ಫಸ್ಟ್ ನೈಟ್ ಎಂದಾಗ ನಮ್ಮ ಕಣ್ಣ ಮುಂದೆ ಬರೋದು ಸಿಂಗಾರಗೊಂಡ ಕೋಣೆ. ಹಾಸಿಗೆ ಮೇಲೆ ಕುಳಿತಿರುವ ವರ, ಹಾಲು ತರ್ತಿರುವ ವಧು. ಮೊದಲ ರಾತ್ರಿ ಹಾಲೇ ಯಾಕೆ ಎಂದು ನೀವು ಪ್ರಶ್ನಿಸಬಹುದು. ಅದಕ್ಕೆ ಉತ್ತರ ಇಲ್ಲಿದೆ.
ಮದುವೆ ಎರಡು ಹೃದಯಗಳನ್ನು ಮಾತ್ರವಲ್ಲ ಎರಡು ದೇಹವನ್ನು ಒಂದು ಮಾಡುತ್ತದೆ. ಮದುವೆ ಹೊಸ ಜೀವನಕ್ಕೆ ನಾಂದಿ ಹಾಡುತ್ತದೆ. ಆಯಾ ಜಾತಿ, ಜನಾಂಗಕ್ಕೆ ತಕ್ಕಂತೆ ಮದುವೆ ಸಂಪ್ರದಾಯ ನೆರವೇರುತ್ತದೆ. ಮದುವೆಯ ದಿನ ವಧು – ವರರಿಗೆ ಬಹಳ ಮುಖ್ಯ. ಅದರಲ್ಲೂ ಮೊದಲ ರಾತ್ರಿಯ ಬಗ್ಗೆ ಸಾಕಷ್ಟು ಕನಸುಗಳನ್ನು ಕಂಡಿರ್ತಾರೆ. ಮೊದಲ ರಾತ್ರಿಯ ಬಗ್ಗೆ ಭಯ ಕೂಡ ಸಾಮಾನ್ಯ.
ಮೊದಲ ರಾತ್ರಿ (First Night) ಜೀವನ ಪೂರ್ತಿ ನೆನಪಿರಬೇಕೆಂದು ಎಲ್ಲರೂ ಬಯಸ್ತಾರೆ. ಇದಕ್ಕೆ ಸಕಲ ಸಿದ್ಧತೆ ನಡೆಸ್ತಾರೆ. ಹೋಟೆಲ್ (Hotel) ಇರಲಿ ಅಥವಾ ಮನೆಯಿರಲಿ, ಮೊದಲ ರಾತ್ರಿಯಂದು ರೂಮ್ ಗಳನ್ನು ಸಿಂಗಾರಗೊಳಿಸಲಾಗುತ್ತದೆ. ಸಂಪ್ರದಾಯ (Tradition) ದಂತೆ ಕೆಲ ಆಚರಣೆಗಳನ್ನು ಮಾಡಲಾಗುತ್ತದೆ. ನಂತ್ರ ಹಾಲ (Milk) ನ್ನು ವಧು – ವರರಿಗೆ ನೀಡಲಾಗುತ್ತದೆ.ಮೊದಲ ರಾತ್ರಿ ಹಾಲು ಹಿಡಿದು ವಧು ಒಳಗೆ ಬರೋದನ್ನು ನಾವು ಧಾರಾವಾಹಿ, ಸಿನಿಮಾಗಳಲ್ಲಿ ನೋಡಿರ್ತೇವೆ. ಹಾಗೆಯೇ ನಿಮ್ಮ ಜೀವನದಲ್ಲಿ ಕೂಡ ಮೊದಲ ರಾತ್ರಿ ಮುಗಿದಿರಬಹುದು. ಹಾಲು ತಂದಾಗ ಅದನ್ನು