ನಾವು ಮದುವೆಯಾಗುತ್ತಿದ್ದೇವೆ.. ಅಧಿಕೃತವಾಗಿ ಘೋಷಿಸಿದ ಬಿಗ್‌ಬಾಸ್‌ ಜೋಡಿ ಐಶ್ವರ್ಯಾ ಸಿಂದೋಗಿ, ಶಿಶಿರ್‌ ಶಾಸ್ತ್ರಿ

Published : Nov 04, 2026, 06:55 PM IST
Aishwarya Sindogi  Shishir Shastri

ಸಾರಾಂಶ

ಬಿಗ್‌ಬಾಸ್ ಸೀಸನ್ 11ರ ಸ್ಪರ್ಧಿಗಳಾದ ಶಿಶಿರ್ ಶಾಸ್ತ್ರಿ ಮತ್ತು ಐಶ್ವರ್ಯಾ ಸಿಂದೋಗಿ ತಾವು ಶೀಘ್ರದಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿರುವುದಾಗಿ ಘೋಷಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಂಚಿಕೊಂಡಿರುವ ಈ ಜೋಡಿ, ತಮ್ಮ ಮೇಲಿದ್ದ ಎಲ್ಲಾ ವದಂತಿಗಳಿಗೆ ಸ್ಪಷ್ಟನೆ ನೀಡಿದ್ದಾರೆ.

ಬೆಂಗಳೂರು (ನ.4): ಬಿಗ್‌ಬಾಸ್‌ ಸೀಸನ್‌ 11ರಲ್ಲಿ ಸ್ಪರ್ಧಿಯಾಗಿ ಭಾಗವಹಿಸಿ ಅಲ್ಲಿಂದಲೇ ಪರಿಚಯವಾಗಿದ್ದ ಕಿರುತೆರೆ ನಟ ಶಿಶಿರ್‌ ಶಾಸ್ತ್ರಿ ಹಾಗೂ ನಟಿ ಐಶ್ವರ್ಯಾ ಸಿಂದೋಗಿ ತಮ್ಮ ಅಭಿಮಾನಿಗಳಿಗೆ ಗುಡ್‌ನ್ಯೂಸ್‌ ನೀಡಿದ್ದಾರೆ. ಬಿಗ್‌ಬಾಸ್‌ ಶೋನಲ್ಲಿ ಮೊದಲಿಗೆ ಪರಿಚಯವಾಗಿದ್ದ ಜೋಡಿ ಅಲ್ಲಿಯೇ ಆತ್ಮೀಯರಾಗಿದ್ದರು. ನಂತರ ತಾವಿಬ್ಬರು ಸ್ನೇಹಿತರು ಎಂದೇ ತಿರುಗಾಡಿಕೊಂಡಿದ್ದ ಈ ಜೋಡಿ ಈಗ ತಮ್ಮ ಸಂಬಂಧಕ್ಕೆ ಪ್ರೀತಿಯ ಮುದ್ರೆ ಒತ್ತಲು ಸಜ್ಜಾಗಿದ್ದಾರೆ. ಸೋಶಿಯಲ್‌ ಮೀಡಿಯಾದಲ್ಲಿ ಆಕರ್ಷಕ ವಿಡಿಯೋ ಮೂಲಕ ಇಷ್ಟು ದಿನಗಳ ಕಾಲ ಬಂದ ಟ್ರೋಲ್‌ಗೆ ಉತ್ತರ ನೀಡುತ್ತಲೇ ಶೀಘ್ರದಲ್ಲೇ ತಾವು ಜೀವನ ಅನ್ನೋ ದೋಣಿಯನ್ನ ಜಂಟಿಯಾಗಿ ಏರಲು ರೆಡಿಯಾಗುತ್ತಿದ್ದೇವೆ ಎಂದು ಹೇಳಿದ್ದಾರೆ.

