ಫಾರಿನ್ ಆಗೋಯ್ತಾ ಬೆಂಗಳೂರು: ಮಟ ಮಟ ಮಧ್ಯಾಹ್ನವೇ ಕಾರಿನಲ್ಲಿ ಸೆಕ್ಸ್, ಬುದ್ಧಿ ಹೇಳಿದ ಪೊಲೀಸರಿಗೆ ಗುದ್ದಿ ಪರಾರಿ!

By Sathish Kumar KH  |  First Published Jan 25, 2024, 11:56 AM IST

ಬೆಂಗಳೂರು ಬರಬರುತ್ತಾ ಯುರೋಪ್ ಕಂಟ್ರಿಯಾಗುತ್ತಿದೆಯಾ ಎಂಬಂತೆ ಭಾಸವಾಗುತ್ತಿದೆ. ರಸ್ತೆ ಮಧ್ಯದಲ್ಲಿಯೇ ಕಾರು ನಿಲ್ಲಿಸಿ ಕಾಮತೃಷೆ ತೀರಿಸಿಕೊಳ್ಳುತ್ತಿದ್ದ ಜೋಡಿ ನೋಡಿದ ಪಿಎಸ್‌ಐ ಬುದ್ಧಿ ಹೇಳಲು ಮುಂದಾದಾಗ ಕಾರು ಗುದ್ದಿಸಿ ಪರಾರಿ ಆಗಿದ್ದಾರೆ.


ಬೆಂಗಳೂರು  (ಜ.24): ನಮ್ಮ ರಾಜ್ಯದ ರಾಜಧಾನಿ ಎಷ್ಟೇ ಅಂತಾರಾಷ್ಟ್ರೀಯ ಮಟ್ಟಕ್ಕೆ ಬೆಳೆದರೂ ಫಾರಿನ್‌ ಸಿಟಿಯಾಗಲು ಸಾಧ್ಯವಿಲ್ಲ. ಪಬ್ಲಿಕ್ ಪಾರ್ಕ್‌, ರಸ್ತೆ ಹಾಗೂ ಬಸ್‌ ನಿಲ್ದಾಣದಲ್ಲಿಯೇ ಕಿಸ್ಸಿಂಗ್, ಹಗ್ಗಿಂಗ್, ರೊಮ್ಯಾನ್ಸಿಂಗ್ ಮಾಡುವುದಕ್ಕೆ ಕಡಿವಾಣವಿದೆ. ಆದರೆ, ಇಲ್ಲೊಂದು ಜೋಡಿ ಪಾರ್ಕ್‌ ಪಕ್ಕದ ರಸ್ತೆಯಲ್ಲಿಯೇ ಕಾರು ನಿಲ್ಲಿಸಿ ಮಟ ಮಟ ಮದ್ಯಾಹ್ನವೇ ಕಾಮತೃಷೆ ತೀರಿಸಿಕೊಳ್ಳುತ್ತಿದ್ದಾರೆ. ಇದನ್ನು ನೋಡಿದ ಪೊಲೀಸಪ್ಪ ಬುದ್ಧಿ ಹೇಳಲು ಮುಂದಾದರೆ ಅವರಿಗೆ ಕಾರು ಗುದ್ದಿಸಿ ಪರಾರಿ ಆಗಿರುವ ಘಟನೆ ಜ್ಞಾನಭಾರತಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಹೌದು, ಬೆಂಗಳೂರು ಸೇಫ್‌ ಸಿಟಿ, ಸಂಸ್ಕೃತಿಯೂ ಇರುವಂತಹ ಸಿಟಿ ಎಂದು ನಾವು ನಂಬಿದ್ದೇವೆ. ಇಲ್ಲಿ ಕೆಲವು ವಿದೇಶಗಳಲ್ಲಿರುವಂತೆ ಬಯಲಿನಲ್ಲಿಯೇ ದೈಹಿಕ ಕಾಮನೆಗಳನ್ನು ತೀರಿಸಿಕೊಳ್ಳಲು ಅವಕಾಶವಿಲ್ಲ. ಇಷ್ಟಿದ್ದರೂ ಅಲ್ಲೊಂದು, ಇಲ್ಲೊಂದು ಸಾರ್ವಜನಿಕ ಸ್ಥಳದಲ್ಲಿಯೇ ಕಿಸ್ ಮಾಡುವ ದೃಶ್ಯಗಳು ಕಂಡುಬರುತ್ತಿದೆ. ಇಂಥಹ ಘಟನೆಗಳಿಗೆ ಸಾರ್ವಜನಿಕರು ಹಾಗೂ ಸ್ಥಳೀಯ ಪೊಲೀಸರು ಬುದ್ಧಿ ಹೇಳಿ ಅಂತಹ ಜೋಡಿಗಳನ್ನು ಅಲ್ಲಿಂದ ಕಳಿಸುತ್ತಾರೆ. ಇಂತಹ ದೃಶ್ಯಗಳಿಂದ ಚಿಕ್ಕ ಮಕ್ಕಳ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂಬುದು ನಮ್ಮ ವಾದವಾಗಿದೆ.

