Relationship Tips: ಪ್ರೇಮಿಗಳಿಗೆ ಮೈಕ್ರೋ ಡೇಟ್ಸ್ ಸೂಕ್ತ: ಒತ್ತಡವಿಲ್ಲದೆ ಭೇಟಿಯಾಗ್ಬೋದು

By Suvarna News  |  First Published May 6, 2023, 5:49 PM IST

ಪ್ರೀತಿಪಾತ್ರರು, ಪ್ರೇಮಿಯನ್ನು ಭೇಟಿಯಾಗಲು ವಾರಾಂತ್ಯವನ್ನೇ ಕಾಯಬೇಕಿಲ್ಲ. ಕಿರುಭೇಟಿಗಳು ಹೆಚ್ಚು ಉತ್ಸಾಹ ತುಂಬುತ್ತವೆ. ಪದೇ ಪದೆ ಸಿಗುವುದರಿಂದ ಆತ್ಮೀಯತೆಯೂ ಹೆಚ್ಚುತ್ತದೆ. ಸಂಬಂಧವೂ ಉತ್ತಮವಾಗುತ್ತದೆ.
 


ಗಡಿಬಿಡಿಯ ಜೀವನದಲ್ಲಿ ಸಂಬಂಧಗಳನ್ನು ಜೀವಂತವಾಗಿ ಉಳಿಸಿಕೊಳ್ಳುವುದು ಎಷ್ಟೋ ಬಾರಿ ಸವಾಲಾಗುತ್ತದೆ. ಪ್ರೀತಿಪಾತ್ರರು ಒಂದೇ ನಗರದಲ್ಲಿದ್ದರೂ ಸಿಗುವುದು ವಾರಕ್ಕೊಮ್ಮೆ, ತಿಂಗಳಿಗೊಮ್ಮೆ ಎನ್ನುವಂತಿರುವಾಗ ಒಂಟಿತನವೂ ಕಾಡಬಹುದು. ಅದರಲ್ಲೂ ಸ್ನೇಹಿತರು ಅಥವಾ ಬಾಯ್ ಫ್ರೆಂಡ್, ಗರ್ಲ್ ಫ್ರೆಂಡ್ ಗಳನ್ನು ಮೀಟ್ ಮಾಡಬೇಕೆಂದರೆ ಅದಕ್ಕಾಗಿಯೇ ಪ್ರತ್ಯೇಕವಾಗಿ ಪ್ಲಾನ್ ಮಾಡಬೇಕಾಗುತ್ತದೆ. ಕುಟುಂಬದ ಒತ್ತಡ, ಕೆಲಸದ ಸಮಯಗಳ ನಡುವೆ ಪ್ರೀತಿಪಾತ್ರರನ್ನು ಭೇಟಿ ಮಾಡುವುದಕ್ಕೂ ಸಾಧ್ಯವಾಗುವುದಿಲ್ಲ. ಸಾಮಾನ್ಯವಾಗಿ ಸ್ನೇಹಿತರು, ಪ್ರೇಮಿಗಳು ವಾರಾಂತ್ಯಗಳಲ್ಲಿ ಭೇಟಿಯಾಗಲು ಯೋಜನೆ ರೂಪಿಸಿಕೊಳ್ಳುವುದು ಸಾಮಾನ್ಯ. ಆದರೆ, ಕೆಲವೊಮ್ಮೆ ಅದು ಭಾರೀ ಒತ್ತಡವನ್ನೂ ತರಬಲ್ಲದು. ಹೀಗಾಗಿ, ಅದರ ಬದಲು ಕೆಲಸದ ದಿನಗಳ ಮಧ್ಯೆಯೇ ಯಾವಾಗಲಾದರೂ ಭೇಟಿಯಾಗುವುದು ಉತ್ತಮ. ಕಚೇರಿಯಿಂದ ಮನೆಗೆ ತೆರಳುವ ಮಾರ್ಗದಲ್ಲಿ, ಮಧ್ಯಾಹ್ನದ ಊಟ, ಸಂಜೆಯ ಕಾಫಿಗೆ ಪರಸ್ಪರ ಸಿಗುವಂತಾದರೆ ಎಷ್ಟು ಉತ್ತಮ. ಸ್ವಲ್ಪ ಧೈರ್ಯ ಹಾಗೂ ಉತ್ಸಾಹ ಬೆಳೆಸಿಕೊಂಡರೆ ಇದು ಸುಲಭವಾಗುತ್ತದೆ. ಅಷ್ಟಕ್ಕೂ ಹೀಗೆ ಆಗಾಗ ಭೇಟಿಯಾಗುವುದು ಭಾರೀ ಖುಷಿ ನೀಡುತ್ತದೆ. ಚಿಕ್ಕಪುಟ್ಟ ಭೇಟಿಗಳು ಪ್ರೀತಿಪಾತ್ರರು ಬೇಕಾದಾಗ ಲಭ್ಯವಾಗುವುದಿಲ್ಲ ಎನ್ನುವ ಕೊರಗನ್ನೂ ದೂರ ಮಾಡುತ್ತವೆ. ಇದರಿಂದ ಅನೇಕ ಲಾಭಗಳೂ ಇವೆ. 