'ಊಹೆಗಳ ಹಿಂದೆ ಒಂದು ಕಥೆಯಿತ್ತು. ನಗುವಿನ ಹಿಂದೆ ಒಂದು ಪ್ರೀತಿಯಿತ್ತು.Comments ಹಿಂದೆ ನಿಮ್ಮ ಕುತೂಹಲವಿತ್ತು. ಇಂದು ಆ ಕಥೆಗೆ ಒಂದು ಸುಂದರವಾದ ಹೆಸರಿದೆ — AISHIR. ಇಷ್ಟು ದಿನ ನಮ್ಮ ಕಥೆಯನ್ನು ನಿಮ್ಮದೇ ಕಥೆಯಂತೆ ಪ್ರೀತಿಸಿದ ಎಲ್ಲರಿಗೂ ಧನ್ಯವಾದಗಳು. From all the speculations to a lifetime of celebrations. Not just a rumour anymore. It’s our forever beginning' ಎಂದು ಅವರು ತಮ್ಮ ವಿಡಿಯೋಗೆ ಬರೆದುಕೊಂಡಿದ್ದಾರೆ.

ಇನ್ನು ಸ್ಪೆಷಲ್‌ ವಿಡಿಯೋ ಮೂಲಕ ತಾವು ಜೊತೆಯಾಗುತ್ತಿರುವುದನ್ನು ತಿಳಿಸಿದ್ದು ಈ ವಿಡಿಯೋದಲ್ಲಿ, 'ಹೋ ಅಬ್ಬಬ್ಬಾ ಜನ comment section ಅಲ್ಲಿ ನಮ್ಮ life script ಬರೆದುಬಿಟ್ಟಿದ್ದಾರೆ. ಹೌದಾ, ಏನೇನು ಬರೆದಿದ್ದಾರೆ ನೋಡ್ಕೊಂಡು ಬರೋಣ. ಇವರಿಬ್ಬರು ಬಿಗ್ ಬಾಸ್ ನ ಮುದ್ದಾದ ಜೋಡಿ ಅಲ್ಲ. Thank you so much We love you,, ಇವರಿಬ್ರು ಟ್ರಿಪ್ ಹೊಡೆದೆ ಹಾಗೋಯ್ತು, ಮದುವೆ ಹಾಗ್ತಾರೋ ಹಾಗಲ್ವೋ. ಸ್ವಲ್ಪ ದಿನ ಅಷ್ಟೇ ಆಮೇಲೆ breakup ಆಗುತ್ತೆ. ಇದ್ಯಾವ್ದೋ tragedy ending ಕೊಡ್ತಾ ಇದ್ದಾರೆ. ಇದು content ಗೋಸ್ಕರ ಬರೀ ಶೋಕಿ. Correct ಸಿನಿಮಾಗಳಿಗೆ content king' ಎಂದು ಹೇಳಿದ್ದಾರೆ.

ತಂಗಿ ಅಂತಾ ಹೇಳಿದ್ದ ವಿಡಿಯೋಗೂ ಸ್ಪಷ್ಟನೆ

ಇನ್ನು ಇದೇ ವಿಡಿಯೋದಲ್ಲಿ ಐಶ್ವರ್ಯಾ ಸಿಂದೋಗಿ ಅವರನ್ನು ತಂಗಿ ಅಂತಾ ಹೇಳಿದ್ದ ಮಾತಿಗೂ ಶಿಶಿರ್‌ ಸ್ಪಷ್ಟನೆ ನೀಡಿದ್ದಾರೆ. ಇದರ ಪ್ರಕಾರ, ಅಂದು ವೈರಲ್‌ ಆಗಿರವ ವಿಡಿಯೋದ ಪೂರ್ಣ ಅಂಶವನ್ನು ಹಾಕಿದ್ದು, ಅಲ್ಲಿ ತಾವು ಕೇಳುವ ಪ್ರರ್ಶನೆಗೆ ತಪ್ಪು ಉತ್ತರವನ್ನು ಮಾತ್ರವೇ ನೀಡ್ಬೇಕು ಅಂತಾ ನಿರೂಪಕಿ ಹೇಳಿದ್ದರು. ಹಾಗಾಗಿ ಅಲ್ಲಿ ಐಶ್ವರ್ಯಾ ಸಿಂದೋಗಿ ಏನಾಗ್ಬೇಕು ಅನ್ನೋ ಪ್ರಶ್ನೆಗೆ ತಂಗಿ ಆಗ್ಬೇಕು ಅಂತಾ ಹೇಳಿದ್ದೆ ಅನ್ನೋದನ್ನೂ ತಿಳಿಸಿದ್ದಾರೆ.

