
ಬಿಹಾರ: ಬಿಹಾರದಲ್ಲಿ ಸಿನಿಮೀಯ ಘಟನೆಯೊಂದು ನಡೆದಿದೆ. ಮದುಮಗಳ ಸಹೋದರಿಯ ಬೆದರಿಕೆಯಿಂದ ಹೆದರಿದ ವರನೋರ್ವ ತನಗೆ ಮದುವೆ ನಿಶ್ಚಯವಾಗಿದ್ದ ಮದುಮಗಳೊಂದಿಗೆ ಮದ್ವೆ ನಿಲ್ಲಿಸಿ ಆಕೆಯ ಸಹೋದರಿಯನ್ನು ಮದ್ವೆಯಾದ ವಿಚಿತ್ರ ಘಟನೆ ಬಿಹಾರದಲ್ಲಿ ನಡೆದಿದೆ. ಮದುಮಗಳ ಸಹೋದರಿ ಸಾಯುವುದಾಗಿ ಬೆದರಿಕೆಯೊಡ್ಡಿದ ಹಿನ್ನೆಲೆಯಲ್ಲಿ ಹೆದರಿದ ವರ ತನಗೆ ನಿಶ್ಚಯವಾಗಿದ್ದ ಮದ್ವೆ ರದ್ದು ಮಾಡಿ ಆಕೆಯ ಸಹೋದರಿಯನ್ನು ಮದ್ವೆಯಾಗಲು ಮುಂದಾಗಿದ್ದಾನೆ. ವರನ ಈ ನಿರ್ಧಾರವೂ ಮದುವೆಗೆ ಬಂದ ಅತಿಥಿಗಳು ಹಾಗೂ ಸಂಬಂಧಿಕರನ್ನು ಬೆಚ್ಚಿ ಬೀಳುವಂತೆ ಮಾಡಿದೆ.
ಕೆಲವು ಮದ್ವೆಗಳಲ್ಲಿ ಸಿನಿಮೀಯ ಘಟನೆಗಳು ನಡೆಯುತ್ತವೆ. ಆ ಘಟನೆಗಳು ಹೀಗೆಯೇ ಇರುತ್ತವೆ ಎಂದು ಹೇಳಲಾಗದು ಅದೇ ರೀತಿ ಇಲ್ಲೊಂದು ಮದ್ವೆಗೆ ಸಿನಿಮೀಯ ಟ್ವಿಸ್ಟ್ ಸಿಕ್ಕಿದೆ. ಇಂಡಿಯಾ ಟುಡೇ ವರದಿ ಪ್ರಕಾರ, ವಧುವಿನ ಸಹೋದರಿ ವರನಿಗೆ, ತನ್ನನ್ನು ಮದ್ವೆಯಾಗದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾಳೆ. ಇದರಿಂದ ಬೆದರಿದ ವರ ತನಗೆ ನಿಶ್ಚಯವಾಗಿದ್ದ ವಧುವನ್ನು ಬಿಟ್ಟು ಆಕೆಯ ಸಹೋದರಿಯನ್ನು ಮದ್ವೆಯಾಗಲು ನಿರ್ಧರಿಸಿದ್ದಾಳೆ.
ಬಿಸಿ ಪೂರಿ ಕೊಡದ್ದಕ್ಕೆ ಸಿಟ್ಟು, ಮದುವೆ ಮನೆಯಲ್ಲಿ ಅತಿಥಿಗಳ ರಂಪಾಟ!
ವರ ಬಿಹಾರದ ಛಪ್ರಾ ನಿವಾಸಿಯಾಗಿದ್ದು, ಬಿಹಾರದ (Bihar) ಸರನ್ (saran) ಪ್ರದೇಶದ ವಧುವಿನೊಂದಿಗೆ ಮೇ.2 ರಂದು ಮದ್ವೆ ನಿಶ್ಚಯವಾಗಿತ್ತು. ಅದರಂತೆ ಮದುವೆಯ ವಿಧಿವಿಧಾನಗಳೆಲ್ಲವೂ ಸಮುದಾಯದ ಸಂಪ್ರದಾಯಕ್ಕೆ ತಕ್ಕಂತೆ ನಡೆಯುತ್ತಿತ್ತು. ಆದರೆ ಈ ಮಧ್ಯೆ ವರನಿಗೆ ವಧುವಿನ ಸಹೋದರಿ ಕರೆ ಮಾಡಿದ್ದು, ಈ ಮದ್ವೆ ಮುಂದುವರೆದರೆ ತಾನು ಕಟ್ಟಡದಿಂದ ಬಿದ್ದು ಸಾಯುವುದಾಗಿ ಬೆದರಿಸಿದ್ದಾಳೆ.
