ಬೆನ್ನು ನೋವಾ? ಯಾವುದ್ಯಾವುದೋ ಭಂಗಿ ಸೂಟ್ ಆಗೋಲ್ಲ

By Suvarna News  |  First Published Aug 17, 2022, 1:23 PM IST

ವಿಪರೀತ ಬೆನ್ನು ನೋವು ಸೆಕ್ಸ್ ಸುಖಕ್ಕೆ ಮುಳ್ಳಾಗಿರುತ್ತದೆ. ಬೆನ್ನು ನೋವಿನ ಕಾರಣಕ್ಕೆ ಕೆಲವರು ಶಾರೀರಿಕ ಸಂಬಂಧ ಬೆಳೆಸುವ ಸಹವಾಸಕ್ಕೆ ಹೋಗೋದಿಲ್ಲ. ಆದ್ರೆ ಬೆನ್ನು ನೋವಿನ ಮಧ್ಯೆಯೇ ನೀವು ಸಂಭೋಗ ಬೆಳೆಸಬೇಕೆಂದ್ರೆ ಕೆಲ ಟಿಪ್ಸ್ ಪಾಲನೆ ಮಾಡ್ಬೇಕು.
 


ಸೆಕ್ಸ್ ದೈಹಿಕ ಮತ್ತು ಮಾನಸಿಕ ಆನಂದವನ್ನು ನೀಡುವಂತಹದ್ದು. ಸಂಭೋಗದಿಂದ ಮನಸ್ಸು ರಿಲ್ಯಾಕ್ಸ್ ಆಗುತ್ತದೆ. ದೇಹ ಹಗುರವಾಗುತ್ತದೆ. ಸಂಭೋಗ ಸಂಗಾತಿ ಮಧ್ಯೆ ಸಂಬಂಧವನ್ನು ಮತ್ತಷ್ಟು ಹತ್ತಿರಕ್ಕೆ ತರುತ್ತದೆ. ಸಂಭೋಗ ಸಾಕಷ್ಟು ಸುಖವನ್ನು ನೀಡುವ ಕಾರಣಕ್ಕೆ ಜನರು ಎಲ್ಲ ನೋವುಗಳನ್ನು ಮರೆತು ಶಾರೀರಿಕ ಸಂಬಂಧ ಬೆಳೆಸ್ತಾರೆ. ಆದ್ರೆ ಕೆಲವೊಮ್ಮೆ ಉತ್ಸಾಹದಿಂದ ಮಾಡಿದ ಕೆಲ ಸೆಕ್ಸ್ ಭಂಗಿಗಳು ಯಡವಟ್ಟು ಮಾಡುತ್ತವೆ. ಸೊಂಟ, ಬೆನ್ನು ನೋವಿಗೆ ಕಾರಣವಾಗುತ್ತದೆ. ಬರೀ ಶಾರೀರಿಕ ಸಂಬಂಧ ಮಾತ್ರವಲ್ಲ ಬೇರೆ ಬೇರೆ ಕಾರಣಕ್ಕೆ ಇತ್ತೀಚಿನ ದಿನಗಳಲ್ಲಿ ಬೆನ್ನು ನೋವು ಸಾಮಾನ್ಯ ಎನ್ನುವಂತಾಗಿದೆ. ಈ ಬೆನ್ನು ನೋವಿನಿಂದಾಗಿ ಕೆಲವರು ಸೆಕ್ಸ್ ನಿಂದ ದೂರ ಸರಿಯುತ್ತಾರೆ. ಸಂಭೋಗದ ವೇಳೆ ನೋವು ಹೆಚ್ಚಾಗುವುದು ಇದಕ್ಕೆ ಕಾರಣವಾಗಿದೆ. ಕೇವಲ ಬೆನ್ನು ನೋವಿನ ಕಾರಣಕ್ಕೆ ನೀವು ಶಾರೀರಿಕ ಸಂಬಂಧದಿಂದ ದೂರ ಉಳಿಯಬೇಕಾಗಿಲ್ಲ. ಶಾರೀರಿಕ ಸಂಬಂಧ ಸದಾ ಉತ್ಸಾಹದಿಂದ ಕೂಡಿರಬೇಕೆಂದ್ರೆ ನಿಮ್ಮ ಭಂಗಿಗಳನ್ನು ಬದಲಿಸಿದ್ರೆ ಸಾಕು. ಬೆನ್ನುನೋವಿನ ಸಮಯದಲ್ಲೂ ನೀವಾಗ ಸಂಭೋಗದ ಸುಖ ಪಡೆಯಬಹುದು. ಇಂದು ನಾವು ಬೆನ್ನು ನೋವಿರುವವರು ಯಾವ ಸೆಕ್ಸ್ ಭಂಗಿ ಅನುಸರಿಸ್ಬೇಕು ಎಂಬುದನ್ನು ಹೇಳ್ತೇವೆ. 