ಆ ಬಳಿಕ ಮಾತನಾಡಿರುವ ಈ ಜೋಡಿ, 'ಜನರಿಗೆ ನಾವು ಅಣ್ಣ ತಂಗಿ ಆಗಿದ್ದೀವಿ, lovers ಆಗಿದ್ದೀವಿ, friendship ಅಲ್ಲಿದ್ದೀವಿ, situation ship ಅಲ್ಲಿದ್ದೀವಿ, Titanic ship ಅಲ್ಲಿದ್ದೀವಿ. ಆದ್ರೆ ನಾವು ಯಾವ ship ಅಲ್ಲೂ ಇಲ್ಲ. ನಾವು life ಅನ್ನೋ ship ನ ಜೊತೆಗೆ ಹತ್ತುತ್ತಾ ಇದ್ದೀವಿ. ಸೊ ಕೇಳ್ತಾ ಇರೋರಿಗೆ, troll ಮಾಡ್ತ ಇರೋರಿಗೆ, ಬೈತಾ ಇರೋರಿಗೆ. ಹೇಳ್ತಾ ಇರೋರಿಗೆ, prediction ಮಾಡ್ತಾ ಇರೋರಿಗೆ, ಹಾಗೆ ಊಹೆ ಮಾಡ್ತಾ ಇರೋರಿಗೆ. ಮನಸ್ಸಿಂದ ಹರಸ್ತಾ ಇರೋರಿಗೆ. ಪ್ರೀತಿ ಕೊಡ್ತಾ ಇರೋರಿಗೆ We are getting engaged. ಇನ್ ಮುಂದೆ ನಿಮ್ಮ AISHIR ಬರಿ ಹ್ಯಾಶ್‌ಟ್ಯಾಗ್‌ ಅಷ್ಟೇ ಅಲ್ಲ. ಸೊ ಈಗ ಎಲ್ಲರಿಗೂ ಒಂದು clarity ಸಿಕ್ಕಿದೆ ಅಂತ ಅನ್ಕೊಂಡಿದ್ದೀವಿ ಎಂದು ಹೇಳಿದ್ದಾರೆ.

ಮದುವೆ ದಿನಾಂಕ ತಿಳಿಸದ ಜೋಡಿ

ಇನ್ನು ವಿಡಿಯೋದ ಕೊನೆಯಲ್ಲಿ ಮದುವೆ ದಿನಾಂಕದ ಬಗ್ಗೆ ಇರುವ ಗೊಂದಲ್ಲೂ ತೆರೆ ತೆಳೆದಿದ್ದಾರೆ. ಇನ್ನು ಜನ ನಮ್ಮ ಮದುವೆ ಯಾವಾಗ ಅಂತಾ ಕೇಳ್ತಾರೆ ಅನ್ನೋದಕ್ಕೆ. ಎಲ್ಲವನ್ನೂ ಒಂದೊಂದಾಗಿಯೇ ಹೇಳೋಣ. ನಿಮ್ಮ AISHIR ಪ್ರಯಾಣ ಇಲ್ಲಿಗೆ ಕ್ಲೋಸ್‌ ಆಗಿಲ್ಲ. ಇಲ್ಲಿಂದಲೇ ಆರಂಭ ಎಂದು ತಿಳಿಸಿದ್ದಾರೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ನನ್​ ಹೆಂಡ್ತಿಗೆ ಈಗ್ಲೇ 7 ಮದ್ವೆಯಾಗಿದೆ, ಕಾಪಾಡಿ ಎಂದು ಹೈಕೋರ್ಟ್​ಗೆ ಬಂದ ಪತಿ- ಏನಿದು ಶಾಕಿಂಗ್​ ಸ್ಟೋರಿ
ಅದ್ಧೂರಿ ಮಂಟಪವಿಲ್ಲ, ಡೆಸ್ಟಿನೇಷನ್ ವೆಡ್ಡಿಂಗ್ ಇಲ್ಲ! 10 ಸಾವಿರ ಗೋವುಗಳ ನಡುವೆ ಮದುವೆಯಾಗಲು ಮುಂದಾದ ಜೋಡಿ!