ಸಿಂಗಲ್ ಇದೀರಾ? ಬನ್ನಿ ಮಿಂಗಲ್ ಆಗೋಣ; ಬೆಂಗಳೂರಲ್ಲಿ ನಾಳೆ ಭಾರತದ ಅತೀ ದೊಡ್ಡ ಸಿಂಗಲ್ಸ್ ಸಭೆ!

Published : Feb 28, 2025, 08:00 PM ISTUpdated : Feb 28, 2025, 08:08 PM IST
ಸಿಂಗಲ್ ಇದೀರಾ? ಬನ್ನಿ ಮಿಂಗಲ್ ಆಗೋಣ; ಬೆಂಗಳೂರಲ್ಲಿ ನಾಳೆ ಭಾರತದ ಅತೀ ದೊಡ್ಡ ಸಿಂಗಲ್ಸ್ ಸಭೆ!

ಸಾರಾಂಶ

ಬೆಂಗಳೂರಿನಲ್ಲಿ ನಾಳೆ ಅತೀ ದೊಡ್ಡ ಸಿಂಗಲ್ಸ್ ಮೀಟ್ ನಡೆಯಲಿದೆ. ಲೆಟ್ಸ್ ಸೋಶಿಯಲೈಸ್ ನೇತೃತ್ವದಲ್ಲಿ ಜೆಪಿ ನಗರದ ಊರು ಬ್ರೂಪಾರ್ಕ್‌ನಲ್ಲಿ ಈ ಕಾರ್ಯಕ್ರಮ ನಡೆಯಲಿದ್ದು, 25 ರಿಂದ 45 ವರ್ಷ ವಯಸ್ಸಿನ ಅವಿವಾಹಿತರು ಭಾಗವಹಿಸಬಹುದು.

ಬೆಂಗಳೂರು (ಫೆ.28): ಭಾರತದ ಅತೀ ದೊಡ್ಡ ಸಿಂಗಲ್ಸ್ ಮೀಟ್ ನಾಳೆ (2025 ಮಾರ್ಚ್ 1) ಬೆಂಗಳೂರಲ್ಲಿ ನಡೆಯಲಿದೆ. ಲೆಟ್ಸ್ ಸೋಶಿಯಲೈಸ್ ನೇತೃತ್ವದಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ನಾಳೆ ಸಂಜೆ 4 ಗಂಟೆಯಿಂದ 8 ಗಂಟೆಯವರೆಗೆ ಜೆಪಿ ನಗರದ ಊರು ಬ್ರೂಪಾರ್ಕ್‌ನಲ್ಲಿ (UruBrew Park, JP Nagar) ನಡೆಯುವ ಈ ಮೀಟ್‌ನಲ್ಲಿ ಮನರಂಜನೆ ಮತ್ತು ಸಂವಾದಗಳು ಇರಲಿವೆ. ಈ ಸಭೆಯಲ್ಲಿ ಭಾಗವಹಿಸಲು ಒಂದೇ ಒಂದು ಕಂಡೀಷನ್ ಇದೆ. ನೀವು ಸಿಂಗಲ್ ಆಗಿರಬೇಕು. ಹೌದು, ಅವಿವಾಹಿತರಿಗಾಗಿ ಈ ಮೀಟ್ ಆಯೋಜಿಸಲಾಗಿದೆ.

ಬೆಂಗಳೂರು ಸೇರಿದಂತೆ ದೇಶದ ಯಾವುದೇ ಭಾಗದಲ್ಲಿ ನೆಲೆಸಿದವರು ಕೂಡ ಈ ಸಿಂಗಲ್ಸ್‌ ಮೀಟ್‌ನಲ್ಲಿ ಭಾಗವಹಿಸಬಹುದು. 25 ರಿಂದ 45 ವರ್ಷ ವಯಸ್ಸಿನ ಅವಿವಾಹಿತರು ಮುಕ್ತವಾಗಿ ಭಾಗವಹಿಸಬಹುದು. ಮುಖ್ಯವಾಗಿ ಇಲ್ಲಿ ಪುರುಷರು ಮತ್ತು ಮಹಿಳೆಯರಿಗೆ 25-35, 36-45 ವರ್ಷ ವಯಸ್ಸಿನ ಎರಡು ವಿಭಾಗಗಳಲ್ಲಿ ಪ್ರತ್ಯೇಕ ಸ್ಲಾಟ್‌ಗಳನ್ನು ಮಾಡಲಾಗಿದೆ. ಇಲ್ಲಿ ಭಾಗವಹಿಸುವವರಿಗೆ ಟಿಕೆಟ್ ಖರೀದಿ ಮಾಡಲು ಸೂಚಿಸಲಾಗಿದೆ. ಸಿಂಗಲ್ಸ್ ಮೀಟ್‌ನಲ್ಲಿ ನೋಂದಣಿ ಹೆಚ್ಚಾದಂತೆ ಟಿಕೆಟ್ ಬೆಲೆ ಏರಿಕೆಯಾಗಲಿದೆ ಎಂದು ಆಯೋಜಕರು ತಿಳಿಸಿದ್ದಾರೆ. ಸದ್ಯಕ್ಕೆ ಒಂದು ಟಿಕೆಟ್‌ಗೆ 1,799 ರಿಂದ 2,299 ರೂಪಾಯಿ ಇದೆ. ಅವಿವಾಹಿತ ಯುವಕ ಯುವತಿಯರು ಪರಸ್ಪರ ಭೇಟಿಯಾಗಿ ಹೊಸ ಸಂಬಂಧಗಳನ್ನು ಬೆಳೆಸಲು ಈ ಮೀಟ್ ವೇದಿಕೆ ಕಲ್ಪಿಸುತ್ತದೆ.

