಾನ ಗಿಟ್ಟಿಸಿಕೊಳ್ಳಲು ನೆರವಾಗಿದ್ದಾರೆ ಎಂದಿದ್ದಾರೆ.