Bigg Boss ಖ್ಯಾತಿಯ ನಟಿ ಸ್ಪಂದನಾ ಸೋಮಣ್ಣ ಹೂವು ಮುಡಿಸುವ ಶಾಸ್ತ್ರ: ಫೋಟೋಗಳು ವೈರಲ್​- ಮದುವೆ ಯಾವಾಗ

Published : Nov 04, 2026, 07:43 PM IST
Spandana Somanna and Varun Muniraju

ಸಾರಾಂಶ

ಬಿಗ್ ಬಾಸ್ ಖ್ಯಾತಿಯ ನಟಿ ಸ್ಪಂದನಾ ಸೋಮಣ್ಣ ತಮ್ಮ 6 ವರ್ಷಗಳ ಪ್ರೇಮಕಥೆಯನ್ನು ಹಂಚಿಕೊಂಡಿದ್ದು, ಶೀಘ್ರದಲ್ಲೇ ವರುಣ್ ಮುನಿರಾಜು ಅವರೊಂದಿಗೆ ಹಸೆಮಣೆ ಏರಲಿದ್ದಾರೆ. ಮದುವೆ ತಯಾರಿ ನಡೆದಿದ್ದು, ಹೂವು ಮುಡಿಸುವ ಶಾಸ್ತ್ರ ಎಂದು ಭಾವಿ ಪತಿಯ ಜೊತೆಗೆ ಕೆಲವೊಂದು ಫೋಟೋಗಳನ್ನು ಶೇರ್​ ಮಾಡಿಕೊಂಡಿದ್ದಾರೆ.

ಬೆಂಗಳೂರು: Bigg Boss ಖ್ಯಾತಿಯ ನಟಿ ಸ್ಪಂದನಾ ಸೋಮಣ್ಣ ತಮ್ಮ 6 ವರ್ಷಗಳ ಪ್ರೇಮಕಥೆಯನ್ನು ಹಂಚಿಕೊಂಡಿದ್ದು, ಶೀಘ್ರದಲ್ಲೇ ವರುಣ್ ಮುನಿರಾಜು ಅವರೊಂದಿಗೆ ಹಸೆಮಣೆ ಏರಲಿದ್ದಾರೆ. ಮದುವೆ ತಯಾರಿಗಾಗಿ ಸದ್ಯ ಯಾವುದೇ ಹೊಸ ಪ್ರಾಜೆಕ್ಟ್ ಒಪ್ಪಿಕೊಳ್ಳದ ಅವರು, ವಿವಾಹದ ಬಳಿಕ ಫ್ಯಾಷನ್ ಕ್ಷೇತ್ರದಲ್ಲಿ ಬ್ಯುಸಿನೆಸ್ ಮಾಡುವ ಪ್ಲ್ಯಾನ್ ಹೊಂದಿದ್ದಾರೆ. ಸ್ಪಂದನಾ ಸೋಮಣ್ಣ (Spandana Somanna) ಈಚೆಗೆ, ತಮ್ಮ ಮದುವೆಯ ಕುರಿತು ಎದ್ದಿದ್ದ ಎಲ್ಲಾ ಊಹಾಪೋಹಗಳಿಗೆ ಮತ್ತು ಸಸ್ಪೆನ್ಸ್‌ಗಳಿಗೆ ತೆರೆ ಎಳೆದಿದ್ದರು. ಇದೀಗ ತಮ್ಮ ಭಾವಿ ಪತಿ ವರುಣ್‌ರನ್ನು ಅಧಿಕೃತವಾಗಿ ಸೋಶಿಯಲ್‌ ಮೀಡಿಯಾ ಮೂಲಕ ಈಚೆಗಷ್ಟೇ ಪರಿಚಯಿಸಿದ್ದರು. ವರುಣ್ ಮುನಿರಾಜು (@varun_muniraju) ಎಂಬುವವರನ್ನೇ ಸ್ಪಂದನಾ ಶೀಘ್ರದಲ್ಲೇ ಮದುವೆಯಾಗುತ್ತಿದ್ದು, ಇಬ್ಬರೂ ಆರು ವರ್ಷಗಳಿಂದ ಪ್ರೀತಿಸುತ್ತಿದ್ದರು ಎಂಬುದನ್ನು ಬಹಿರಂಗಪಡಿಸಿದ್ದಾರೆ. ಸೋಶಿಯಲ್‌ ಮೀಡಿಯಾದಲ್ಲಿ ವರುಣ್ ಜೊತೆಗಿನ ರೋಮ್ಯಾಂಟಿಕ್ ಫೋಟೋಗಳನ್ನು ಶೇರ್ ಮಾಡಿರುವ ಸ್ಪಂದನಾ, ತಮಗಿಬ್ಬರ ನಡುವಿನ 6 ವರ್ಷಗಳ ಸುದೀರ್ಘ ಕಷ್ಟ-ಸುಖಗಳ ಪ್ರೇಮ ಪಯಣವನ್ನು ಕಣ್ಣಿಗೆ ಕಟ್ಟುವಂತೆ ಬರೆದುಕೊಂಡಿದ್ದರು.