ಇದನ್ನೂ ಓದಿ: ಆಸ್ತಿ-ಅಂತಸ್ತು ಬೇಡ, ಭಾರತದ 6 ಅಡಿ ಎತ್ತರದ ಕ್ರಿಕೆಟ್ ಆಡುವ ಹುಡುಗ ಬೇಕು; ರಷ್ಯನ್ ಸುಂದರಿ ಸಿಂಪಲ್ ಬೇಡಿಕೆ!

ಇನ್ನು ಸಿಂಗಲ್ಸ್ ಮೀಟ್‌ನಲ್ಲಿ ಕೆಲವು ಆಟಗಳು ಇರಲಿದ್ದು, ಗೆದ್ದವರಿಗೆ ಬಹುಮಾನಗಳಿವೆ. ಜೊತೆಗೆ ಟ್ರೆಂಡಿ ಪಾಪ್-ಅಪ್ ಸ್ಟೋರ್‌​ಗಳು ಮತ್ತು ಲೈವ್ ಮ್ಯೂಸಿಕ್ ಇರಲಿದೆ. ರಿಜಿಸ್ಟ್ರೇಷನ್ ಫೀಸ್ ಜೊತೆಗೆ ಎರಡು ಗ್ಲಾಸ್ ವೈನ್ ಫ್ರೀಯಾಗಿ ಕೊಡಲಾಗುತ್ತದೆ. ನಿಮ್ಮ ಖರ್ಚಿನಲ್ಲಿ ಊಟ ಮಾಡಲು ಸ್ಟಾಲ್‌​ಗಳು ಇರಲಿವೆ. ಸಂಜೆಯಿಂದ ರಾತ್ರಿವರಗೆ ಒಟ್ಟು 4 ಗಂಟೆಗಳ ಕಾಲ ನಡೆಯುವ ಈ ಕಾರ್ಯಕ್ರಮ ಬೆಂಗಳೂರಿನ ಅವಿವಾಹಿತರಿಗೆ ಹೊಸ ಅನುಭವ ನೀಡಲಿದೆ ಎಂದು ಆಯೋಜಕರು ಹೇಳಿದ್ದಾರೆ. ಜನಪ್ರಿಯ ಲೇಖಕ ರವೀಂದರ್ ಸಿಂಗ್ ಲೆಟ್ಸ್ ಸೋಶಿಯಲೈಸ್‌ಗೆ ಮುನ್ನುಡಿ ಬರೆದಿದ್ದಾರೆ.

ಇದೊಂದು ವಧು-ವರಾನ್ವೇಷಣೆ ಸಭೆ : ನಮ್ಮ ದೇಶದಲ್ಲಿ ಮ್ಯಾಟ್ರಿಮೊನಿ ಆಪ್‌ಗಳು ಹಲವು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿವೆ. ಕೆಲವೊಂದು ಆಪ್‌ಗಳು ಇದೇ ತರಹ ಸಭೆಗಳನ್ನು ಮಾಡಿ ಅಲ್ಲಿ ಲೈವ್ ಆಗಿ ವೈವಾಹಿಕ ಜೋಡಿಗಳನ್ನು ಬೆಸೆಯಲು ವೇದಿಕೆ ಕಲ್ಪಿಸಿಕೊಡಲಾಗುತ್ತಿದೆ. ಇನ್ನು ಹಲವು ಸಮುದಾಯಗಳು ತಮ್ಮ ಜಾತಿಯ ರಾಜ್ಯಮಟ್ಟದ ವಧು-ವರಾನ್ವೇಷಣೆ ಸಮಾರಂಭವನ್ನು ಆಯೋಜನೆ ಮಾಡಿ ಜೋಡಿಗಳನ್ನಾಗಿ ಮಾಡಲಾಗುತ್ತಿತ್ತು. ಇದೂ ಕೂಡ ಅದೇ ತರಹ ಒಂದು ವಧು-ವರಾನ್ವೇಷಣೆ ವೇದಿಕೆ ಎಂದೇ ಹೇಳಬಹುದು. ಆದರೆ, ಇಲ್ಲಿಗೆ ಹುಡುಗ-ಹುಡುಗಿಯ ಪೋಷಕರು ಬರುವಂತಿಲ್ಲ. ಕೇವಲ ಸಿಂಗಲ್ ಆಗಿರುವ ಹುಡುಗ-ಹುಡುಗಿಯರಿಗೆ ಮಾತ್ರ ಪ್ರವೇಶಾವಕಾಶ ನೀಡಲಾಗಿದೆ.

ಇದನ್ನೂ ಓದಿ: 27 ಲಕ್ಷ ಮೌಲ್ಯದ ಐಷಾರಾಮಿ ಪೋರ್ಶೆ ಕಾರು ತಿರಸ್ಕರಿಸಿದ ಪತ್ನಿ: ಪತಿ ಮಾಡಿದ್ದೇನು ನೋಡಿ!

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಈ ಸುಂದರ ದೇಶದಲ್ಲಿ ಬಾಡಿಗೆಗೆ ಸಿಗ್ತಾನೆ ಗಂಡ, ಗಂಟೆಗೆ ಇಷ್ಟಿದೆ ಸಂಬಳ!
ಮದುವೆ ಮುಂದೂಡಿಕೆ ಆದ 12 ದಿನಗಳ ಬಳಿಕ ಸೋಶಿಯಲ್‌ ಮೀಡಿಯಾದಲ್ಲಿ ಮೊದಲ ಪೋಸ್ಟ್‌ ಮಾಡಿದ ಸ್ಮೃತಿ, ಕೈಯಲ್ಲಿದ್ದ ರಿಂಗ್‌ ಮಾಯ!