•    ಪದೇ ಪದೆ ಸಂಪರ್ಕ (Frequent Connection)
ಪ್ರೀತಿಪಾತ್ರರು (Loved One) ಪದೇ ಪದೆ ಸಿಗುತ್ತಿದ್ದರೆ ಮನಸ್ಸಿಗೆ ಅದೇನೋ ಆಹ್ಲಾದವಿರುತ್ತದೆ. ಎಷ್ಟೇ ಒತ್ತಡದಲ್ಲೂ ಉತ್ಸಾಹ ಇರುತ್ತದೆ. ಅದರಲ್ಲೂ ಪ್ರೇಮಿಗಳು (Lovers) ವಾರಾಂತ್ಯದ ಪ್ಲಾನ್ (Weekend Plan) ಮಾಡಿಕೊಂಡು ಒತ್ತಡದಲ್ಲಿ (Stress) ಒದ್ದಾಡುವ ಬದಲು ವಾರದ ದಿನಗಳಲ್ಲೇ ಆಗಾಗ ಸಿಗುವ ಮೂಲಕ ಇನ್ನಷ್ಟು ಹೆಚ್ಚು ಖುಷಿಯಾಗಿರಲು ಸಾಧ್ಯ. ನಿಯಮಿತವಾಗಿ ಭೇಟಿಯಾಗುತ್ತಿದ್ದರೆ ಬಾಂಧವ್ಯ ದೃಢವಾಗುತ್ತದೆ. ಕಿರು ಅವಧಿಯ ಭೇಟಿಯಾಗಿರುವುದರಿಂದ (Micro Dates) ತೋರಿಕೆಗೆ ಹೆಚ್ಚು ಅವಕಾಶವಿರದೆ ನೀವು ನೀವಾಗಿ ಕಾಣಿಸಿಕೊಳ್ಳಲು ಸಾಧ್ಯ.

ಲವ್‌ ಮ್ಯಾರೇಜ್ ಆದ್ಮೇಲೆ ತಪ್ಪು ಮಾಡ್ಬಿಟ್ಟೆ ಅಂತನಿಸೋದು ಯಾಕೆ?

Tap to resize

Latest Videos

•    ಕಡಿಮೆ ಒತ್ತಡ (Low Stress)
ವಾರಾಂತ್ಯಗಳಲ್ಲಿ ಭೇಟಿಯಾಗುವ ಪ್ಲಾನ್ ಮಾಡುವುದು ಹೆಚ್ಚು ಒತ್ತಡದಾಯಕ. ಕುಟುಂಬ (Family) ಹಾಗೂ ಕಾರ್ಯಕ್ಕೆ ಸಂಬಂಧಿಸಿದ ಕಾರಣಗಳಿಂದ ಇದು ವ್ಯತ್ಯಾಸವಾಗಬಹುದು. ಆಗ ನಿಮ್ಮ ನಿರೀಕ್ಷೆ ತಲೆಕೆಳಗಾಗಿ ನಿರಾಶೆಯಾಗಬಹುದು. ಇಂತಹ ಸಂದರ್ಭಗಳು ಎಷ್ಟೋ ಬಾರಿ ಆತಂಕಕ್ಕೂ ಕಾರಣವಾಗುತ್ತವೆ. ಅದರ ಬದಲು, ಆಗಾಗ ಕಿರು ಭೇಟಿ ಮಾಡುವುದು ಒತ್ತಡ ಸೃಷ್ಟಿಸುವುದಿಲ್ಲ. ವೀಕೆಂಡಿಗಾಗಿ ಕಾಯುವ ತಾಪತ್ರಯವಿರುವುದಿಲ್ಲ. ಭಾರೀ ಯೋಜನೆ (Plan) ರೂಪಿಸಿಕೊಳ್ಳುವ ಪ್ರಮೇಯವೂ ಇರುವುದಿಲ್ಲ. ಹೆಚ್ಚಿನ ಸಿದ್ಧತೆಯೂ ಬೇಕಾಗಿಲ್ಲ. ಪ್ರೇಮಿಗಳಿಗೆ ಯಾರಿಗಾದರೂ ಸುಳ್ಳು ಹೇಳುವ, ಯಾರಾದರೂ ನೋಡುವ ಭಯವೂ ಇರುವುದಿಲ್ಲ.