ಕುಡಿದಿರ್ತೀರಾ. ಆದ್ರೆ ಹಾಲನ್ನು ಏಕೆ ನೀಡಲಾಗಿದೆ ಎಂಬುದು ಬಹುತೇಕರಿಗೆ ತಿಳಿದಿರೋದಿಲ್ಲ. ಮೊದಲ ರಾತ್ರಿ ಅಂದ್ರೆ ಮೊದಲು ನೆನಪಾಗೋದೇ ಹಾಲು. ಹಾಗಿದ್ರೆ ಫಸ್ಟ್ ನೈಟ್ ಹಾಲು ನೀಡೋದು ಏಕೆ ಎಂಬುದು ನಿಮಗೆ ಗೊತ್ತಾ? ಕಾರಣವೇನು ಎನ್ನುವುದನ್ನು ನಾವಿಂದು ಹೇಳ್ತೆವೆ. ಮೊದಲ ರಾತ್ರಿ ನೀಡುವ ಹಾಲು ಸಾಮಾನ್ಯ ಹಾಲಿನಂತೆ ಇರೋದಿಲ್ಲ. ಅದಕ್ಕೆ ಬೆರಸುವ ವಸ್ತು ಹಾಗೂ ಅದರ ರುಚಿ ಎರಡೂ ಭಿನ್ನವಾಗಿರುತ್ತದೆ.
ಫಸ್ಟ್ ನೈಟ್ ನಲ್ಲಿ ನೀಡುವ ಹಾಲನ್ನು ಹೇಗೆ ತಯಾರಿಸಲಾಗುತ್ತದೆ ಗೊತ್ತಾ? : ಕುಂಕುಮ, ಸಕ್ಕರೆ, ಅರಿಶಿನ, ಕರಿಮೆಣಸಿನ ಪುಡಿ, ಬಾದಾಮಿ, ಶುಂಠಿ ಮತ್ತಿತರ ಪದಾರ್ಥಗಳನ್ನು ಹಾಕಿ ಹಾಲನ್ನು ಚೆನ್ನಾಗಿ ಕುದಿಸಿ ಅದು ಬೆಚ್ಚಗಿರುವಾಗಲೇ ವರನಿಗೆ ನೀಡಲಾಗುತ್ತದೆ.
ಸೆಕ್ಸ್ ಲೈಫಲ್ಲಿ ಈ ಬದಲಾವಣೆ ಮಾಡಿದ್ರೆ ವೈವಾಹಿಕ ಜೀವನವೇ ಸಖತ್ತಾಗಿರುತ್ತೆ
ಫಸ್ಟ್ ನೈಟ್ ನಲ್ಲಿ ನೀಡುವ ಹಾಲಿನಿಂದಾಗುವ ಲಾಭ :
ಪ್ರಣಯ ಶಕ್ತಿ ಹೆಚ್ಚಳ : ಮದುವೆಯ ಮೊದಲ ರಾತ್ರಿ ವರನಿಗೆ ಬಡಿಸುವ ಹಾಲಿನಲ್ಲಿ ಕರಿಮೆಣಸು ಮತ್ತು ಬಾದಾಮಿಯ ವಿಶಿಷ್ಟ ಮಿಶ್ರಣವಿರುತ್ತದೆ. ಹಾಲಿಗೆ ಇದನ್ನು ಹಾಕಿ ಕುದಿಸಿದಾಗ ಕೆಲವು ಅಂಶಗಳು ಅದರಿಂದ ಹೊರಬರುತ್ತವೆ. ಅದು ಪ್ರಣಯವನ್ನು ಹೆಚ್ಚಿಸುತ್ತದೆ. ಇದನ್ನು ಕುಡಿದ ನಂತರ ಪುರುಷ ಸಂಗಾತಿಯು ಪರಾಕಾಷ್ಠೆ ತಲುಪೋದು ಸುಲಭವಾಗುತ್ತದೆ.