ಇದೀಗ ನಟಿ ಸ್ಪಂದನಾ, ಭಾವಿಪತಿಯ ಜೊತೆಗಿನ ಫೋಟೋಸ್​ ಶೇರ್​ ಮಾಡಿಕೊಂಡಿದ್ದಾರೆ. ಇದರಲ್ಲಿ ಅವರು ಹೂವು ಮುಡಿಸುವ ಶಾಸ್ತ್ರ ಎಂದು ಬರೆದಿದ್ದಾರೆ. ಆದರೆ ಹೂವು ಮುಡಿಸುವ ಶಾಸ್ತ್ರದ ಫೋಟೋಗಳು ಇದರಲ್ಲಿ ಇಲ್ಲ. ಬದಲಿಗೆ ಭಾವಿ ಪತಿಯ ಜೊತೆಗಿನ ಸುಮಧುರ ಕ್ಷಣಗಳನ್ನು ಶೇರ್​ ಮಾಡಿಕೊಂಡಿದ್ದಾರೆ. ಅಷ್ಟಕ್ಕೂ ಈ ಹಿಂದೆ, ನಟಿ, ತಮ್ಮ ಲವ್​ ಸ್ಟೋರಿ ಬಗ್ಗೆ ಹೇಳಿದ್ದರು. ತಾವಿಬ್ಬರೂ ಒಂದೇ ಕಾಲೇಜಿನಲ್ಲಿ ಓದಿದವರು. ಆದರೆ ಕಾಲೇಜಿನ ಟೈಮ್​ನಲ್ಲಿ ಮಾತನಾಡಿರಲಿಲ್ಲ. ಆದರೆ ಕೋವಿಡ್​ ಟೈಮ್​ನಲ್ಲಿ ಮಾತನಾಡಿದ್ವಿ. ಅಲ್ಲಿಂದಲೇ ಲವ್​ ಶುರುವಾಯ್ತು ಎಂದಿದ್ದಾರೆ. ಆ ಸಮಯದಲ್ಲಿ ನಾನು ಇಷ್ಟು ಫೇಮಸ್​ ಆಗಿರಲಿಲ್ಲ. ಸೀರಿಯಲ್​ ಹುಡುಕಾಟದಲ್ಲಿ ಇದ್ದೆ. ಆಡಿಷನ್​ ಕೊಡುತ್ತಿದ್ದೆ. ಸ್ಟ್ಯಾಂಡ್​ ಆಗಿರಲಿಲ್ಲ. ಆ ಟೈಮ್​ನಲ್ಲಿ ಲವ್​ ಆಗಿದ್ದು ಎಂದು ತಮ್ಮ ಲವ್​ಸ್ಟೋರಿ ಹಂಚಿಕೊಂಡಿದ್ದರು. ಅವನು ಕೂಡ ಲಂಡನ್​ನಲ್ಲಿ ಎಂಎಸ್​ ಮಾಡಿದ್ದ. ಕೆಲಸ ಸಿಕ್ಕರೂ ಕೋವಿಡ್​ನಿಂದ ಹೋಗಲು ಆಗಿರಲಿಲ್ಲ. ಲಂಡನ್​ನಲ್ಲಿಯೇ ಇರಬೇಕೋ, ಬೇರೆ ಕಂಟ್ರಿಗೆ ಹೋಗಬೇಕೋ ಅಥ್ವಾ ಭಾರತಕ್ಕೆ ಬರಬೇಕೋ ಎನ್ನುವ ಗೊಂದಲದಲ್ಲಿ ಇದ್ದ. ಹೀಗೆ ಆರು ವರ್ಷ ನಮ್ಮ ಲವ್​ಸ್ಟೋರಿ ನಡೆಯುತ್ತಿದೆ ಎಂದಿದ್ದರು.

ಮದುವೆ ಆದ ಮೇಲೆ ಏನು ಪ್ಲ್ಯಾನ್​?