•    ಭೇಟಿಯಲ್ಲಿ ವೆರೈಟಿ (Varieties)
ವಾರದ ದಿನಗಳಲ್ಲಿ ಸಂಜೆಯೋ, ಮಧ್ಯಾಹ್ನಕ್ಕೋ ಭೇಟಿ (Meet) ಮಾಡುತ್ತಿರುವಾಗ ವಿಭಿನ್ನತೆ ಇರುತ್ತದೆ. ವಿಭಿನ್ನ ಸ್ಥಳಗಳಲ್ಲಿ ನಿಮ್ಮ ವರ್ತನೆ ಬದಲಾಗುತ್ತದೆ. ಪ್ರೇಮಿಗಳು ಸಾಮಾನ್ಯವಾಗಿ ಭಾನುವಾರ, ಶನಿವಾರ ಭೇಟಿಯಾಗಲು ಯೋಜನೆ ರೂಪಿಸಿಕೊಂಡಾಗ ವಿಭಿನ್ನತೆಗೆ ಅವಕಾಶವಿರುವುದಿಲ್ಲ. ಬದಲಿಗೆ, ನಿಮಗೆ ಇಷ್ಟವಾಗುವ ಸ್ಥಳಗಳಲ್ಲಿ ಆಗಾಗ ಸಿಗುವುದರಿಂದ ವಿಭಿನ್ನತೆ ಹೆಚ್ಚುತ್ತದೆ. ಆರ್ಟ್ ಎಕ್ಸಿಬಿಷನ್ (Art Exhibition), ರೆಸ್ಟೋರೆಂಟ್, ಸಂಗೀತ ಕಾರ್ಯಕ್ರಮಗಳಿಗೆ (Music Concert) ಒಟ್ಟಾಗಿ ತೆರಳುವುದರಿಂದ ಹೆಚ್ಚು ಅರ್ಥ ಮಾಡಿಕೊಳ್ಳಲು ಸಾಧ್ಯವಾಗುತ್ತದೆ.

•    ಬ್ಯುಸಿ ಶೆಡ್ಯೂಲ್ (Busy Schedule) ಗೆ ಉತ್ತಮ
ನೀವು ಕಾರ್ಯಬಾಹುಳ್ಯದ ಒತ್ತಡದಲ್ಲಿ ಇರುವಾಗ ಕೆಲವೊಮ್ಮೆ ಗೆಳತಿ-ಗೆಳೆಯನ ಒತ್ತಾಯಕ್ಕೆ ಅವರನ್ನು ಮೀಟ್ ಮಾಡಲು ಮುಂದಾಗುವ ಸಾಧ್ಯತೆಯೇ ಹೆಚ್ಚು. ಅನಿವಾರ್ಯವಾಗಿ ಭೇಟಿಯಾಗಬೇಕು ಎಂದಾಗ ಮನದಲ್ಲಿ ಖುಷಿ ಕಡಿಮೆ. ಅಂತಹ ಸ್ಥಿತಿ ನಿರ್ಮಿಸಿಕೊಳ್ಳುವ ಬದಲು ಕಿರು ಭೇಟಿಗಳು ಒತ್ತಡದಲ್ಲೂ ಸಾಧ್ಯವಾಗುವುದರಿಂದ ಚೈತನ್ಯದಾಯಕವಾಗಿ ಪರಿಣಮಿಸುತ್ತವೆ. 

ನೀವೇನಾಗ್ತೀರ ಅನ್ನೋದು ನಿಮ್ಮ ಫ್ರೆಂಡ್ ನೋಡಿ ಹೇಳಬಹುದು..!

•    ಬೇರೆಯ ಕಾರ್ಯಕ್ಕೂ ಸಮಯ (Time) 
ನೀವು ಪ್ರತಿ ವಾರ ಪ್ರೇಮಿಯನ್ನು ಭೇಟಿಯಾಗುವುದರಲ್ಲೇ ಇದ್ದರೆ ಉಳಿದ ಕೆಲಸಗಳಿಗೆ, ಕುಟುಂಬಕ್ಕೆ, ಸ್ನೇಹಿತರಿಗೆ ಸಮಯ ನೀಡುವುದು ಯಾವಾಗ? ಪ್ರೀತಿ-ಪ್ರೇಮದ ಜತೆ ಸ್ನೇಹ (Friendship), ಸಂಬಂಧಗಳೂ (Relationship) ಅಗತ್ಯ. ನಿಮಗೆ ಸಮಯವಿದ್ದರೆ ಈ ಎಲ್ಲದಕ್ಕೂ ಸಮಯ ನೀಡಲು ಅನುಕೂಲವಾಗುತ್ತದೆ. 
 

click me!