ಇದರಿಂದಾಗಿ ವರ ಮದ್ವೆಯನ್ನೇ ಅರ್ಧದಲ್ಲೇ ಬಿಟ್ಟು ಹೊರಟು ಹೋಗಿದ್ದಾನೆ. ವಧುವಿನ ಕುತ್ತಿಗೆಗೆ ಹೂವಿನ ಹಾರ (Garland) ಹಾಕಿದ ವರ ಮದ್ವೆ ಮಂಟಪದಿಂದ ಹೊರಟು ಹೋಗಿದ್ದಾನೆ. ಇದಾದ ನಂತರ ಆತ ಕುಟುಂಬದವರಿಗೆ ಮಾಹಿತಿ ನೀಡಿದ್ದು, ತಾನು ಹಾಗೂ ವಧುವಿನ ಸಹೋದರಿ ಬಹಳ ಆತ್ಮೀಯವಾಗಿದ್ದು, ಪರಸ್ಪರ ಪ್ರೀತಿಸುತ್ತಿರುವುದಾಗಿ ಹೇಳಿಕೊಂಡಿದ್ದಾನೆ. ವರನ (Groom) ಈ ಮಾತು ಕೇಳಿ ಎರಡು ಕುಟುಂಬದವರು ಆಘಾತಕ್ಕೆ ಒಳಗಾಗಿದ್ದಾರೆ. ಅಲ್ಲದೇ ಇದು ದೊಡ್ಡ ವಾಗ್ವಾದಕ್ಕೆ ಕಾರಣವಾಗಿದೆ. ಎರಡು ಕುಟುಂಬದವರ ಮಧ್ಯೆ ದೊಡ್ಡ ಮಾತಿನ ಚಕಮಕಿಗೆ ಇದು ಕಾರಣವಾಗಿದೆ.
ಪರಿಸ್ಥಿತಿ ವಿಕೋಪಕ್ಕೆ ಹೋದಾಗ ಮದ್ವೆಗೆ ಬಂದಿದ್ದ ಅತಿಥಿಗಳು ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಂತರ ಮಂಜಿ ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ತೆರಳಿ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ. ನಂತರ ಎರಡೂ ಕುಟುಂಬಗಳು ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಲು ನಿರ್ಧರಿಸಿದ್ದಾರೆ. ಈ ವೇಳೆ ವರ, ತನಗೆ ಈ ಮದ್ವೆ ನಿಶ್ಚಯವಾಗುವ ಮೊದಲೇ ವಧುವಿನ (Bride) ಸಹೋದರಿಯ ಪರಿಚಯವಿತ್ತು ಎಂಬುದನ್ನು ಬಾಯ್ಬಿಟ್ಟಿದ್ದಾನೆ.
ನಾಯಿಗಾಗಿ ನಾಯಿ ಮಾಲೀಕನನ್ನೇ ಕಿಡ್ನ್ಯಾಪ್ ಮಾಡಿದ ಖದೀಮರು
ವರದಿಯ ಪ್ರಕಾರ, ವಧುವಿನ ಸಹೋದರಿ ಛಾಪ್ರಾದ (Chhapra) ಕಾಲೇಜಿನಲ್ಲಿ ಪಿಯುಸಿ ಓದುತ್ತಿದ್ದು, ಆಗಾಗ್ಗೆ ನಗರಕ್ಕೆ ಭೇಟಿ ನೀಡುತ್ತಿದ್ದರು ಮತ್ತು ಅಲ್ಲಿ ವರನನ್ನು ಭೇಟಿಯಾಗುತ್ತಿದ್ದರು. ಈ ವೇಳೆ ಇಬ್ಬರ ಮಧ್ಯೆ ಪ್ರೀತಿ ಮೂಡಿದ್ದು, ಇಬ್ಬರೂ ಫೋನ್ ನಂಬರ್ ವಿನಿಮಯ ಮಾಡಿಕೊಂಡಿದ್ದರು. ಇಬ್ಬರೂ ಗಂಟೆಗಟ್ಟಲೇ ಫೋನ್‌ನಲ್ಲಿ ಮಾತನಾಡುತ್ತಿದ್ದರು. ಆದರೆ ಈ ಮಧ್ಯೆ ವರನಿಗೆ ತನ್ನ ಸಹೋದರಿಯೊಂದಿಗೆ ಮದ್ವೆ ನಿಶ್ಚಯವಾಗಿರುವುದರಿಂದ ಅಸಮಾಧಾನಗೊಂಡಿದ್ದ ವಧು, ಒಂದೋ ಮದ್ವೆ ನಿಲ್ಲಿಸಬೇಕು ಅಥವಾ ತನ್ನನ್ನು ತಾನು ಕೊಂದುಕೊಳ್ಳಬೇಕು ಎಂದು ನಿರ್ಧರಿಸಿದ್ದಳು.
ಇತ್ತ ಮದ್ವೆ ದಿನ ವಧುವಿನ ಸಹೋದರಿಯ ಹಾಗೂ ವರನ ಕಿತಾಪತಿ ಅರಿತ ಎರಡು ಕುಟುಂಬಗಳು (Family) ನಂತರ ವಧುವಿನ ಸಹೋದರಿಯೊಂದಿಗೆಯೇ ವರನ ಮದ್ವೆ ಮಾಡಲು ನಿರ್ಧರಿಸಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.