ಬೆನ್ನು (Back) ನೋವಿ (Pain) ನ ಸಂದರ್ಭದಲ್ಲಿ ಅನುಕೂಲಕರ ಸೆಕ್ಸ್ (Sex) ಭಂಗಿ : 

Tap to resize

Latest Videos

ಸ್ಟ್ಯಾಂಡಿಂಗ್ ಡಾಗಿ ಸ್ಟೈಲ್ (Standing Dog) : ನೀವು ಬೆನ್ನು ನೋವು ಅನುಭವಿಸುತ್ತಿದ್ದರೆ ಕೆಲವು ಲೈಂಗಿಕ ಭಂಗಿ ಕಷ್ಟವಾಗುತ್ತದೆ. ಹಾಗಿರುವಾಗ ನೀವು ಸ್ಟ್ಯಾಂಡಿಂಗ್ ಡಾಗ್ ಸ್ಟೈಲ್ ಪ್ರಯೋಗ ಮಾಡಬಹುದು. ಇದರಲ್ಲಿ ಒಬ್ಬ ಸಂಗಾತಿ ನಿಂತರೆ ಮತ್ತೊಬ್ಬರು ಗೋಡೆಯ ಆಸರೆ ಪಡೆಯಬೇಕು.  ಸ್ತ್ರೀ ಸಂಗಾತಿ ಬೆನ್ನು ನೋವು ಹೊಂದಿದ್ದರೆ ಅವರಿಗೆ ಈ ಭಂಗಿ ಬೆಸ್ಟ್. ಹಿಂದಿನ ಭಾಗಕ್ಕೆ ಗೋಡೆ ಸಪೋರ್ಟ್ ಸಿಗುವ ಕಾರಣ ಸಂಭೋಗದ ವೇಳೆ ನೋವು ಕಾಡುವುದಿಲ್ಲ. ಅನೇಕ ಮಹಿಳೆಯರು ಬೆನ್ನು ನೋವಿನ ವಿಷ್ಯ ಮುಚ್ಚಿಟ್ಟು ಸಂಗಾತಿ ಜೊತೆ ಒಂದಾಗ್ತಾರೆ. ನಂತ್ರ ನೋವುಣ್ಣುತ್ತಾರೆ. ಅದ್ರ ಬದಲು ಮೊದಲೇ ಸಮಸ್ಯೆ ಹೇಳಿ, ಅದಕ್ಕೆ ಪರಿಹಾರವಾಗಿ ಭಂಗಿ ಬದಲಿಸಿದ್ರೆ ಇಬ್ಬರೂ ಸಂಭೋಗ ಸುಖವನ್ನು ಪಡೆಯಬಹುದಾಗಿದೆ.

ಸ್ಪೂನ್ ಭಂಗಿ : ವಿಭಿನ್ನ ಲೈಂಗಿಕ ಭಂಗಿಗಳಲ್ಲಿ  ಸ್ಪೂನಿಂಗ್ ಉತ್ತಮ ಮತ್ತು ಆರಾಮದಾಯಕ ಭಂಗಿ ಎಂದು ಪರಿಗಣಿಸಲಾಗುತ್ತದೆ. ನೀವು ಸೋಮಾರಿಯಾಗಿದ್ದರೆ, ಭಾರವಾದ ತೂಕವನ್ನು ಎತ್ತಲು ಸಾಧ್ಯವಿಲ್ಲ ಎನ್ನುವವರಾಗಿದ್ದರೆ ಅಥವಾ ಬೆನ್ನು ನೋವಿನಿಂದ ಬಳಲುತ್ತಿದ್ದರೆ  ಈ ಭಂಗಿ ಯಾವಾಗಲೂ ಉಪಯುಕ್ತವಾಗಿದೆ. ಈ ಲೈಂಗಿಕ ಸ್ಥಿತಿಯಲ್ಲಿ  ಪ್ಯಾರಾಸ್ಪೈನಲ್ ಸ್ನಾಯುಗಳು ವಿಶ್ರಾಂತಿ ಪಡೆಯುತ್ತವೆ. ಬೆನ್ನಿಗೆ ಯಾವುದೇ ರೀತಿಯ ಒತ್ತಡ ಬೀಳುವುದಿಲ್ಲ.