ಇದೀಗ ನಟಿ, ಮದುವೆಯಾದ ಮೇಲಿನ ಪ್ಲ್ಯಾನ್​ ಬಗ್ಗೆ ಮಾತನಾಡಿದ್ದಾರೆ. ಮದುವೆ ಯಾವಾಗ ಎನ್ನುವ ವಿಷಯವನ್ನು ಅವರು ರಿವೀಲ್​ ಮಾಡಲಿಲ್ಲ. ಆದರೆ ಮದುವೆಯ ನಂತರ ಬಿಜಿನೆಸ್​ ಮಾಡುವ ಪ್ಲ್ಯಾನ್​ ಇದೆ. ಅದರಲ್ಲಿಯೂ ಫ್ಯಾಷನ್​ ಕ್ಷೇತ್ರದಲ್ಲಿ ತಮಗೆ ಅಪಾರ ಆಸಕ್ತಿ ಇದ್ದು, ಅದರಲ್ಲಿ ಸಾಕಷ್ಟು ತಿಳಿವಳಿಕೆ ಕೂಡ ಇರುವ ಕಾರಣದಿಂದ, ಅದರಲ್ಲಿಯೇ ಮುಂದುವರೆಯುವ ಇಷ್ಟ ಇದೆ ಎಂದು ನಟಿ ಸ್ಪಂದನಾ ಸೋಮಣ್ಣ (Bigg Boss Spandana Somanna) sumantvkannada ಚಾನೆಲ್​ಗೆ ನೀಡಿರುವ ಸಂದರ್ಶನದಲ್ಲಿ ವಿವರಿಸಿದ್ದಾರೆ. ಹಾಗೆಂದು ನಟನೆ ಬಿಡುತ್ತೇನೆ ಎಂದು ಅರ್ಥವಲ್ಲ, ಒಳ್ಳೆಯ ಪ್ರಾಜೆಕ್ಟ್​ ಸಿಕ್ಕರೆ ಅದನ್ನೂ ಮಾಡುತ್ತೇನೆ ಎನ್ನುವ ಮೂಲಕ ಅಭಿಮಾನಿಗಳಿಗೆ ಗುಡ್​ನ್ಯೂಸ್​ ಕೊಟ್ಟಿದ್ದಾರೆ.

ಮದುವೆ ತಯಾರಿ

ಲವ್​ ಆಗಿ ಆರು ವರ್ಷವಾಯ್ತು. ಆದರೆ ನಾವು ಸರಿಯಾಗಿ ಟೈಮ್​ ಸ್ಪೆಂಡ್​ ಮಾಡಲಿಲ್ಲ. ಸಿಕ್ಕಾಪಟ್ಟೆ ಪ್ರಾಜೆಕ್ಟ್​ಗಳಲ್ಲಿ ಬಿಜಿ ಇದ್ದೆ. ಆದ್ದರಿಂದ ಈಗ ಹೊಸ ಯಾವುದೇ ಪ್ರಾಜೆಕ್ಟ್​ ಒಪ್ಪಿಕೊಳ್ತಿಲ್ಲ. ಮದುವೆಯ ತಯಾರಿ ಮಾಡಿಕೊಳ್ಳಬೇಕಿದೆ. ಒಂದು ಸೀರಿಯಲ್​ ಒಪ್ಪಿಕೊಂಡರೆ, ತುಂಬಾ ಪ್ರಿಪರೇಷನ್​ ಮಾಡಿಕೊಳ್ಳಬೇಕಾಗುತ್ತದೆ. ಮದುವೆ ತಯಾರಿಗೆ ಆಗುವುದಿಲ್ಲ. ಆದ್ದರಿಂದ ಸದ್ಯ ಅದನ್ನು ಒಪ್ಪಿಕೊಂಡಿಲ್ಲವಷ್ಟೇ ಎಂದಿದ್ದಾರೆ ಸ್ಪಂದನಾ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಫ್ಯಾನ್ಸ್​ಗೆ ಗುಡ್​ನ್ಯೂಸ್​ ಕೊಟ್ಟ 'ಸತ್ಯ' ಸೀರಿಯಲ್​ ನಟಿ ಪ್ರಿಯಾಂಕಾ- ಬಹು ವರ್ಷಗಳ ಕನಸು ನನಸು
ನಾವು ಮದುವೆಯಾಗುತ್ತಿದ್ದೇವೆ.. ಅಧಿಕೃತವಾಗಿ ಘೋಷಿಸಿದ ಬಿಗ್‌ಬಾಸ್‌ ಜೋಡಿ ಐಶ್ವರ್ಯಾ ಸಿಂದೋಗಿ, ಶಿಶಿರ್‌ ಶಾಸ್ತ್ರಿ