Tap to resize

Latest Videos

'ರೊಟ್ಟಿ ಕೊಟ್ಟ ಆಂಟಿಯನ್ನೇ ಬುಟ್ಟಿಗೆ ಹಾಕೊಂಡ ಸಿದ್ದಗೊಂಡ', 6 ತಿಂಗಳು ಮಜಾ ಮಾಡಿ ಕೈಕೊಟ್ಟೋದ್ಲು!

ಬೆಂಗಳೂರಿನ ಜ್ಞಾನಭಾರತಿ ಪೊಲೀಸ್‌ ಠಾಣೆ ಪಿಎಸ್‌ಐ ಮಹೇಶ್ ಅವರು ಜ.20ರ ಮಧ್ಯಾಹ್ನ 3.30ರ ವೇಳೆಗೆ ಮನೆಗೆ ಬಂದು ಊಟ ಮಾಡಿ ಹೊರಗೆ ಬಂದಾಗ ಪಾರ್ಕಿನ ಬಳಿ ಒಂದು ಕಾರು ನಿಂತುಕೊಂಡು ಅಲುಗಾಡುತ್ತಿತ್ತು. ಇನ್ನು ಅದನ್ನು ಗಮನಿಸದೇ ಮುಂದಕ್ಕೆ ಹೋಗಿ ಹಿಂದಕ್ಕೆ ತಿರುಗಿ ನೋಡಿದರೆ ಯುವಕ ಹಾಗೂ ಯುವತಿ ಇಬ್ಬರೂ ಕಾರಿನ ಹಿಂಬದಿ ಸೀಟಿನಲ್ಲಿ ಕಾಮತೃಷೆ ತೀರಿಸಿಕೊಳ್ಳುವುದು ಕಣ್ಣಿಗೆ ಬಿದ್ದಿದೆ. ಇದೇ ರಸ್ತೆಯಲ್ಲಿ ಶಾಲಾ ಮಕ್ಕಳು, ಮಹಿಳೆಯರು ಅಡ್ಡಾಡುವ ರಸ್ತೆಯಾಗಿದ್ದು, ಅವರಿಗೆ ಮುಜುಗರ ಉಂಟಾಗುವುದನ್ನು ತಪ್ಪಿಸುವ ಉದ್ದೇಶದಿಂದ ಪಿಎಸ್‌ಐ ಮಹೇಶ್ ಅವರು ಕಾರಿನಲ್ಲಿದ್ದವರಿಗೆ ಬುದ್ಧಿ ಹೇಳಲು ಮುಂದಾಗಿದ್ದಾರೆ. ಈ ವೇಳೆ ಕಾರಿನ ನಂಬರ್ ನೋಟ್ ಮಾಡಿಕೊಂಡು ಅವರಿಗೆ ಬುದ್ಧಿ ಹೇಳಬೇಕು ಎನ್ನುವಷ್ಟರಲ್ಲಿ ಯುವಕ ಕಾರನ್ನು ಸ್ಟಾರ್ಟ್‌ ಮಾಡಿದ್ದಾನೆ.

