
ಸೋಶಿಯಲ್ ಮೀಡಿಯಾ ಪ್ರತಿಯೊಬ್ಬರ ಜೀವನದಲ್ಲಿ ಅಭಿಭಾಜ್ಯ ಅಂಗವಾಗಿ ಬಿಟ್ಟಿದೆ. ಇದೇ ಸೋಶಿಯಲ್ ಮೀಡಿಯಾ ಹಲವರ ಬದುಕನ್ನೇ ಹಾಳುಮಾಡಿದೆ. ಚರ್ಚೆ, ವಿರೋಧ, ಮೆಚ್ಚುಗೆ ನಡುವೆ ಇದೀಗ ನವ ಜೋಡಿಯ ಸೋಶಿಯಲ್ ಮೀಡಿಯಾ ಹುಚ್ಚು ಕ್ರೇಜ್ ಇದೀಗ ಭಾರಿ ಚರ್ಚೆಯಾಗುತ್ತಿದೆ. ಮದುವೆ ಮಂಟಪದಲ್ಲಿನ ವಿವಾಹ ಮಹೋತ್ಸವವನ್ನು ದೊಡ್ಡ ಪರದೆಯಲ್ಲಿ ಲೈವ್ ಮಾಡಲಾಗಿದೆ. ಇಷ್ಟಕ್ಕೆ ತೃಪ್ತಿಪಡದ ನವ ಜೋಡಿ ಮದುವೆ ಮುಗಿಸಿ ಮನೆಗೆ ತೆರಳಿದ ಬಳಿಕ ನಿರಂತವಾಗಿ ಸೋಶಿಯಲ್ ಮೀಡಿಯಾ ಮೂಲಕ ವಿಡಿಯೋ ಮಾಡಿ ಅಪ್‌ಡೇಟ್ ನೀಡಿದ್ದಾರೆ. ಈ ಜೋಡಿಯ ಒಂದೊಂದೆ ವಿಡಿಯೋ ಪೋಸ್ಟ್ ಆಗುತ್ತಿದ್ದಂತೆ ಲಕ್ಷಾಂತರ ಜನ ವೀಕ್ಷಿಸಿದ್ದಾರೆ. ಹಲವರು ಡೌನ್ಲೋಡ್ ಮಾಡಿಕೊಂಡಿದ್ದಾರೆ. ಇದೀಗ ಈ ನವಜೋಡಿ ವಿರುದ್ದ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ.
ನವ ಜೋಡಿಗಳ ಮದುವೆ ಅದ್ಧೂರಿಯಾಗಿ ನಡೆದಿದೆ. ಕುಟುಂಬಸ್ಥರು, ಆಪ್ತರು, ಗೆಳೆಯರ ಸಮ್ಮುಖದಲ್ಲಿ ವಿವಾಹ ಮಹೋತ್ಸವ ನಡೆದಿದೆ. ಭಾರಿ ಸಂಖ್ಯೆಯಲ್ಲಿ ಜನರು ಸೇರಿದ್ದರು. ಎಲ್ಲಾ ಮದುವೆಯಲ್ಲಿರುವಂತೆ ಈ ಮದುವೆಯಲ್ಲೂ ವಿಡಿಯೋಗ್ರಫಿ, ಫೋಟೋಗ್ರಫಿ ವ್ಯವಸ್ಥೆ ಮಾಡಲಾಗಿತ್ತು. ಇನ್ನು ದೊಡ್ಡ ವೇದಿಕೆ ಕಾರಣ ಮದುವೆಯನ್ನು ಕಾರ್ಯಕ್ರಮವನ್ನು ಲೈವ್ ಮಾಡಲಾಗಿತ್ತು. ಹೀಗಾಗಿ ವೇದಿಕೆಯ ಹಿಂಭಾಗದಲ್ಲಿ ಕುಳಿತ ಆಹ್ವಾನಿತರಿಗೂ ಮದುವೆ ಕಾರ್ಯಕ್ರಮ ಪರದೆ ಮೇಲೆ ನೋಡುವ ಅವಕಾಶ ಮಾಡಲಾಗಿತ್ತು.
