
ನವದೆಹಲಿ (ಮೇ 7, 2023): ಸಲಿಂಗವಿವಾಹವನ್ನು ವಿರೋಧಿಸುವ ರಾಷ್ಟ್ರೀಯ ಸ್ವಯಂಸೇವಕ ಸಂಘ, ಈಗ ಸಲಿಂಗಕಾಮವನ್ನು ‘ಕಾಯಿಲೆ’ ಎಂದು ಕರೆದಿದೆ. ಸಲಿಂಗಕಾಮದ ಬಗ್ಗೆ ಸಮೀಕ್ಷೆ ನಡೆಸಿರುವ ಸಂಘದ ಮಹಿಳಾ ಘಟಕದ ಸಹವರ್ತಿ ಸಂಘಟನೆ ‘ಸಂವರ್ಧಿನಿ ನ್ಯಾಸ್’, ‘ಸಲಿಂಗ ವಿವಾಹಕ್ಕೆ ಕಾನೂನು ಮಾನ್ಯತೆ ದೊರಕಿದರೆ ಈ ಕಾಯಿಲೆ ಇನ್ನಷ್ಟು ಹೆಚ್ಚಲಿದೆ’ ಎಂದು ಆತಂಕ ವ್ಯಕ್ತಪಡಿಸಿದೆ.
ಆರೆಸ್ಸೆಸ್‌ನ ಸಹವರ್ತಿ ಸಂಘಟನೆ ‘ರಾಷ್ಟ್ರ ಸೇವಿಕಾ ಸಮಿತಿ’ಯ ಸಹಯೋಗಿ ಸಂಸ್ಥೆಯೇ ‘ಸಂವರ್ಧಿನಿ ನ್ಯಾಸ್’. ದೇಶದ ವಿವಿಧ ಭಾಗಗಳಲ್ಲಿ ಸಮೀಕ್ಷೆ ನಡೆಸಿ 318 ಪ್ರತಿಕ್ರಿಯೆಗಳನ್ನು ಸಂಗ್ರಹಿಸಿದೆ. ಇವರಲ್ಲಿ ಆಯುರ್ವೇದದಿಂದ ಹಿಡಿದು ಆಧುನಿಕ ವೈದ್ಯಕೀಯ ಪದ್ಧತಿ ಸೇರಿದಂತೆ 8 ವಿವಿಧ ವೈದ್ಯಕೀಯ ವಿಧಾನಗಳಲ್ಲಿ ಚಿಕಿತ್ಸೆ ನೀಡುವ ವೈದ್ಯರಿದ್ದಾರೆ.
ಇದನ್ನು ಓದಿ: ಸಲಿಂಗ ವಿವಾಹದ ವಿಚಾರಣೆ ಕೈಬಿಡಿ; ನಿರ್ಧಾರದ ಹೊಣೆಯನ್ನು ಸಂಸತ್ತಿಗೆ ಬಿಡಿ: ಬಾರ್ ಕೌನ್ಸಿಲ್ ಮನವಿ
ಪ್ರತಿಕ್ರಿಯೆ ನೀಡಿರುವ ವೈದ್ಯರಲ್ಲಿ ಶೇ.70 ಜನರು, ‘ಸಲಿಂಗಕಾಮ ಒಂದು ವ್ಯಾಧಿ’ ಎಂದು ಕರೆದಿದ್ದಾರೆ. ಇನ್ನು ಶೇ.83 ರಷ್ಟು ವೈದ್ಯರು, ‘ಸಲಿಂಗಕಾಮದ ಸಂಬಂಧಗಳಿಂದ ಲೈಂಗಿಕ ಸೋಂಕುಕಾರಕ ವ್ಯಾಧಿಗಳು ಅಧಿಕವಾಗುತ್ತವೆ’ ಎಂದಿದ್ದಾರೆ. ‘ಹೀಗಾಗಿ ಸಲಿಂಗಕಾಮವನ್ನು ಸಕ್ರಮಗೊಳಿಸಿದರೆ ಸಮಾಜದಲ್ಲಿ ವ್ಯಾಧಿ ಹೆಚ್ಚುತ್ತದೆ. ರೋಗಿಗಳನ್ನು ಗುಣಪಡಿಸಿ ಸಹಜ ಸ್ಥಿತಿಗೆ ತರುವುದು ಕಷ್ಟವಾಗುತ್ತದೆ. ಇಂಥ ಮಾನಸಿಕ ಅಸ್ವಸ್ಥ ರೋಗಿಗಳಿಗೆ ಸಲಹೆ (ಕೌನ್ಸೆಲಿಂಗ್) ನೀಡುವುದು ಉತ್ತಮ ವಿಧಾನ’ ಎಂದು ಅದು ಹೇಳಿದೆ.
‘ಸಲಿಂಗವಿವಾಹ ಸಕ್ರಮಗೊಳಿಸುವ ನಿರ್ಧಾರ ಕೈಗೊಳ್ಳುವ ಮುನ್ನ ಜನಾಭಿಪ್ರಾಯ ಸಂಗ್ರಹಿಸಬೇಕು’ ಎಂದಿರುವ ನ್ಯಾಸ್, ‘ಸಲಿಂಗಕಾಮಿ ಪೋಷಕರಿಗೆ ಮಕ್ಕಳನ್ನು ಸರಿಯಾಗಿ ಬೆಳೆಸಲು ಆಗುವುದಿಲ್ಲ ಎಂದು ಶೇ.67ರಷ್ಟು ವೈದ್ಯರು ಸಮೀಕ್ಷೆಯಲ್ಲಿ ಅಭಿಪ್ರಾಯಪಟ್ಟಿದ್ದಾರೆ’ ಎಂದಿದೆ.
ಇದನ್ನೂ ಓದಿ: ಸಲಿಂಗಿಗಳ ಮದುವೆಗೆ ಕೇಂದ್ರ ಸರ್ಕಾರದ ತೀವ್ರ ವಿರೋಧ: ಇಂದು ಸುಪ್ರೀಂನಲ್ಲಿ ಮಹತ್ವದ ವಿಚಾರಣೆ
ಸಲಿಂಗ ವಿವಾಹಕ್ಕೆ ಮಾನ್ಯತೆ ನೀಡುವ ವಿಚಾರ ಈಗ ಸುಪ್ರೀಂ ಕೋರ್ಟ್‌ನಲ್ಲಿದ್ದು, ಹಲವು ದಿನಗಳಿಂದ ವಿಚಾರಣೆ ನಡೆಯುತ್ತಿದೆ.M
ಇದನ್ನೂ ಓದಿ: ಸಲಿಂಗ ಸಂಬಂಧ ಭಾವನಾತ್ಮಕ ಬಾಂಧವ್ಯ: ಸುಪ್ರೀಂ ಸಿಜೆಐ
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.