ಕಾರು ಸ್ಟಾರ್ಟ್ ಆದ ಕೂಡಲೇ ಪೊಲೀಸಪ್ಪನಿಗೆ ಎಲ್ಲಿಯೂ ಅಕ್ಕ ಪಕ್ಕದಲ್ಲಿ ಸರಿದುಕೊಳ್ಳಲು ಜಾಗವೇ ಇರಲಿಲ್ಲ. ಆದ್ದರಿಂದ ಕಾರಿನಲ್ಲಿದ್ದ ಯುವಕ ನೇರವಾಗಿ ಕಾರನ್ನು ಪಿಎಸ್‌ಐ ಮೇಲೆಯೇ ಹರಿಸಲು ಮುಂದಾಗಿದ್ದಾನೆ. ಈ ವೇಳೆ ಪಿಎಸ್‌ಐ ಮಹೇಶ್ ಕಾರಿನ ಬಾನೆಟ್ ಮೇಲೆ ಬಿದ್ದಿದ್ದಾರೆ. ಹಾಗೆಯೇ ಕಾರನ್ನು ತುಸು ದೂರು ಓಡಿಸಿದ ಯುವಕ ನಂತರ ರಿವರ್ಸ್‌ ಗೇರ್ ಹಾಕಿ ಒಮ್ಮೆಲೆ ಚಲಾಯಿಸಿದ್ದಾನೆ. ಆಗ ಬಾನೆಟ್ ಮೇಲಿಂದ ಪಿಎಸ್‌ಐ ಕೆಳಗೆ ಬಿದ್ದು ತಲೆಗೆ ಗಾಯವಾಗಿ ಮೂರ್ಛೆ ತಪ್ಪಿ ಬಿದ್ದಿದ್ದಾರೆ. ಅಲ್ಲಿದ್ದ ಸ್ಥಳೀಯರು ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ನಂತರವೇ ಅವರಿಗೆ ಎಚ್ಚರವಾಗಿದೆ.

ಗಣರಾಜ್ಯೋತ್ಸವಕ್ಕೆ ಈ ಸಿನಿಮಾ ನೋಡುವಂತೆ ಸೂಚಿಸಿದ ಸರ್ಕಾರ..! ಇದರ ವಿಶೇಷತೆ ಏನು ಗೊತ್ತಾ?

ಕಾಮತೃಷೆ ತೀರಿಸಿಕೊಳ್ಳುತ್ತಿದ್ದ ಜೋಡಿಗೆ ಬುದ್ಧಿ ಹೇಳಲು ಮುಂದಾದ ಪಿಎಸ್‌ಐ ಮಹೇಶ್ ಆಸ್ಪತ್ರೆಯಿಂದ ಬಂದು ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಹಿಟ್‌ ಅಂಡ್ ರನ್ ಪ್ರಕರಣವನ್ನು ದಾಖಲಿಸಿದ್ದಾರೆ. ಇನ್ನೂ ಗಾಯಗಳಿಂದ ಪೂರ್ಣ ಪ್ರಮಾಣದಲ್ಲಿ ಚೇತರಿಕೆ ಕಾಣದೇ ವಿಶ್ರಾಂತಿ ಪಡೆಯುತ್ತಿದ್ದಾರೆ. ಇಂತಹ ಘಟನೆಗಳಿಗೆ ಕಡಿವಾಣ ಬೀಳಬೇಕಿದೆ ಎಂದು ಹೇಳಿದ್ದಾರೆ.

click me!