ಏನು ಮಾಡಿದ್ರೂ ತಪ್ಪು ನಿಂದೇ ಅಂತಾರಾ ಸಂಗಾತಿ, ಎಲ್ಲೆಡೆ ಇದು ಕಾಮನ್ ಬಿಡಿ

ಕಮಲದ ಭಂಗಿ : ಈ ಭಂಗಿಯಲ್ಲಿ ಪಾಲುದಾರರು ಪರಸ್ಪರ ಮುಖಾಮುಖಿಯಾಗಿ ಕುಳಿತುಕೊಳ್ಳುತ್ತಾರೆ. ಈ ಭಂಗಿ ಆರಾಮದಾಯಕವಾಗಿರುವುದರ ಜೊತೆಗೆ ಬೆನ್ನು ನೋವು ಕಾಡುವುದಿಲ್ಲ. ಈ ಭಂಗಿಯಲ್ಲಿ ಇಬ್ಬರು ತುಂಬಾ ಹತ್ತಿರವಿರುತ್ತಾರೆ ಎಂಬುದನ್ನು ಮರೆಯಬಾರದು. ಪರಸ್ಪರ ವೈಬ್ರೇಟರ್ ಕೂಡ ಬಳಸಬಹುದು ಎನ್ನುತ್ತಾರೆ ತಜ್ಞರು.

ಮಿಷನರಿ ಭಂಗಿ : ಬೆನ್ನು ನೋವು ವಿಪರೀತವಿದೆ, ಬೆನ್ನಿಗೆ ಒತ್ತಡ ಹಾಕಲು ಸಾಧ್ಯವಿಲ್ಲ ಎನ್ನುವವರು ಮಿಷನರಿ ಭಂಗಿಯನ್ನು ಪ್ರಯೋಗಿಸಬಹುದು. ಇದ್ರಲ್ಲಿ ಕೂಡ ಒತ್ತಡ ಬೆನ್ನ ಮೇಲೆ ಬೀಳುವುದಿಲ್ಲ. ಹಾಗಾಗಿ ಆರಾಮವಾಗಿ ನೀವು ಸಂಭೋಗದ ಆನಂದ ಪಡೆಯಬಹುದು. 

'ಮನೆಗಿಂತ ಕಚೇರಿನಲ್ಲಿ ಹೆಚ್ಚು ಸಮಯ ಕಳಿತಾಳೆ ನನ್ನ ಹೆಂಡ್ತಿ'

ಕೌ ಗರ್ಲ್ : ಸ್ತ್ರೀ ಸಂಗಾತಿಗೆ ಬೆನ್ನಿನ ಸಮಸ್ಯೆಗಳಿದ್ದರೆ ಆಗ ಅವರು ಕೌ ಗರ್ಲ್ ಭಂಗಿ ಟ್ರೈ ಮಾಡ್ಬಹುದು. ಇದು ಕೂಡ ಯಾವುದೇ ರೀತಿಯಲ್ಲಿ ಬೆನ್ನಿಗೆ ಒತ್ತಡ ನೀಡುವುದಿಲ್ಲ. ಬೆನ್ನು ನೋವು ಗುಣವಾಗುವವರೆಗೂ ನೀವು ಮೇಲೆ ಹೇಳಿದ ಭಂಗಿಗಳನ್ನು ಪ್ರಯೋಗಿಸುವ ಮೂಲಕ ಸೆಕ್ಸ್ ಲೈಫ್ ಎಂಜಾಯ್ ಮಾಡ್ಬಹುದು.  
 

click me!