ಫಸ್ಟ್ ನೈಟ್‌ಗೆ ಬೆಡ್‌ರೂಮ್ ರೊಮ್ಯಾಂಟಿಕ್ ಆಗಿರಲು ಹೀಗೆ ಅಲಂಕಾರ ಮಾಡಿ
ಇವೆಲ್ಲವೂ ನವ ಜೋಡಿಗಳ ಆಶಯದಂತೆ ನಡೆದಿತ್ತು. ನವ ಜೋಡಿಗಳಿಗೆ ಸೋಶಿಯಲ್ ಮೀಡಿಯಾ ಕ್ರೇಜ್ ತುಸು ಹೆಚ್ಚೇ ಇದೆ. ಹೀಗಾಗಿ ಮದುವೆ ಕಾರ್ಯಕ್ರಮ ಮುಗಿದರೂ ನವ ಜೋಡಿಗಳ ವಿಡಿಯೋ ಕಾರ್ಯಕ್ರಮ ಮುಗಿದಿರಲಿಲ್ಲ. ಮದುವೆ ಮುಗಿಸಿದ ನವ ಜೋಡಿ ಮನೆಗೆ ಮರಳಿದ್ದಾರೆ. ಮನೆಯಲ್ಲಿ ಕಾರ್ಯಕ್ರಮಗಳು, ಪಾರ್ಟಿ ಶುರುವಾಗಿದೆ. ಆಮಂತ್ರಿತ ಗಣ್ಯರು ಮನೆಗೆ ಆಗಮಿಸಿ ಔತಣಕೂಟದಲ್ಲಿ ಪಾಲ್ಗೊಂಡಿದ್ದಾರೆ. ಇಲ್ಲೂ ಕೂಡ ಪರದೆಯಲ್ಲಿ ಲೈವ್ ಮಾಡಲಾಗಿತ್ತು. ಇದಾದ ಬಳಿಕ ನವ ಜೋಡಿಗಳು ಕೋಣೆಯೊಳಗೆ ತೆರಳಿದರೂ ಅಲ್ಲೂ ಕೂಡ ವಿಡಿಯೋ ಅಪ್‌ಡೇಟ್ ಮೂಲಕ ಮಾಹಿತಿ ನೀಡಿದ್ದಾರೆ.
ಕೋಣೆಯ ಬಾಗಿಲು ಮುಚ್ಚಿದರೂ ಕೋಣೆಯೊಳಗಿನ ಅಪ್‌ಡೇಟ್ ಸೋಶಿಯಲ್ ಮೀಡಿಯಾ ಮೂಲಕ ಎಲ್ಲರಿಗೂ ಲಭ್ಯವಿತ್ತು. ನವ ಜೋಡಿಗಳ ವಿಡಿಯೋ ನೋಡಲು ಜನರು ಮುಗಿಬಿದ್ದಿದ್ದರು. ಈ ನವ ಜೋಡಿಗಳ ಹುಚ್ಚು ಸಾಹಸವನ್ನು ಹಲವರು ವಿರೋಧಿಸಿದ್ದಾರೆ, ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ರತಿ ಖಾಸಗಿ ವಿಡಿಯೋಗಳನ್ನು ಪೋಸ್ಟ್ ಮಾಡುವುದು ಸರಿಯಲ್ಲ ಎಂದು ಹಲವರು ಕಮೆಂಟ್ ಮಾಡಿದ್ದಾರೆ.
ಭಾರಿ ಆಕ್ರೋಶದ ಬೆನ್ನಲ್ಲೇ ಹಲವು ವಿಡಿಯೋಗಳನ್ನು ಡಿಲೀಟ್ ಮಾಡಲಾಗಿದೆ. ಈ ಪೈಕಿ ಒಂದು ವಿಡಿಯೋವನ್ನು ಮಾತ್ರ ಇನ್‌ಸ್ಟಾಗ್ರಾಂನಲ್ಲಿ ಡಿಲೀಟ್ ಮಾಡಿಲ್ಲ. ಈ ವಿಡಿಯೋದಲ್ಲಿ ವಧು ಹಾಗೂ ವರ ಇಬ್ಬರೂ ಕನ್ನಡಿ ಮುಂದೆ ಕುಳಿತಿದ್ದಾರೆ. ವಧು ಕನ್ನಡಿ ಮುಂದೆ ಕುಳಿತಿದ್ದರೆ, ವರ, ಆಕೆಯ ಕೂದಲಿನ ಹೂವುಗ ಕ್ಲಿಪ್ ತೆಗೆಯುತ್ತಿದ್ದಾನೆ. ವಧುವಿನ ಆಭರಣ, ಹೂವು, ಒಲೆ ಸೇರಿದಂತೆ ಒಡವೆಗಳನ್ನು ತಗೆಯುತ್ತಿರುವುದನ್ನು ವಿಡಿಯೋ ಮಾಡಲಾಗಿದೆ. ಇದರ ಜೊತೆಗೆ ಪೋಸ್ಟ್ ಮಾಡಿದ್ದ ಮುಂದಿನ ಭಾಗದ ವಿಡೋಯೋಗಳನ್ನು ಆಕ್ರೋಶದ ಬಳಿಕ ಡಿಲೀಟ್ ಮಾಡಲಾಗಿದೆ.
ನಟ ಗೋವಿಂದನ ಪ್ರೇಯಸಿ ಕುರಿತು ಪತ್ನಿ ರಿವೀಲ್: 6 ತಿಂಗಳ ಹಿಂದೆ ಸಲ್ಲಿಸಿದ್ದ ಡಿವೋರ್ಸ್ ಅರ್ಜಿ ವಾಪಸ್!
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.