ಉತ್ಸಾಹ ಹೆಚ್ಚಾಗುತ್ತೆ : ಈ ಎಲ್ಲ ವಸ್ತುಗಳಿಂದ ಮಿಶ್ರಣವಾಗಿರುವ ಹಾಲು ಸೇವನೆ ಮಾಡಿದ್ರೆ ನರ್ವಸ್ ಕಡಿಮೆಯಾಗುತ್ತದೆ. ಸಂಗಾತಿ ಪರಿಚಯವಿದ್ದರೂ ಮೊದಲ ರಾತ್ರಿಯಲ್ಲಿ ಸಣ್ಣ ನರ್ವಸ್ನೆಸ್ ಇದ್ದೇ ಇರುತ್ತದೆ. ಹಾಲು ಇದನ್ನು ಹೋಗಲಾಡಿಸುತ್ತದೆ. ಜೋಶ್ ಹಾಗೂ ಉತ್ಸಾಹವನ್ನು ಹೆಚ್ಚಿಸುತ್ತದೆ.
ಕೇಸರಿ – ಬಾದಾಮಿಯಿಂದ ಈ ಲಾಭ : ಹಾಲಿಗೆ ಕೇಸರಿ ಮತ್ತು ಬಾದಾಮಿಯನ್ನು ಸೇರಿಸಿ ಕುದಿಸುವುದ್ರಿಂದ ಅದರಿಂದ ವಿಶೇಷ ಸುಗಂಧ ಹೊರಬರುತ್ತದೆ. ಇದು ಹಾರ್ಮೋನುಗಳನ್ನು ಉತ್ಸಾಹಿಸುತ್ತದೆ. ವರನ ಮೂಡ್ ಸರಿ ಮಾಡುತ್ತದೆ.
ಆರೋಗ್ಯಕ್ಕೆ ಒಳ್ಳೆಯದು : ಈ ಹಾಲಿಗೆ ಕರಿಮೆಣಸು, ಸೋಂಪು, ಅರಿಶಿನವನ್ನು ಬೆರೆಸಲಾಗುತ್ತದೆ. ಇದರಿಂದಾಗಿ ಇದು ಬ್ಯಾಕ್ಟೀರಿಯಾ ವಿರೋಧಿ ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ನೆರವಾಗುತ್ತದೆ.
ಎಂಥಾ ಕಾಲ ಬಂತಪ್ಪಾ..ಈ ದೇಶದಲ್ಲಿ ರೊಮ್ಯಾನ್ಸ್ ಮಾಡೋಕೆ ಸಿಗುತ್ತೆ 30 ದಿನ ರಜೆ!
ಗಟ್ಟಿಯಾಗುತ್ತೆ ಸಂಬಂಧ : ವಧು ತನ್ನ ಕೈನಿಂದ ಬೆಚ್ಚಗಿನ ಹಾಲನ್ನು ವರನಿಗೆ ನೀಡೋದ್ರಿಂದ ಇಬ್ಬರ ಸಂಬಂಧ ಗಟ್ಟಿಯಾಗುತ್ತದೆ. ಇಬ್ಬರು ಹತ್ತಿರ ಬರಲು ಇದು ನೆರವಾಗುತ್ತದೆ. ಇದೊಂದು ಮಧುರ ಮಿಲನವಾಗಿ ರೂಪಗೊಳ್ಳುತ್ತದೆ. ಈ ಹಾಲನ್ನು ಇಬ್ಬರು ಹಂಚಿ ಕುಡಿಯೋದ್ರಿಂದ ಆತ್ಮೀಯತೆ ಹೆಚ್ಚಾಗುತ್ತದೆ. ಒಬ್ಬರಿಗೊಬ್ಬರು ಎಂಬ ಭಾವನೆ ಮೂಡುತ್ತದೆ. ಇಬ್ಬರ ಮಧ್ಯೆ ಹೊಸ ಸಂಬಂಧಕ್ಕೆ ಹಾಲು ನಾಂದಿಯಾಗುತ್ತದೆ.